ಖಾಸಗಿ ಶಾಲೆಗಳಿಂದ 747 ಮಕ್ಕಳು ಸರ್ಕಾರಿ ಶಾಲೆಗೆ
ಸರ್ಕಾರಿ ಶಾಲೆಯಲ್ಲಿ ಉಚಿತ ಶಿಕ್ಷಣದ ಜೊತೆ ಗುಣಮಟ್ಟದ ಶಿಕ್ಷಣ ನೀಡಬೇಕು
Team Udayavani, Oct 19, 2020, 4:56 PM IST
ಚಿಕ್ಕನಾಯಕನಹಳ್ಳಿ: ಕೋವಿಡ್ ಕಾರಣವೋ, ಪೋಷಕರಿಗೆ ಆರ್ಥಿಕ ಮುಗ್ಗಟ್ಟೋ ಅಥವಾ ಸರ್ಕಾರಿ ಶಾಲೆಗಳಆಕರ್ಷಣೆಯೋ ಒಟ್ಟಿನಲ್ಲಿ ಖಾಸಗಿ ಶಾಲೆಗಳಿಂದ ಸರ್ಕಾರಿ ಶಾಲೆಗಳಿಗೆ ಮಕ್ಕಳು ಪ್ರಸ್ತುತ ವರ್ಷ ಹೆಚ್ಚಿನ ಸಂಖ್ಯೆಯಲ್ಲಿ ದಾಖಲಾಗುತ್ತಿದ್ದು ಮುಚ್ಚುವಂತ ಸ್ಥಿತಿಯಲ್ಲಿದ್ದ ಸರ್ಕಾರಿ ಶಾಲೆಗಳಿಗೆ ಜೀವ ಬಂದಂತಾಗುತ್ತಿದೆ.
ತಾಲೂಕಿನಲ್ಲಿ 1ನೇ ತರಗತಿಯಿಂದ 10ನೇ ತರಗತಿವರೆಗೆ ಖಾಸಗಿ ಶಾಲೆಗಳಿಂದ 747 ವಿದ್ಯಾರ್ಥಿಗಳು ಸರ್ಕಾರಿ ಶಾಲೆಗಳಿಗೆ ದಾಖಲಾಗಿದ್ದು, ಪಟ್ಟಣದಲ್ಲಿ 82, ಹುಳಿಯಾರು171, ಶೆಟ್ಟಿಕೆರೆ40, ಮತ್ತಿಘಟ್ಟ 27, ಜೆ.ಸಿ ಪುರ 57, ಕುಪ್ಪೂರು 34, ಹಂದನಕೆರೆ 27, ಗೋಡೆಕೆರೆ 26, ಯಳನಾಡು 38 ಸೇರಿದಂತೆ ಒಟ್ಟು 26ಊರುಗಳಲ್ಲಿ 421 ವಿದ್ಯಾರ್ಥಿ, 326 ವಿದ್ಯಾರ್ಥಿನಿಯರು ಖಾಸಗಿ ಶಾಲೆಗಳನ್ನುತೊರೆದು ಸರ್ಕಾರಿ ಶಾಲೆಗಳಿಗೆ ದಾಖಲಾಗಿದ್ದು, ಕೋವಿಡ್-19 ಪರಿಸ್ಥಿತಿಯಲ್ಲಿ ಮಕ್ಕಳ ಶೈಕ್ಷಣಿಕ ವಿದ್ಯಾಭ್ಯಾಸಕ್ಕೆ ಸರ್ಕಾರಿ ಶಾಲೆಗಳು ಆಸರೆ ಆಗುತ್ತಿರುವುದು ಪೋಷಕರಿಗೆ ನೆಮ್ಮದಿ ಉಂಟಾಗಿದೆ.
ಗುಣಮಟ್ಟದ ಶಿಕ್ಷಣ ಅವಶ್ಯಕ: ಖಾಸಗಿ ಶಾಲೆಗಳಿಂದ ಅನಿವಾರ್ಯವಾಗಿ ಸರ್ಕಾರಿ ಶಾಲೆಗಳಿಗೆ ದಾಖಲಾಗುತ್ತಿರುವ ವಿದ್ಯಾರ್ಥಿಗಳ ನಿರೀಕ್ಷೆಯಂತೆ ಸರ್ಕಾರಿಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣಕ್ಕೆ ಒತ್ತುನೀಡಬೇಕು. ಖಾಸಗಿ ಶಾಲೆಗಳು ಆಯೋಜಿಸುವಂತೆ ಕ್ರೀಡೆ, ಸಂಸ್ಕೃತಿಕಕಾರ್ಯಕ್ರಮಗಳಂತೆ ಮಕ್ಕಳಿಗೆ ಕಲಿಕೆಗೆಪೂರಕವಾದ ವಾತವಾರಣ ನಿರ್ಮಾಣ ಮಾಡಬೇಕು. ಇಲ್ಲವಾದರೆ ಮುಂದಿನಶೈಕ್ಷಣಿಕ ವರ್ಷಕ್ಕೆ ವಿದ್ಯಾರ್ಥಿಗಳು ಮತ್ತೆ ಖಾಸಗಿ ಶಾಲೆಗಳ ಕಡೆ ಮುಖ ಮಾಡುವುದರಲ್ಲಿ ಅನುಮಾನವಿಲ್ಲ.
ಅತಿ ಕಡಿಮೆ ದಾಖಲಾತಿಗಳಿದ್ದ ಶಾಲೆಗಳಲ್ಲಿಯೂ ಸಹಈ ವರ್ಷಹೆಚ್ಚು ದಾಖಲಾತಿಆಗಿವೆ. ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ವಿದ್ಯಾಭ್ಯಾಸಕ್ಕೆಹೆಚ್ಚುಒತ್ತು ನೀಡಿ, ಗುಣಮಟ್ಟದ ಶಿಕ್ಷಣ ನೀಡಲು ನಾವು ಬದ್ಧವಾಗಿದ್ದೇವೆ.ಈ ವರ್ಷ ಸರ್ಕಾರಿ ಶಾಲೆಗಳಿಗೆಹೆಚ್ಚುದಾಖಲಾತಿಯಾಗಿರುವುದುಖುಷಿತಂದಿದೆ. –ಕಾತ್ಯಾಯಿಣಿ, ಕ್ಷೇತ್ರ ಶಿಕ್ಷಣಾಧಿಕಾರಿ, ಚಿಕ್ಕನಾಯಕನಹkannada news,kannada newspaper,online kannada news,online kannada newspaperಳ್ಳಿ
ದೂರದ ಊರುಗಳಿಗೆ ಮಕ್ಕಳನ್ನುಖಾಸಗಿಶಾಲೆಗಳಿಗೆಕಳಿಸುವ ಬದಲು ನಮ್ಮಊರಿನಲ್ಲಿಸರ್ಕಾರಿ ಶಾಲೆಗಳಿಗೆ ಸೇರಿಸಿ, ಮಕ್ಕಳಚಟುವಟಿಕೆಗಳಬಗ್ಗೆ ನಾವು ಗಮನಿಸಬಹುದು. ಉಚಿತ ಶಿಕ್ಷಣಜೊತೆಗೆ ಮಕ್ಕಳಆರೋಗ್ಯವುಚೆನ್ನಾಗಿರುತ್ತದೆ.ಕೊರೊನಾಈ ವರ್ಷ ಎಲ್ಲಾಪೋಷಕರಿಗೆ ಬುದ್ಧಿಕಲಿಸಿದೆ. –ರವಿಕುಮಾರ್, ಪೋಷಕರು
–ಚೇತನ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kunigal: ಬೈಕ್, ಕ್ಯಾಂಟರ್ ಮುಖಾಮುಖಿ ಢಿಕ್ಕಿ; ಇಬ್ಬರು ಸ್ಥಳದಲ್ಲೇ ಮೃತ್ಯು
Gubbi: ಮೀಟರ್ ಬಡ್ಡಿ ದಂಧೆಕೋರರ ಕಿರುಕುಳಕ್ಕೆ ಬೇಸತ್ತು ಪೌರ ಕಾರ್ಮಿಕ ಆತ್ಮಹತ್ಯೆ
Koratagere: ವೃದ್ದೆ ಮೇಲೆ ಕೆಎಸ್ಆರ್ಟಿಸಿ ಬಸ್ ಹರಿದು ಸಾವು
Hunasur: ವರದಕ್ಷಿಣೆ ಕಿರುಕುಳಕ್ಕೆ ಬಲಿಯಾದ ತಿಪಟೂರಿನ ಮಹಿಳೆ!
Kunigal: ಅಪ್ರಾಪ್ತೆಯ ಅಪಹರಣ, ಲೈಂಗಿಕ ದೌರ್ಜನ್ಯ; ಗುಜರಾತ್ ನಲ್ಲಿ ಬಂಧನ
MUST WATCH
ಹೊಸ ಸೇರ್ಪಡೆ
Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ
Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ
Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ
Horoscope: ಉದ್ಯೋಗ ಸ್ಥಾನದಲ್ಲಿ ಎರಡೂ ಬಗೆಯ ಅನುಭವಗಳು ಆಗಲಿದೆ
MUDA Case: ತನಿಖೆ ಸಿಬಿಐಗೆ ವಹಿಸಲು ಹೈಕೋರ್ಟ್‌ಗೆ ಅರ್ಜಿ; ಇಂದು ವಿಚಾರಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.