ಪಕ್ಷೇತರ ಪ್ರಾಬಲ್ಯದ ನಡುವೆ ಕಾಂಗ್ರೆಸ್-ಬಿಜೆಪಿ ಬಿಗ್ ಫೈಟ್
ಪುರಸಭೆ ಚುನಾವಣೆಯಲ್ಲಿ ಪಕ್ಷಕ್ಕಿಂತ ವ್ಯಕ್ತಿಗೆ ಮನ್ನಣೆ ಕೊಟ್ಟಿರುವ ಮತದಾರ ಪ್ರಭು
Team Udayavani, May 4, 2019, 11:46 AM IST
ತಾಳಿಕೋಟೆ: ತಾಳಿಕೋಟೆ ಪುರಸಭೆ ಅಧಿಕಾರದ ಗದ್ದುಗೆಗಾಗಿ ಹಣ ಬಲ ತೋಳ್ಬಲದ ಜೊತೆಗೆ ಜನ ಬಲ ಹೊಂದಬೇಕಾದರೆ ಪಕ್ಷ ಪ್ರಾಬಲ್ಯ ಮುಖ್ಯವೆಂಬುದನ್ನು ಅರಿತುಕೊಂಡಿರುವ ಸ್ಪರ್ಧಾ ಆಕಾಂಕ್ಷಿಗಳು ಟಿಕೆಟ್ ಗಿಟ್ಟಿಸಿಕೊಳ್ಳಲು ಈಗಲೇ ಮುಖಂಡರುಗಳ ಮನೆ ಬಾಗಿಲಿಗೆ ದುಂಬಾಲು ಬಿದ್ದಿದ್ದಾರೆ.
ತಾಳಿಕೋಟೆ ಪುರಸಭೆ ವ್ಯಾಪ್ತಿಯ 23 ವಾರ್ಡ್‌ಗಳಲ್ಲಿ ಒಟ್ಟು 24,757 ಮತದಾರರರಿದ್ದು ಇದರಲ್ಲಿ 12,340 ಪುರುಷರು, 12,108 ಮಹಿಳೆಯರು ಸೇರಿದಂತೆ ಇತರರು ಇಬ್ಬರಿದ್ದಾರೆ. ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಬಿಜೆಪಿಗಿಂತ ಸುಮಾರು 500ಕ್ಕೂ ಅಧಿಕ ಮತಗಳನ್ನು ಗಿಟ್ಟಿಸಿಕೊಳ್ಳಲು ಕಾಂಗ್ರೆಸ್ ಪಕ್ಷ ಮುಂದಾಗಿ ತನ್ನ ಪ್ರಾಬಲ್ಯ ಮೆರೆದಿದ್ದು ಸ್ಮರಿಸಬಹುದು.
ತಾಳಿಕೋಟೆ ಪುರಸಭೆಯ ಅಧಿಕಾರದ ಚುಕ್ಕಾಣಿಯಲ್ಲಿ 1967ರಿಂದ ಇಲ್ಲಿವರೆಗೆ ಪಕ್ಷಕ್ಕಿಂತ ಪಕ್ಷೇತರರೇ ಅಧಿಕಾರದ ಗದ್ದುಗೆ ಹಿಡಿಯುತ್ತ ಬಂದಿದ್ದಾರೆ. ಕಳೆದ ಬಾರಿಯ ಪುರಸಭೆ ಚುನಾವಣೆಯಲ್ಲಿ 3 ಜನ ಕಾಂಗ್ರೆಸ್ ಪಕ್ಷದಿಂದ ಆಯ್ಕೆಯಾದರೆ ಓರ್ವ ಬಿಜೆಪಿಯಿಂದ ಆಯ್ಕೆಗೊಂಡಿದ್ದಾರೆ. ಇದರಲ್ಲಿ ಕಾಂಗ್ರೆಸ್ ಪಕ್ಷದ ಅಧಿಕೃತ ಅಭ್ಯರ್ಥಿ ಕರಿಂಬಿ ಮಕಾಂದಾರ ಅವರು ಪಕ್ಷೇತರ ಮನ ಗೆಲ್ಲುವುದರೊಂದಿಗೆ ಎರಡು ವರ್ಷಗಳ ಕಾಲ ಅಧಿಕಾರ ನಡೆಸಿದರೆ ಮುಂದಿನ ಅವಧಿಯಲ್ಲಿ ಪಕ್ಷೇತರ ಸದಸ್ಯೆ ಅಕ್ಕಮಹಾದೇವಿ ಕಟ್ಟಿಮನಿ ಅವರು ಅಧಿಕಾರ ಚಲಾಯಿಸಿದರು.
ತಾಳಿಕೋಟೆ ಪುರಸಭೆಯ ಸುಮಾರು 60 ವರ್ಷಗಳ ಆಡಳಿತದಲ್ಲಿ ಪಕ್ಷಕ್ಕಿಂತ ಪಕ್ಷೇತರ ಸದಸ್ಯರೇ ಆಯ್ಕೆಯಾಗಿರುವುದು ಅತಿ ಹೆಚ್ಚು. ಹೀಗಾಗಿ ಪಕ್ಷಕ್ಕಿಂತ ವ್ಯಕ್ತಿ ಮುಖ್ಯವೆಂಬುದನ್ನು ನಿರ್ಣಯಿಸಿಕೊಂಡು ಬಂದಿರುವ ಮತದಾರರಿಗೆ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಶಾಸಕ ಎ.ಎಸ್. ಪಾಟೀಲ (ನಡಹಳ್ಳಿ) ಪ್ರಥಮ ಬಾರಿಗೆ ಖಾತೆ ತೆರೆದಿದ್ದರಿಂದ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಬಿಗ್ ಫೈಟ್ ನಡೆಯುವ ಸನ್ನಿವೇಶಗಳು ಕಾಣತೊಡಗಿವೆ.
ಸೋಲ್ಲಿಲ್ಲದ ಸರದಾರ ಎನಿಸಿಕೊಂಡಿದ್ದ ಕಾಂಗ್ರೆಸ್ ಪಕ್ಷದ ಸಿ.ಎಸ್. ನಾಡಗೌಡ ಅವರು ಎ.ಎಸ್. ಪಾಟೀಲ (ನಡಹಳ್ಳಿ) ಅವರಿಂದ ಕಳೆದ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಸೋಲಿನ ರುಚಿನ ಅನುಭವಿಸಿದ್ದು ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ತಮ್ಮ ಬೆಂಬಲಿತ ಅಭ್ಯರ್ಥಿಗಳ ಆಯ್ಕೆ ಮಾಡಿ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದಾರೆ.
ಶಾಸಕ ಎ.ಎಸ್. ಪಾಟೀಲ (ನಡಹಳ್ಳಿ) ಅವರು ತಮ್ಮ ಕ್ಷೇತ್ರ ಬದಲಿಸಿ ಮುದ್ದೇಬಿಹಾಳ ಮತಕ್ಷೇತ್ರಕ್ಕೆ ಲಗ್ಗೆಯಿಟ್ಟು ಬಿಜೆಪಿಯಿಂದ ಶಾಸಕರಾಗಿ ಆಯ್ಕೆಗೊಂಡಿದ್ದರೂ ಇಲ್ಲಿವರೆಗೂ ಸೋಲಿನ ರುಚಿ ಕಂಡಿಲ್ಲ. ಸದಾ ಯುವ ಸಮೂಹದೊಂದಿಗೆ ತೊಡಗಿಕೊಳ್ಳುವುದರೊಂದಿಗೆ ಸದಾ ಉತ್ಸುಕತೆಯಿಂದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲೂ ತಮ್ಮ ಪ್ರಾಬಲ್ಯ ತೋರಿಸುತ್ತ ಸಾಗಿದ್ದ ಮಾಜಿ ಶಾಸಕ ಸಿ.ಎಸ್. ನಾಡಗೌಡ ಜೊತೆ ಪ್ರಬಲ ಪೈಪೋಟಿ ನಡೆಸಲಿದ್ದಾರೆ.
ಶಾಸಕ ಎ.ಎಸ್. ಪಾಟೀಲ (ನಡಹಳ್ಳಿ) ಕೂಡಾ ಪ್ರತಿ ವಾರ್ಡ್‌ಗೆ 3 ಜನ ಪ್ರಬಲ ಸ್ಪರ್ಧಾ ಆಕಾಂಕ್ಷಿಗಳನ್ನು ತಯಾರಿಸುತ್ತ ಸಾಗಿದ್ದಾರೆ. ಕೊನೆ ಘಳಿಗೆಯಲ್ಲಿ ಇಬ್ಬರನ್ನು ಹಿಂದಕ್ಕೆ ಸರಿಸಿ ಚುನಾವಣೆ ಎದುರಿಸುವ ಮತ್ತು ತಮ್ಮ ಶಕ್ತಿ ಪ್ರದರ್ಶನ ತೋರಿಸುವ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ.
ಸ್ಪರ್ಧಾ ಆಕಾಂಕ್ಷಿಗಳು ಸ್ಪರ್ಧೆಕ್ಕಿಂತ ಮುಂಚೆಯೇ ಜನತೆ ಆಶೀರ್ವಾದ ಬಯಸಿ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕುತ್ತ ಯುವ ಸಮೂಹದ ಮನ ಗೆಲ್ಲಲು ಪ್ರಯತ್ನಿಸುತ್ತಿದ್ದಾರೆ. ಮಾ. 9ರಿಂದ ಚುನಾವಣೆಗೆ ನಾಮಪತ್ರ ಸಲ್ಲಿಸಿ ಮಾ. 16ರಂದು ಹಿಂತೆಗೆದುಕೊಳ್ಳುವ ಹೊತ್ತಿಗೆ ಯಾರ್ಯಾರು ಸ್ಪರ್ಧಾ ಕಣದಲ್ಲಿ ಉಳಿದುಕೊಳ್ಳುತ್ತಾರೋ ಯಾರು ಪಕ್ಷ ಮತ್ತು ಪಕ್ಷೇತರಾಗಿ ಸ್ಪರ್ಧಿಸುತ್ತಾರೋ ಎಂಬ ಚಿತ್ರಣ ಹೊರಬಿಳಲಿದೆ.
ತಾಳಿಕೋಟೆ ಪುರಸಭೆ ವಾರ್ಡ್‌ವಾರು ಮೀಸಲಾತಿ ವಿವರ
ವಾರ್ಡ್ ನಂ. 1 ಪರಿಶಿಷ್ಠ ಪಂಗಡ, 2. ಹಿಂದುಳಿದ ವರ್ಗ (ಎ) ಮಹಿಳೆ, 3. ಸಾಮಾನ್ಯ, 4. ಹಿಂದುಳಿದ ವರ್ಗ (ಬಿ) ಮಹಿಳೆ, 5. ಸಾಮಾನ್ಯ, 6. ಹಿಂದುಳಿದ ವರ್ಗ (ಎ) ಮಹಿಳೆ, 7. ಪರಿಶಿಷ್ಠ ಜಾತಿ, 8. ಸಾಮಾನ್ಯ ಮಹಿಳೆ, 9. ಹಿಂದುಳಿದ ವರ್ಗ (ಬಿ), 10. ಸಾಮಾನ್ಯ ಮಹಿಳೆ, 11. ಸಾಮಾನ್ಯ, 12. ಸಾಮಾನ್ಯ ಮಹಿಳೆ, 13. ಸಾಮಾನ್ಯ ಮಹಿಳೆ, 14. ಹಿಂದುಳಿದ ವರ್ಗ (ಎ) ಮಹಿಳೆ, 15. ಸಾಮಾನ್ಯ, 16. ಹಿಂದುಳಿದ ವರ್ಗ (ಎ), 17. ಸಾಮಾನ್ಯ, 18. ಹಿಂದುಳಿದ ವರ್ಗ (ಎ), 19. ಪರಿಶಿಷ್ಠ ಜಾತಿ ಮಹಿಳೆ, 20. ಸಾಮಾನ್ಯ ಮಹಿಳೆ, 21. ಸಾಮಾನ್ಯ, 22. ಹಿಂದುಳಿದ ವರ್ಗ (ಎ), 23. ಸಾಮಾನ್ಯ ಮಹಿಳೆ.
ತಾಳಿಕೋಟೆ ಪುರಸಭೆ 23 ವಾರ್ಡ್‌ಗಳಿಗೆ 28 ಮತಗಟ್ಟೆ ನಿರ್ಮಿಸಲಾಗುತ್ತದೆ. ಚುನಾವಣೆಯಲ್ಲಿ ಮೂವರು ಸೆಕ್ಟರ್ ಅಧಿಕಾರಿ, ಇಬ್ಬರು ತರಬೇತಿ ಅಧಿಕಾರಿಗಳ ಪಟ್ಟಿ ತಯಾರಿಸಿ ಜಿಲ್ಲಾಧಿಕಾರಿಗಳ ಅನುಮತಿಗೆ ಕಳುಹಿಸಿದ್ದೇನೆ. ಮತ ಎಣಿಕೆಯನ್ನು ಪಟ್ಟಣದ ಎಸ್.ಕೆ. ಕಾಲೇಜ್‌ನಲ್ಲಿ ನಿರ್ಮಿಸಲು ಪೂರ್ವ ತಯಾರಿ ಮಾಡಿಕೊಳ್ಳಲಾಗಿದೆ.
•ನಿಂಗಪ್ಪ ಬಿರಾದಾರ, ತಹಶೀಲ್ದಾರ್
ಜಿ.ಟಿ.ಘೋರ್ಪಡೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli: ಅಯ್ಯಪ್ಪ ಶಿಬಿರದಲ್ಲಿ ಅಗ್ನಿ ಆಕಸ್ಮಿಕ: ಒಂಬತ್ತು ವೃತಧಾರಿಗಳಿಗೆ ಗಂಭೀರ ಗಾಯ
Mudigere: ಹೊರನಾಡು ದೇವರ ದರ್ಶನಕ್ಕೆ ಬರುತ್ತಿದ್ದವರ ವಾಹನ ಪಲ್ಟಿ… ನಾಲ್ವರಿಗೆ ಗಂಭೀರ ಗಾಯ
Trasi: ನಾಪತ್ತೆಯಾಗಿದ್ದ ಬೋಟ್ ರೈಡರ್ ಶವ 36 ಗಂಟೆಗಳ ಬಳಿಕ ಪತ್ತೆ
Shivamogga: ತಡರಾತ್ರಿ ಭೀಕರ ರಸ್ತೆ ಅಪಘಾತ… ಬೈಕ್ ನಲ್ಲಿದ್ದ ಇಬ್ಬರು ಯುವಕರು ಮೃ*ತ್ಯು
Natural Disaster: ಅನಿರೀಕ್ಷಿತ ಮಳೆಗೆ ಸೊರಗಿದ ವಿಶಿಷ್ಟ ಗುಣದ ಹೆಮ್ಮಾಡಿ ಸೇವಂತಿಗೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Chhattisgarh: ವಿವಾಹಿತ ಮಹಿಳೆಯರ ಖಾತೆಗೆ ಹಣ-ಸನ್ನಿ ಲಿಯೋನ್ ಹೆಸರಲ್ಲಿ ವಂಚನೆ!
Hubli: ಅಯ್ಯಪ್ಪ ಶಿಬಿರದಲ್ಲಿ ಅಗ್ನಿ ಆಕಸ್ಮಿಕ: ಒಂಬತ್ತು ವೃತಧಾರಿಗಳಿಗೆ ಗಂಭೀರ ಗಾಯ
Punjab ಪೊಲೀಸರ ಮೇಲೆ ಗ್ರೆನೇಡ್ ದಾಳಿ ನಡೆಸಿದ್ದ ಮೂವರು ಖಲಿಸ್ತಾನಿ ಉ*ಗ್ರರ Encounter
Tollywood: ‘ಗೇಮ್ ಚೇಂಜರ್ʼಗೆ ರಾಮ್‌ಚರಣ್ ರಾಷ್ಟ್ರ ಪ್ರಶಸ್ತಿ ಪಡೆಯುತ್ತಾರೆ – ಸುಕುಮಾರ್
Mudigere: ಹೊರನಾಡು ದೇವರ ದರ್ಶನಕ್ಕೆ ಬರುತ್ತಿದ್ದವರ ವಾಹನ ಪಲ್ಟಿ… ನಾಲ್ವರಿಗೆ ಗಂಭೀರ ಗಾಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.