ಶಾಂತಿಯುತ ಚುನಾವಣೆಗೆ ಸಿಬ್ಬಂದಿ ಸಹಕರಿಸಲಿ: ಪೂಜಾರಿ
ನಿಗದಿತ ಸಮಯಕ್ಕೆ ಮತದಾನ ಪ್ರಕ್ರಿಯೆ ಆರಂಭಿಸಲು ಸಲಹೆ
Team Udayavani, May 22, 2019, 5:40 PM IST
ಸುರಪುರ: ಇಲ್ಲಿಯ ತಹಶೀಲ್ದಾರ್ ಕಚೇರಿ ಸಭಾಂಗಣದಲ್ಲಿ ಚುನಾವಣಾ ಸಿಬ್ಬಂದಿಗಳಿಗೆ ಹಣಮಂತ ಪೂಜಾರಿ ತರಬೇತಿ ನೀಡಿದರು.
ಸುರಪುರ: ತಾಲೂಕು ಪಂಚಾಯಿತಿ ಸದಸ್ಯರ ನಿಧನದಿಂದ ತೆರವಾಗಿರುವ ಗೆದ್ದಲಮರಿ ಹಾಗೂ ಹೆಬ್ಟಾಳ ಬಿ, ಎರಡು ತಾಪಂ ಕ್ಷೇತ್ರಗಳ ಶಾಂತಿಯುತ ಮತ್ತು ಮುಕ್ತ ಚುನಾವಣೆಗೆ ಸಿಬ್ಬಂದಿಗಳು ಸಹಕರಿಸಬೇಕು ಎಂದು ಚುನಾವಣಾ ತರಬೇತಿದಾರ ಹಣಮಂತ ಪೂಜಾರಿ ಹೇಳಿದರು.
ಇಲ್ಲಿಯ ತಹಶೀಲ್ದಾರ್ ಕಚೇರಿಯಲ್ಲಿ ಹೆಬಾಳ ಬಿ ಹಾಗೂ ಗೆದ್ದಲಮರಿ ತಾಲೂಕು ಪಂಚಾಯಿತಿ ಎರಡು ಸ್ಥಾನಗಳ ಚುನಾವಣಾ ಸಿಬ್ಬಂದಿಗಳಿಗೆ ಮಂಗಳವಾರ ಏರ್ಪಡಿಸಿದ್ದ ತರಬೇತಿ ಶಿಬಿರದಲ್ಲಿ ಅವರು ಮಾತನಾಡಿದರು.
ಮತಗಟ್ಟೆಗಳಲ್ಲಿ ಯಾವುದೇ ಗೊಂದಲಕ್ಕೆ ಆಸ್ಪದ ಕೊಡಬಾರದು. ಮತದಾನಕ್ಕೆ ಮುಂಚಿತವಾಗಿಯೇ ಮತಯಂತ್ರವನ್ನು ಪರಿಶೀಲಸಿಕೊಳ್ಳಬೇಕು. ನಿಗದಿತ ಸಮಯಕ್ಕೆ ಮತದಾನ ಪ್ರಕ್ರಿಯೆ ಆರಂಭಿಸಬೇಕು ಎಂದು ತಿಳಸಿದರು.
ಇದು ಬೈ ಎಲೆಕ್ಸ್‌ನ್ ಆಗಿರುವುದರಿಂದ ರಾಜಕೀಯ ಪಕ್ಷಗಳಲ್ಲಿ ಜಿದ್ದಾಜಿದ್ದು ಇರುತ್ತದೆ. ಸೂಕ್ಷ್ಮವಾಗಿ ಗಮನಿಸಬೇಕು. ನಿಷ್ಪಕ್ಷಪಾತವಾಗಿ ನಡೆದುಕೊಳ್ಳಬೇಕು. ಮತಯಂತ್ರದಲ್ಲಿ ದೋಷ ಕಂಡು ಬಂದಲ್ಲಿ ತಕ್ಷಣವೇ ಸೆಕ್ಟರ್ ಆಫೀಸರ್‌ಗೆ ತಿಳಿಸಿ ಯಾವದೇ ಕಾರಣಕ್ಕೆ ಮತದಾನ ಸ್ಥಗಿತಗೊಳ್ಳದಂತೆ ಎಚ್ಚರಿಕೆ ವಹಿಸಬೇಕು. ಗುರುತಿನ ಚೀಟಿ ಅಥವಾ ಇತರೆ ಗುರುತಿನ ಚೀಟಿ ತಂದವರಿಗೆ ಮಾತ್ರ ಮತದಾನಕ್ಕೆ ಅವಕಾಶ ನೀಡಬೇಕು. ಯಾವುದೇ ವಿವಾದಗಳಿಗೆ ಆಸ್ಪದ ಕೊಡಬೇಡಿ ಎಂದು ತಾಕೀತು ಮಾಡಿದರು.
ಪಿಆರ್‌ಒ ಡೈರಿಯನ್ನು ಸರಿಯಾಗಿ ಬರೆದಿಟ್ಟುಕೊಳ್ಳಬೇಕು. ಪ್ರತಿ ಎರಡು ಗಂಟೆಗೆ ಒಮ್ಮೆ ಮತದಾನ ವಿವಿರ ನೀಡಬೇಕು. ಮತದಾನ ಮುಗಿದ ನಂತರ ಏಜೆಂಟರ ಸಮ್ಮುಖದಲ್ಲಿ ಶೀಲ್ಡ್ ಮಾಡಬೇಕು ಎಂದು ಸೂಚಿಸಿದರು. ನಂತರ ವಿದ್ಯುನ್ಮಾನ ಮತಯಂತ್ರ ಬಳಕೆ, ಮತಪತ್ರಗಳ ಜೋಡಣೆ ಕುರಿತು ಪ್ರಾತ್ಯಕ್ಷಿಕೆ ಮೂಲಕ ಮಾಹತಿ ನೀಡಿದರು. ಚುನಾವಣಾ ಹಿರಿಯ ಶಿರಸ್ತೇದಾರ ನರಸಿಂಹ ಕುಲಕರ್ಣಿ ಮತ್ತು ಚುನಾವಣಾ ಸಿಬ್ಬಂದಿಗಳು ಇದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.