ಸಿದ್ದರಬೆಟ್ಟದ ಶ್ರೀಮಠದ 16ನೇ ವಾರ್ಷಿಕೋತ್ಸವ ; 3 ದಿನ ಸಡಗರದ ಸಂಭ್ರಮ

ಡಾ.ಸಿ.ಎನ್.ಮಂಜುನಾಥ್‌ ರಿಗೆ ಸಿದ್ದಶ್ರೀ ಪ್ರಶಸ್ತಿ ಪ್ರದಾನ, ಸಾಮೂಹಿಕ ವಿವಾಹ ಮಹೋತ್ಸವ

Team Udayavani, Jun 17, 2022, 6:34 PM IST

1-fgfd

ಕೊರಟಗೆರೆ: ಸಿದ್ದರಬೆಟ್ಟದ ಶ್ರೀಬಾಳೆಹೊನ್ನೂರು ಖಾಸಾ ಶಾಖಾ ಮಠದ 16 ನೇ ವರ್ಷದ ವಾರ್ಷಿಕೋತ್ಸವ ಸಮಾರಂಭ ಮತ್ತು ಶ್ರೀಜಗಜ್ಯೋತಿ ಬಸವೇಶ್ವರ ಜಯಂತೋತ್ಸವ ಕಾರ್ಯಕ್ರಮವು ಜೂ.23 ರ ಗುರುವಾರದಂದು ನಡೆಯಲಿದೆ ಎಂದು ಸಿದ್ದರಬೆಟ್ಟ ಶ್ರೀಮಠದ ಪೀಠಾಧ್ಯಕ್ಷ ಶ್ರೀವೀರಭದ್ರ ಶಿವಚಾರ್ಯ ಸ್ವಾಮೀಜಿ ತಿಳಿಸಿದರು.

ಕೊರಟಗೆರೆ ಪಟ್ಟಣದ ಬಸವೇಶ್ವರ ಸ್ವಾಮಿ ದೇವಾಲಯದಲ್ಲಿ ಸಿದ್ದರಬೆಟ್ಟ ಶ್ರೀಮಠದ ವತಿಯಿಂದ ಶುಕ್ರವಾರ ಏರ್ಪಡಿಸಲಾಗಿದ್ದ ಸುದ್ದಿಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿದರು.

ಸಿದ್ದರಬೆಟ್ಟ ಶ್ರೀಮಠದ ೧೬ನೇ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮದ ಪ್ರಯುಕ್ತ ಜೂ21 ರಂದು ಶ್ರೀಮಠ ಮತ್ತು ಜಿಲ್ಲಾಡಳಿತದಿಂದ ಅಂತಾರಾಷ್ಟ್ರೀಯ ಯೋಗಶಿಬಿರ, ಜೂ22 ರಂದು ಪುಸ್ತಕ ದಾಸೋಹ ಕಾರ್ಯಕ್ರಮಕ್ಕೆ ಚಾಲನೆ, 23 ರಂದು ಗುರುವಾರದಂದು ಸಾಮೂಹಿಕ ವಿವಾಹ, ಸಿದ್ದಶ್ರೀ ಪ್ರಶಸ್ತಿ ಪ್ರದಾನ, ಜನಜಾಗೃತಿ ಧರ್ಮ ಸಮಾರಂಭ ಸೇರಿದಂತೆ ಧಾರ್ಮಿಕ ಕಾರ್ಯಕ್ರಮಗಳು ಏರ್ಪಡಿಸಲಾಗಿದೆ ಎಂದು ಹೇಳಿದರು.

ಜನಜಾಗೃತಿ ಧರ್ಮ ಸಮಾರಂಭದ ದಿವ್ಯಸಾನಿಧ್ಯವನ್ನು ಬಾಳೆಹೊನ್ನೂರು ಶ್ರೀಮಠದ ಶ್ರೀಮದ್ ರಂಭಾಪುರಿ ವೀರಸಿಂಹಾಸನಾಧೀಶ್ವರ ಶ್ರೀಶ್ರೀಶ್ರೀ 1008 ಜಗದ್ಗುರು ಪ್ರಸನ್ನ ರೇಣುಕ ಡಾ.ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಚಾರ್ಯ ಭಗವತ್ಪಾದರು ಮತ್ತು ಕೇದಾರ ಪೀಠದ ಶ್ರೀಹಿಮವತ್ಕೇದಾರ ವೈರಾಗ್ಯ ಸಿಂಹಾಸನಾಧೀಶ್ವರ ಶ್ರೀ 1008 ಜಗದ್ಗುರು ರಾವಲ್ ಪದವಿಭೂಷಿತ ಭೀಮಾಶಂಕರಲಿಂಗ ಶಿವಚಾರ್ಯ ಭಗವತ್ಪಾದಕರು ವಹಿಸಿದ್ದಾರೆ.

ಮಂಜುನಾಥ್‌ಗೆ ಸಿದ್ದಶ್ರೀ ಪ್ರಶಸ್ತಿ ಪ್ರದಾನ

ಸಿದ್ದರಬೆಟ್ಟ ಶ್ರೀಮಠದಿಂದ ಪ್ರತಿವರ್ಷದಂತೆ ಸಾಮಾಜಿಕವಾಗಿ ಉತ್ತಮ ಸೇವೆ ಸಲ್ಲಿಸಿದ ಬೆಂಗಳೂರು ಜಯದೇವ ಹೃದ್ರೋಗ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಡಾ.ಸಿ.ಎನ್.ಮಂಜುನಾಥ್‌ರನ್ನು ಸಿದ್ದಶ್ರೀ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಕಾರ್ಯಕ್ರಮಕ್ಕೆ ತುಮಕೂರು ಜಿಲ್ಲೆಯ ಎಲ್ಲಾ ಶಾಸಕರು, ಮಾಜಿ ಶಾಸಕರು, ವಿಧಾನಪರಿಷತ್ ಸದಸ್ಯರು ಸೇರಿದಂತೆ ಕೊರಟಗೆರೆ ತಾಲೂಕಿನ ಭಕ್ತಾವೃಂದ್ದ ೩ದಿನಗಳ ಕಾಲ ಉಪಸ್ಥಿತ ಇರಲಿದ್ದಾರೆ ಎಂದು ತಿಳಿಸಿದರು.

ಸುದ್ದಿಗೋಷ್ಟಿಯಲ್ಲಿ ಪಪಂ ಸದಸ್ಯ ಪ್ರದೀಪ್‌ಕುಮಾರ್, ಮಾಜಿ ಸದಸ್ಯ ಪವನಕುಮಾರ್, ಹುಲೀಕುಂಟೆ ಗ್ರಾಪಂ ಅಧ್ಯಕ್ಷ ಮಲ್ಲಣ್ಣ, ಮುಖಂಡರಾದ ಸಿದ್ದಮಲ್ಲಪ್ಪ, ಚಂದ್ರಕಲಾ, ಸದಾಶಿವಯ್ಯ, ಸಿದ್ದಗಿರಿ ನಂಜುಂಡಸ್ವಾಮಿ, ಪರ್ವತಯ್ಯ, ನಟರಾಜು, ಗಿರೀಶ್, ಮಂಜುನಾಥ ಸೇರಿದಂತೆ ಇತರರು ಇದ್ದರು.

ಟಾಪ್ ನ್ಯೂಸ್

PMML: Return Nehru’s letter collection: Centre’s letter to Rahul

PMML: ನೆಹರು ಅವರ ಪತ್ರ ಸಂಗ್ರಹವನ್ನು ಮರಳಿಸಿ: ರಾಹುಲ್‌ ಗೆ ಕೇಂದ್ರದ ಪತ್ರ

Chhattisgarh: ಟ್ರಕ್ ಚಾಲಕನ ಅವಾಂತರಕ್ಕೆ 6 ಮಂದಿ ಸ್ಥಳದಲ್ಲೇ ಮೃತ್ಯು, 7 ಮಂದಿ ಗಂಭೀರ

Road Mishap: ಟ್ರಕ್ ಚಾಲಕನ ಅವಾಂತರಕ್ಕೆ 6 ಮಂದಿ ಸ್ಥಳದಲ್ಲೇ ಮೃತ್ಯು, 7 ಮಂದಿ ಗಂಭೀರ

Vijay Diwas:ಕೋಲ್ಕತ್ತಾಗೆ ಮರಳಲಿದೆ ಬಾಂಗ್ಲಾ ಸ್ವಾತಂತ್ರ್ಯ ಹಬ್ಬ-ಇಂದಿನ ಸ್ಥಿತಿಗತಿ ಹೇಗಿದೆ

Vijay Diwas:ಕೋಲ್ಕತ್ತಾಗೆ ಮರಳಲಿದೆ ಬಾಂಗ್ಲಾ ಸ್ವಾತಂತ್ರ್ಯ ಹಬ್ಬ-ಇಂದಿನ ಸ್ಥಿತಿಗತಿ ಹೇಗಿದೆ

ಹೊಸ ವರ್ಷಕ್ಕೆ ಮ್ಯಾಗಿ ನೂಡಲ್ಸ್‌, ಕಿಟ್‌ಕ್ಯಾಟ್‌ ಚಾಕ್ಲೆಟ್‌ ಬೆಲೆ ಏರಿಕೆ?

Nestle: ಹೊಸ ವರ್ಷಕ್ಕೆ ಮ್ಯಾಗಿ ನೂಡಲ್ಸ್‌, ಕಿಟ್‌ಕ್ಯಾಟ್‌ ಚಾಕ್ಲೆಟ್‌ ಬೆಲೆ ಏರಿಕೆ?

Sandalwood: ಪವನ್‌ ಒಡೆಯರ್‌ ನಿರ್ದೇಶನದಲ್ಲಿ ಶಿವಣ್ಣನ ಸಿನಿಮಾ

Sandalwood: ಪವನ್‌ ಒಡೆಯರ್‌ ನಿರ್ದೇಶನದಲ್ಲಿ ಶಿವಣ್ಣನ ಸಿನಿಮಾ

SMAT 2024: TV umpire apologizes live on air! What happened?

SMAT 2024: ನೇರ ಪ್ರಸಾರದಲ್ಲೇ ಕ್ಷಮೆ ಕೇಳಿದ ಟಿವಿ ಅಂಪೈರ್!‌ ಆಗಿದ್ದೇನು?

Humpback whale: 13,046 ಕಿ.ಮೀ. ಕ್ರಮಿಸಿದ ತಿಮಿಂಗಿಲ: ದೀರ್ಘ‌ ಯಾನ

Humpback whale: 13,046 ಕಿ.ಮೀ. ಕ್ರಮಿಸಿದ ತಿಮಿಂಗಿಲ: ದೀರ್ಘ‌ ಯಾನ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

suicide (2)

Huliyar; ಕೆಮ್ಮಿನ ಔಷಧವೆಂದು ಭಾವಿಸಿ ಕೀಟನಾಶಕ ಸೇವಿಸಿದ ರೈತ ಸಾ*ವು

ಕೃಷಿ ಹೊಂಡದಲ್ಲಿ ಅದೇನೋ ಮಾಡಲು ಹೋಗಿ ಅರೆಸ್ಟ್ ಅದ ಬಿಗ್ ಬಾಸ್ ಖ್ಯಾತಿಯ ಡ್ರೋನ್ ಪ್ರತಾಪ್

ಕೃಷಿ ಹೊಂಡದಲ್ಲಿ ಅದೇನೋ ಮಾಡಲು ಹೋಗಿ ಅರೆಸ್ಟ್ ಅದ ಬಿಗ್ ಬಾಸ್ ಖ್ಯಾತಿಯ ಡ್ರೋನ್ ಪ್ರತಾಪ್

4-pavagada

Pavagada: ಟ್ರ್ಯಾಕ್ಟರ್ ಗೆ ಕ್ರೇನ್ ಡಿಕ್ಕಿಯಾಗಿ ಓರ್ವ ಸ್ಥಳದಲ್ಲೇ ಸಾವು

1-pavagada

Pavagada: ರಸ್ತೆ ಅಪಘಾತದಲ್ಲಿ ಮಂಡ್ಯ ಮೂಲದ ಬೊಲೆರೋ ಚಾಲಕ ಸ್ಥಳದಲ್ಲೇ ಸಾವು

1-koraga

Koratagere; ರೈತರಿಂದ 26ರೂ.ಗೆ ಹಾಲು ಖರೀದಿಸಿ ಗ್ರಾಹಕರಿಗೆ 44ರೂ.ಗೆ ಮಾರಾಟ!

MUST WATCH

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

udayavani youtube

ಅಯ್ಯಪ್ಪ ಸ್ವಾಮಿ ಪವಾಡ | ಮಾತು ಬಾರದ ಬಾಲಕನಿಗೆ ಮಾತು ಬಂತು!

udayavani youtube

CCTV Footage | Udupi; ಹೆದ್ದಾರಿಯಲ್ಲೇ ಶರವೇಗದಲ್ಲಿ ಬಂದು ಅಪ್ಪಳಿಸಿದ ಕಾರು.

ಹೊಸ ಸೇರ್ಪಡೆ

ಬೆಳಕಿನ ನಿರೀಕ್ಷೆಯಲ್ಲಿ ಕುದುರೆಮುಖ ರಾಷ್ಟ್ರೀಯ ಉದ್ಯಾನವನ ಪ್ರದೇಶದ ನಿವಾಸಿಗಳು

ಬೆಳಕಿನ ನಿರೀಕ್ಷೆಯಲ್ಲಿ ಕುದುರೆಮುಖ ರಾಷ್ಟ್ರೀಯ ಉದ್ಯಾನವನ ಪ್ರದೇಶದ ನಿವಾಸಿಗಳು

PMML: Return Nehru’s letter collection: Centre’s letter to Rahul

PMML: ನೆಹರು ಅವರ ಪತ್ರ ಸಂಗ್ರಹವನ್ನು ಮರಳಿಸಿ: ರಾಹುಲ್‌ ಗೆ ಕೇಂದ್ರದ ಪತ್ರ

Chhattisgarh: ಟ್ರಕ್ ಚಾಲಕನ ಅವಾಂತರಕ್ಕೆ 6 ಮಂದಿ ಸ್ಥಳದಲ್ಲೇ ಮೃತ್ಯು, 7 ಮಂದಿ ಗಂಭೀರ

Road Mishap: ಟ್ರಕ್ ಚಾಲಕನ ಅವಾಂತರಕ್ಕೆ 6 ಮಂದಿ ಸ್ಥಳದಲ್ಲೇ ಮೃತ್ಯು, 7 ಮಂದಿ ಗಂಭೀರ

Vijay Diwas:ಕೋಲ್ಕತ್ತಾಗೆ ಮರಳಲಿದೆ ಬಾಂಗ್ಲಾ ಸ್ವಾತಂತ್ರ್ಯ ಹಬ್ಬ-ಇಂದಿನ ಸ್ಥಿತಿಗತಿ ಹೇಗಿದೆ

Vijay Diwas:ಕೋಲ್ಕತ್ತಾಗೆ ಮರಳಲಿದೆ ಬಾಂಗ್ಲಾ ಸ್ವಾತಂತ್ರ್ಯ ಹಬ್ಬ-ಇಂದಿನ ಸ್ಥಿತಿಗತಿ ಹೇಗಿದೆ

ಕಾಶೀರದಲ್ಲಿ ಮಾದಕ ಜಾಲ: 8,000 ಕೆ.ಜಿ. ಡ್ರಗ್ಸ್ ವಶ- 5ವರ್ಷದಲ್ಲಿ 6,500 ಪ್ರಕರಣ

ಕಾಶ್ಮೀರದಲ್ಲಿ ಮಾದಕ ಜಾಲ: 8,000 ಕೆ.ಜಿ. ಡ್ರಗ್ಸ್ ವಶ- 5ವರ್ಷದಲ್ಲಿ 6,500 ಪ್ರಕರಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.