ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಿ ಸೌಲಭ್ಯ ಪಡೆಯಿರಿ
ವಿಶೇಷ ದಾಖಲಾತಿ ಆಂದೋಲನ ಜಾಥಾ ಕಾರ್ಯಕ್ರಮಕ್ಕೆ ಕ್ಷೇತ್ರ ಶಿಕ್ಷಣಾಧಿಕಾರಿ ಗಂಗಾಧರ್ ಚಾಲನೆ
Team Udayavani, May 23, 2019, 1:00 PM IST
ಕೊರಟಗೆರೆ ಪಟ್ಟಣದಲ್ಲಿ ಸರ್ಕಾರಿ ಶಾಲೆಗೆ ಮಕ್ಕಳನ್ನು ಸೇರಿಸಲು ವಿಶೇಷ ದಾಖಲಾತಿ ಆಂದೋಲನಾ ಜಾಥಾ ಕಾರ್ಯಕ್ರಮ ನಡೆಯಿತು.
ಕೊರಟಗೆರೆ: ಸರ್ಕಾರಿ ಶಾಲೆಗೆ ಮಕ್ಕಳನ್ನು ಸೇರಿಸಿ, ಶೈಕ್ಷಣಿಕ ಅಭಿವೃದ್ಧಿಗೆ ಸರ್ಕಾರ ನೀಡುವ ಸೌಲಭ್ಯ ಗಳನ್ನು ಪಡೆದುಕೊಳ್ಳಬೇಕು ಎಂದು ಕ್ಷೇತ್ರ ಶಿಕ್ಷಣಾ ಧಿಕಾರಿ ಗಂಗಾಧರ್ ಪೋಷಕರಲ್ಲಿ ಮನವಿ ಮಾಡಿದರು. ಪಟ್ಟಣದ ಸರ್ಕಾರಿ ಬಾಲಕಿಯರ ಹಿರಿಯ ಪ್ರಾಥಮಿಕ ಶಾಲೆ, ಸರ್ಕಾರಿ ಕೋಟೆ ಶಾಲೆ, ಸರ್ಕಾರಿ ಗೌರಿನಿಲಯ ಶಾಲೆ ಹಾಗೂ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಗಳಲ್ಲಿ 2019-20ನೇ ಸಾಲಿನ ವಿಶೇಷ ದಾಖಲಾತಿ ಆಂದೋಲನ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಅವರು ಮಾತನಾಡಿ, ಸರ್ಕಾರ ಸರ್ಕಾರಿ ಶಾಲೆಗಳ ಅಭಿ ವೃದ್ಧಿಗೆ ನೂತನ ವಿವಿಧ ಯೋಜನೆಗಳನ್ನು ಜಾರಿಗೆ ತಂದಿದೆ. ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡುತ್ತಿದೆ. ಈ ಸೌಲಭ್ಯಗಳನ್ನು ಸರಿಯಾಗಿ ಮಕ್ಕಳಿಗೆ ಕಲ್ಪಿಸಿ ಸರ್ಕಾರಿ ಶಾಲೆಗೆ ಮಕ್ಕಳನ್ನು ಸೇರಿ ಸಲು ಶಿಕ್ಷಕರ ಮತ್ತು ಶಾಲಾ ಎಸ್‌ಡಿಎಂಸಿ ಸಮಿತಿ ಸದಸ್ಯರ ಪ್ರಯತ್ನ ಅತ್ಯಂತ ಮುಖ್ಯವಾಗಿದೆ. ಶಿಕ್ಷಕರು ಪೋಷಕರಿಗೆ ಸರ್ಕಾರದ ಸವಲತ್ತಗಳ ಬಗ್ಗೆ ಅರಿವು ಮೂಡಿಸ ಬೇಕು. ಶಾಲೆಗ ಸೇರಿಸಿ ಗುಣಮಟ್ಟದ ಶಿಕ್ಷಣ ನೀಡಿ ಸಮಾಜದಲ್ಲಿ ಉತ್ತಮ ಪ್ರಜೆಗಳನ್ನಾಗಿ ಅವರ ಭವಿಷ್ಯವನ್ನು ರೂಪಿಸಲು ಶಿಕ್ಷಕರು ಸಹಕರಿಸಬೇಕು ಎಂದರು.
ಪೋಷಕರಲ್ಲಿ ಅರಿವು ಮೂಡಿಸಲು ಮನೆ-ಮನೆಗೆ ಭೇಟಿ: ಕ್ಷೇತ್ರ ಸಂಪನ್ಮೂಲ ಅಧಿಕಾರಿ ಸುರೇಂದ್ರ ನಾಥ್ ಮಾತನಾಡಿ, ತಾಲೂಕಿನಲ್ಲಿ ಕಳೆದ ಶೈಕ್ಷಣಿಕ ವರ್ಷದಲ್ಲಿ 34 ಮಂದಿ ವಿದ್ಯಾರ್ಥಿಗಳು ಶಾಲೆ ಯಿಂದ ಹೊರಗುಳಿದಿದ್ದು, ಪ್ರಸಕ್ತ 2019-20ನೇ ಸಾಲಿನ ಶೈಕ್ಷಣಿಕ ವರ್ಷದ ಪ್ರಾರಂಭದ ಮೇ 29ರವರೆಗೂ ವಿಶೇಷ ದಾಖಲಾತಿ ಆಂದೋಲನದಲ್ಲಿ ಶಾಲೆಯಿಂದ ಹೊರಗಳಿದ ಮಕ್ಕಳನ್ನು ಶಾಲೆಗೆ ಸೇರ್ಪಡೆ ಮಾಡಿಕೊಳ್ಳಲಾಗುವುದು. ಜೂ.1ರಿಂದ 30ರವರೆಗೂ ಇಲಾಖೆ ಅಧಿಕಾರಿಗಳು ಹಾಗೂ ಶಿಕ್ಷಕರು ಮನೆ-ಮನೆಗೂ ಭೇಟಿ ನೀಡಿ ಪೋಷಕರಲ್ಲಿ ಅರಿವು ಮೂಡಿಸಿ, ಮಕ್ಕಳನ್ನು ಸರ್ಕಾರಿ ಶಾಲೆಗೆ ದಾಖಲಿಸುವಂತೆ ಅರಿವು ಮೂಡಿಸುವ ಮೂಲಕ ದಾಖಲಾಗಿ ಹೆಚ್ಚಿಸಲಾಗುವುದು ಎಂದರು.
ಅಂದೋಲನ ಜಾಥಾ ಕಾರ್ಯಕ್ರವನ್ನು ಪಟ್ಟಣದ ಪ್ರಮುಖ ರಸ್ತೆ ಸೇರಿದಂತೆ ಪಟ್ಟಣದ ಎಲ್ಲಾ ವಾರ್ಡ್‌ಗಳಲ್ಲಿ ಮಕ್ಕಳೊಂದಿಗೆ ಸಂಚರಿಸಿ ಸೇರಿಸಿ ಸೇರಿಸಿ ಸರ್ಕಾರಿ ಶಾಲೆಗೆ ಮಕ್ಕಳನ್ನು ಸೇರಿಸಿ, ಕಳುಹಿಸಿ ಕಳುಹಿಸಿ ಸರ್ಕಾರಿ ಶಾಲೆಗೆ ಕಳುಹಿಸಿ ಎಂಬ ಘೋಷಣೆ ಮೂಲಕ ಪೋಷಕರಿಗೆ ಮನವರಿಕೆ ಮಾಡಿದರು. ಈ ವೇಳೆ ಅಕ್ಷರ ದಾಸೋಹ ಸಹಾ ಯಕ ನಿರ್ದೇಶಕ ರಘು, ಶಿಕ್ಷಣ ಇಲಾಖೆಯ ಅಧಿ ಕಾರಿ ಗಳಾದ ಕೋಟೆಕಲ್ಲಪ್ಪ, ಗೋವಿಂದಪ್ಪ, ಮುಖ್ಯ ಶಿಕ್ಷಕರಾದ ಅಪ್ಪಾಜಿರಾವ್, ಕೆಂಪರಾಮಯ್ಯ, ಮಹದೇವ್, ಗಂಗಮ್ಮ, ಶಾಲಾ ಮಕ್ಕಳು ಭಾಗವಹಿಸಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.