ಹೆಗ್ಗಣದೊಡ್ಡಿಯಲ್ಲಿ ಸೌಲಭ್ಯ ಮರೀಚಿಕ
ನೈಜ ಚಿತ್ರಣ ನೋಡಿದರೆ ಕಂಗಾಲು ಕಡತದಲ್ಲಿಯೇ ನೋಡಿ ಕೊಟ್ಟರಾ ಗಾಂಧಿ ಗ್ರಾಮ ಪುರಸ್ಕಾರ?
Team Udayavani, Oct 6, 2019, 11:45 AM IST
ಸಿದ್ದಯ್ಯ ಪಾಟೀಲ
ಸುರಪುರ: ಸ್ವಾಗತಿಸುವ ತಿಪ್ಪೆ ಗುಂಡಿಗಳು, ತಪ್ಪದ ಬಹಿರ್ದೆಸೆ, ರಸ್ತೆ ಬದಿಯಲ್ಲಿಯೇ ಬಯಲು ಶೌಚ, ರಸ್ತೆ ಮೇಲೆ ಹರಿಯುತ್ತಿರುವ ಚರಂಡಿ ನೀರು, ಅಲ್ಲಲ್ಲಿ ನಿಂತಿರುವ ತ್ಯಾಜ್ಯ ನೀರು, ಸ್ವಚ್ಛತೆ ಮಾತ್ರ ಮರೀಚಿಕೆ ಇದು ಗಾಂಧಿ ಗ್ರಾಮ ಪುರಸ್ಕಾರಕ್ಕೆ ಆಯ್ಕೆಯಾದ ತಾಲೂಕಿನ ಹೆಗ್ಗಣದೊಡ್ಡಿ ಗ್ರಾಮದಲ್ಲಿ ಕಂಡು ಬರುವ ನೈಜ ಚಿತ್ರಣ.
ರಾಜ್ಯ ಸರ್ಕಾರ ಮಹಾತ್ಮ ಗಾಂಧೀಜಿ ಅವರ 150ನೇ ವರ್ಷಾಚರಣೆ ಅಂಗವಾಗಿ ಹೆಗ್ಗಣದೊಡ್ಡಿ ಗ್ರಾಮವನ್ನು 2019-20ನೇ ಸಾಲಿನ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಆಯ್ಕೆ ಮಾಡಿಕೊಂಡಿತ್ತು. ಗಾಂಧಿಧೀಜಿಯವರ ರಾಮರಾಜ್ಯ ಕನಸು ನನಸಿಗಾಗಿ ರಾಜ್ಯದಲ್ಲಿ 175 ಗ್ರಾಪಂಗಳನ್ನು ಈ ಪ್ರಶಸಿಗೆ ಆಯ್ಕೆಯಾಗಿವೆ.
ಇದರಲ್ಲಿ ಹೆಗ್ಗಣದೊಡ್ಡಿ ಗ್ರಾಪಂ ಕೂಡ ಒಂದಾಗಿದೆ. ಗಾಂಧೀಜಿ ಜಯಂತ್ಯುತ್ಸವ ದಿನ ಗ್ರಾಪಂ ಅಧ್ಯಕ್ಷೆ ಮತ್ತು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ಬೆಂಗಳೂರಿನ ವಿಧಾನಸೌಧದ ಸಭಾಂಗಣದಲ್ಲಿ ಪ್ರಶಸ್ತಿ ಸ್ವೀಕರಿಸಿದ್ದಾರೆ.
ಕಡತದಲ್ಲಿ ಮಾತ್ರ ಅಭಿವೃದ್ಧಿ: ಪ್ರಶಸ್ತಿ ಆಯ್ಕೆ ಮಾನದಂಡಗಳ ಪ್ರಕಾರ ಸ್ವಚ್ಛತೆ, ಬಯಲು ಶೌಚಮುಕ್ತ ಸೇರಿದಂತೆ ಮೂಲ ಸೌಕರ್ಯ, ಯೋಜನೆಗಳ ಸಮರ್ಪಕ ಅನುಷ್ಠಾನ ಸೇರಿದಂತೆ ಸಮಗ್ರವಾಗಿ ಅಭಿವೃದ್ಧಿಯಲ್ಲಿ ಶೇ. ಪ್ರತಿಶತ ಸಾಧಿಸಿರಬೇಕು ಎಂಬ ಅಂಶಗಳಿವೆ. ಆದರೆ, ಇದಕ್ಕೆ ಅಪವಾದ ಎನ್ನುವಂತೆ ಗ್ರಾಪಂ ವ್ಯಾಪ್ತಿ ಯಾವೊಂದು ಗ್ರಾಮದಲ್ಲಿ ವಾಸ್ತವಿಕವಾಗಿ ಈ ಸಾಧನೆ ಕಂಡು ಬರುವುದಿಲ್ಲ. ಕಡತದಲ್ಲಿಯೇ ಮಾತ್ರ ಅಭಿವೃದ್ಧಿ ಕಂಡು ಬರುತ್ತಿದೆ ಎನ್ನುತ್ತಾರೆ ಗ್ರಾಮಸ್ಥರು.
ಸರ್ಕಾರ ಹಣ ಪೋಲು: ಕೇಂದ್ರ ಸರ್ಕಾರ ಸ್ವಚ್ಛ ಭಾರತ ಯೋಜನೆಯಡಿ ಮನೆಗೊಂದು ಶೌಚಾಲಯ ನಿರ್ಮಿಸಕೊಳ್ಳಲು ಸಹಾಯಧನ ನೀಡುತ್ತಿದೆ. ಇದನ್ನು ಪರಿಣಾಮಕಾರಿ ಅನುಷ್ಠಾನಗೊಳಿಸುವಂತೆ ಗ್ರಾಮ ಪಂಚಾಯಿತಿಗಳಿಗೆ ಸರ್ಕಾರ ಕಟ್ಟುನಿಟ್ಟಾಗಿ ಸೂಚಿಸಿದೆ. ಆದರೆ ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ಬೇಜಬ್ದಾರಿಯಿಂದ ಯೋಜನೆ ನಿರೀಕ್ಷಿತ ಪ್ರಮಾಣದಲ್ಲಿ ಗುರಿ ತಲುಪಿಲ್ಲ. ಬಹುತೇಕ ಕಡೆ ದಾಖಲೆಗಳಿಗೆ ಭಾವಚಿತ್ರಗಳನ್ನು ಲಗತ್ತಿಸಿ ಸರ್ಕಾರದ ಬೊಕ್ಕಸದ ಹಣ ಲೂಟಿ ಮಾಡುವ ತಂತ್ರವಾಗಿದೆ.
ಕಾಟಾಚಾರದ ಶೆಡ್: ಗ್ರಾಮದ ಕೆಲವೆಡೆ ಕಾಟಾಚಾರಕ್ಕೆ ಎಂಬಂತೆ ಗ್ರಾಪಂನವರು ತಾತ್ಕಾಲಿಕ ಶೆಡ್‌ಗಳನ್ನು ನಿರ್ಮಿಸಿ ಕೊಟ್ಟು ಕೈ ತೊಳೆದುಕೊಂಡಿದ್ದಾರೆ. ಹೀಗಾಗಿ ಗ್ರಾಮದಲ್ಲಿ ಬಹಿìದೆಸೆ ಮಾತ್ರ ತಪ್ಪಿಲ್ಲ ಎಂಬುದು ಗ್ರಾಮಸ್ಥರ ಅಳಲಾಗಿದೆ.
ಜಾಗೃತಿ ಕೊರತೆ: ಗ್ರಾಪಂ ವ್ಯಾಪ್ತಿಯಲ್ಲಿ ಹೆಗ್ಗಣದೊಡ್ಡಿ, ಗೊಡ್ರಿಹಾಳ, ಜೈನಾಪುರ, ಜೈನಾಪುರ ತಾಂಡಾ ಸೇರಿ ಒಟ್ಟು 7035 ಜನ ಸಂಖ್ಯೆಯಿದೆ. ಮೂರು ಗ್ರಾಮಗಳ ನಡುವೆ ಕೇವಲ 435 ವೈಯಕ್ತಿಕ ಶೌಚಾಲಯ ನಿರ್ಮಿಸಲಾಗಿದೆ. ಇವುಗಳ ಬಳಕೆ ಮಾತ್ರ ಆಗುತ್ತಿಲ್ಲ.
ಬೇಕಾಬಿಟ್ಟಿಯಾಗಿ ಸಿಸಿ ರಸ್ತೆ ನಿರ್ಮಾಣ: ಗ್ರಾಮದಲ್ಲಿ ಸಿಸಿ ರಸೆ ನಿರ್ಮಾಣ ಮಾಡಲಾಗಿದ್ದು, ಎಲ್ಲಿಯೂ ಚರಂಡಿ ನಿರ್ಮಿಸಿಲ್ಲ. ಹೀಗಾಗಿ ಚರಂಡಿ ತ್ಯಾಜ್ಯ ನೀರು ರಸ್ತೆ ಮೇಲೆ ಸರಾಗವಾಗಿ ಹರಿಯುತ್ತಿದೆ. ಸಿಸಿ ರಸ್ತೆ ಅಲ್ಲಲ್ಲಿ ಕಿತ್ತು ಹೋಗಿರುವುದು ಕಳಪೆ ಕಾಮಗಾರಿಗೆ ಹಿಡಿದ ಕೈಗನ್ನಡಿಯಾಗಿದೆ. ಘನ ತ್ಯಾಜ್ಯ ವಿಲೇವಾರಿಯಾಗದ ಕಾರಣ ಹಂದಿ, ನಾಯಿಗಳ ತಾಣವಾಗಿದೆ. ತ್ಯಾಜ್ಯ ವಸ್ತು ಕೊಳೆತು ಗಬ್ಬೆದ್ದು ನಾರುತ್ತಿದೆ. ಐತಿಹಾಸಿಕ ಧಾರ್ಮಿಕ ಕ್ಷೇತ್ರ ಎಂದೆ ಕರೆಯುವ ರಾಜಾ ಭಕ್ಷುರ ದೇವಸ್ಥನಕ್ಕೆ ಹೋಗುವ ರಸ್ತೆ ಗಲೀಜಿನಿಂದ ಕೂಡಿದೆ. ಕೇವಲ ದಾಖಲೆಗಳನ್ನು ನೋಡಿ ಪ್ರಶಸ್ತಿ ನೀಡುವ ಪ್ರವೃತ್ತಿಯನ್ನು ಸರ್ಕಾರ ಕೈ ಬಿಡಬೇಕು. ವಾಸ್ತವಿಕ ಅಂಶಗಳನ್ನು ಗಣನೆಗೆ ತೆಗೆದುಕೊಂಡು ಯೋಜನೆ ಅನುಷ್ಠಾನ ಮತ್ತು ವಿವಿಧ ಅಭಿವೃದ್ಧಿ ಕಾಮಗಾರಿ ಪಾರದರ್ಶಕವಾಗಿ ಕೈಗೊಳ್ಳುವಂತೆ ಅಧಿಕಾರಿಗಳಿಗೆ ತಾಪಂ ಮಾಜಿ ಸದಸ್ಯ ಮಾನಪ್ಪ ಸೂಗೂರು ಆಗ್ರಹಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bagalakote: ಪ್ರೇಯಸಿ ಗೆಳತಿ ಹತ್ಯೆಗೆ ಸಂಚು; ಕೊನೆಗೆ ಕೈ ಕಳೆದುಕೊಂಡಿದ್ದು ಪ್ರೇಮಿಯೇ!
Udupi: ಕೋಟಿ ಗೀತಾ ಲೇಖನ ಯಜ್ಞ: 500ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಿಬ್ಬಂದಿಯಿಂದ ದೀಕ್ಷೆ
Sagara: ಟ್ರಾಫಿಕ್ ಜಾಮ್‌ಗೆ ಕಾರಣವಾದ ವಾಹನ ವಶ; ಚಾಲಕನ ವಿರುದ್ಧ ಎಫ್ಐಆರ್ ದಾಖಲು
Siruguppa: ತೆಕ್ಕಲಕೋಟೆಯಲ್ಲಿ ಅಕ್ರಮ ಪಡಿತರ ಅಕ್ಕಿ ವಶ
Mangaluru Airport; ಕೆ 9 ಹೀರೋ ಜಾಕ್ ಇನ್ನಿಲ್ಲ: ಭಾವನಾತ್ಮಕ ವಿದಾಯ
MUST WATCH
ಹೊಸ ಸೇರ್ಪಡೆ
Bagalakote: ಪ್ರೇಯಸಿ ಗೆಳತಿ ಹತ್ಯೆಗೆ ಸಂಚು; ಕೊನೆಗೆ ಕೈ ಕಳೆದುಕೊಂಡಿದ್ದು ಪ್ರೇಮಿಯೇ!
Udupi: ಕೋಟಿ ಗೀತಾ ಲೇಖನ ಯಜ್ಞ: 500ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಿಬ್ಬಂದಿಯಿಂದ ದೀಕ್ಷೆ
Karnataka HC; ನಾಲ್ಕನೇ ಪ್ರಕರಣದಲ್ಲೂ ಪ್ರಜ್ವಲ್ ರೇವಣ್ಣ ನಿರೀಕ್ಷಣಾ ಜಾಮೀನು ಅರ್ಜಿ ವಜಾ
Sagara: ಟ್ರಾಫಿಕ್ ಜಾಮ್‌ಗೆ ಕಾರಣವಾದ ವಾಹನ ವಶ; ಚಾಲಕನ ವಿರುದ್ಧ ಎಫ್ಐಆರ್ ದಾಖಲು
Siruguppa: ತೆಕ್ಕಲಕೋಟೆಯಲ್ಲಿ ಅಕ್ರಮ ಪಡಿತರ ಅಕ್ಕಿ ವಶ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.