ಎಸಿಬಿ ದಾಳಿಗೆ ಸಿಕ್ಕಿ ಬಿದ್ದ ತಹಶೀಲ್ದಾರ್ ಕಛೇರಿಯ ಗುಮಾಸ್ತ: ಪಿಕೆಎನ್ ಸ್ವಾಮಿ.
Team Udayavani, Sep 7, 2021, 8:01 PM IST
ಕೊರಟಗೆರೆ : ತಾಲ್ಲೂಕಿನ ಚನ್ನರಾಯನದುರ್ಗ ಹೋಬಳಿಯ ಕಲ್ಲುಗುಟ್ಟರಹಳ್ಳಿ ಗ್ರಾಮದ ರೈತನಿಗೆ ತನ್ನ ಜಮೀನಿನ ಸರ್ವೇ ನಂಬರ್ 20/5 ಬಳವೀರನಹಳ್ಳಿ, ಸರ್ವೆ ನಂಬರ್ 9/5 ರ ಖಾತೆಗೆ ಸಂಬಂಧಿಸಿದಂತೆ ತಕರಾರು ವ್ಯಾಜ್ಯವು ಕೊರಟಗೆರೆ ತಾಲ್ಲೂಕು ತಹಸೀಲ್ದಾರ್ ರವರ ಕೋರ್ಟ್ ನಲ್ಲಿ ಕೇಸ್ ನಡೆಯುತ್ತಿದ್ದು ತಾಲ್ಲೂಕು ಕಚೇರಿಯಲ್ಲಿ ಕೆಲಸ ನಿರ್ವಹಿಸುತ್ತಿರುವ ಗುಮಾಸ್ತ ಪಿಕೆಎನ್ ಸ್ವಾಮಿ ಖಾತೆ ಮಾಡಿಕೊಡಲು ನೆಪವೊಡ್ಡಿ 20000/- ಲಂಚದ ಹಣಕ್ಕೆ ಬೇಡಿಕೆ ಇಟ್ಟಿರುತ್ತಾರೆ ಎಂದು ನೀಡಿದ್ದ ದೂರಿನ ಮೇರೆಗೆ ತುಮಕೂರು ಎಸಿಬಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಮಂಗಳವಾರ ಸಂಜೆ ತಾಲ್ಲೂಕು ಕಚೇರಿ ಮುಂಭಾಗದಲ್ಲಿ ವಡ್ಡಗೆರೆ ರಸ್ತೆಯಲ್ಲಿರುವ ಶ್ರೀಕಂಠಪ್ಪ ಟೀ ಸ್ಟಾಲ್ ಬಳಿ ಇರುವ ಹೊಂಗೆ ಮರದ ಹತ್ತಿರ ಆರೋಪಿ ಸ್ವಾಮಿ, ಪಿಕೆಎನ್ ಬಿನ್ ಚಿಕ್ಕಹನುಮಯ್ಯ ಗ್ರಾಮ ಲೆಕ್ಕಾಧಿಕಾರಿ ಜೊತೆಯಲ್ಲಿದ್ದ ರವಿಕಿರಣ್ ಎಂಬವರಿಗೆ ಲಂಚದ ಹಣ 10000/-ರೂಪಾಯಿ ಕೊಡುವಂತೆ ಪಿರ್ಯಾದಿಗೆ ಸೂಚಿಸಿದ್ದು. ಅದರಂತೆ ರವಿಕಿರಣ್ ರವರು ಪಿರ್ಯಾದಿ ರವರಿಂದ ಲಂಚದ ಹಣವನ್ನು ಪಡೆದುಕೊಳ್ಳುತ್ತಿದ್ದಾಗ ತುಮಕೂರು ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ದಾಳಿ ನಡೆಸಿ ಆರೋಪಿಯನ್ನು ಮತ್ತು ಲಂಚದ ಹಣವನ್ನು ಪಡೆಯುತ್ತಿದ್ದ ರವಿಕಿರಣ್ ರವರನ್ನು ವಶಕ್ಕೆ ಪಡೆದಿರುತ್ತಾರೆ.
ಇದನ್ನೂ ಓದಿ:ಲಸಿಕೆ ಹಾಕಿಸಿಕೊಂಡವರಿಗೆ ಮಾತ್ರ ಗಣೇಶನ ದರ್ಶನ
ತುಮಕೂರು ಎಸಿಬಿ ಘಟಕದ ಡಿವೈಎಸ್ಪಿ ಎಸ್. ಮಲ್ಲಿಕಾರ್ಜುನ ಚುಕ್ಕಿ ರವರ ನೇತೃತ್ವದಲ್ಲಿ ಪೊಲೀಸ್ ಇನ್ಸ್ ಪೆಕ್ಟರ್ ಗಳಾದ ಶ್ರೀ ವೀರೇಂದ್ರ ಎಂ, ಶ್ರೀಮತಿ ವಿಜಯಲಕ್ಷ್ಮಿ ಹಾಗೂ ಸಿಬ್ಬಂದಿಗಳಾದ ನರಸಿಂಹರಾಜು, ಶಿವಣ್ಣ ಕೆ.ಪಿ, ಚಂದ್ರಶೇಖರ್ ಎಂ, ನರಸಿಂಹರಾಜು, ಗಿರೀಶ್ ಕುಮಾರ್,ಶ್ರೀಮತಿ ಯಶೋಧ ರಮೇಶ್, ಮಹೇಶ್ ಕುಮಾರ್ ರವರು ದಾಳಿಯಲ್ಲಿ ಭಾಗವಹಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kunigal: ಮರಕ್ಕೆ ಕಾರು ಡಿಕ್ಕಿಯಾಗಿ ಪಲ್ಟಿ: ಬೆಸ್ಕಾಂ ನೌಕರರ ಸ್ಥಳದಲ್ಲೇ ಸಾವು
Kunigal: ನಾಮಫಲಕಕ್ಕೆ ಬಸ್ ಡಿಕ್ಕಿ, ಪಲ್ಟಿ; ಮಂಗಳೂರು ಮೂಲದ ಚಾಲಕ ಸಾವು; 8 ಮಂದಿಗೆ ಗಾಯ
Koratagere: ವಿದ್ಯೆಯ ಸಾಧನೆಗೆ ಸಾಧಿಸುವ ಗುರಿ ಒಂದೇ ಮುಖ್ಯ
ಜಟ್ಟಿ ಅಗ್ರಹಾರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಗಂಗಾದೇವಿ ಅಧ್ಯಕ್ಷೆ
Koratagere: ಮದ್ಯಪಾನದಿಂದ ಕುಟುಂಬದಲ್ಲಿ ದಿನ ಅಶಾಂತಿ ಉಂಟಾಗಿ ನೆಮ್ಮದಿ ಇಲ್ಲದಂತಾಗಿದೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
BBK11: 13ನೇ ವಾರದಲ್ಲಿ ವೀಕ್ಷಕರ ಗಮನ ಸೆಳೆದಿದ್ದ ಖ್ಯಾತ ಸ್ಪರ್ಧಿಯೇ ಎಲಿಮಿನೇಟ್
RBI: ಯುಪಿಐ ಮೂಲಕ ಡಿಜಿಟಲ್ ವ್ಯಾಲೆಟ್ ಹಣ ಬಳಕೆಗೆ ಅಸ್ತು
Madikeri: ಗುಂಡು ಹೊಡೆದು ಕಾರ್ಮಿಕನ ಕೊ*ಲೆ; ವ್ಯಕ್ತಿ ಬಂಧನ
Daily Horoscope: ಅಪಾತ್ರರಿಗೆ ಸಲಹೆ ನೀಡಿ ಅವಮಾನ ಹೊಂದದಿರಿ, ಭವಿಷ್ಯದ ಕುರಿತು ಚಿಂತನೆ
THAAD System: ಹೌತಿ ದಾಳಿ ತಡೆಗೆ ಇಸ್ರೇಲ್‌ನಿಂದ “ಥಾಡ್’ ವ್ಯವಸ್ಥೆ ಬಳಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.