ಅಂತರ್ಜಲ ವೃದ್ಧಿಗೆ ಕ್ರಮ: ಮಾಧುಸ್ವಾಮಿ
Team Udayavani, Mar 30, 2021, 5:15 PM IST
ತುಮಕೂರು: ಅಂತರ್ಜಲ ಮಟ್ಟ ಕುಸಿತದಿಂದ ಕುಡಿಯುವ ನೀರಿನ ಸಮಸ್ಯೆ ಉಂಟಾಗುತ್ತಿರುವ ಹಿನ್ನೆಲೆ,ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಜನರಿಗೆ ನೀರಿನಸಮಸ್ಯೆ ಬಗ್ಗೆ ಅರಿವು ಮೂಡಿಸಲು ಅನೇಕ ಕಾರ್ಯಕ್ರಮರೂಪಿಸಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದರು.
ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿಕೇಂದ್ರ ಸರ್ಕಾರದ ಜಲಶಕ್ತಿ ಮಂತ್ರಾಲಯ, ಜಲಸಂಪನ್ಮೂಲ, ನದಿ ಅಭಿವೃದ್ಧಿ ಮತ್ತು ಗಂಗಾ ಪುನಶ್ಚೇತನ ಇಲಾಖೆ, ಕೇಂದ್ರೀಯ ಅಂತರ್ಜಲ ಮಂಡಳಿ ಹಾಗೂಜಿಪಂ ಸಹಯೋಗದೊಂದಿಗೆ ಜಿಲ್ಲಾಮಟ್ಟದಜಲಧರಗಳ ನಕಾಶೆ ಮತ್ತು ಅಂತರ್ಜಲ ನಿರ್ವಹಣೆ ಬಗ್ಗೆ ಏರ್ಪಡಿಸಿದ್ದ ಸಂವಹನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯದ 41ತಾಲೂಕುಗಳಲ್ಲಿ ಅಂತರ್ಜಲಮಟ್ಟ ಕ್ಷೀಣಿಸುತ್ತಿದ್ದು,ಅಂತರ್ಜಲ ವೃದ್ಧಿಗಾಗಿ ಕೇಂದ್ರ ಸರ್ಕಾರ ಅನೇಕಕಾರ್ಯಕ್ರಮಗಳನ್ನು ರೂಪಿಸಿದೆ. ಅವುಗಳ ನಿರ್ವಹಣೆಗೆ ಎಲ್ಲರೂ ಬದ್ಧರಾಗಬೇಕು ಎಂದರು.
ಪ್ರಧಾನಿ ಮೋದಿ ಇಡೀ ವರ್ಷ 75ನೇ ವರ್ಷದ ಸ್ವಾತಂತ್ರೋತ್ಸವ ಪ್ರಯುಕ್ತ ಎಲ್ಲಾ ಭಾಗದಲ್ಲಿ ಅಂತರ್ಜಲದ ಉಳಿವಿಗಾಗಿ ಎಲ್ಲಾ ಇಲಾಖೆಗಳನ್ನು ಸಂಯೋಜನೆಗೊಳಿಸಿ ಈ ಕಾರ್ಯಕ್ರವನ್ನು ರೂಪಿಸಿದ್ದಾರೆ. ಕೇಂದ್ರ ಹಾಗೂ ರಾಜ್ಯ ಅಂತರ್ಜಲ ಮಂಡಳಿ, ಅಟಲ್ ಭೂ ಜಲ ಪ್ರಾಧಿಕಾರದ ಈ ಕಾರ್ಯಕ್ರಮವನ್ನು ನಾನು ಹರ್ಷ ದಿಂದ ಉದ್ಘಾಟಿಸುತ್ತಿದ್ದೇನೆ ಎಂದರು.
ಕಾಳಜಿ ವಹಿಸಿ: ಅಂತರ್ಜಲ ಅಭಿವೃದ್ಧಿ ಇಲಾಖೆಯು ಭೂಮಿಯ ಮೇಲಿನ ನೀರನ್ನು ಉಳಿಸುವುದು, ಬಳಸುವುದು, ಹರಿಯುವ ನೀರನ್ನು ತಡೆದು ನಿಲ್ಲಿಸುವ ಕೆಲಸವನ್ನು ಮಾಡುತ್ತಾ ಬಂದಿದೆ. ಭೂಮಿಯ ಮೇಲೆ ಮುಕ್ಕಾಲು ಪಟ್ಟು ಅನುಪಯುಕ್ತ ನೀರು ಇದೆ. ಶೇ.2 ರಿಂದ 3ರಷ್ಟು ನೀರು ನಮಗೆ ಲಭ್ಯವಿದೆ. 1962- 63ರಿಂದಲೂ ಅಂತರ್ಜಲದ ಬಗ್ಗೆ ಕಾಳಜಿ ವಹಿಸಿ ನೀರಿನ ಮೂಲಗಳನ್ನು ರಕ್ಷಿಸುವ ಕೆಲಸ ಆಗುತ್ತಿದೆ ಎಂದರು.
ಕೆರೆಗಳಿಗೆ ನೀರು ತುಂಬಿಸಿ: ರಾಜ್ಯದಲ್ಲಿ 41 ತಾಲೂಕುಗಳಲ್ಲಿ ಅಂತರ್ಜಲ ಮಟ್ಟ ಕ್ಷೀಣಿಸುತ್ತಿರುವುದನ್ನ ಕೇಂದ್ರ ಸರ್ಕಾರ ಗುರುತಿಸಿದೆ. ನಮ್ಮ ಜಿಲ್ಲೆಯಲ್ಲಿ 6 ತಾಲೂಕು ಅಂತರ್ಜಲ ಮಟ್ಟ ಕುಸಿತ ಕಂಡಿವೆ. ನೀರನ್ನ ಉಳಿಸುವುದು, ಜಲಮೂಲಗಳನ್ನು ರಕ್ಷಿಸುವ ನಿಟ್ಟಿನಲ್ಲಿ ಈ ಯೋಜನೆಯನ್ನ ರೂಪಿಸಲಾಗಿದೆ. ಆಯಾ ಕಟ್ಟಿನಪ್ರದೇಶಗಲ್ಲಿ ಕೆರೆ, ಕಟ್ಟೆಗಳಿಗೆ ನೀರು ತುಂಬಿಸಿ ಅಂತರ್ಜಲಮಟ್ಟವನ್ನ ಹೆಚ್ಚಿಸುವ ಕೆಲಸ ಮಾಡಬೇಕಿದೆ ಎಂ ದರು. ನಮಗೆ ಹೇಮಾವತಿ, ಭದ್ರಾ ಮೇಲ್ದಂಡೆ,ಎತ್ತಿನಹೂಳೆ ಯಂತಹ ನೀರಿನ ಯೋಜನೆಗಳು ಅಭಿವೃದ್ಧಿ ಕಾಣುತ್ತಿವೆ. ಬೆಂಗಳೂರು ನಗರದ ನಾಯಂಡಹಳ್ಳಿಯಿಂದ ವೃಷಭಾ ವತಿಯಿಂದ ಟ್ರಿಟೇಡ್ ನೀರು ತುಮಕೂರಿನ ಗ್ರಾಮಾಂ ತರ ಭಾಗಗಳಿಗೆ ಬರಲಿದೆ. ಕೆಲವು ಎನ್‌ಜಿಒ ಸಂಸ್ಥೆಗಳು ನೀರಿನ ಮೂಲಗಳ ಬಗ್ಗೆ ಅಂಕಿ-ಅಂಶಗಳು ಮತ್ತು ಅಂತರ್ಜಲದ ವಿಸ್ತೃತ ಮಾಹಿತಿಯನ್ನು ಒದಗಿಸಬೇಕು ಎಂದರು.
ಅರಿವು ಮೂಡಿಸಿ: ಅಟಲ್ ಭೂ ಯೋಜನೆಯಿಂದ ರೈತರಿಗೆ ಮೈಕ್ರೋ ಇರಿಗೇಷನ್ ಮಾಡಲು ಅನುಕೂಲಆಗಲಿದೆ. ಸ್ಥಳೀಯ ಸಂಸ್ಥೆಗಳು, ಗ್ರಾಮ ಪಂಚಾಯಿತಿಮಟ್ಟದಲ್ಲಿ ನೀರಿನ ಸದ್ಬಳಕೆಯನ್ನ ಜನ ಸಮೂಹಗಳಲ್ಲಿಅರಿವು ಮೂಡಿಸಬೇಕು. ಸಾರ್ವಜನಿಕರಲ್ಲಿ ನೀರಿನಬಳಕೆ ಕುರಿತು ಸರಿಯಾದ ಮಾಹಿತಿ ಕೊಡಬೇಕು. ಜಿಲ್ಲೆಗೆ ಉತ್ತಮವಾದ ಯೋಜನೆ ಬಂದಿದೆ. ರೈತರಿಗೆ ನೀರು, ವಿದ್ಯುತ್, ಋತುಮಾನಗಳ ಬಗ್ಗೆ ಗಮನಹರಿಸಿ ಸೂಕ್ತವಾದ ಬೆಳೆಗೆ ಬೇಕಾಗುವಷ್ಟು ನೀರಿನ ಬಳಕೆ ಬಗ್ಗೆ ಅರಿವುಮೂಡಿಸಿ ಸುಸ್ಥಿರತೆ ಕಾಪಾಡಬೇಕಾಗಿದೆ ಎಂದರು.ಜಿಲ್ಲೆಗೆ ಒಂದು ಉತ್ಪನ್ನ ಒಂದು ಬೆಳೆಯೋಜನೆಯಡಿ ತೆಂಗು ಬೆಳೆ ಆಯ್ಕೆಯಾಗಿದ್ದು,ಈಗಾಗಲೇ ಸಂಬಂಧ ಪಟ್ಟ ಇಲಾಖೆಯೊಡನೆ ಚರ್ಚಿಸಿದ್ದೇನೆ ಇದರ ಸದುಪಯೋಗ ತೆಂಗು ಬೆಳೆಗಾರರಿಗೆ ಆಗಲಿದೆ ಎಂದರು.
ಮಹಾ ಪೌರರಾದ ಬಿ.ಜಿ. ಕೃಷ್ಣಪ್ಪ, ಶಾಸಕ ಜಿ.ಬಿ.ಜ್ಯೋತಿ ಗಣೇಶ್, ವೀರಭದ್ರಯ್ಯ, ಶ್ರೀನಿವಾಸ, ಡಿ.ಸಿ.ಗೌರಿಶಂಕರ್, ವೆಂಕಟರಮಣಪ್ಪ, ರಾಜೇಶ್‌ಗೌಡ, ನೀರಾವರಿ ಇಲಾಖೆಯ ಅಪರ ಮುಖ್ಯಕಾರ್ಯದರ್ಶಿ ರಾಕೇಶ್ ಸಿಂಗ್, ಸಣ್ಣ ನೀರಾವರಿಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ ಕಾರ್ಯದರ್ಶಿಮೃತ್ಯುಂಜಯ ಸ್ವಾಮಿ, ಕೇಂದ್ರೀಯ ಅಂತರ್ಜಲಮಂಡಳಿ ಪ್ರಾದೇಶಿಕ ನಿರ್ದೇಶಕ ವಿ. ಕುನ್ಹಂಬು,ಮಾಜಿ ಸಚಿವ ಎಸ್.ಶಿವಣ್ಣ, ದಿಶಾ ಕಮಿಟಿ ಸದಸ್ಯಕುಂದರನಹಳ್ಳಿ ರಮೇಶ್, ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ, ಸಿಇಒ ಗಂಗಾಧರ ಸ್ವಾಮಿ ಹಾಗೂ ಜಿಲ್ಲಾಮಟ್ಟದ ಅಧಿಕಾರಿಗಳು ಇದ್ದರು.
ಗಂಗರ ಆಳ್ವಿಕೆಯಲ್ಲೇ ಕೆರೆ ನಿರ್ಮಾನ : ಗಂಗರ ಆಳ್ವಿಕೆಯಲ್ಲೇ ಕೆರೆಗಳನ್ನು ಕಟ್ಟಿದ್ದಾರೆ.ನಾಲ್ವಡಿ ಕೃಷ್ಣರಾಜ ಒಡೆಯರ ಕಾಲದಲ್ಲಿ ಭೂಮಿಮೇಲಿನ ನೀರು ಬೇರೆಡೆಗೆ ಹರಿದು ಹೋಗದಂತೆ ಕೆರೆ, ಕಟ್ಟೆ, ಅಣೆಕಟ್ಟುಗಳನ್ನ ಕಟ್ಟಿ ನೀರನ್ನುಭದ್ರಪಡಿಸಿದರು. ಹಾಗೆಯೇ ಮಾರ್ಕೋನಹಳ್ಳಿಡ್ಯಾಂ, ವಾಣಿ ವಿಲಾಸ, ಬೋರನ ಕಣಿವೆಡ್ಯಾಂಗಳನ್ನು ಅಭಿವೃದ್ಧಿ ಪಡಿಸಿ ನೀರನ್ನುಉಳಿಸಿದ್ದಾರೆ. ನಾವು ಇದರ ಬಳಕೆಯನ್ನಸಮರ್ಪಕವಾಗಿ ಸರಿಯಾದ ರೀತಿಯಲ್ಲಿಬಳಸಬೇಕಾಗಿದೆ ಎಂದು ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದರು.
ಜಿಲ್ಲೆಯಲ್ಲಿ ಕೆರೆಗಳ ಹೂಳು ತೆಗೆಯುವುದು ಸಮರ್ಪಕವಾಗಿನಡೆಯಬೇಕು. ಕೆರೆಯಿಂದ ಹರಿದು ಹೋಗುವ ನೀರಿನ ಹಳ್ಳಗಳ ಬಗ್ಗೆ ಸರ್ವೆ ಮಾಡಲಾಗುವುದು. ನೀರಿನ ಮೂಲಗಳ ರಕ್ಷಣೆಯಾದರೆ ಗ್ರಾಮೀಣ ಭಾಗದ ರೈತರಬದುಕು ಚೇತರಿಕೆ ಕಾಣುವುದು. ಆ ದಿಕ್ಕಿನಲ್ಲಿ ನಾವೆಲ್ಲರೂ ಯೋಚಿಸಬೇಕಾಗಿದೆ. – ಜೆ.ಸಿ.ಮಾಧುಸ್ವಾಮಿ, ಜಿಲ್ಲಾ ಉಸ್ತುವಾರಿ ಸಚಿವ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
BGT 2024: ಟೀಂ ಇಂಡಿಯಾಗೆ ಗುಡ್ ನ್ಯೂಸ್: ಆಸೀಸ್ ಸರಣಿಗೆ ತಂಡ ಸೇರಲಿದ್ದಾರೆ ಶಮಿ
Charmadi: ಮೃತ್ಯುಂಜಯ ನದಿಯಲ್ಲಿ ಕಾಣಿಸಿಕೊಂಡ ಒಂಟಿ ಸಲಗ
Patna: ಆಸ್ಪತ್ರೆಯಲ್ಲಿ ಮೃತಪಟ್ಟ ವ್ಯಕ್ತಿಯ ಕಣ್ಣು ನಾಪತ್ತೆ!; ಇಲಿ ಕಚ್ಚಿದೆ ಎಂದ ವೈದ್ಯರು
Kerala govt: ಶಬರಿಮಲೆ ವರ್ಚುವಲ್ ಕ್ಯೂ ಬುಕ್ಕಿಂಗ್ ಮಿತಿ ಹೆಚ್ಚಳ
Uttar Pradesh: ಝಾನ್ಸಿ ಅಗ್ನಿ ಅವಘಡ: ಗುರುತೇ ಸಿಗದಂತೆ ಕರಕಲಾದ ಹಸುಳೆಗಳು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.