ವಿಜೃಂಭಣೆಯ ರಾಯರ ಮಧ್ಯಾರಾಧನೆ
ವಿವಿಧ ಬಗೆಯ ಫಲಪುಷ್ಪಗಳಿಂದ ಅಲಂಕಾರ •ಭಕ್ತರಿಂದ ವೃಂದಾವನ ದರ್ಶನ
Team Udayavani, Aug 18, 2019, 5:03 PM IST
ತಾಳಿಕೋಟೆ: ಗುರು ರಾಯರ ಮಧ್ಯಾರಾಧನೆ ಮಹಾಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಭಕ್ತಸಮೂಹ.
ತಾಳಿಕೋಟೆ: ನಗರೇಶ್ವರ ದೇವಸ್ಥಾನದಲ್ಲಿ ಪ್ರಾರಂಭಗೊಂಡ ಗುರು ರಾಘವೇಂದ್ರ ಮಹಾಸ್ವಾಮಿಗಳ 45ನೇ ವರ್ಷದ ಆರಾಧನಾ ಮಹೋತ್ಸವದ ಎರಡನೇ ದಿನ ಶನಿವಾರ ಮಧ್ಯಾರಾಧನೆ ಮಹಾಪೂಜಾ ಕಾರ್ಯಕ್ರಮ ಭಕ್ತಿಭಾವದೊಂದಿಗೆ ಜರುಗಿತು.
ಪ್ರಾಥಕಾಲ ಸುಪ್ರಭಾತ, ನಗರೇಶ್ವರ ಮೂರ್ತಿಗೆ ರುದ್ರಾಭಿಷೇಕ ಗುರುರಾಯರ ಮೂರ್ತಿಗೆ ಪಂಚಾಮೃತ ಅಭಿಷೇಕ, ಗುರು ರಾಯರ ಅಷ್ಟೋತ್ತರ, ಲೋಕಶಾಂತಿಗಾಗಿ ಪವಮಾನ ಹೋಮ, ಪೂರ್ಣಾಹುತಿ, ಕನಿಕಾಭಿಷೇಕ, ತುಳಸಿ ಅರ್ಚನೆ, ಅಸ್ತೋದಕ, ಮಹಾ ಮಂಗಳಾರತಿ, ತೀರ್ಥ ಪ್ರಸಾದ ಸಾಯಂಕಾಲ ತಾರತಮ್ಯ ಭಜನೆಯೊಂದಿಗೆ ಪಲ್ಲಕ್ಕಿ ಸೇವೆ ಮಂತ್ರ ಪುಷ್ಪ ಜರುಗಿತು.
ಪೂಜಾ ಕಾರ್ಯಕ್ರಮದಲ್ಲಿ ಎಂ.ಸುಂದರ್ಶನರಾಜ, ಮಂಜುಳಾ ಸುಂದರ್ಶನರಾಜ ಪಾಲ್ಗೊಂಡಿದ್ದರು. ಮಧ್ಯಾರಾಧನೆ ಪೂಜಾ ಕಾರ್ಯಕ್ರಮವನ್ನು.ಶ್ರೀಧರಭಟ್ ಜೋಶಿ, ವಸಂತ ಜೋಶಿ, ಶ್ರೀನಿವಾಸ ಜೋಶಿ, ಅನಿಲ ಜೋಶಿ, ವೆಂಕಟೇಶ ಗ್ರಾಮಪುರೋಹಿತ, ಶ್ರೀಧರ ಗ್ರಾಮಪುರೋಹಿತ, ರಾಘವೇಂದ್ರ ಉಡಪಿ, ಅಭಿಷೇಕ ಜೋಶಿ, ಅಕ್ಷಯ ಜೋಶಿ, ಸಂಜೀವ ಗ್ರಾಮಪುರೋಹಿತ, ಪ್ರಭಾಕರ ಜೋಶಿ, ಮುರಳೀಧರ ಜೋಶಿ, ಲಿಂಗೋಜಿರಾವ್ ಕುಲಕರ್ಣಿ (ಕಾಮನಟಗಿ) ನೆರವೇರಿಸಿದರು.
ಕಾರ್ಯಕ್ರಮದಲ್ಲಿ ಬೆಳಗಾವಿಯ ದಿ| ಗೋವಿಂದರಾವ್ ಹೇವಣ್ಣವರ ಸ್ಮರಣಾರ್ಥ ಇವರ ಪತ್ನಿ ಪದ್ಮಾವತಿ ಹೇವಣ್ಣವರ ವಾಸವಿ ಕಲ್ಯಾಣ ಮಂಟಪ ಕಟ್ಟಡಕ್ಕಾಗಿ 1 ಲಕ್ಷ ರೂ. ದೇಣಿಗೆ ನೀಡಿದರು. ಗುರು ಪ್ರಲ್ಹಾದರಾಯ್‌ರ ಚಿನ್ನದ ಕವಚಕ್ಕಾಗಿ ತಗಲುತ್ತಿರುವ 75 ಗ್ರಾಂ ಚಿನ್ನದಲ್ಲಿ ಕೆಲವರು ತಮ್ಮ ಶಖ್ಯಾನುಸಾರ ಚಿನ್ನವನ್ನು ನೀಡಿದ್ದರಿಂದ ಅವರಿಗೆ ಸನ್ಮಾನಿಸಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Notice: ಸಂಗೀತ ಕಾರ್ಯಕ್ರಮಕ್ಕೂ ಮುನ್ನ ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
Marriage: ಕ್ರಿಸ್ಮಸ್‌ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.