ಅಡಕೆಗೆ ಕೊಳೆರೋಗದ ಆತಂಕ
ಅತಂತ್ರ ಸ್ಥಿತಿಯಲ್ಲಿ ಅಡಕೆ ಬೆಳೆಗಾರ •ಆಗುಂಬೆ ಭಾಗದಲ್ಲಿ ರೋಗಬಾಧೆ ಹೆಚ್ಚು
Team Udayavani, Aug 25, 2019, 12:49 PM IST
ತೀರ್ಥಹಳ್ಳಿ: ಕೊಳೆ ರೋಗಕ್ಕೆ ತುತ್ತಾದ ಅಡಕೆ ತೋಟದ ಸ್ಥಿತಿ.
ತೀರ್ಥಹಳ್ಳಿ: ಮಲೆನಾಡಿನಲ್ಲಿ ಮಳೆಯ ಆರ್ಭಟ ಹೆಚ್ಚಾದಾಗಲ್ಲೆಲ್ಲ ಅಡಕೆ ಬೆಳೆಗಾರರು ಆತಂಕದಲ್ಲಿ ಬದುಕುವ ಸ್ಥಿತಿ ಪ್ರತಿ ವರ್ಷವೂ ನಿರಂತರವಾಗಿದೆ. ತಾಲೂಕಿನ ಶೇ. 60ರಷ್ಟು ಅಡಕೆ ತೋಟಗಳಲ್ಲಿ ಅಡಕೆ ಮರಗಳಿಗೆ ಕೊಳೆರೋಗ ಉಲ್ಬಣಿಸಿದ್ದು ಅಡಕೆ ಬೆಳೆಗಾರರು ಅತಂತ್ರ ಸ್ಥಿತಿಯಲ್ಲಿ ಬದುಕುವಂತಾಗಿದೆ.
ಕಳೆದ 1 ತಿಂಗಳಿಂದ ತಾಲೂಕಿನಲ್ಲಿ ಎಡೆಬಿಡದೆ ಸುರಿದ ಭಾರೀ ಮಳೆಗೆ ಅಡಕೆ ತೋಟಗಳಲ್ಲಿ ಕೊಳೆರೋಗ ಕಾಣಿಸಿಕೊಂಡಿದೆ. ಹಲವು ಅಡಕೆ ತೋಟಗಳಲ್ಲಿ ಕೊಳೆ ರೋಗ ಪೀಡಿತ ಅಡಕೆಗಳು, ಅಎಕೆ ಮರದ ಕೆಳಗಡೆ ರಾಶಿಗಟ್ಟಲೆ ಹರಡಿ ಬಿದ್ದಿರುವುದನ್ನು ಕಂಡು ಬೆಳೆಗಾರರು ಚಿಂತಾಕ್ರಾಂತರಾಗಿದ್ದಾರೆ. ತಾಲೂಕಿನಲ್ಲಿ ಅತೀ ಹೆಚ್ಚು ಮಳೆ ಬೀಳುವ ಆಗುಂಬೆ ಭಾಗದಲ್ಲಿ ಶೇ.85ರಷ್ಟು ಅಡಕೆ ತೋಟಗಳಲ್ಲಿ ಕೊಳೆರೋಗ ಕಾಣಿಸಿಕೊಂಡಿದೆ.
ಈಗಾಗಲೇ ತಾಲೂಕಿನ ಅಡಕೆ ಬೆಳೆಗಾರರು ಅಡಕೆಗೆ ತಗುಲಿರುವ ಕೊಳೆರೋಗ ನಿಯಂತ್ರಣಕ್ಕೆ 2 ಬಾರಿ ಔಷಧ ಸಿಂಪಡಿಸಿದ್ದರೂ ಹಲವೆಡೆ ರೋಗದ ನಿಯಂತ್ರಣವಾಗಿಲ್ಲ. ಮಳೆಯ ನಡುವೆಯೂ ಬೆಳೆಗಾರರು ಅಡಕೆಯನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಔಷಧ ಸಿಂಪಡಿಸುತ್ತಿದ್ದಾರೆ. ಹಲವೆಡೆ ಔಷಧ ಸಿಂಪಡಣೆಗೆ ಕೊನೆಗಾರರು ಸಿಗದೆ ರೈತರು ಚಡಪಡಿಸುವಂತಾಗಿದೆ.
ಕಳೆದ 4ವರ್ಷಗಳಿಂದ ನಿರಂತರವಾಗಿ ತಾಲೂಕಿನ ಅಡಕೆ ತೋಟಗಳಲ್ಲಿ ಕೊಳೆರೋಗ ಕಾಣಿಸಿಕೊಂಡಿದೆ. ಇನ್ನೊಂದೆಡೆ ಈ ಬಾರಿಯ ಗಾಳಿ- ಮಳೆಗೆ ಅಡಕೆ ತೋಟಗಳಲ್ಲಿನ ಅಡಕೆ ಮರಗಳು ನೆಲಕ್ಕುರುಳಿವೆ. ಹೀಗೆ ಹಲವು ಸಮಸ್ಯೆಗಳ ನಡುವೆ ಆತಂಕದಲ್ಲಿರುವ ಅಡಕೆ ಬೆಳೆಗಾರರು ಸರ್ಕಾರ ಹಾಗೂ ಇಲಾಖೆಯಿಂದ ಸಿಗಬೇಕಾದ ವಿಶೇಷ ಅನುದಾನ ಪರಿಹಾರದ ಬಗ್ಗೆ ಕಾಯುತ್ತ ಕುಳಿತಿದ್ದಾರೆ.
ಸರ್ಕಾರ ಕೂಡಲೇ ಅಡಕೆ ಬೆಳೆಗಾರರ ಸಮಸ್ಯೆಗಳ ಬಗ್ಗೆ ಗಮನಹರಿಸಬೇಕು. ಸಂಬಂಧಪಟ್ಟ ಇಲಾಖೆಯವರು ಅಡಕೆ ತೋಟಗಳ ಸ್ಥಳ ಪರಿಶೀಲಿಸಿ ಸೂಕ್ತ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿ ಅಡಕೆ ಬೆಳೆಗಾರರಿಗೆ ಸೂಕ್ತ ಪರಿಹಾರ ಧನ ನೀಡುವುದು ಒಳ್ಳೆಯದು. ಕೊಳೆರೋಗದಿಂದ ತಾಲೂಕಿನ ಮಧ್ಯಮ ಹಾಗೂ ಸಾಮಾನ್ಯ ಅಡಕೆ ಬೆಳೆಗಾರರು ಹೆಚ್ಚು ಚಿಂತೆಗೆ ಒಳಗಾಗಿ ಆತಂಕದಿಂದ ಬದುಕುವಂತಾಗಿದೆ.
ಕೊಳೆರೋಗದ ಲಕ್ಷಣಗಳು: ಅಡಕೆ ಕಾಯಿಗಳ ಮೇಲೆ ಕಂದುಬಣ್ಣದ ಶಿಲೀಂಧ್ರದ ಬೆಳೆವಣಿಗೆ ಕಂಡು ಬರುತ್ತದೆ. ನಂತರ ಬಿಳಿ ಶಿಲೀಂಧ್ರದ ಬೆಳವಣಿಗೆ ಕಂಡು ಬಂದು ಕಾಯಿಗಳು ಕೊಳೆಯಲು ಪ್ರಾರಂಭಿಸಿ ಉದುರುತ್ತದೆ. ಗೊಂಚಲುಗಳಲ್ಲೆ ಕಪ್ಪಾಗಿ ಕಾಣುತ್ತದೆ. ಗಿಡದ ಬೆಳವಣಿಗೆ ಕುಂಠಿತಗೊಂಡು ಇಳುವರಿಯಲ್ಲಿ ಹೆಚ್ಚಿನ ಹಾನಿಯಾಗುತ್ತದೆ. ಜೂನ್ ತಿಂಗಳಿಂದ ಸೆಪ್ಟೆಂಬರ್‌ವರೆಗೆ ಮಲೆನಾಡಿನ ಭಾಗದ ಅಡಕೆ ತೋಟಗಳಲ್ಲಿ ಕೊಳೆರೋಗದ ತೀವ್ರತೆ ಹೆಚ್ಚಿರುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Natural Disaster: ಅನಿರೀಕ್ಷಿತ ಮಳೆಗೆ ಸೊರಗಿದ ವಿಶಿಷ್ಟ ಗುಣದ ಹೆಮ್ಮಾಡಿ ಸೇವಂತಿಗೆ
Udupi: ಸಾಲ ಮರುಪಾವತಿಸದೆ ನಕಲಿ ದಾಖಲೆ ಸೃಷ್ಟಿಸಿ ಮರು ಸಾಲ; ಪ್ರಕರಣ ದಾಖಲು
ಮಂಡ್ಯ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡಕ್ಕಾಗಿ ಕೈಗೊಂಡ 5 ನಿರ್ಣಯಗಳೇನು ಗೊತ್ತಾ?
ಸಿ.ಟಿ.ರವಿ ನಕಲಿ ಎನ್‌ಕೌಂಟರ್‌ಗೆ ಸರಕಾರದ ಹುನ್ನಾರ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ
Priority: ಮಂಡ್ಯ ಸಾಹಿತ್ಯ ಸಮ್ಮೇಳನದಲ್ಲಿ ಅವಕಾಶ ವಂಚಿತ ಯಕ್ಷಗಾನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kashmir cold: 34 ವರ್ಷಗಳಲ್ಲೇ ಕನಿಷ್ಠ ತಾಪಮಾನ ದಾಖಲು!
Natural Disaster: ಅನಿರೀಕ್ಷಿತ ಮಳೆಗೆ ಸೊರಗಿದ ವಿಶಿಷ್ಟ ಗುಣದ ಹೆಮ್ಮಾಡಿ ಸೇವಂತಿಗೆ
Rain Alert: ರಾಜ್ಯದಲ್ಲಿ ಕನಿಷ್ಠ ತಾಪಮಾನ 4 ಡಿ.ಸೆ ಏರಿಕೆ; ಹಲವೆಡೆ 24ರಂದು ಮಳೆ ಸಾಧ್ಯತೆ
Karnataka; ರಾಜ್ಯದ ಕಾಡಿಗೆ ಕೊಡಲಿ! ಮಾನವ-ವನ್ಯಜೀವಿ ಸಂಘರ್ಷ ಹೆಚ್ಚಳ?
Puri; ವರ್ಷಾರಂಭದೊಂದಿಗೆ ಜಗನ್ನಾಥ ದೇಗುಲದಲ್ಲಿ ಹೊಸ ದರ್ಶನ ವ್ಯವಸ್ಥೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.