ವೇತನ, ಭವಿಷ್ಯ ನಿಧಿ ನೀಡದೆ ದಬ್ಟಾಳಿಕೆ
Team Udayavani, Sep 14, 2019, 2:29 PM IST
ಕೊರಟಗೆರೆ ತಾಲೂಕು ಕಸಬಾ ಹೋಬಳಿ ಬಜ್ಜನಹಳ್ಳಿ ಬಳಿಯ ಗಾರ್ಮೆಂಟ್ಸ್ ಎದುರು ಭವಿಷ್ಯನಿಧಿ ಮತ್ತು ಸಂಬಳಕ್ಕೆ ಕಾರ್ಮಿಕರು ಪ್ರತಿಭಟನೆ ನಡೆಸಿದರು.
ಕೊರಟಗೆರೆ: ಎರಡು ತಿಂಗಳ ವೇತನ ಮತ್ತು 1 ವರ್ಷದ ವಿಶೇಷ ಭತ್ಯೆ ಜೊತೆ ಭವಿಷ್ಯ ನಿಧಿ ನೀಡದೆ ದಬ್ಟಾಳಿಕೆ ನಡೆಸುತ್ತಿದ್ದಾರೆ ಎಂದು ಆರೋಪಿಸಿ ಗಾರ್ಮೆಂಟ್ಸ್ ಎದುರು 300ಕ್ಕೂ ಹೆಚ್ಚು ಕಾರ್ಮಿಕರು ಶುಕ್ರವಾರ ಪ್ರತಿಭಟನೆ ನಡೆಸಿದರು. ಕಸಬಾ ಹೋಬಳಿ ಬಜ್ಜನಹಳ್ಳಿ ಬಳಲಿಯ ಬಳಿಯ ಗಾರ್ಮೆಂಟ್ಸ್‌ನಲ್ಲಿ ಕೆಲಸ ಮಾಡುತ್ತಿರುವ ಕೂಲಿ ಕಾರ್ಮಿಕರಿಗೆ ಕಳೆದ ಎರಡು ತಿಂಗಳ ಸಂಬಳ ಮತ್ತು 1 ವರ್ಷದಿಂದ ಭವಿಷ್ಯನಿಧಿ ನೀಡದೆ ಮಾಲೀಕರು ದಬ್ಟಾಳಿಕೆ ನಡೆ ಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಗಾರ್ಮೆಂಟ್ಸ್ ಲೆಕ್ಕಾಧಿಕಾರಿ ರಾಘವೇಂದ್ರ ರಾಜಅರಸ್ ಮಾತನಾಡಿ, ಕಂಪನಿ ಪ್ರಾರಂಭ ಆದಾಗ 1600 ಕಾರ್ಮಿಕರಿದ್ದರು. ಈಗ ಕೇವಲ 300 ಕಾರ್ಮಿಕರಿದ್ದಾರೆ. ಐದು ಘಟಕದಲ್ಲಿ ನಾಲ್ಕು ಮುಚ್ಚಿದ್ದಾರೆ. ಈಗ ಗಾರ್ಮೆಂಟ್ಸ್ ಮಾತ್ರ ಉಳಿದಿದೆ. ನಮ್ಮ ಸಮಸ್ಯೆ ಹೇಳಿದರೆ ವರ್ಗಾವಣೆ ಅಥವಾ ಕೆಲಸದಿಂದ ವಜಾ ಮಾಡುತ್ತಾರೆ ಎಂದು ಕಿಡಿಕಾರಿದರು.
ಕಾರ್ಮಿಕ ಹರೀಶ್ ಮಾತನಾಡಿ, ಕಾರ್ಮಿಕರು ಪ್ರತಿಭಟನೆ ಮಾಡಿದಾಗ ಸಂಬಳ ಕೊಡುತ್ತಾರೆ. ಸಂಬಳದಿಂದ ಭವಿಷ್ಯನಿಧಿ ಕಡಿತ ಮಾಡಿ ಸರ್ಕಾರಕ್ಕೆ ಹಣ ಕಟ್ಟದೆ ನಿರ್ಲಕ್ಷ್ಯ ಮಾಡಿದ್ದಾರೆ. ನಮಗೆ ಎರಡು ತಿಂಗಳ ಸಂಬಳದ ಜೊತೆ ಒಂದು ವರ್ಷದ ಭವಿಷ್ಯನಿಧಿ ಬರಬೇಕಾಗಿದೆ ಎಂದು ಆಗ್ರಹಿಸಿದರು.
ಶಿವಮ್ಮ ಮಾತನಾಡಿ, ಆರು ವರ್ಷದಿಂದ ಗಾರ್ಮೆಂಟ್ಸ್ ನಂಬಿ ಜೀವನ ಮಾಡುತ್ತಿದ್ದೇನೆ. ಈಗ ಏಕಾಏಕಿ ಗಾರ್ಮೆಂಟ್ಸ್ ವಾಹನಗಳಿಗೆ ವಿಮೆ ಮತ್ತು ದಾಖಲೆ ಇಲ್ಲವೆಂದು ಕಂಪನಿ ವಾಹನ ನಿಲ್ಲಿಸಿದ್ದಾರೆ. ಸಮಸ್ಯೆ ಕೇಳುವ ಕಾರ್ಮಿಕ ಅಧಿಕಾರಿ ಮತ್ತು ಭವಿಷ್ಯನಿಧಿ ಅಧಿಕಾರಿಗಳು ನಾಪತ್ತೆಯಾಗಿ ದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾರ್ಮಿಕರಾದ ರಾಕೇಶ್, ರಾಘವೇಂದ್ರ, ಈಶ್ವರ, ಸುರೇಶ್, ಲೊಕೇಶ್, ನಾಗರಾಜು, ಕೃಷ್ಣ, ಮೋಹನ, ಗೋಪಾಲ, ಅಂಬಿಕಾ, ಮಂಜುಳ, ಗಂಗಮ್ಮ, ರತ್ನಮ್ಮ, ಶಶಿ, ವೀರಕ್ಯಾತ, ಹರೀಶ, ರವಿಕುಮಾರ 300ಕ್ಕೂ ಹೆಚ್ಚು ಕಾರ್ಮಿಕರು ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kunigal:ಮನೆಗೆ ನುಗ್ಗಿದ ದುಷ್ಕರ್ಮಿಗಳು; ರಾಡ್ ನಿಂದ ತಲೆಗೆ ಹೊಡೆದು ಮಾಂಗಲ್ಯಸರ ದೋಚಿ ಪರಾರಿ
Koratagere: ಟಾಟಾ ಏಸ್ ಪಲ್ಟಿ; 15 ವಿದ್ಯಾರ್ಥಿಗಳಿಗೆ ಗಂಭೀರ ಗಾಯ
ಮಧುಗಿರಿ: ಕಚೇರಿಯಲ್ಲೇ DYSP ರಾಸಲೀಲೆ!!: ವಿಡಿಯೋ ಸೆರೆ
Minister ಸೋಮಣ್ಣ, ಸಿ.ಎಸ್. ಹೆಸರಲ್ಲಿ ನಕಲಿ ಸಹಿ, ಲೆಟರ್‌ಹೆಡ್: ಬಂಧನ
Koratagere: ರಸ್ತೆಯಲ್ಲಿ ಚರಂಡಿ ನೀರು; ಸಾಂಕ್ರಾಮಿಕ ರೋಗದ ಭೀತಿಯಲ್ಲಿ ಗ್ರಾಮಸ್ಥರು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Nagavalli Bangale Movie: ಸೆನ್ಸಾರ್ ಪಾಸಾದ ನಾಗವಲ್ಲಿ
Sky Force: ಭಾರತದ ಮೊದಲ ವೈಮಾನಿಕ ದಾಳಿಯ ʼಸ್ಕೈ ಫೋರ್ಸ್ʼ ಟ್ರೇಲರ್ ಔಟ್- ಮಿಂಚಿದ ಅಕ್ಷಯ್
Doddaballapura: ಘಾಟಿ ಕ್ಷೇತ್ರದಲ್ಲಿ ಶ್ರೀ ಸುಬ್ರಹ್ಮಣ್ಯಸ್ವಾಮಿ ಬ್ರಹ್ಮ ರಥೋತ್ಸವ
Naxalite: ಮುಂಡಗಾರು ಲತಾ ಸೇರಿ ಆರು ನಕ್ಸಲರು ಶೀಘ್ರ ಮುಖ್ಯವಾಹಿನಿಗೆ: ಪ್ರಕ್ರಿಯೆ ಚುರುಕು
Hunsur: ಬ್ಯಾರಿಕೇಡ್ ಗೆ ಸಿಲುಕಿದ ಗಜರಾಜ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.