161 ಅಡಿ ಆಂಜನೇಯ ವಿಗ್ರಹ ಲೋಕಾರ್ಪಣೆಗೆ ಸಿದ್ಧ
Team Udayavani, Dec 20, 2021, 1:27 PM IST
ಕುಣಿಗಲ್: ತಾಲೂಕಿನ ಪ್ರಸಿದ್ಧ ಭಕ್ತಿ ನಗರ ಬಿದನಗೆರೆ ಶ್ರೀ ಕ್ಷೇತ್ರದ ಬಸವೇಶ್ವರ ಮಠದಲ್ಲಿ ವಿಶ್ವದಲ್ಲೇ ಪ್ರಥಮ ಎನ್ನಲಾದ 161 ಎತ್ತರದ ಪಂಚಮುಖಿ ಆಂಜನೇಯಸ್ವಾಮಿ ವಿಗ್ರಹ ಲೋಕಾರ್ಪಣೆಗೆ ಸಿದ್ಧವಾಗಿದೆ.
ಪಟ್ಟಣದ ಹೊರ ವಲಯದ ಬಿದನಗೆರೆ ಸತ್ಯಶನೇಶ್ವರ, ಉದ್ಬವ ಬಸವಣ್ಣ, ಶನಿಶಿಗ್ನಾಪುರತ್ರಿಮೂರ್ತಿ ಸಂಗಮ ಕ್ಷೇತ್ರ ಶ್ರೀ ಬಸವೇಶ್ವರ ಮಠದ ಧರ್ಮಾಧಿಕಾರಿ ಡಾ.ಧನಂಜಯ್ಯ ಗುರೂಜಿ ಅವರ ನೇತೃತ್ವದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಪಂಚಮುಖಿ ಆಂಜನೇಯ ಸ್ವಾಮಿ ವಿಗ್ರಹ ಕಾಮಗಾರಿ ಪರಿಪೂರ್ಣವಾಗಿ ಮುಗಿದಿದ್ದು, ಲೋಕಾರ್ಪಣೆಗಾಗಿ ಶ್ರೀ ಕ್ಷೇತ್ರದ ವತಿಯಿಂದ ಸಕಲ ಸಿದ್ಧತೆ ನಡೆಯುತ್ತಿದೆ.
ಹರಿದು ಬರುತ್ತಿರುವ ಭಕ್ತ ಸಾಗರ: ಪಂಚಮುಖಿ ಆಂಜನೇಯಸ್ವಾಮಿ ವಿಗ್ರಹ ಲೋಕಾರ್ಪಣೆಮಾಡುವ ಮುನ್ನವೇ ರಾಜ್ಯದ ವಿವಿಧ ಭಾಗಗಳಿಂದ ಬಸ್, ಕಾರು, ಟೆಂಪೋ ಟ್ರಾವಲ್ಸ್ ಸೇರಿದಂತೆಇತರೆ ವಾಹನಗಳಲ್ಲಿ ಸಾವಿರಾರು ಭಕ್ತರು ನಿತ್ಯ ಶ್ರೀ ಕ್ಷೇತ್ರಕ್ಕೆ ಆಗಮಿಸಿ ಪಂಚಮುಖಿ ಆಂಜನೇಯಸ್ವಾಮಿಯನ್ನು ಕಣ್ಣತುಂಬಿಕೊಳ್ಳುತ್ತಿದ್ದಾರೆ. ವಿಗ್ರಹ ನಿರ್ಮಾಣ ಕಾಮಗಾರಿಯನ್ನು ತಮಿಳುನಾಡಿನ ಮಾರಿಮುತ್ತು ಅವರಿಗೆ ಪಂಚಮುಖೀ ಆಂಜನೇಯ ಸ್ವಾಮಿ ವಿಗ್ರಹ ಕಾಮಗಾರಿಯನ್ನು ವಹಿಸಿಕೊಡಲಾಗಿತ್ತು. ಮಾರಿಮುತ್ತು ತಮ್ಮ 50 ಕಾರ್ಮಿಕರ ತಂಡದೊಂದಿಗೆ 2014ರಲ್ಲಿ ಕಾಮಗಾರಿಯನ್ನು ಪ್ರಾರಂಭಿಸಿದ್ದರು. ಸತತ ಏಳು ವರ್ಷಗಳ ಕಾಲ ನಿರಂತರವಾಗಿ ಕಾಮಗಾರಿ ಕೆಲಸ ಮಾಡಿ, ಡಿ.2021ಕ್ಕೆ ಕಾಮಗಾರಿ ಪೂರ್ಣಗೊಳಿಸಿದ್ದಾರೆ.
ಶ್ರೀ ಕ್ಷೇತ್ರದ ಹಿನ್ನಲೆ: ಕಳೆದ 20 ವರ್ಷದ ಹಿಂದೆ ಡಾ. ಧನಂಜಯ್ಯ ಗುರೂಜಿ ಸಣ್ಣ ಗುಡಿಸಲಲ್ಲಿ ಸತ್ಯಶನೇಶ್ವರ ಸ್ವಾಮಿ ಪ್ರತಿಷ್ಠಾಪಿಸಿದ್ದರು. ಬಳಿಕ ಉದ್ಬವಬಸವಣ್ಣ, ಶನಿಶಿಗ್ನಾಪುರ ವಿಗ್ರಹಗಳನ್ನು ಪ್ರತಿಷ್ಠಾಪಿಸಿದ್ದರು. ಈ ದೇವರನ್ನು ಪೂಜೆ, ಪುನಸ್ಕಾರ ನೆರವೇರಿಸುತ್ತಾಆರಾಧಿಸಿಕೊಂಡು ಬರುತ್ತಿದ್ದಾರೆ. ದಿನ ಕಳೆದಂತೆ ಜಿಲ್ಲೆ,ರಾಜ್ಯ ಹಾಗೂ ದೇಶ, ವಿದೇಶದಿಂದ ಶ್ರೀ ಕ್ಷೇತ್ರಕ್ಕೆ ಸಾವಿರಾರು ಭಕ್ತಾದಿಗಳು ಆಗಮಿಸಿ ತಮ್ಮ ಇಷ್ಟಾರ್ಥಕ್ಕಾಗಿ ದೇವರಲ್ಲಿ ಪ್ರಾರ್ಥಿಸುತ್ತಿದ್ದಾರೆ.
ಸಾಮಾಜಿಕ ಕಾರ್ಯಗಳು: ಶ್ರೀ ಕ್ಷೇತ್ರದಲ್ಲಿ ಧಾರ್ಮಿಕ ಕಾರ್ಯಗಳ ಜೊತೆಗೆ ಹಲವು ಸಾಮಾಜಿಕ ಕಾರ್ಯಕ್ರಮ ನಡೆಯುತ್ತಿವೆ. ಉಚಿತ ಸರಳ ವಿವಾಹ, ವಯೋವೃದ್ಧರು, ಉಚಿತಆರೋಗ್ಯ ಶಿಬಿರ, ವಸತಿ ರಹಿತಿ ಬಡವರಿಗೆ ಮನೆನಿರ್ಮಾಣಕ್ಕೆ ಧನ ಸಹಾಯ, ದಾಸೋಹ, ವಸತಿಸೌಲಭ್ಯ ಸೇರಿದಂತೆ ವಿವಿಧ ಸಾಮಾಜಿಕ ಕಾರ್ಯಕ್ರಮಗಳು ಶ್ರೀ ಕ್ಷೇತ್ರದಲ್ಲಿ ನಡೆಯುತ್ತಿದೆ.
ಫೆಬ್ರವರಿ 28ರಂದು ಲೋಕಾರ್ಪಣೆ: ಗುರೂಜಿ ಶ್ರೀ ಕ್ಷೇತ್ರದ ಧರ್ಮದರ್ಶಿ ಡಾ.ಧನಂಜಯ್ಯ ಗುರೂಜಿ ಮಾತನಾಡಿ, ಭಕ್ತಾದಿಗಳಸಹಾಯ, ಸಹಕಾರದಿಂದ ಶ್ರೀ ಕ್ಷೇತ್ರವು ಅದ್ಭುತವಾಗಿ ಬೆಳೆಯುತ್ತಿದೆ. ಈಗಾಗಲೇನಿರ್ಮಾಣ ಪೂರ್ಣಗೊಂಡಿರುವ ವಿಶ್ವದಲ್ಲೇ ಪ್ರಥಮವಾಗಿರುವ ಪಂಚಮುಖಿ ಆಂಜನೇಯಸ್ವಾಮಿ ವಿಗ್ರಹ ಕಾಮಗಾರಿಯ ಕೆಲಸ ಮುಗಿದಿದೆ.ಮುಂದಿನ ವರ್ಷ ಫೆ. 28ರಂದು ಅಧಿಕೃತವಾಗಿ ಲೋಕಾರ್ಪಣೆ ಮಾಡಲು ಉದ್ದೇಶಿಸಲಾಗಿದೆ. ಧಾರ್ಮಿಕಕಾರ್ಯಕ್ರಮಕ್ಕೆ ರಾಜ್ಯ, ರಾಷ್ಟ್ರದಪ್ರಮುಖ ಗಣ್ಯರು, ಅಧಿಕಾರಿಗಳು ಆಗಮಿಸಲಿದ್ದಾರೆ ಎಂದು ಹೇಳಿದರು.
-ಕೆ.ಎನ್.ಲೋಕೇಶ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಬೆಳಗಾವಿ: ಮಾನವ ಕಳ್ಳ ಸಾಗಾಣಿಕೆ-ಜೀತ ಪದ್ಧತಿ ದೊಡ್ಡ ಸಮಸ್ಯೆ
Belagavi: ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡುವ ಸ್ಥಿತಿ ಬರಲಿದೆ: ಈರಣ್ಣ ಕಡಾಡಿ
Shimoga; ವಿಜಯೇಂದ್ರರನ್ನು ಕಟ್ಟಿ ಹಾಕಲು ಕಾಂಗ್ರೆಸ್ ನಿಂದ ಸುಳ್ಳು ಆರೋಪ: ರಾಘವೇಂದ್ರ
Anandapura: ಸಾಲ ಬಾಧೆ ತಾಳಲಾರದೆ ರೈತ ಆತ್ಮಹ*ತ್ಯೆ
Shimoga: ಎಸ್ಐಟಿ ರಚನೆ ಮೂಲಕ ಕಾಂಗ್ರೆಸ್ ಹಗೆ ತೀರಿಸಿಕೊಳ್ಳುತ್ತಿದೆ: ಆರಗ ಜ್ಞಾನೇಂದ್ರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.