ಕಾಡಾನೆ ದಾಳಿ: ಬಾಳೆ ಬೆಳೆ ನಾಶ
ವನ್ಯಜೀವಿಗಳಿಂದ ಆಗುತ್ತಿರುವ ತೊಂದರೆ ನಿವಾರಿಸಲು ರೈತರ ಆಗ್ರಹ
Team Udayavani, Jun 16, 2019, 11:51 AM IST
ತರೀಕೆರೆ: ತಾಲೂಕಿನ ಲಿಂಗದಹಳ್ಳಿ ಹೋಬಳಿ ಜೈಪುರ ಗ್ರಾಮದ ತಿಗಡದ ಬಳಿ ಬೆಳೆದಿದ್ದ ಬಾಳೆ ಬೆಳೆಯನ್ನು ಕಾಡಾನೆಗಳು ನಾಶಪಡಿಸಿರುವುದು.
ತರೀಕೆರೆ: ತಾಲೂಕಿನ ಲಿಂಗದಹಳ್ಳಿ ಹೋಬಳಿ ತಣಿಗೆಬೈಲು, ಹುಣಸೆಬೈಲು, ಜೈಪುರ, ತಿಮ್ಮನಬೈಲು ಗ್ರಾಮಗಳಲ್ಲಿ ಕಾಡಾನೆ ಉಪಟಳ ಹೆಚ್ಚಾಗಿದ್ದು, ರೈತರ ಜಮೀನಿನಲ್ಲಿ ಬೆಳೆದು ನಿಂತಿರುವ ಲಕ್ಷಾಂತರ ರೂ.ಮೌಲ್ಯದ ಫಸಲು ನಾಶ ಮಾಡುತ್ತಿವೆ.
ಕಾಡಾನೆ ಜೊತೆಗೆ ಇನ್ನಿತರ ಕಾಡು ಪ್ರಾಣಿಗಳ ಹಾವಳಿಯೂ ಹೆಚ್ಚಾಗಿರುವುದರಿಂದ ರೈತರಿಗೆ ಲಕ್ಷಾಂತರ ರೂ. ನಷ್ಟ ಸಂಭವಿಸುತ್ತಿದೆ. ಅರಣ್ಯ ಇಲಾಖೆ ಅಧಿಕಾರಿಗಳು ವನ್ಯಜೀವಿಗಳಿಂದ ಉಂಟಾಗುತ್ತಿರುವ ತೊಂದರೆ ನಿವಾರಿಸಿ ರಕ್ಷಣೆ ಒದಗಿಸಬೇಕಾಗಿದೆ ಎಂದು ಸ್ಥಳೀಯರು ಆಗ್ರಹಿಸುತ್ತಿದ್ದಾರೆ.
ಲಕ್ಷಾಂತರ ರೂ. ಬೆಳೆ ನಾಶ: ಈ ಭಾಗದಲ್ಲಿ ರೈತರು ಭತ್ತ, ಜೋಳ, ರಾಗಿ, ಆಲೂಗಡ್ಡೆ ಮತ್ತು ಬಟಾಣಿ ಬೆಳೆಯುತ್ತಾರೆ. ಕೆಲವರು ಸಹಕಾರ ಸಂಘ ಮತ್ತು ವಾಣಿಜ್ಯ ಬ್ಯಾಂಕುಗಳಿಂದ ಸಾಲ ಪಡೆದು ಜಮೀನುಗಳಲ್ಲಿ ಬಾಳೆ, ಅಡಕೆ, ತೆಂಗು, ಮಾವು, ಸಪೋಟ, ಹಲಸು, ಮೆಣಸು ಸಹಿತ ಅನೇಕ ತೋಟದ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಕೆಲ ದಿನಗಳಿಂದ ರೈತರು ಬೆಳೆದ ತೋಟಗಳಿಗೆ ಕಾಡಾನೆಗಳು ರಾತ್ರಿ ವೇಳೆ ಪ್ರತಿನಿತ್ಯ ದಾಳಿ ಮಾಡಿ, ತೋಟದಲ್ಲಿ ಬೆಳೆದು ಫಸಲಿಗೆ ಬಂದಿರುವ ಬಾಳೆ, ತೆಂಗು, ಅಡಕೆ, ಮಾವು, ಹಲಸು ಬೆಳೆಗಳನ್ನು ತಿಂದು, ತುಳಿದು ನಾಶಪಡಿಸುತ್ತಿವೆ.
ರೈತರ ಅಳಲು: ಕಾಡಾನೆ ಉಪಟಳದಿಂದಾಗಿ ತಾವು ಸಾಲ ಮಾಡಿ ಬೆಳೆದ ಹಾಗೂ ಕಟಾವಿಗೆ ಬಂದ ಲಕ್ಷಾಂತರ ರೂ. ಬೆಲೆ ಬಾಳುವ ಬೆಳೆಗಳು ನೆಲದ ಪಾಲಾಗಿವೆ ಎಂದು ರೈತರಾದ ಮಲ್ಲೇನಹಳ್ಳಿ ರಾಮಪ್ಪ ಹಾಗೂ ಜೈಪುರ ಗ್ರಾಮದ ಪಾಪಣ್ಣ ಮುಂತಾದವರು ಅಳಲು ತೋಡಿಕೊಂಡಿದ್ದಾರೆ.
ಸಾಲ ತೀರಿಸುವುದಾದರೂ ಹೇಗೆ?: ಲಿಂಗದಹಳ್ಳಿ ವ್ಯವಸಾಯ ಸೇವಾ ಸಹಕಾರ ಸಂಘದ ಅಧ್ಯಕ್ಷರೂ ಆಗಿರುವ ಮಲ್ಲೇನಹಳ್ಳಿ ರಾಮಪ್ಪ ಮಾತನಾಡಿ, ಸಹಕಾರ ಸಂಘದಲ್ಲಿ ಸಾಲ ಪಡೆದು ಒಂದು ವರ್ಷದ ಹಿಂದೆ ತಿಗಡ ಸರ್ವೆ ನಂಬರ್ 85 ಮತ್ತು 86ರಲ್ಲಿರುವ 6.20ಎಕರೆ ಜಮೀನಿನಲ್ಲಿ ಪುಟ್ಟ ಬಾಳೆ ಸಸಿಗಳನ್ನು ನೆಟ್ಟು ಬೆಳೆಸಿದ್ದೆವು. ಈ ಬೆಳೆ ಮುಂದಿನ ಒಂದೆರಡು ತಿಂಗಳಲ್ಲಿ ತಮ್ಮ ಕೈಸೇರಿದ ನಂತರ, ತಾವು ಸ್ವ ಸಹಾಯ ಸಂಘದಿಂದ ಪಡೆದಿರುವ ಸಾಲದ ಹಣವನ್ನು ಮಾರುಪಾವತಿ ಮಾಡಲು ತೀರ್ಮಾನಿಸಿದ್ದೆವು. ಆದರೆ, ಈಗ ಕಾಡಾನೆಗಳ ದಾಳಿಯಿಂದಾಗಿ ಸಂಪೂರ್ಣ ಬಾಳೆ ಬೆಳೆ ನಾಶವಾಗಿದೆ. ಸಾಲ ತೀರಿಸುವುದು ಹೇಗೆ ಎಂಬ ಸಮಸ್ಯೆ ಸುಳಿಗೆ ಸಿಲುಕಿದ್ದೇವೆ ಎಂದು ನೊಂದು ಹೇಳಿದರು.
ಲಿಂಗದಹಳ್ಳಿ ಹೋಬಳಿಯಲ್ಲಿ ಕಳೆದ 3-4 ವರ್ಷಗಳಿಂದ ಸರಿಯಾಗಿ ಮಳೆ ಬಾರದ ಕಾರಣ ಟ್ಯಾಂಕರ್ ಮೂಲಕ ನೀರು ತಂದು ಬಾಳೆ ಬೆಳೆ ಬೆಳೆಯುತ್ತಿದ್ದೇವೆ. ಲಕ್ಷಾಂತರ ರೂ. ಬೆಲೆ ಬಾಳುವ ಬಾಳೆ ಗೊನೆಗಳು ನೆಲದ ಪಾಲಾಗಿದ್ದು, ವ್ಯವಸಾಯ ಸೇವಾ ಸಹಕಾರ ಸಂಘದಿಂದ ಹಣ ತಂದು ಬೆಳೆದ ಬೆಳೆ ಕೈ ತಪ್ಪುತ್ತಿದೆ. ಇದರಿಂದ, ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ. ಕಾಡಾನೆ ಇನ್ನಿತರ ವನ್ಯ ಪ್ರಾಣಿಗಳ ಉಪಟಳದ ಬಗ್ಗೆ ತಣಿಗೆಬೈಲು ಅರಣ್ಯಅಧಿಕಾರಿಗಳ ಗಮನಕ್ಕೆ ತರಲಾಗಿದ್ದು, ಸೂಕ್ತ ಪರಿಹಾರದ ನಿರೀಕ್ಷೆಯಲ್ಲಿದ್ದೇವೆ.
•ರಾಮಪ್ಪ, ಅಧ್ಯಕ್ಷರು,
ವಿಎಸ್‌ಎಸ್‌ಎನ್, ಲಿಂಗದಹಳ್ಳಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Indian Constitution: ಸಂವಿಧಾನ ಅಂಗೀಕರಿಸಿ 75 ವರ್ಷ: ಸದನದಲ್ಲಿಂದು ರಾಷ್ಟ್ರಪತಿ ಭಾಷಣ
Judgement: ಸಂವಿಧಾನ ಪೀಠಿಕೆಯ ಜಾತ್ಯತೀತ ಪದ ಪ್ರಶ್ನಿಸಿದ್ದ ಅರ್ಜಿ ಸುಪ್ರೀಂನಿಂದ ವಜಾ
EVM Issue: ಮತಯಂತ್ರ ತಿರುಚಿದ್ದು ಸಾಬೀತಿಗೆ ನನ್ನ ಬಳಿ ಪುರಾವೆಗಳಿಲ್ಲ: ಕಾರ್ತಿ ಚಿದಂಬರಂ
Kasaragod;ತೀವ್ರ ತಲೆನೋವು: ವಿದ್ಯಾರ್ಥಿನಿ ಸಾ*ವು
Malpe: ಕಾರು ಢಿಕ್ಕಿಯಾಗಿ ಆಟೋ ರಿಕ್ಷಾ ಚಾಲಕನಿಗೆ ಗಾಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.