ಮೋಡ ಬಿತ್ತನೆಗೆ ಸಕಲ ಸಿದ್ಧತೆ
Team Udayavani, Aug 7, 2019, 11:22 AM IST
ಸುರಪುರ: ಟೇಲರ್ ಮಂಜಿಲ್ ಆವರಣದಲ್ಲಿ ಅಳವಡಿಸಿರುವ ಮೋಡ ಬಿತ್ತನೆ ರೇಡಾರ್ ಟಾವರ್.
ಸುರಪುರ: ಹೈಕ ಭಾಗದಲ್ಲಿ ಮುಂಗಾರು ಮಳೆ ಕೊರತೆಯಾಗಿರುವ ಹಿನ್ನೆಲೆಯಲ್ಲಿ ಸರಕಾರ ಮೋಡ ಬಿತ್ತನೆಗೆ ಮುಂದಾಗಿದ್ದು, ಸುರಪುರ ಟೇಲರ್ ಮಂಜಿಲ್ ಆವರಣದಲ್ಲಿ ರೇಡಾರ್ ಅಳವಡಿಸಲಾಗಿದ್ದು, ಮೋಡ ಬಿತ್ತನೆಗೆ ಸಕಲ ಸಿದ್ಧತೆ ಕಾರ್ಯ ಭರದಿಂದ ಸಾಗಿದೆ.
ಉತ್ತರ ಕರ್ನಾಟಕ ಭಾಗದಲ್ಲಿ ಈ ಬಾರಿ ಮುಂಗಾರು ಮಳೆ ಆರಂಭದಲ್ಲಿ ಒಳ್ಳೆ ಮುನ್ಸೂಚನೆ ನೀಡಿ, ರೈತರ ಕೈ ಹಿಡಿಯುವ ಭರವಸೆ ಮೂಡಿಸಿತ್ತು. ಆದರೆ, ಸಕಾಲಕ್ಕೆ ಮಳೆ ಬಾರದೆ ಇರುವುದರಿಂದ ಪುನಃ ಬಗಾಲದ ಛಾಯೆ ಆವರಿಸಿತು. ಈ ಹಿನ್ನೆಲೆಯಲ್ಲಿ ಮೋಡ ಬಿತ್ತನೆ ಮಾಡಿ ಮಳೆ ತರಿಸುವ ಮೂಲಕ ರೈತರಿಗೆ ಒಂದಿಷ್ಟು ನೆರವಾಗುವ ದೃಷ್ಟಿಯಿಂದ ಸರಕಾರ ಮೋಡ ಬಿತ್ತನೆಗೆ ಮುಂದಾಗಿದೆ ಎನ್ನಲಾಗುತ್ತಿದೆ.
2017-18ರಲ್ಲಿ ಟೇಲರ್ ಮಂಜಿಲ್ ಆವರಣದಲ್ಲಿ ಮೋಡ ಬಿತ್ತನೆಗಾಗಿ ರೇಡಾರ್ ಟಾವರ್ ಅಳವಡಿಸಲಾಗಿತ್ತು. ಗದಗ ಜಿಲ್ಲೆಯಿಂದ ಮೋಡ ಬಿತ್ತನೆ ಮಾಡಿ ಮಳೆ ತರಿಸಲಾಗಿತ್ತು. ಈಗ ಮಳೆ ಕೊರತೆಯಾಗಿರುವುದರಿಂದ ಪುನಃ ರೇಡಾರ್ ಟಾವರ್ ಅಳವಡಿಸಿ ಮೋಡ ಬಿತ್ತನೆ ಮಾಡಲಾಗುತ್ತಿದೆ.
ಮೋಡ ಬಿತ್ತನೆಗೆ ಕರ್ನಾಟಕದಲ್ಲಿ ಮೂರು ಕೇಂದ್ರಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ ಬೆಂಗಳೂರು, ಗದಗ, ಸುರಪುರ, ರೇಡಾರ್‌ಗಳು ಸುಮಾರು ಸುತ್ತಲಿನ 200 ಕೀ.ಮೀಟರ್‌ವರೆಗೆ ಸ್ಕಲಿತ ಮತ್ತು ನಿಷ್ಕಲಿತ ಮೋಡಗಳನ್ನು ಪತ್ತೆ ಮಾಡಿ ಅಂತರ ಜಾಲದ ಮೂಲಕ ಮಾಹಿತಿ ರವಾನಿಸುತ್ತದೆ. ಮಾಹಿತಿ ಆಧರಿಸಿ ಗದಗ ಕೇಂದ್ರದಿಂದ ಜಟ್ ವಿಮಾನದ ಮೂಲಕ ಸಿಲ್ವರ್ ಆಯೋಡೆಡ್ ದ್ರಾವಣವನ್ನು ಮೋಡಗಳ ಮೇಲೆ ಸಿಂಪಡಿಸಿ ಮಳೆ ತರಿಸಲಾಗುವುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Urwa: ಬಾಯ್ದೆರೆದ ಕಾಂಕ್ರೀಟ್ ಚೇಂಬರ್‌ಗಳಿಗೆ ಬಿತ್ತು ಮುಚ್ಚಳ
Bypolls: ಯಡಿಯೂರಪ್ಪರನ್ನು ರಾಜಕೀಯವಾಗಿ ಮುಗಿಸಲು ಬೊಮ್ಮಾಯಿ ಪ್ಲ್ಯಾನ್: ಸಿದ್ದರಾಮಯ್ಯ
Shirola: ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಿಬ್ಬಂದಿ ಕೊರತೆ… ರೋಗಿಗಳ ಪರದಾಟ
Karkala: ದುರ್ಗಾ ಗ್ರಾಮ ಪಂಚಾಯತ್; ರಸ್ತೆ ಸಂಪೂರ್ಣ ದುರವಸ್ಥೆ
Udupi: ಜಿಲ್ಲೆಯ ಬ್ಲ್ಯಾಕ್ ಸ್ಪಾಟ್ 30ರಿಂದ 20ಕ್ಕೆ ಇಳಿಕೆ
MUST WATCH
ಹೊಸ ಸೇರ್ಪಡೆ
Kanguva: 10 ಸಾವಿರಕ್ಕೂ ಹೆಚ್ಚಿನ ಸ್ಕ್ರೀನ್‌ನಲ್ಲಿ ಅದ್ಧೂರಿಯಾಗಿ ರಿಲೀಸ್ ಆಗಲಿದೆ ʼಕಂಗುವʼ
Urwa: ಬಾಯ್ದೆರೆದ ಕಾಂಕ್ರೀಟ್ ಚೇಂಬರ್‌ಗಳಿಗೆ ಬಿತ್ತು ಮುಚ್ಚಳ
Bypolls: ಯಡಿಯೂರಪ್ಪರನ್ನು ರಾಜಕೀಯವಾಗಿ ಮುಗಿಸಲು ಬೊಮ್ಮಾಯಿ ಪ್ಲ್ಯಾನ್: ಸಿದ್ದರಾಮಯ್ಯ
Shirola: ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಿಬ್ಬಂದಿ ಕೊರತೆ… ರೋಗಿಗಳ ಪರದಾಟ
Karkala: ದುರ್ಗಾ ಗ್ರಾಮ ಪಂಚಾಯತ್; ರಸ್ತೆ ಸಂಪೂರ್ಣ ದುರವಸ್ಥೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.