“ಕ್ಷೀರಭಾಗ್ಯದಡಿ ವಾರದಲ್ಲಿ 5 ದಿನ ಹಾಲು ವಿತರಣೆ’
Team Udayavani, Jul 4, 2017, 10:36 AM IST
ಮಧುಗಿರಿ: ರಾಜ್ಯದ ಎಲ್ಲಾ ಅಂಗನವಾಡಿ ಮತ್ತು ಶಾಲಾ ಮಕ್ಕಳಿಗೆ ಕ್ಷೀರಭಾಗ್ಯ ಯೋಜನೆಯಡಿ ವಾರದಲ್ಲಿ 5 ದಿನ ಹಾಲು ಕೊಡುವುದಾಗಿ ಜಿಲ್ಲಾ ಸಚಿವ ಟಿ.ಬಿ.ಜಯಚಂದ್ರ ತಿಳಿಸಿದರು.
ಪಟ್ಟಣದ ಹಿಂದೂಪುರ ರಸ್ತೆಯಲ್ಲಿ ತುಮುಲ್ ವತಿಯಿಂದ ನಿರ್ಮಿಸಿರುವ ನಂದಿನಿ ಕ್ಷೀರ ಭವನ ಉದ್ಘಾಟನೆ ಹಾಗೂ ಅಂಗನವಾಡಿ ಮತ್ತು ಶಾಲಾ ಮಕ್ಕಳಿಗೆ ಹಾಲು ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಕಾಂಗ್ರೆಸ್ ಸರ್ಕಾರ ಬಡ ಮಕ್ಕಳಿಗೆ ಪೌಷ್ಟಿಕ ಆಹಾರ ಸಿಗಲೆಂಬ ಸದುದ್ದೇಶದಿಂದ ಈ ಯೋಜನೆಯನ್ನು ಜಾರಿಗೊಳಿಸಿದ್ದು, ಸಿಎಂ ಸಿದ್ದರಾಮಯ್ಯ ಇದೀಗ 5ದಿನಗಳಿಗೆ ವಿಸ್ತರಿಸುವುದರಿಂದ ಮಕ್ಕಳು ಆರೋಗ್ಯವಂತರಾಗಿ ಶಿಕ್ಷಣ ಪಡೆಯಲು ಸಹಕಾರಿಯಾಗಿದೆ ಎಂದು ಹೇಳಿದರು. ಶಾಸಕ ಕೆ.ಎನ್. ರಾಜಣ್ಣ, ಗ್ರಾಮೀಣ ಪ್ರದೇಶದ ಕಡು ಬಡವ, ಕೂಲಿಕಾರ್ಮಿಕ ಹಾಗೂ ರೈತಾಪಿ ವರ್ಗದ ಮಕ್ಕಳಿಗೆ ಕ್ಷೀರಭಾಗ್ಯ ಯೋಜನೆ ವರದಾನವಾಗಿದ್ದು, ಚಿಕ್ಕ ವಯಸ್ಸಿನಲ್ಲಿಯೇ ವಿದ್ಯಾರ್ಥಿಗಳು ಸರ್ಕಾರದ ಸವಲತ್ತುಗಳನ್ನು ಸಮರ್ಥವಾಗಿ ಸದ್ಬಳಕೆ ಮಾಡಿಕೊಂಡು ಗುಣಮಟ್ಟದ ಶಿಕ್ಷಣ ಕಲಿಕೆಗೆ ಆದ್ಯತೆ ನೀಡಬೇಕು. ಪೋಷಕರು ಹೈನುಗಾರಿಕೆಯನ್ನು ಹೆಚ್ಚು ತೊಡಗಿಕೊಳ್ಳುವ ಮೂಲಕ ಆರ್ಥಿಕವಾಗಿ ಸದೃಢರಾಗುವಂತೆ ಕರೆ ನೀಡಿದರು. ಯೋಜನಾ ಮತ್ತು ಸಾಂಖೀಕ
ಸಚಿವ ಎಂ.ಆರ್.ಸೀತಾರಾಂ, ಸಂಸದ ಎಸ್.ಪಿ.ಮುದ್ದಹನುಮೇಗೌಡ, ಶಾಸಕ ಅಫ್ರಿಕ್ ಅಹಮದ್, ಮಾಜಿ
ಸಚಿವ ವೆಂಕಟರಮಣಪ್ಪ, ತುಮುಲ್ ಅಧ್ಯಕ್ಷ ಕೊಂಡವಾಡಿ ಚಂದ್ರಶೇಖರ್, ಜಿಲ್ಲಾಧಿಕಾರಿ ಕೆ.ಪಿ.ಮೋಹನ್ ರಾಜ್, ಹಾಲು ಒಕ್ಕೂಟದ ನಿರ್ದೇಶಕರಾದ ಚಂದ್ರಶೇಖರ್, ಶಿವನಂಜಪ್ಪ, ರೇಣುಕಾಪ್ರಸಾದ್, ಸಿ.ವಿ. ಮಹಾಲಿಂಗಯ್ಯ,
ಎಂ.ಕೆ.ಪ್ರಕಾಶ್, ವಿಜಯಶಂಕರ್ ಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ಟಿ.ವಿ. ನರಸಿಂಹಮೂರ್ತಿ, ವ್ಯವಸ್ಥಾಪಕ ಸೀತಾರಾಂ ಮತ್ತಿತರರಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.