ಆಗುಂಬೆ ಭಾಗದಲ್ಲಿ 321.06 ಮಿಮೀ ದಾಖಲೆ ಮಳೆ
ತುಂಗೆ, ಮಾಲತಿ-ಕುಶಾವತಿಯಲ್ಲಿ ಪ್ರವಾಹದ ಭೀತಿ •ಗಾಳಿ -ಮಳೆಗೆ ವಿದ್ಯುತ್ ವ್ಯತ್ಯಯ • ಮನೆ ಮೇಲೆ ಮರ ಬಿದ್ದು ವೃದ್ಧರಿಗೆ ಗಾಯ
Team Udayavani, Aug 7, 2019, 12:18 PM IST
ತೀರ್ಥಹಳ್ಳಿ: ಭಾರೀ ಮಳೆಗೆ ಉಕ್ಕಿ ಹರಿಯುತ್ತಿರುವ ತುಂಗಾನದಿ.
ತೀರ್ಥಹಳ್ಳಿ: ತಾಲೂಕಿನಾದ್ಯಂತ ಕಳೆದ 24 ಗಂಟೆಗಳಲ್ಲಿ ದಾಖಲೆ ಪ್ರಮಾಣದಲ್ಲಿ ಮಳೆಯಾಗಿದೆ.
ನಿರಂತರ ಸುರಿಯುತ್ತಿರುವ ಮಳೆಯಿಂದ ಇಲ್ಲಿನ ಪ್ರಮುಖ ನದಿಗಳಾದ ತುಂಗೆ, ಮಾಲತಿ ಹಾಗೂ ಕುಶಾವತಿಯಲ್ಲಿ ಪ್ರವಾಹದ ಭೀತಿ ಎದುರಾಗಿದೆ. ಕಳೆದ 24 ಗಂಟೆಗಳಲ್ಲಿ ಆಗುಂಬೆಯಲ್ಲಿ ದಾಖಲೆಯ ಮಳೆ 321.06 ಮಿಮೀ ಸುರಿದಿದ್ದು, ತೀರ್ಥಹಳ್ಳಿಯಲ್ಲಿ 149ಮಿಮೀ ಮಳೆಯಾಗಿದೆ.
ತಾಲೂಕಿನಾದ್ಯಂತ ಹಲವು ಭಾಗಗಳಲ್ಲಿ ಗಾಳಿ ಮಳೆಗೆ ವಿದ್ಯುತ್ ವ್ಯತ್ಯಯ ಉಂಟಾಗಿದೆ. ನದಿಯಲ್ಲಿ ನೀರಿನ ಮಟ್ಟ ಗಣನೀಯವಾಗಿ ಏರುತ್ತಿದ್ದು, ನದಿಪಾತ್ರದಲ್ಲಿ ವಾಸಿಸುತ್ತಿರುವ ಸಾರ್ವಜನಿಕರಿಗೆ ಎಚ್ಚರಿಕೆ ವಹಿಸುವಂತೆ ತಾಲೂಕು ಆಡಳಿತ ಮುನ್ಸೂಚನೆ ಸೂಚಿಸಿದೆ. ಇಲ್ಲಿನ ತುಂಗಾನದಿಯ ನಡುವಿನ ರಾಮಮಂಟಪದಲ್ಲಿ ನೀರಿನ ಮಟ್ಟ ಏರತೊಡಗಿದೆ. ತಾಲೂಕಿನಾದ್ಯಂತ ಮಂಗಳವಾರವೂ ಸಹ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು.
ತಾಲೂಕಿನ ಆಗುಂಬೆ ಭಾಗದಲ್ಲಿ ನಿರಂತರ ಗಾಳಿ ಮಳೆ ಮುಂದುವರಿದಿದ್ದು, ಮಾಲತಿ ನದಿ ತುಂಬಿ ಹರಿಯುತ್ತಿದೆ. ಹೊನ್ನೇತಾಳು ಗ್ರಾಪಂ ವ್ಯಾಪ್ತಿಯ ನಾಬಳ ಸೇತುವೆ ಮೇಲೆ ಮಾಲತಿ ನದಿ ತುಂಬಿ ಹರಿಯುತ್ತಿದ್ದು, ಬಿದರಗೋಡು-ಗುಡ್ಡೇಕೇರಿ ರಸ್ತೆ ಸಂಪರ್ಕ ಕಡಿತಗೊಂಡಿದೆ. ಆಗುಂಬೆ ಭಾಗದಲ್ಲಿನ ಭಾರೀ ಗಾಳಿ ಮಳೆಗೆ ಕಳೆದ ಎರಡು ದಿನಗಳಿಂದ ವಿದ್ಯುತ್ ವ್ಯತ್ಯಯಗೊಂಡಿದೆ. ಕಲ್ಮನೆ, ಕೈಮರ, ಮೇಗರವಳ್ಳಿ, ಕರುಣಾಪುರ ಸುತ್ತಮುತ್ತಲಿನ ಹಲವೆಡೆ ನದಿಯ ನೀರು ಗದ್ದೆ ತುಂಬೆಲ್ಲ ಆವರಿಸಿದೆ. ಗಾಳಿ, ಮಳೆಗೆ ಅಡಿಕೆ ತೋಟಗಳಲ್ಲಿನ ಅಡಿಕೆ ಮರಗಳು ನೆಲಕ್ಕುರುಳಿದೆ. ಈ ಭಾಗಗಳಲ್ಲಿ ರಸ್ತೆ ಸಂಚಾರವು ಅಸ್ತವ್ಯಸ್ತಗೊಂಡಿದ್ದು, ಕೃಷಿ ಕಾರ್ಮಿಕರು ಹಾಗೂ ಸಾರ್ವಜನಿಕರು ಆತಂಕಗೊಂಡಿದ್ದಾರೆ.
ಮನೆ ಮೇಲೆ ಬಿದ್ದ ಭಾರೀ ಮರ: ತಾಲೂಕಿನ ಮಂಡಗದ್ದೆಯ 17ನೇ ಮೈಲಿಗಲ್ಲಿನಲ್ಲಿ ಒಣಗಿದ ಭಾರೀ ಮರವೊಂದು ಮನೆಯ ಮೇಲೆ ಉರುಳಿ ಇಬ್ಬರು ವೃದ್ಧರು ಗಾಯಗೊಂಡಿದ್ದಾರೆ. ವೃದ್ಧರಾದ ಸೀತಮ್ಮ(65) ಹಾಗೂ ಶಂಕರಣ್ಣನಾಯ್ಕ(70) ಗಾಯಗೊಂಡಿದ್ದು, ಚಿಕಿತ್ಸೆ ಪಡೆದಿದ್ದಾರೆ.
ಪ್ರವಾಹ ಎದುರಿಸಲು ಸೂಚನೆ: ಕಳೆದ ಎರಡು ದಿನಗಳಿಂದ ತಾಲೂಕಿನಾದ್ಯಂತ ಉತ್ತಮ ಮಳೆಯಾಗುತ್ತಿದ್ದು, ಹಳ್ಳಕೊಳ್ಳಗಳು ಉಕ್ಕಿ ಹರಿಯುತ್ತಿದೆ. ತುಂಗಾನದಿಯು ಕೂಡ ಏರತೊಡಗಿದ್ದು, ನದಿ ಪಾತ್ರದ ವಾಸಿಗಳು ಜಾಗೃತರಾಗಿರುವಂತೆ ಶಾಸಕ ಅರಗ ಜ್ಞಾನೇಂದ್ರ ವಿನಂತಿಸಿದ್ದಾರೆ. ಹೊಳೆ, ಹಳ್ಳಕೊಳ್ಳ, ಕಿರು ಸೇತುವೆ ಹಾಗೂ ಕಾಲುಸಂಕಗಳ ಮೂಲಕ ಓಡಾಡುವ ಶಾಲಾ ಮಕ್ಕಳು ಹಾಗೂ ಪೋಷಕರು ಎಚ್ಚರಿಕೆ ವಹಿಸಬೇಕು. ಕೂಡಲೇ ತಾಲೂಕು ಆಡಳಿತದ ತಹಶೀಲ್ದಾರ್, ತಾ.ಪಂ ಇಒ, ಪೊಲೀಸ್, ಮೆಸ್ಕಾಂ, ಅರಣ್ಯ, ಆರೋಗ್ಯ ಇಲಾಖೆ ಸೇರಿದಂತೆ ಎಲ್ಲ ಇಲಾಖೆಯ ಅಧಿಕಾರಿಗಳು ನೌಕರರು ಕ್ಷೇತ್ರದಲ್ಲಿಯೇ ಇರಬೇಕು ಎಂದು ಸೂಚಿಸಿದ್ದಾರೆ.
ಜಿಲ್ಲಾಧಿಕಾರಿ ಭೇಟಿ; ಸಾಂತ್ವನ
ತೀರ್ಥಹಳ್ಳಿ: ತಾಲೂಕಿನ ಕನ್ನಂಗಿ ಸಮೀಪ ಭಾರೀ ಮಳೆಗೆ ಧರೆ ಕುಸಿದು ಮೃತಪಟ್ಟ ರೈತ ರಮೇಶ್ ಅವರ ಮೃತದೇಹವನ್ನು ಜಿಲ್ಲಾಧಿಕಾರಿ ವೀಕ್ಷಿಸಿದರು. ಡಿಸಿ ಕೆ.ಎ. ದಯಾನಂದ ಪಟ್ಟಣದ ಜಯಚಾಮರಾಜೇಂದ್ರ ಸರ್ಕಾರಿ ಆಸ್ಪತ್ರೆ ದಿಢೀರ್ ಭೇಟಿ ನೀಡಿದರು. ಇದೇ ಸಂದರ್ಭದಲ್ಲಿ ಮೃತ ರೈತನ ಕುಟುಂಬದವರಿಗೆ ಸಾಂತ್ವನ ಹೇಳಿ, ಸರ್ಕಾರದ ವತಿಯಿಂದ ಪ್ರಕೃತಿ ವಿಕೋಪ ಪರಿಹಾರದಡಿ ರೂ.5.ಲಕ್ಷ ಪರಿಹಾರ ವಿತರಿಸುವುದಾಗಿ ತಿಳಿಸಿದರು. ನಂತರ ಆಸ್ಪತ್ರೆಯ ಮೂಲ ಸೌಕರ್ಯಗಳ ಕುರಿತು ವೈದ್ಯಾಧಿಕಾರಿಗಳಿಂದ ಮಾಹಿತಿ ಪಡೆದರು. ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಕಾರ್ಡ್ ವಿತರಣಾ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ನಂತರ ಜಿಲ್ಲಾಧಿಕಾರಿಗಳು ಸೋಮವಾರ ಪಟ್ಟಣದ ಸಹ್ಯಾದ್ರಿ ಶಾಲೆಯ ಕಾಂಪೌಂಡ್ ಮೇಲೆ ಭಾರೀ ಮರ ಬಿದ್ದ ಸ್ಥಳಕ್ಕೆ ಭೇಟಿ ನೀಡಿ ವೀಕ್ಷಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dharwad: ಜಿಲ್ಲಾಧಿಕಾರಿ ಕಚೇರಿಯಲ್ಲಿ ಬ್ಯಾಟರಿ ಕಳ್ಳತನ
Mangaluru AirPort: ಬಜಪೆ ವಿಮಾನ ನಿಲ್ದಾಣ ರನ್‌ವೇಗಿಲ್ಲ ರೇಸಾ ಸುರಕ್ಷೆ
Mangaluru: ಆನ್‌ಲೈನ್ ಗೇಮ್‌ನಲ್ಲಿ ವಂಚಕರ ಪರಿಚಯ; ಜಾಲ ಸೇರಿದ್ದ ಯುವಕ
Mangaluru: ಸಾಲಗಾರನ ಆತ್ಮಹ*ತ್ಯೆಗೆ ಪ್ರಚೋದನೆ ಆರೋಪ: ಎಂಸಿಸಿ ಬ್ಯಾಂಕ್ ಅಧ್ಯಕ್ಷನ ಬಂಧನ
Whale: ಅಂಬರ್ ಗ್ರೀಸ್ ಮಾರಾಟ ಜಾಲ ಶಂಕೆ: ಕಾರ್ಯಾಚರಣೆಗೆ ಬಂದಿದ್ದ ಅಧಿಕಾರಿಗಳಿಗೆ ಹಲ್ಲೆ!
MUST WATCH
ಹೊಸ ಸೇರ್ಪಡೆ
Dharwad: ಜಿಲ್ಲಾಧಿಕಾರಿ ಕಚೇರಿಯಲ್ಲಿ ಬ್ಯಾಟರಿ ಕಳ್ಳತನ
K.V.Narayana: ವಿಮರ್ಶಕ ಪ್ರೊ.ಕೆ.ವಿ.ನಾರಾಯಣಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
Shiva Rajkumar: ಚಿಕಿತ್ಸೆಗಾಗಿ ಅಮೆರಿಕದತ್ತ ಶಿವಣ್ಣ; ಚಿತ್ರರಂಗದ ಶುಭ ಹಾರೈಕೆ
Alert…! ವಿಮಾನಕ್ಕೆ ಬೆದರಿಕೆ ಹಾಕಿದ್ರೆ 1 ಕೋಟಿವರೆಗೆ ದಂಡ ತೆರಲು ಸಿದ್ಧರಾಗಿ!
Donald Trump: ನೀವು ತೆರಿಗೆ ಹಾಕಿದರೆ ನಾವೂ ಹಾಕುತ್ತೇನೆ… ಭಾರತಕ್ಕೆ ಟ್ರಂಪ್ ಎಚ್ಚರಿಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.