ಸ್ವಚ್ಛತೆಯೇ ಕಾಣದಿರುವ ಕೊರಟಗೆರೆ ಕ್ಷೇತ್ರದ ಆಡಳಿತ ಸೌಧ; ತಿಪ್ಪೆಯಂತಾದ ಶೌಚಾಲಯ
ಮಹಿಳಾ ಸಿಬ್ಬಂದಿಗಳ ಪರದಾಟ
Team Udayavani, Jul 9, 2022, 6:44 PM IST
ಕೊರಟಗೆರೆ: ಆಡಳಿತ ಸೌಧದ ಹೊರಗಡೆ ಸಾರ್ವಜನಿಕರಿಂದ ಶಿಸ್ತು ಪಾಲನೆ.. ಕಂದಾಯ ಕಚೇರಿಯ ಮಹಡಿಯ ಮೇಲೆ ಬಗೆದಷ್ಟು ಸಮಸ್ಯೆಗಳ ಸರಮಾಲೆ.. ತುಮಕೂರಿನ ಜಿಲ್ಲಾಧಿಕಾರಿಗಳೇ ಒಮ್ಮೆ ಭೇಟಿ ನೀಡಿ ಕೊರಟಗೆರೆಯ ಆಡಳಿತ ಸೌಧಕ್ಕೆ.. ಕೊರಟಗೆರೆಯ ಜನಸ್ನೇಹಿ ತಹಶೀಲ್ದಾರ್ ಮೇಡಂರವರೇ ಏನು ಮಾಡುತ್ತಿದ್ದೀರಿ ಸ್ವಲ್ಪ ಹೇಳಿ ಜನತೆಗೆ?
ಕೊರಟಗೆರೆ ಪಟ್ಟಣದ ಹೃದಯ ಭಾಗದಲ್ಲಿ ತಾಲೂಕು ಆಡಳಿತ ಸೌಧವಿದೆ. ಸೌಧದ ಹೊರಗಡೆ ಕಾನೂನಿನ ಪಾಠದ ಶಿಸ್ತು-ಪ್ರಕೃತಿ ಸೌಂದರ್ಯ ಸ್ವಲ್ಪ ಪರವಾಗಿಲ್ಲ.. ಆದ್ರೇ ಆಡಳಿತ ಸೌಧದ ೨ನೇ ಮತ್ತು ೩ನೇ ಮಹಡಿಯ ಪರಿಸರದ ಸೊಬಗು ಅನುಭವಿಸಲು ನಮ್ಮಿಂದಲೂ ಸಾಧ್ಯವಿಲ್ಲ.. ಯಾಕೆಂದರೆ ಸಮರ್ಪಕ ಬೆಳಕು ಮತ್ತು ಗಾಳಿ ನೀಡುವ ಕಿಟಕಿಗಳೇ ಕಾಣೆಯಾಗಿವೆ.!
ಸಾರ್ವಜನಿಕರ ವಿಕ್ಷಣೆಗೆ ಆಡಳಿತ ಸೌಧ ಹೊರಗಡೆಯಿಂದ ಎಷ್ಟು ಸುಂದರವಾಗಿ ಕಾಣುತ್ತೋ ಅದರ ಹತ್ತರಷ್ಟು ಸಮಸ್ಯೆಗಳು ಒಳಗಡೆಯೇ ಬೆಳೆದುನಿಂತಿವೆ. ದುರ್ವಾಸನೆ ಬೀರುತ್ತೀರುವ ಶೌಚಾಲಯ, ಕಸವೇ ಕುಡಿಸದ ಕಚೇರಿಯ ಕೊಠಡಿ, ಪಾರಿವಾಳದ ಗೊಬ್ಬರದ ತಿಪ್ಪೆಯ ಆವರಣ, ನೀರಿನ ಸಂಪರ್ಕವೇ ಇಲ್ಲದ ಶೌಚಾಲಯ, ಕಿಟಕಿಗಳೇ ಇಲ್ಲದ ಕಚೇರಿಯ ಕೊಠಡಿಗಳ ಸಮಸ್ಯೆಯನ್ನು ಕೇಳೋರು ಯಾರು ಎಂಬುದೇ ಯಕ್ಷಪ್ರಶ್ನೆ.
ಆಡಳಿತ ಸೌಧದ ೨ ಮತ್ತು ೩ನೇ ಮಹಡಿಯಲ್ಲಿ ಉಪತಹೀಲ್ದಾರ್ ಕಚೇರಿ, ಉಪಖಜಾನೆ ಕಾರ್ಯಲಯ, ಭೂ ದಾಖಲೆಗಳ ಸಹಾಯಕ ಕಚೇರಿ, ಕಂದಾಯ ದಾಖಲೆ ಕೊಠಡಿ, ಪೋಡಿ ಶಾಖೆ, ಕಂದಾಯ ಸಿಬ್ಬಂದಿ ಕೊಠಡಿ, ಪರ್ಯಾವೇಕ್ಷಕ ಮತ್ತು ಗಣಕ ಯಂತ್ರದ ಕೊಠಡಿ, ಸರ್ವೇ ದಾಖಲೆಗಳ ಕೊಠಡಿ, ಸರ್ವೇ ಇಲಾಖೆಯ ಕೊಠಡಿಗಳಿವೆ.
ಶೌಚಾಲಯ ಇದ್ದರೂ ಸ್ವಚ್ಚತೆಯೇ ಮಾಯವಾಗಿದೆ.. ನೀರಿದ್ದರೂ ಮಹಡಿಗೆ ಸರಬರಾಜು ಆಗೋತ್ತಿಲ್ಲ.. ಸರಕಾರಿ ಇಲಾಖೆಯ ಮಹಿಳಾ ಸಿಬ್ಬಂದಿಗಳಿಗೆ ಶೌಚಾಲಯ ಇಲ್ಲದೇ ಹೊರಗಡೆ ಹೋಗಬೇಕಾದ ಪರಿಸ್ಥಿತಿ ಇನ್ನೂ ಹೊರಗಡೆಯಿಂದ ಕಚೇರಿಗೆ ಬರುವ ಸಾರ್ವಜನಿಕರಿಗೆ ಇನ್ನೂ ಶೌಚಾಲಯ ಸೀಗುತ್ತಾ ಎಂಬುದೇ ಯಕ್ಷಪ್ರಶ್ನೆಯಾಗಿದೆ.
ಆಡಳಿತ ಸೌಧದ 3 ನೇ ಮಹಡಿಯಲ್ಲಿ ಪಾರಿವಾಳ ಗೂಡು ಕಟ್ಟಿದೆ. ಪಾರಿವಾಳದ ಗೊಬ್ಬರದಿಂದ ಕಚೇರಿಯ ಆವರಣವು ತಿಪ್ಪೆಯಂತಾಗಿದೆ. ಸರ್ವೇ ಇಲಾಖೆಯ ಕೊಠಡಿಗಳಲ್ಲಿ ಕಸ ಗುಡಿಸಿ ವರ್ಷಗಳೇ ಕಳೆದಿವೆ. 3 ನೇ ಮಹಡಿಯ ಮೇಲ್ಚಾವಣಿಯು ಸೋರುತ್ತಿದ್ದು ಈಗಾಗಲೇ ಅದರ ಮೇಳೆ ಸಣ್ಣಪುಟ್ಟ ಗಿಡಗಳು ಸಹ ಬೆಳೆದುನಿಂತಿವೆ.
ನೇಟ್‌ವರ್ಕ್ ಕೊಠಡಿಯ ಸಮಸ್ಯೆ..
ನ್ಯಾಯಾಲಯ, ಸಾರ್ವಜನಿಕ ಆಸ್ಪತ್ರೆ, ಆಹಾರ ಇಲಾಖೆ, ಅರಣ್ಯ ಇಲಾಖೆ, ಸಬ್ ರಿಜೀಸ್ಟರ್ ಕಚೇರಿ, ತಾಪಂ, ತೋಟಗಾರಿಕೆ ಇಲಾಖೆ, ಕೃಷಿ ಇಲಾಖೆ, ನಾಡಕಚೇರಿ ಕೇಂದ್ರಕ್ಕೆ ಸಂಪರ್ಕ ಕಲ್ಪಿಸುವ ಕರ್ನಾಟಕ ರಾಜ್ಯ ವ್ಯಾಪಕ ಪ್ರದೇಶ ಜಾಲದ (ಕೆಎಸ್‌ಡ್ಲೂಎಎನ್) ಕೊಠಡಿಯ ಕಿಟಕಿಗಳ ಗಾಜುಗಳು ಒಡೆ ದಿರುವ ಪರಿಣಾಮ ಮಳೆಯ ನೀರು ಒಳಗಡೆ ಶೇಖರಣೆಯಾಗಿ ನೇಟ್‌ವರ್ಕ್ ಪ್ರಸರಣಕ್ಕೂ ಸಮಸ್ಯೆ ಆಗಲಿದೆ.
ಕಚೇರಿ ಆವರಣದಲ್ಲೇ ಸರ್ವೇ ಇಲಾಖೆ..
ಸರ್ವೇ ಇಲಾಖೆಗೆ ಪ್ರತ್ಯೇಕ ಕೊಠಡಿಯ ವ್ಯವಸ್ಥೆಯನ್ನೇ ಇಲ್ಲಿಯವರೇಗೆ ಕೊರಟಗೆರೆ ಆಡಳಿತ ಕಲ್ಪಿಸಿಲ್ಲ. ೨೦ಜನ ಸರಕಾರಿ ಸರ್ವೇ ಸಿಬಂದಿಗಳಿಗೆ ಜಾಗದ ಕೊರತೆಯು ಇದೆ. ಕಚೇರಿಯ ಮುಖ್ಯ ಅಧಿಕಾರಿಯೇ ಆವರಣದಲ್ಲಿ ಗೂಡು ಕಟ್ಟಿಕೊಂಡು ಕಾರ್ಯ ನಿರ್ವಹಣೆ ಮಾಡುತ್ತೀದ್ದಾರೆ. ಅಧಿಕಾರಿಗಳಿಗೆ ಸೌಲಭ್ಯ ಕಲ್ಪಿಸದಿರುವ ಕೊರಟಗೆರೆ ಆಡಳಿತ ಇನ್ನೂ ಸಾರ್ವಜನಿಕರಿಗೆ ಹೇಗೆ ಸೌಲಭ್ಯ ಕಲ್ಪಿಸುತ್ತಾರೇ ಎಂಬುದೇ ಪ್ರಶ್ನೆಯಾಗಿದೆ.
ಸರ್ವೇ ದಾಖಲೆಯ ಪುಸ್ತಕ ಶೇಖರಣೆ ಮಾಡಲು ಸ್ಥಳಾವಕಾಶದ ಕೊರತೆ ಇದೆ. ಶೌಚಾಲಯ ಇದ್ದರೂ ಸ್ವಚ್ಚತೆಯು ಇಲ್ಲ ಸಮರ್ಪಕ ನೀರು ಸರಬರಾಜು ಆಗೂತ್ತೀಲ್ಲ. ಮಹಿಳೆಯರು ಶೌಚಾಲಯಕ್ಕೆ ಹೊರಗಡೆ ತೆರಳಬೇಕಾದ ಪರಿಸ್ಥಿತಿ ಇದೆ. ದಯವಿಟ್ಟು ಮಹಿಳಾ ಸಿಬ್ಬಂದಿಗೆ ಶೌಚಾಲಯ ಮತ್ತು ನೀರಿಗೆ ಅನುಕೂಲ ಕಲ್ಪಿಸಬೇಕಿದೆ.
ಲಕ್ಷ್ಮೀ, ಸಿಬ್ಬಂದಿ, ಸರ್ವೇ ಇಲಾಖೆ
ಸ್ಥಳಾವಕಾಶ ಕೊರತೆಯಿಂದ ಕೊಠಡಿ ಆವರಣದಲ್ಲೇ ಸರ್ವೇ ಇಲಾಖೆ ಕಚೇರಿ ಮಾಡಿ ಕೊಂಡಿದ್ದೇವೆ. ಶೌಚಾಲಯಗಳಿಗೆ ಖಜಾನೆ ಅಧಿಕಾರಿವರ್ಗ ಬೀಗ ಹಾಕಿರುವ ಪರಿಣಾಮ ಸಮಸ್ಯೆ ಆಗಿದೆ. ಇಕ್ಕಟ್ಟಿನ ಪ್ರದೇಶದಲ್ಲಿ ೨೦ಜನ ಕೆಲಸ ಮಾಡಬೇಕಾದ ಅನಿವಾರ್ಯತೆ ಇದೆ. ಶೌಚಾಲಯ ಇಲ್ಲದೇ ಮಹಿಳಾ ಸಿಬ್ಬಂದಿಗಳಿಗೆ ತೀರ್ವತರದ ಸಮಸ್ಯೆ ಎದುರಾಗಿದೆ.
ರುದ್ರೇಶ್. ಎಡಿಎಲ್‌ಆರ್. ಸರ್ವೇ ಇಲಾಖೆ,
ಮಹಿಳಾ ಸಿಬ್ಬಂದಿಗೆ ಶೌಚಾಲಯದ ಕೊರತೆಯ ಬಗ್ಗೆ ತಕ್ಷಣ ಪರಿಶೀಲನೆ ನಡೆಸುತ್ತೇನೆ. ಶೌಚಾಲಯದ ಸ್ವಚ್ಚತೆ ಮತ್ತು ಕುಡಿಯುವ ನೀರಿನ ವ್ಯವಸ್ಥೆಗೆ ತಕ್ಷಣ ತಹಶೀಲ್ದಾರ್‌ಗೆ ಸೂಚಿಸುತ್ತೇನೆ. ಕೊಠಡಿಗಳ ಕಿಟಕಿಯ ಗಾಜುಗಳ ರಿಪೇರಿಯ ಬಗ್ಗೆ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುತ್ತೇನೆ.
ಸೋಮಪ್ಪ ಕಡಕೋಳ. ಎಸಿ. ಮಧುಗಿರಿ
ಸಿದ್ದರಾಜು ಕೊರಟಗೆರೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pavagada: ವಿಷ ಸೇವಿಸಿ ಗಂಡ-ಹೆಂಡತಿ ಆತ್ಮಹತ್ಯೆ
Tumkur: ನೀರಾವರಿ ವಿದ್ಯುತ್ ಬಿಲ್ ಪಾವತಿ ಮಾಡುವಂತೆ ಸಿದ್ದಗಂಗಾ ಮಠಕ್ಕೆ ಪತ್ರ
Drone Prathap: ನೀರಿಗೆ ಸ್ಫೋಟಕ ಎಸೆದ ಪ್ರಕರಣ; ಪ್ರತಾಪ್‌ಗೆ 10 ದಿನ ನ್ಯಾಯಾಂಗ ಬಂಧನ
Huliyar; ಕೆಮ್ಮಿನ ಔಷಧವೆಂದು ಭಾವಿಸಿ ಕೀಟನಾಶಕ ಸೇವಿಸಿದ ರೈತ ಸಾ*ವು
ಕೃಷಿ ಹೊಂಡದಲ್ಲಿ ಅದೇನೋ ಮಾಡಲು ಹೋಗಿ ಅರೆಸ್ಟ್ ಅದ ಬಿಗ್ ಬಾಸ್ ಖ್ಯಾತಿಯ ಡ್ರೋನ್ ಪ್ರತಾಪ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.