ಕಾಮಗಾರಿ ಹೆಸರಲ್ಲಿ ಕೋಟಿ ಲೂಟಿ
ಹೇಮೆ ನೀರು ಹರಿಯುತ್ತಿರುವಾಗ ಕೆರೆ ಹೂಳೆತ್ತುವ ಕಾರ್ಯಕ್ಕೆ ಸೊಗಡು ಶಿವಣ್ಣ ಕಿಡಿ
Team Udayavani, Aug 15, 2019, 4:26 PM IST
ತುಮಕೂರಿನ ಸಮೀಪ ಇರುವ ಬುಗಡನಹಳ್ಳಿ ಕೆರೆಯಲ್ಲಿ ಹೂಳು ತೆಗೆಯುತ್ತಿರುವ ಕಾಮಗಾರಿ ಸ್ಥಳಕ್ಕೆ ಬುಧವಾರ ಮಾಜಿ ಸಚಿವ ಸೊಗಡು ಎಸ್. ಶಿವಣ್ಣ ಭೇಟಿ ನೀಡಿದ್ದರು.
ತುಮಕೂರು: ನಗರಕ್ಕೆ ಕುಡಿಯುವ ನೀರೊ ದಗಿಸುವ ಬುಗಡನಹಳ್ಳಿ ಕೆರೆಯ ಹೂಳೆತ್ತುವ ಕಾಮಗಾರಿ ಒಣಗಿದ್ದಾಗ ಮಾಡದೇ ನೀರು ಬರುತ್ತಿ ರುವಾಗ ನಡೆಸುತ್ತಿರುವುದು ಕೋಟ್ಯಾಂತರ ರೂ. ಲೂಟಿ ಮಾಡಲು ಅವಕಾಶ ನೀಡಿದಂತಾಗಿದೆ ಎಂದು ಮಾಜಿ ಸಚಿವ ಸೊಗಡು ಎಸ್. ಶಿವಣ್ಣ ಕಿಡಿಕಾರಿದರು. ನಗರದ ಸಮೀಪ ಇರುವ ಬುಗಡನಹಳ್ಳಿ ಕೆರೆಯಲ್ಲಿ ಹೂಳು ತೆಗೆಯುತ್ತಿರುವ ಕಾಮಗಾರಿ ಸ್ಥಳಕ್ಕೆ ಬುಧವಾರ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಮಾತನಾಡಿದರು.
60. ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ನಡೆಯುತ್ತಿದ್ದು, ಅಭಿವೃದ್ಧಿ ಹೆಸರಲ್ಲಿ ಭ್ರಷ್ಟಾಚಾರದಲ್ಲಿ ತೊಡಗಿರುವ ಜನಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ಟೆಂಡರ್‌ದಾರರ ವಿರುದ್ಧ ಜಿಲ್ಲೆಯ ನಾಗರಿ ಕರು ದಂಗೆ ಏಳಬೇಕಾಗುತ್ತದೆ ಎಂದು ಎಚ್ಚರಿಸಿದರು.
ಕೆಲಸ ಪೂರ್ಣಗೊಳಿಸಿಲ್ಲ: ಅಮಾನಿಕೆರೆ ಮತ್ತು ಬುಗಡನಹಳ್ಳಿ ಕೆರೆ ಅಭಿವೃದ್ಧಿಪಡಿಸಲು ಸುಮಾರು 100 ಕೋಟಿ ರೂ. ಟೆಂಡರ್ ಕಾಮಗಾರಿ ನಡೆ ಯುತ್ತಿದೆ. ಬುಗಡನಹಳ್ಳಿ ಕೆರೆ ಹೂಳೆತ್ತಲು ಮಂಗಳೂರಿನ ಮಾಜಿ ಶಾಸಕರಿಗೆ ಟೆಂಡರ್ ಆಗಿದೆ. ಆದರೆ ಬೆಂಗಳೂರಿನ ವ್ಯಕ್ತಿ ನಿರ್ವಹಿಸುತ್ತಿದ್ದಾರೆ. ಇನ್ನೂ ಕೆಲಸ ಪೂರ್ಣಗೊಳಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜಕಾರಣಿಗಳು ಜಾತಿ ಹೆಸರಲ್ಲಿ ಅಭಿವೃದ್ಧಿ ಯಾದರೆ, ಅಧಿಕಾರಿಗಳು ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ಪಕ್ಷ, ಜಾತಿ ಮರೆತು ಕೆಲಸ ಮಾಡಿದಾಗ ಅಭಿವೃದ್ಧಿ ನಡೆಯುತ್ತವೆ. ಇದಕ್ಕೆ ನಾಗರಿಕರು ಒಗ್ಗಟ್ಟಾಗುವ ಅವಶ್ಯಕತೆ ಇದೆ. ಕಳೆದ ಎರಡು ತಿಂಗಳ ಹಿಂದೆಯೇ ಬುಗಡನಹಳ್ಳಿ ಕೆರೆಯಲ್ಲಿ ನೀರು ಖಾಲಿಯಾಗಿತ್ತು ಆಗ ಸಮಾರೋ ಪಾದಿಯಲ್ಲಿ ಅಭಿವೃದ್ಧಿ ಮಾಡಬೇಕಿತ್ತು. ಅದನ್ನು ಮಾಡದೆ ನೀರು ಬಿಟ್ಟಾಗ ಕೆಲಸ ಪ್ರಾರಂಭಿಸಿದ್ದಾರೆ. ಇದೆಲ್ಲಾ ಅವೈಜ್ಞಾನಿಕ ಕಾಮಗಾರಿ. ತಿಳಿವಳಿಕೆ ಇಲ್ಲದ ಅಧಿಕಾರಿಗಳು ಜನಪ್ರತಿನಿಧಿಗಳ ಮಾತಿಗೆ ಮರಳಾಗುತ್ತಿದ್ದಾರೆ ಎಂದು ಆರೋಪಿಸಿದರು.
ದುಡ್ಡು ತಿನ್ನಲು ಕಾಮಗಾರಿ: ಬುಗಡನಹಳ್ಳಿ ಕೆರೆಯಲ್ಲಿ 66 ಕೋಟಿ ರೂ. ಕಾಮಗಾರಿ ನಡೆ ಯುತ್ತಿದೆ. 3.40 ಲಕ್ಷ ಕ್ಯುಬಿಕ್ ಮೀಟರ್ ಹೂಳು ತೆಗೆಯಬೇಕಿದೆ. ಕೇವಲ 70 ಸಾವಿರ ಮೀಟರ್ ಅಂದರೆ ಶೇ. 20 ಹೂಳು ತೆಗೆಯಲಾಗಿದೆ. ಇನ್ನೂ 2 ಲಕ್ಷ ಕ್ಯುಬಿಕ್ ಮೀಟರ್ ಹೂಳು ತೆಗೆಯುವುದು ಬಾಕಿ ಇದೆ. ದುಡ್ಡು ತಿನ್ನಲು ಕಾಮಗಾರಿ ಆರಂಭಿಸಿದ್ದಾರೆ ಎಂದು ದೂರಿದರು.
ಬಿಜೆಪಿ ಮುಖಂಡರಾದ ಎಂ.ಬಿ. ನಂದೀಶ್, ಕೆ.ಪಿ. ಮಹೇಶ್, ಕೆ.ಆರ್. ಸದಾಶಿವಯ್ಯ, ರಂಗಾನಾಯ್ಕ, ಆಟೋ ನವೀನ್, ಬನಶಂಕರಿ ಬಾಬು ಇತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shimoga; ನಿತ್ಯ ಸುದ್ದಿಯಲ್ಲಿರಬೇಕೆಂದು ಸಿ.ಟಿ ರವಿ ʼಆʼ ಹೇಳಿಕೆ ನೀಡಿದ್ದಾರೆ: ಆಯನೂರು
Tragedy: ಆನೆ ತುಳಿದು ಮಾವುತನ ಸಹಾಯಕ ಮೃತ್ಯು… ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ
Alnavar: ಟಿಟಿ- ಕ್ಯಾಂಟರ್ ನಡುವೆ ಭೀಕರ ಅಪಘಾತ; ಸ್ಥಳದಲ್ಲಿಯೇ ಮೂವರ ಸಾವು
Sirsi: ಅರಣ್ಯವಾಸಿಗಳ 50,000 ಕ್ಕೂ ಮಿಕ್ಕಿ ಜಿ.ಪಿ.ಎಸ್ ನಕಾಶೆ ಅತಂತ್ರ: ರವಿಂದ್ರ ನಾಯ್ಕ
Hubli: ಕಾಂಗ್ರೆಸ್‌ನಲ್ಲಿ ಈಗ ಇರುವವರೆಲ್ಲ ನಕಲಿ ಗಾಂಧಿಗಳು..: ಪ್ರಹ್ಲಾದ ಜೋಶಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Rule; 5, 8ನೇ ತರಗತಿಯಲ್ಲಿ ಫೈಲ್ ಆದರೆ ಭಡ್ತಿ ನೀಡುವಂತಿಲ್ಲ; ಅದೇ ಕ್ಲಾಸಲ್ಲಿ ಮುಂದುವರಿಕೆ!
Manipur; ಪೊಲೀಸ್ ಇಲಾಖೆಯಲ್ಲಿ ಮೈತೇಯಿ ಮತ್ತು ಕುಕಿಗಳು ಒಟ್ಟಾಗಿ ಕೆಲಸ ಮಾಡಬೇಕು
Team India; ಅಶ್ವಿನ್ ಬದಲಿಯಾಗಿ ಟೀಂ ಇಂಡಿಯಾ ಸೇರಿದ ಕರ್ನಾಟಕ ಕರಾವಳಿ ಮೂಲದ ಸ್ಪಿನ್ನರ್
Kerala; ಸರಕಾರಿ ಶಾಲೆಯಲ್ಲಿ ಕ್ರಿಸ್ಮಸ್ ಆಚರಣೆಗೆ ಅಡ್ಡಿ,ಗೋದಲಿ ಧ್ವಂಸ: ವ್ಯಾಪಕ ಆಕ್ರೋಶ
Kambli Health: ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ ಆರೋಗ್ಯ ಸ್ಥಿತಿ ಗಂಭೀರ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.