846 ಅಂಗನವಾಡಿಗೆ ಸ್ವಂತ ಕಟ್ಟಡವೇ ಇಲ್ಲ!
ಕಾಯಕಲ್ಪಯಾವಾಗ? , ಸ್ಮಾರ್ಟ್‌ಸಿಟಿ ನಗರದಲ್ಲಿಯೇ 86 ಅಂಗನವಾಡಿಗೆ ಸ್ವಂತ ನಿವೇಶನವಿಲ್ಲ
Team Udayavani, Nov 26, 2020, 3:51 PM IST
ಉದ್ಘಾಟನೆಗೆ ಸಿದ್ಧವಾಗಿರುವ ಅಂಗನವಾಡಿ ಹೊಸ ಕಟ್ಟಡ
ತುಮಕೂರು: ಪುಟ್ಟ ಮಕ್ಕಳ ಶೈಕ್ಷಣಿಕ ಚಟುವಟಿಕೆ ತಾಣಗಳು ಅಂಗನವಾಡಿ ಕೇಂದ್ರಗಳು, ಇಲ್ಲಿ ಮಕ್ಕಳು ಶಿಕ್ಷಣ ಕಲಿಯಲು ಉತ್ತಮ ವಾತಾವರಣ ಇರಬೇಕು, ಕಂದಗಳು ಮೊದಲು ಶೈಕ್ಷಣಿಕ ಚಟುವಟಿಕೆಗಳನ್ನು ಆರಂಭಿಸುವ ಕಲ್ಪತರು ನಾಡಿನ 846 ಅಂಗನವಾಡಿ ಕೇಂದ್ರಗಳಿಗೆ ಈವರೆಗೂ ಸ್ವಂತಕಟ್ಟಡವೇ ಇಲ್ಲ.
ಪಾಳು ಬಿದ್ದಿರುವ ಶಾಲೆಗಳಲ್ಲಿ,ಸಮುದಾಯ ಭವನಗಳಲ್ಲಿ ಹಳೆಯ ಸರ್ಕಾರಿ ಶಾಲೆಗಳಲ್ಲಿ ಮಕ್ಕಳು ಶಿಕ್ಷಣ ಕಲಿಯುವ ಸ್ಥಿತಿ ಇಂದಿಗೂ ಜಿಲ್ಲೆಯಲ್ಲಿದ್ದು ಇದಕ್ಕೆ ಮುಕ್ತಿ ದೊರೆಯುವುದು ಯಾವಾಗ? ಜಿಲ್ಲೆಯಲ್ಲಿ ಇರುವ 4109 ಅಂಗನವಾಡಿಗಳ ಪೈಕಿ ಇಂದಿಗೂ ಬಹುತೇಕ ಅಂಗನವಾಡಿ ಕೇಂದ್ರಗಳಿಗೆ ಸ್ವಂತ ಕಟ್ಟಡಗಳೇ ಇಲ್ಲ, ಕೆಲವು ಕಟ್ಟಡಗಳು ಹಳೆದಾಗಿ ಶಿಥಿಲಾವಸೆœಯಲ್ಲಿದ್ದು ಮಕ್ಕಳ ಮೇಲೆ ಎಲ್ಲಿ ಬಿದ್ದು ಬಿಡುತ್ತವೆಯೋ ಎನ್ನುವ ಆತಂಕ ಮೂಡುವ ಸ್ಥಿತಿಯಲ್ಲಿರುವ ಕಟ್ಟಡದಲ್ಲಿ ಅಂಗನವಾಡಿಗಳು ನಡೆಯುತ್ತಿವೆ.
650 ಅಂಗನವಾಡಿಗಳು ಬಾಡಿಗೆ ಕಟ್ಟಡದಲ್ಲಿ: 4109 ಅಂಗನವಾಡಿ ಕೇಂದ್ರಗಳಲ್ಲಿ 2850 ಅಂಗನವಾಡಿಗಳು ಮಾತ್ರ ಸ್ವಂತ ಕಟ್ಟಡ ಹೊಂದಿವೆ, ಇನ್ನು 152 ಅಂಗನವಾಡಿಗಳು ಸಮುದಾಯ ಭವನಗಳಲ್ಲಿ, 18ಅಂಗನವಾಡಿಗಳು ಪಂಚಾಯತ್ ಕಟ್ಟಡದಲ್ಲಿ, 352 ಅಂಗನವಾಡಿಗಳು ಸರ್ಕಾರಿ ಶಾಲಾ ಕಟ್ಟಡದಲ್ಲಿ ನಡೆಯುತ್ತಿವೆ. 84 ಬಾಡಿಗೆ ರಹಿತ ಕಟ್ಟಡದಲ್ಲಿ ನಡೆಯುತ್ತಿದ್ದರೆ, 650 ಅಂಗನವಾಡಿಗಳು ಬಾಡಿಗೆ ಕಟ್ಟಡದಲ್ಲಿ ಇಂದಿಗೂ ನಡೆಯುತ್ತಿವೆ.
ಮೂಲಭೂತ ಸೌಲಭ್ಯದ ಕೊರತೆ: ಜಿಲ್ಲೆಯ ಅಂಗನವಾಡಿಗಳಲ್ಲಿ 1.40 ಲಕ್ಷ ಮಕ್ಕಳು ಅಂಗನವಾಡಿಗಳಲ್ಲಿ ಶಿಕ್ಷಣ ಪಡೆಯುತ್ತಿದ್ದು ಅದರಲ್ಲಿಯೂ ಗ್ರಾಮೀಣ ಪ್ರದೇಶದಲ್ಲಿಯೇ ಹೆಚ್ಚು ಮಕ್ಕಳು ಅಂಗನವಾಡಿಗಳಲ್ಲಿ ಶಿಕ್ಷಣ ಪಡೆಯುತ್ತಲಿದ್ದಾರೆ. ಕೆಲವು ಗ್ರಾಮೀಣ ಪ್ರದೇಶದ ಅಂಗನವಾಡಿಗಳಲ್ಲಿ ಮೂಲಭೂತ ಸೌಲಭ್ಯದ ಕೊರತೆ ಎದ್ದು ಕಾಣುತ್ತಿದೆ, ಕೆಲವು ಅಂಗನವಾಡಿಗಳಿಗೆ ಶೌಚಾಲಯವಿಲ್ಲ, ಕೆಲವು ಅಂಗನವಾಡಿಗಳಿಗೆ ಕುಡಿಯುವ ನೀರಿನ ಸೌಲಭ್ಯವೂ ಇಲ್ಲ, ಕೆಲವು ಅಂಗನವಾಡಿಗಳ ಕಟ್ಟಡ ಶಿಥಿಲವಾಗಿದ್ದು ಎಲ್ಲಿ ಮಕ್ಕಳ ಮೇಲೆ ಕಟ್ಟಡದ ಮೇಚ್ಛಾವಣೆ ಬೀಳುತ್ತದೆಯೋ ಎನ್ನುವ ಆತಂಕ ಪೋಷಕರಲ್ಲಿ ಇದೆ.ಇಂತಹದರ ನಡುವೆ ಜಿಲ್ಲೆಯ ಅಂಗನವಾಡಿಗಳಿಗೆ ಸ್ವಂತ ಕಟ್ಟಡ ಕಟ್ಟಬೇಕು ಎಂದು ಜಿಪಂ ಸಭೆಗಳಲ್ಲಿ ಚರ್ಚೆ ನಡೆಯುತ್ತಲೇ ಇರುತ್ತದೆ. ಆದರೆ ಇಂದಿಗೂ ಈ ಅಂಗನವಾಡಿ ಕಟ್ಟಡ ಕಟ್ಟಲು ಅಗತ್ಯ ಕ್ರಮ ಕೈಗೊಂಡಿಲ್ಲ.
650 ಬಾಡಿಗೆ ಕಟ್ಟಡದಲ್ಲಿ ಅಂಗನವಾಡಿ ಕೇಂದ್ರಗಳು: ಜಿಲ್ಲೆಯ ಅಂಗನವಾಡಿ ಕೇಂದ್ರಗಳಿಗೆ ಸ್ವಂತ ಕಟ್ಟಡ ಕಟ್ಟಲು ಜಿಪಂ ಯೋಜನೆ ರೂಪಿಸಬೇಕಾಗಿದೆ, ಆದರೆ 650 ರಲ್ಲಿ 225 ಅಂಗನವಾಡಿ ಕಟ್ಟಡಗಳಿಗೆ ನಿವೇಶನವಿದೆ. ಅಲ್ಲಿ ಅಂಗನವಾಡಿ ಕಟ್ಟಬಹುದು ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಕಟ್ಟಡ ಕಟ್ಟಲು ನಿವೇಶನದಕೊರತೆ ಎದುರಾಗಿದೆ. ತುಮಕೂರಿನ ಕೇಂದ್ರಗಳಿಗೆ ಸ್ವಂತ ಕಟ್ಟಡ: ತುಮಕೂರು ನಗರದಲ್ಲಿರುವ 179 ಅಂಗನವಾಡಿ ಕೇಂದ್ರಗಳಲ್ಲಿ 58 ಕೇಂದ್ರಗಳು ಮಾತ್ರ ಸ್ವಂತ ಕಟ್ಟಡ ಹೊಂದಿದೆ. ಉಳಿದ 13 ಕೇಂದ್ರಗಳು ಸಮುದಾಯ ಭವನದಲ್ಲಿ 11 ಸರ್ಕಾರಿ ಶಾಲಾ ಕಟ್ಟಡದಲ್ಲಿ ಇನ್ನು 97ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿವೆ. ಕಟ್ಟಡ ಕಟ್ಟಲು 11 ಅಂಗನವಾಡಿಗಳಿಗೆ ಮಾತ್ರ ನಿವೇಶನ ಇದೆ ಇಲ್ಲಿಸ್ಮಾರ್ಟ್ ಸಿಟಿ ಯೋಜನೆ ಯಿಂದ ಕಟ್ಟಡಗಳ ಕಾಮಗಾರಿ ಆರಂಭವಾಗಿವೆ. ಉಳಿದ ಅಂಗನವಾಡಿ ಕೇಂದ್ರಗಳಿಗೆ ನಿವೇಶನವೇ ಇಲ್ಲ, ನಗರದಲ್ಲಿ ಸರ್ಕಾರಿಯೋಜನೆಯ ಕಟ್ಟಡ ಕಟ್ಟಲು ಪಾಲಿಕೆಯ ವ್ಯಾಪ್ತಿಯಲ್ಲಿ ಸರ್ಕಾರಿ ಜಮೀನುಗಳೇ ಇಲ್ಲ, ನಗರದಲ್ಲಿರುವ ಅಂಗನವಾಡಿಗಳಿಗೆ ಸ್ವಂತ ಕಟ್ಟಡ ಕಟ್ಟಲು ಈ ಹಿಂದಿನಿಂದ ನಗರ ಶಾಸಕರು, ಪಾಲಿಕೆ ಸದಸ್ಯರು ಹೆಚ್ಚು ಒತ್ತು ನೀಡದೇ ಇರುವುದೇ ಅಂಗನವಾಡಿ ಕಟ್ಟಡಗಳು ಇಂದಿಗೂ ಬಾಡಿಗೆಯಲ್ಲಿ ಇರಲು ಪ್ರಮುಖ ಕಾರಣವಾಗಿದೆ.
345 ಅಂಗನವಾಡಿ ಶೌಚಾಲಯಗಳು ಪೂರ್ಣ : ಅಂಗನವಾಡಿ ಕೇಂದ್ರಗಳಲ್ಲಿ ಶೌಚಾಲಯ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ. 345 ಶೌಚಾಲಯಗಳು ಪೂರ್ಣಗೊಂಡು 130 ಶೌಚಾಲಯ ಪ್ರಗತಿಯಲ್ಲಿವೆ, ಇನ್ನೂ 318 ಅಂಗನವಾಡಿಗಳಿಗೆ ಶೌಚಾಲಯ ಅಗತ್ಯವಿದೆ. ಇದರ ಜೊತೆಗೆ 653 ಅಂಗನವಾಡಿ ಕೇಂದ್ರಗಳು ಬಾಡಿಗೆಕಟ್ಟಡದಲ್ಲಿದ್ದು ಹೊಸದಾಗಿ ಅಂಗನವಾಡಿ ಕಟ್ಟಡ ನಿರ್ಮಿಸಲು 229ಕೇಂದ್ರಗಳಿಗೆ ನಿವೇಶನ ಲಭ್ಯವಿದ್ದು ಅವುಗಳಿಗೆಕಟ್ಟಡಕಟ್ಟಲು ಅನುದಾನ ಬಿಡುಗಡೆ ಮಾಡುವಂತೆ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿದ್ದೇವೆ. ಹಲವುಕಡೆ ನಿವೇಶನ ಇಲ್ಲ ಅಲ್ಲಿ ನಿವೇಶನಪಡೆದು ಅಂಗನವಾಡಿ ಕಟ್ಟಡಕಟ್ಟಲುಕ್ರಮ ಕೈಗೊಳ್ಳಲಾಗುವುದು ಎನ್ನುತ್ತಾರೆ ಅಧಿಕಾರಿಗಳು.
ಜಿಲ್ಲೆಯಲ್ಲಿ ಅಂಗನವಾಡಿಗಳಿಗೆ ಸ್ವಂತ ಕಟ್ಟಡಕಟ್ಟಲು ಜಿಪಂ ನಿಂದ ಸೂಚಿಸಿರುವುದರ ಮೇರೆಗೆ 25 ಅಂಗನವಾಡಿ ಕಟ್ಟಡಗಳು ಪೂರ್ಣಗೊಂಡು ನ.26 ರಂದು ಸಚಿವರಿಂದ ಉದ್ಘಾಟನೆಯಾಗಲಿವೆ. ಇನ್ನೂ 93 ಕಟ್ಟಡಗಳ ನಿರ್ಮಾಣ ಪ್ರಗತಿಯಲ್ಲಿವೆ. –ನಟರಾಜ್, ಉಪನಿರ್ದೇಶಕ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ
-ಚಿ.ನಿ.ಪುರುಷೋತ್ತಮ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pavagada: ವಿಷ ಸೇವಿಸಿ ಗಂಡ-ಹೆಂಡತಿ ಆತ್ಮಹತ್ಯೆ
Tumkur: ನೀರಾವರಿ ವಿದ್ಯುತ್ ಬಿಲ್ ಪಾವತಿ ಮಾಡುವಂತೆ ಸಿದ್ದಗಂಗಾ ಮಠಕ್ಕೆ ಪತ್ರ
Drone Prathap: ನೀರಿಗೆ ಸ್ಫೋಟಕ ಎಸೆದ ಪ್ರಕರಣ; ಪ್ರತಾಪ್‌ಗೆ 10 ದಿನ ನ್ಯಾಯಾಂಗ ಬಂಧನ
Huliyar; ಕೆಮ್ಮಿನ ಔಷಧವೆಂದು ಭಾವಿಸಿ ಕೀಟನಾಶಕ ಸೇವಿಸಿದ ರೈತ ಸಾ*ವು
ಕೃಷಿ ಹೊಂಡದಲ್ಲಿ ಅದೇನೋ ಮಾಡಲು ಹೋಗಿ ಅರೆಸ್ಟ್ ಅದ ಬಿಗ್ ಬಾಸ್ ಖ್ಯಾತಿಯ ಡ್ರೋನ್ ಪ್ರತಾಪ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು
Allu Arjun: ನಟ ಅಲ್ಲು ಅರ್ಜುನ್ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ
Malpe: ಮನೆ ಮನೆಗಳಲ್ಲಿ ಕ್ಯಾರೋಲ್ ಗಾಯನ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.