ಅಕ್ರಮ ಸಂಬಂಧದ ಜಗಳ; ಕುತ್ತಿಗೆ ಬಿಗಿದು ಪ್ರೇಯಸಿಯ ಹತ್ಯೆ
ಮೂರು ವರ್ಷದಿಂದ ಗಂಡನ್ನು ಬಿಟ್ಟು ಒಂಟಿಯಾಗಿ ಜೀವನ...
Team Udayavani, Aug 5, 2023, 9:57 PM IST
ಕುಣಿಗಲ್:ಪರಸ್ತ್ರೀ ಯೊಂದಿಗೆ ಅಕ್ರಮ ಸಂಬಂಧ ಇಟ್ಟುಕೊಂಡಿರುವೆ ಎಂದು ಪದೇ ಪದೇ ಜಗಳ ಮಾಡುತ್ತಿದ್ದ ಪ್ರೇಯಸಿಯನ್ನು ಪ್ರಿಯಕರನೇ ಚೂಡಿದಾರ್ ವೇಲ್ ನಿಂದ ಕುತ್ತಿಗೆ ಬಿಗಿದು ಕೊಲೆ ಮಾಡಿ ಪೋಲಿಸ್ ಠಾಣೆಗೆ ಬಂದು ಶರಣಾಗಿರುವ ಘಟನೆ ಪಟ್ಟಣದಲ್ಲಿ ಶುಕ್ರವಾರ ಮಧ್ಯರಾತ್ರಿ ನಡೆದಿದೆ.
ಮಾಗಡಿ ತಾಲೂಕಿನ ತಾವರೆ ಕೆರೆ ಸಮೀಪದ ಮೈಲಾರಪುರ ಗ್ರಾಮದ ವಾಸಿ ಲಕ್ಷ್ಮೀ ದೇವಿ(28) ಕೊಲೆಯಾದ ಮಹಿಳೆ. ದಾವಣಗೆರೆ ಜಿಲ್ಲೆಯ ಅವರಗೆರೆ ಗ್ರಾಮದ ಮಂಜುನಾಥ್(22) ಕೊಲೆ ಮಾಡಿ ಪೋಲಿಸರಿಗೆ ಶರಣಾಗಿರುವ ಆರೋಪಿ.
ಗಂಡನನ್ನು ಬಿಟ್ಟಿದ್ದ ಲಕ್ಷ್ಮೀ ದೇವಿ
ಕೊಲೆಯಾದ ಲಕ್ಷ್ಮೀ ದೇವಿ ಹಾಗೂ ಮಂಜುನಾಥ್ ಇಬ್ಬರು ಬೆಂಗಳೂರು ಗ್ರಾಮಾಂತರ ತಾವರೇಕೆರೆ ಬಳಿ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ. ಲಕ್ಷ್ಮೀ ದೇವಿಗೆ ಮದುವೆಯಾಗಿ ಕಳೆದ ಮೂರು ವರ್ಷದಿಂದ ಗಂಡನ್ನು ಬಿಟ್ಟು ಒಂಟಿಯಾಗಿ ಜೀವನ ನಡೆಸುತ್ತಿದ್ದಳು.
ಎರಡು ವರ್ಷದಿಂದ ಪ್ರೇಮ
ಬೆಂಗಳೂರು ತಾವರೇಕೆರೆಯಲ್ಲಿ ಪ್ರತ್ಯೇಕವಾಗಿ ಮನೆ ಮಾಡಿಕೊಂಡು ಲಕ್ಷ್ಮೀ ದೇವಿ ಹಾಗೂ ಮಂಜುನಾಥ್ ವಾಸವಾಗಿದ್ದು, ಕಾರ್ಖಾನೆಯಲ್ಲಿ ಮಂಜುನಾಥ್‌ನ ಪರಿಚಯವಾಗಿ ಇಬ್ಬರ ನಡುವೆ ಎರಡು ವರ್ಷದಿಂದ ಪ್ರೇಮ ಬೆಳೆದು ಇಬ್ಬರು ಅಕ್ರಮ ಸಂಬಂಧ ಬೆಳೆಸಿಕೊಂಡಿದ್ದರು.
ಅಕ್ರಮ ಸಂಬಂಧ ಅನುಮಾನ
ಲಕ್ಷ್ಮೀ ದೇವಿ ನೀನು ಇನ್ನೊಬ್ಬ ಹೆಂಗಸಿನ ಜೊತೆಗೆ ಸಂಬಂಧ ಇಟ್ಟುಕೊಂಡಿದ್ದೀಯಾ ಎಂದು ಮಂಜುನಾಥನ ಮೇಲೆ ಅನುಮಾನ ಪಟ್ಟು ಪದೇ ಪದೇ ಜಗಳ ಮಾಡುತ್ತಿದ್ದಳು ಎನ್ನಲಾಗಿದೆ.
ಲಾಜ್ಡ್ ನಲ್ಲಿ ಜಗಳ
ಶುಕ್ರವಾರ ರಾತ್ರಿ ಲಕ್ಷ್ಮೀ ದೇವಿ ಹಾಗೂ ಮಂಜುನಾಥ್ ಕುಣಿಗಲ್ ಪಟ್ಟಣದ ಲಾಜ್ಡ್ ಗೆ ಬಂದು ರೂಂ ಮಾಡಿದ್ದಾರೆ. ರಾತ್ರಿ ಮತ್ತೆ ಇಬ್ಬರ ನಡುವೆ ಜಗಳ ಉಂಟಾಗಿದೆ ಎನ್ನಲಾಗಿದೆ.
ಆತ್ಮಹತ್ಯೆ ಬೆದರಿಕೆ, ಕೊಲೆಯಲ್ಲಿ ಅಂತ್ಯ
ಲಾಜ್ಡ್ ನಲ್ಲಿ ಲಕ್ಷ್ಮೀ ದೇವಿ ಅತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಾಳೆ ಎನ್ನಲಾಗಿದ್ದು ಇದರಿಂದ ರೋಸಿಹೋಗಿದ್ದ ಮಂಜುನಾಥ್ ಅಕೆಯೇ ಧರಿಸಿದ್ದ ಚೂಡಿದಾರ್ ವೇಲ್‌ನಿಂದ ಕುತ್ತಿಗೆ ಬಿಗಿದು ಕೊಲೆ ಮಾಡಿದ್ದಾನೆ. ಬೆಳಗೆ ಹೊರಗೂ ಶವೆದ ಜೊತೆಯಲ್ಲಿ ಇದ್ದು ನಂತರ ಎದ್ದು ಕುಣಿಗಲ್ ಪೋಲಿಸ್ ಠಾಣಿಗೆ ಬಂದು ಕೊಲೆ ಮಾಡಿರುವುದಾಗಿ ಹೇಳಿ ಪೋಲಿಸರಿಗೆ ಶರಣಾಗಿದ್ದಾನೆ. ಘಟನೆ ಸ್ಥಳಕ್ಕೆ ಬೆರಳಚ್ಚು ತಜ್ಞರು, ಶ್ವಾನದಳ ಭೇಟಿ ನೀಡಿ ಪರಿಶೀಲಿಸಿ ಮಾಹಿತಿ ಕಲೆ ಹಾಕಲಾಗಿದೆ,
ಈ ಸಂಬಂಧ ಡಿವೈಎಸ್‌ಪಿ ಲಕ್ಷ್ಮೀಕಾಂತ್, ಸಿಪಿಐ ನವೀನ್ ಗೌಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಆರೋಪಿ ಕುಣಿಗಲ್ ಪೋಲಿಸರ ವಶದಲ್ಲಿ ಇದ್ದಾನೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಕೋಟಿ ಗೀತಾ ಲೇಖನ ಯಜ್ಞ: 500ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಿಬ್ಬಂದಿಯಿಂದ ದೀಕ್ಷೆ
Caste ನೋಡಿ ಮತ ಹಾಕಿದರೆ ಸಮಾಜದಲ್ಲಿ ಬದಲಾವಣೆ ಅಸಾಧ್ಯ : ಸಿಎಂ ಸಿದ್ದರಾಮಯ್ಯ
Tumkur: ತುಮಕೂರಲ್ಲಿ ದಲಿತ ಮಹಿಳೆ ಹ*ತ್ಯೆ: 21 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ
Road Mishap: ಚಲಿಸುತ್ತಿದ್ದ ಲಾರಿಗೆ ಕಾರು ಢಿಕ್ಕಿ: ತಂದೆ-ಮಗು ಸ್ಥಳದಲ್ಲೇ ಸಾವು
Maharashtra ಸರಕಾರ ವಿರುದ್ಧ ಮಾನನಷ್ಟ ಕೇಸ್: ಸಚಿವ ಡಾ| ಜಿ. ಪರಮೇಶ್ವರ್
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Surathkal: ಎಐಯಿಂದ ಉದ್ಯೋಗ, ನಂಬಿಕೆಗೆ ಕುತ್ತು: ಪ್ರೊ| ಗೋವಿಂದನ್ ರಂಗರಾಜನ್
Result: ಮಹಾರಾಷ್ಟ್ರದಲ್ಲಿ ಎನ್‌ಡಿಎಗೆ ಜಯಭೇರಿ; ಮೋದಿ ನಾಯಕತ್ವಕ್ಕೆ ಮನ್ನಣೆ: ನಳಿನ್
Mangaluru: ಗೊಂದಲ ಮೂಡಿಸುವ ಬಿಜೆಪಿಗೆ ತಕ್ಕ ಪಾಠ: ಕೆಪಿಸಿಸಿ ಪ್ರ.ಕಾರ್ಯದರ್ಶಿ ಪದ್ಮರಾಜ್
Putturu: ಬಜೆಟ್‌ನಲ್ಲಿ ಹೊರಡಿಸಿರುವ ಆದೇಶ ಅನುಷ್ಠಾನಿಸದೆ ಕೃಷಿಕರಿಗೆ ವಂಚನೆ: ಮಠಂದೂರು
Udupi: ಪೇಜಾವರ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ -ಗೃಹ ಸಚಿವ ಅಮಿತ್ ಶಾ ಭೇಟಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.