ಬಳಕೆಯಾಗದೆ ನಿಂತಲ್ಲೇ ನಿಂತ ಹೆಚ್ಚುವರಿ ಆ್ಯಂಬುಲೆನ್ಸ್‌

Team Udayavani, Oct 18, 2022, 4:57 PM IST

tdy-16

ಮಧುಗಿರಿ: ಮಧುಗಿರಿಯು ಬರಪೀಡಿತ ಹಾಗೂ ಆಂಧ್ರದ ಗಡಿ ಭಾಗದ ಹಿಂದುಳಿದ ಪ್ರದೇಶ. ಇಲ್ಲಿನ ಕೊಡಿಗೇನಹಳ್ಳಿ, ಮಿಡಿಗೇಶಿ, ಐಡಿಹಳ್ಳಿ ಹೋಬಳಿಯ ನಂಟು ಆಂಧ್ರದೊಂದಿಗೆ ಬೆಸೆದುಕೊಂಡಿದೆ. ಗಡಿ ಭಾಗದ ಜನರಿಗೆ ಆ್ಯಂಬುಲೆನ್ಸ್‌ ಇಲ್ಲದೇ ತುರ್ತು ಆರೋಗ್ಯ ಸೇವೆ ಮಾತ್ರ ಮರೀಚಿಕೆಯಾಗಿದ್ದು, ಮತ್ತೆ ಬಡ ಜೀವಗಳ ಜೊತೆ ಆರೋಗ್ಯ ಇಲಾಖೆ ಚೆಲ್ಲಾಟಕ್ಕೆ ಇಳಿದಿದೆ.

ತಾಲೂಕಿನಲ್ಲಿ ಉಂಟಾಗುವ ಎಲ್ಲ ರೀತಿಯ ಅಪಘಾತಗಳಲ್ಲಿ ಹೆಚ್ಚಾಗಿ ಗಡಿ ಭಾಗದ ಹೋಬಳಿ ಯಲ್ಲೇ ನಡೆದಿರುವುದು ಅಂಕಿ ಅಂಶಗಳಿಂದ ತಿಳಿದು ಬಂದಿದೆ. ಇದಕ್ಕಾಗಿಯೇ ಶಾಸಕ ಎಂ.ವಿ.ವೀರಭದ್ರಯ್ಯ ಹಾಗೂ ಪರಿಷತ್‌ ಸದಸ್ಯ ಚಿದಾನಂದ ಎಂ. ಗೌಡ ಅವರು ತಮ್ಮ ಅನುದಾನ ದಲ್ಲಿ ಒಂದೊಂದು ಆ್ಯಂಬುಲೆನ್ಸ್‌ ನೀಡಿದ್ದಾರೆ. ಆದರೂ, ಅಪಘಾತಗಳು ನಡೆ ದಾಗ ಗಾಯಾಳುಗಳ ನೆರವಿಗೆ ತುರ್ತು ವಾಹನಗಳ ಕೊರತೆಯಿಂದ ಇರುವ ವಾಹನಗಳು ಸಮಯಕ್ಕೆ ಸರಿಯಾಗಿ ಬಾರದೇ ಪ್ರಾಣಹಾನಿ ಸಂಭವಿಸುತ್ತಿವೆ. ಇಂತಹ ಸಮಯದಲ್ಲಿ ಕಳೆದ ತಿಂಗಳು ಹೆಚ್ಚುವರಿಯಾಗಿ ಮಧುಗಿರಿಗೆ ಮತ್ತೂಂದು ಆಂಬ್ಯುಲೆನ್ಸ್‌ ನೀಡಲು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಮಂಜುನಾಥ್‌ ತಿಳಿಸಿದ್ದು ತುರುವೇಕೆರೆಯಿಂದ ವಾಹನ ಬಂದಿದೆ. ಆದರೆ ಅದು ಇಂದಿಗೂ ಬಳಕೆಯಾಗುತ್ತಿಲ್ಲ.

ಬಳಕೆಗೆ ಅಧಿಕಾರಿಗಳ ನಿರುತ್ಸಾಹ: ಸದರಿ ತುರುವೇ ಕೆರೆಯಿಂದ ಬಂದಿರುವ ಹೆಚ್ಚುವರಿ ಆಂಬ್ಯುಲೆನ್ಸ್‌ ಬಳಕೆಯಾಗದೆ ನಿಂತಲ್ಲೇ ನಿಂತಿದ್ದು, ಪೂಜೆ ಮಾಡಿದ ಬಾಳೆ ಕಂದು ಕೂಡ ತೆಗೆದಿಲ್ಲ. ಆಸ್ಪತ್ರೆಯ ಹಿಂಭಾಗದಲ್ಲಿ ಕೆಟ್ಟು ನಿಂತಿರುವ ಸ್ಥಿತಿಯಲ್ಲಿ ಈ ತುರ್ತು ವಾಹನವಿದ್ದು, ಇದಕ್ಕೆ ಚಾಲಕನಿಲ್ಲದ ಕಾರಣ ಹೇಳಿ ಬಳಕೆ ಮಾಡುತ್ತಿಲ್ಲ. ಇಂತಹ ಸಂಪತ್ತಿಗೆ ವಾಹನವನ್ನು ಏಕೆ ತರಬೇಕಿತ್ತು? ಸಾರ್ವಜನಿಕರ ಜೀವ ಕಾಪಾಡಲು ವಾಹನವಿದ್ದರೂ ಚಾಲಕನನ್ನು ನೇಮಿಸಿಕೊಂಡು ಜನರಿಗೆ ಸೇವೆ ನೀಡದ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯಇಲ್ಲಿ ಎದ್ದು ಕಾಣುತ್ತಿದೆ.

ವೃದ್ಧೆ ಸಾವು ಬಳಿಕವೂ ಎಚ್ಚೆತ್ತುಕೊಳ್ಳದ ಅಧಿಕಾರಿಗಳು : ಕಳೆದ ತಿಂಗಳು ಐಡಿಹಳ್ಳಿಯಲ್ಲಿ ಆಂಬ್ಯುಲೆನ್ಸ್‌ ಬಾರದೆ ವೃದ್ಧೆ ಹೃದಯಾಘಾತದಿಂದ ಮೃತಪಟ್ಟಿದ್ದರು. ಇದು ರಾಜ್ಯಾದ್ಯಂತ ದೊಡ್ಡ ಸುದ್ದಿಯಾಗಿತ್ತು. ಇದಕ್ಕೆ ಜಿಲ್ಲಾಡಳಿತ ಮೃತರ ಕುಟುಂಬಕ್ಕೆ 5 ಲಕ್ಷ ಪರಿಹಾರ ನೀಡಿ ಕೈ ತೊಳೆದುಕೊಂಡಿತ್ತಲ್ಲದೆ ಆಂಬ್ಯುಲೆನ್ಸ್‌ ಕೊರತೆಯನ್ನು ಸರಿಪಡಿಸುವ ಮಾತನಾಡಿ ತುರುವೇಕೆರೆಯಿಂದ ಈ ತುರ್ತು ವಾಹನವನ್ನು ಕರೆಸಿಕೊಂಡಿತ್ತು. ಈಗ ಅದಕ್ಕೆ ಚಾಲಕನೇ ಇಲ್ಲದೆ ನಿಂತಲ್ಲೇ ನಿಂತಿದ್ದು, ಮತ್ತೆ ಬಡ ಜೀವಗಳ ಜೊತೆ ಆರೋಗ್ಯ ಇಲಾಖೆ ಚೆಲ್ಲಾಟಕ್ಕೆ ನಿಂತಿದೆ.

ವಾರದಿಂದ ಪತ್ರ ಬರೆದು ಡಿಎಚ್‌ಒಗೆ ಒತ್ತಾಯ : ತುರ್ತು ವಾಹನ ಸೇವೆಗಳು ಹಾಗೂ ಚಾಲಕನ ನೇಮಕ ಟಿಎಚ್‌ಒ ನಿಯಂತ್ರಣಕ್ಕೆ ಬರುತ್ತದೆ. ವೇತನದ ವ್ಯವಸ್ಥೆ ಮಿಡಿಗೇಶಿ ಆಸ್ಪತ್ರೆಯ ವೈದ್ಯರಿಗೆ ಬರಲಿದ್ದು ನನಗೆ ಜವಾಬ್ದಾರಿ ಹಾಕಿದ್ದಾರೆ. ಈ ಬಗ್ಗೆ ಡಿಎಚ್‌ಒ ಅವರಿಗೆ ಒಂದು ವಾರದಿಂದ ಪತ್ರ ಬರೆದು ಒತ್ತಾಯಿಸಿದ್ದೇನೆ. ಶೀಘ್ರವಾಗಿ ಚಾಲಕನ ನೇಮಕ ಮಾಡಿ ತುರ್ತು ವಾಹನಕ್ಕೆ ಚಾಲನೆ ನೀಡುತ್ತೇವೆ ಎಂದು ಮಧುಗಿರಿ ಸಾರ್ವ ಜನಿಕ ಆಸ್ಪತ್ರೆ ವೈದ್ಯಾಧಿಕಾರಿ ಡಾ.ಮಹೇಶ್‌ ಸಿಂಗ್‌ ಉದಯವಾಣಿಗೆ ತಿಳಿಸಿದರು.

ಈ ಆ್ಯಂಬುಲೆನ್ಸ್‌ನ್ನು ಮಿಡಿಗೇಶಿಗೆ ಮೀಸಲಿಟ್ಟಿದ್ದು, ಚಾಲಕನನ್ನು ನೇಮಿಸಿದೆ. ಇನ್ನೆರಡು ದಿನದಲ್ಲಿ ಚಾಲಕ ಕರ್ತವ್ಯಕ್ಕೆ ಹಾಜರಾಗಲಿದ್ದು ಮಿಡಿಗೇಶಿಯ 15 ಕಿ.ಮೀ. ವ್ಯಾಪ್ತಿಯಲ್ಲಿ 108 ರೀತಿ ಕೆಲಸ ಮಾಡಲಿದೆ. ಇದರಲ್ಲಿ ಸ್ಟಾಫ್ ನರ್ಸ್‌ ಇರುವುದಿಲ್ಲ. ರೋಗಿಯನ್ನು ಮಧುಗಿರಿ ಆಸ್ಪತ್ರೆಗೆ ಸಾಗಸುವುದಷ್ಟೇ ಇವರ ಕೆಲಸ. – ಡಾ.ಮಂಜುನಾಥ್‌, ಡಿಎಚ್‌ಒ, ತುಮಕೂರು

– ಮಧುಗಿರಿ ಸತೀಶ್‌

ಟಾಪ್ ನ್ಯೂಸ್

Patna: “ರಘುಪತಿ ರಾಘವ’ ಭಜನೆ ಹಾಡಿದ ಗಾಯಕಿ ವಿರುದ್ಧ ಪ್ರತಿಭಟನೆ: ಹಾಡುಗಾರ್ತಿ ಕ್ಷಮೆ

Patna: “ರಘುಪತಿ ರಾಘವ’ ಭಜನೆ ಹಾಡಿದ ಗಾಯಕಿ ವಿರುದ್ಧ ಪ್ರತಿಭಟನೆ: ಹಾಡುಗಾರ್ತಿ ಕ್ಷಮೆ

Canada: ಮಾನವ ಕಳ್ಳಸಾಗಣೆಯಲ್ಲಿ ಕೆನಡಾದ 260 ಕಾಲೇಜು! ವಿದ್ಯಾರ್ಥಿ ವೀಸಾ ಮೂಲಕ ಆಮಿಷ

Canada: ಮಾನವ ಕಳ್ಳಸಾಗಣೆಯಲ್ಲಿ ಕೆನಡಾದ 260 ಕಾಲೇಜು! ವಿದ್ಯಾರ್ಥಿ ವೀಸಾ ಮೂಲಕ ಆಮಿಷ

Bheema-Naik

KMF: ಸಂಕ್ರಾಂತಿ ಬಳಿಕ ಹಾಲಿನ ದರ ಪರಿಷ್ಕರಣೆ ಸರಕಾರದಿಂದ ನಿರ್ಧಾರ: ಭೀಮಾ ನಾಯ್ಕ

MM-Singh-ACC-Pm

Accidental Prime Minister: ದ ಮೇಕಿಂಗ್‌ ಆ್ಯಂಡ್‌ ಅನ್‌ಮೇಕಿಂಗ್‌ ಆಫ್ ಡಾ.ಸಿಂಗ್‌

New York:ಆಸ್ತಿ ಹಂಚಿದ ಶ್ರೀಮಂತ ಹೂಡಿಕೆದಾರ ಬಫೆಟ್‌; ಕುಟುಂಬದ 4 ಫೌಂಡೇಶನ್‌ ಆಸ್ತಿ ಹಂಚಿಕೆ

New York:ಆಸ್ತಿ ಹಂಚಿದ ಶ್ರೀಮಂತ ಹೂಡಿಕೆದಾರ ಬಫೆಟ್‌; ಕುಟುಂಬದ 4 ಫೌಂಡೇಶನ್‌ ಆಸ್ತಿ ಹಂಚಿಕೆ

MM-Singh–Bush

Tribute Dr.Singh: ಡಾ.ಸಿಂಗ್‌ ಅವಧಿಯಲ್ಲಿ ಭಾರತ-ಅಮೆರಿಕ ನಡುವೆ ಅಣ್ವಸ್ತ್ರ ಒಪ್ಪಂದ

Supreme Court: ಕ್ರೆಡಿಟ್‌ ಕಾರ್ಡ್‌ ಬಾಕಿ ಮೇಲೆ 30% ಬಡ್ಡಿಗೆ ಸುಪ್ರೀಂ ಅಸ್ತು!

Supreme Court: ಕ್ರೆಡಿಟ್‌ ಕಾರ್ಡ್‌ ಬಾಕಿ ಮೇಲೆ 30% ಬಡ್ಡಿಗೆ ಸುಪ್ರೀಂ ಅಸ್ತು!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

12-koratagere

Koratagere: ವಿದ್ಯೆಯ ಸಾಧನೆಗೆ ಸಾಧಿಸುವ ಗುರಿ ಒಂದೇ ಮುಖ್ಯ

11-koratagere

ಜಟ್ಟಿ ಅಗ್ರಹಾರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಗಂಗಾದೇವಿ ಅಧ್ಯಕ್ಷೆ

10-

Koratagere: ಮದ್ಯಪಾನದಿಂದ ಕುಟುಂಬದಲ್ಲಿ ದಿನ ಅಶಾಂತಿ ಉಂಟಾಗಿ ನೆಮ್ಮದಿ ಇಲ್ಲದಂತಾಗಿದೆ

Drone Prathap: ಕೃಷಿ ಹೊಂಡದಲ್ಲಿ ಸ್ಫೋಟ ಪ್ರಕರಣ; ಡ್ರೋನ್‌ ಪ್ರತಾಪ್‌ ಜಾಮೀನು ಮಂಜೂರು

Drone Prathap: ಕೃಷಿ ಹೊಂಡದಲ್ಲಿ ಸ್ಫೋಟ ಪ್ರಕರಣ; ಡ್ರೋನ್‌ ಪ್ರತಾಪ್‌ ಜಾಮೀನು ಮಂಜೂರು

24-pavagada

Pavagada: ವಿಷ ಸೇವಿಸಿ ಗಂಡ-ಹೆಂಡತಿ ಆತ್ಮಹತ್ಯೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Patna: “ರಘುಪತಿ ರಾಘವ’ ಭಜನೆ ಹಾಡಿದ ಗಾಯಕಿ ವಿರುದ್ಧ ಪ್ರತಿಭಟನೆ: ಹಾಡುಗಾರ್ತಿ ಕ್ಷಮೆ

Patna: “ರಘುಪತಿ ರಾಘವ’ ಭಜನೆ ಹಾಡಿದ ಗಾಯಕಿ ವಿರುದ್ಧ ಪ್ರತಿಭಟನೆ: ಹಾಡುಗಾರ್ತಿ ಕ್ಷಮೆ

Canada: ಮಾನವ ಕಳ್ಳಸಾಗಣೆಯಲ್ಲಿ ಕೆನಡಾದ 260 ಕಾಲೇಜು! ವಿದ್ಯಾರ್ಥಿ ವೀಸಾ ಮೂಲಕ ಆಮಿಷ

Canada: ಮಾನವ ಕಳ್ಳಸಾಗಣೆಯಲ್ಲಿ ಕೆನಡಾದ 260 ಕಾಲೇಜು! ವಿದ್ಯಾರ್ಥಿ ವೀಸಾ ಮೂಲಕ ಆಮಿಷ

Bheema-Naik

KMF: ಸಂಕ್ರಾಂತಿ ಬಳಿಕ ಹಾಲಿನ ದರ ಪರಿಷ್ಕರಣೆ ಸರಕಾರದಿಂದ ನಿರ್ಧಾರ: ಭೀಮಾ ನಾಯ್ಕ

MM-Singh-ACC-Pm

Accidental Prime Minister: ದ ಮೇಕಿಂಗ್‌ ಆ್ಯಂಡ್‌ ಅನ್‌ಮೇಕಿಂಗ್‌ ಆಫ್ ಡಾ.ಸಿಂಗ್‌

5

Mangaluru: ವಿಚ್ಛೇದಿತ ಮಹಿಳೆಯನ್ನು ಹಿಂಬಾಲಿಸಿದ ಇಬ್ಬರು ವಶಕ್ಕೆ;‌ ಪ್ರಕರಣ ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.