ಯೋಗಮಾದವಪುರದಲಿ ವಯಸ್ಕರ ಸಂಡೆ ಸ್ಕೂಲ್ ಆರಂಭ
Team Udayavani, Mar 31, 2021, 4:03 PM IST
ಹುಳಿಯಾರು: ತಿಪಟೂರು ಜಯಕರ್ನಾಟಕ ಜನಪರ ವೇದಿಕೆಯ ನಗರಕಾರ್ಯದರ್ಶಿ ಲೋಕೇಶ್ ನೇತೃತ್ವದಲ್ಲಿಅನಕ್ಷರಸ್ಥ ಹಿರಿಯ ನಾಗರಿಕರಿಗೆ ಅಕ್ಷರಜ್ಞಾನವನ್ನು ನೀಡುವ ವಯಸ್ಕರ ಸಂಡೆಸ್ಕೂಲ್ ಎಂಬ ವಿನೂತನಕಾರ್ಯಕ್ರಮವನ್ನು ಗ್ರಾಮ ಘಟಕದಸಹಕಾರದೊಂದಿಗೆ ಚಿಕ್ಕನಾಯಕನಹಳ್ಳಿತಾಲೂಕಿನ ಯೋಗಮಾದವಪುರಗ್ರಾಮದಲ್ಲಿ ಪ್ರಾರಂಭಿಸಲಾಯಿತು.
ಕಾರ್ಯಕ್ರಮದಲ್ಲಿ ನೌಕರ ಘಟಕದಡಾ. ಮೋಹನ್ ಮಾತನಾಡಿ, ವಿದ್ಯಾಬ್ಯಾಸ ಎಲ್ಲರ ಹಕ್ಕು. ಪ್ರತಿಯೊಬ್ಬರೂವಿದ್ಯಾಬ್ಯಾಸದಿಂದ ವಂಚಿತರಾಗ ಬಾರದುಎಂಬ ಉದ್ದೇಶದಿಂದ ಸರ್ಕಾ ರವುಉಚಿತವಾಗಿ ಹಲವು ಕಾರ್ಯಕ್ರಮಹಮ್ಮಿಕೊಂಡು ಬರುತ್ತಿದೆ. ಅಕ್ಷರಜ್ಞಾನದಿಂದ ಸರ್ಕಾರದ ನೀತಿ-ನಿಯಮ,ಸರ್ಕಾರದ ಸವಲತ್ತು ಸೇರಿದಂತೆ ಅನೇಕಅನುಕೂಲತೆ ಪಡೆಯಲು ಸಾಧ್ಯ.
ಅದರಜೊತೆಗೆ ಇನ್ನೊಬ್ಬರನ್ನು ಅವಲಂ ಬಿಸಬೇಕಾದ ಅನಿವಾರ್ಯತೆಯೂ ಇರುವುದಿಲ್ಲ. ಇಂದಿನ ಮಕ್ಕಳಿಗೆ ಅಕ್ಷರಾಬ್ಯಾಸದಸವಲತ್ತು ಸಿಗುತ್ತವೆ. ಆದರೆ, ವೃದ್ಧರುವಿದ್ಯಾಬ್ಯಾಸದಿಂದ ವಂಚಿತರಾಗಿದ್ದಾರೆ.ಅವರಿಗಿನ್ನೂ ಸರ್ಕಾರದ ಅನೇಕಸವಲತ್ತುಗಳ ಬಗ್ಗೆ ಅರಿವಿಲ್ಲ.
ಇದ್ದರೂಅದನ್ನು ಹೇಗೆ ಪಡೆಯಬೇಕೆಂಬತಿಳುವಳಿಕೆಯಿಲ್ಲ ಎಂದರು.ಇದೆಲ್ಲದಕ್ಕೂ ಪರಿಹಾರವೆಂಬಂತೆಜಯಕರ್ನಾಟಕ ಜನಪರ ವೇದಿಕೆಯುಪ್ರಾರಂಭಿಸಿರುವ ವಯಸ್ಕರ ಸಂಡೆಸ್ಕೂಲ್ ಗ್ರಾಮಗಳಲ್ಲಿರುವ ಅನಕ್ಷರಸ್ಥರಿಗೆಓದು-ಬರಹವನ್ನು ಕಲ್ಪಿಸುವುದರಲ್ಲಿಯಾವುದೇ ಅನುಮಾನವಿಲ್ಲ. ಇದೊಂದು ವಿಶಿಷ್ಠ ರೀತಿಯ ಪ್ರಯತ್ನವಾಗಿದ್ದು,ಅನಕ್ಷರಸ್ಥರೆಲ್ಲರೂ ಇದರ ಪ್ರಯೋಜನವನ್ನು ಪಡೆದುಕೊಂಡು ತಮ್ಮಜಮೀನು ಹಾಗೂ ಇತರ ಕಡತಗಳನ್ನುಓದಿಕೊಂಡು ಸಹಿ ಮಾಡುವಂತಹಸ್ಥಿತಿಗೆ ತಲುಪಿದರೆ ಈ ಕಾರ್ಯಕ್ರಮದಉದ್ದೇಶ ಈಡೇರುತ್ತದೆ ಎಂದರು.ಸದುಪಯೋಗ ಪಡೆದುಕೊಳ್ಳಿ:ಜಯಕರ್ನಾಟಕ ಜನಪರ ವೇದಿಕೆಯತಿಪಟೂರು ಘಟಕದ ಅಧ್ಯಕ್ಷಬಿ.ಟಿ.ಕುಮಾರ್ ಮಾತನಾಡಿ, ಇಂದಿಗೂಗ್ರಾಮೀಣ ಭಾಗದಲ್ಲಿ ಓದು-ಬರಹಬರದಿರುವಂತಹ ಅನಕ್ಷರಸ್ಥರಿದ್ದಾರೆ.
ಅನೇಕ ಕಾರಣಗಳಿಂದ ಶಿಕ್ಷಣದಿಂದವಂಚಿತರಾಗಿದ್ದಾರೆ. ಇದರಿಂದ ಅನೇಕಸಂದರ್ಭಗಳಲ್ಲಿ ಅನೇಕ ತೊಂದರೆಗಳನ್ನುಅನುಭವಿಸಿದ್ದಾರೆ. ಎಲ್ಲರೂ ಅಕ್ಷರವನ್ನುಅಭ್ಯಾಸದ ಮೂಲಕ ಕಲಿತು ಓದು-ಬರಹವನ್ನು ಕಲಿಯುವುದು ಈ ಸಂಘಟನೆ ಮುಖ್ಯ ಉದ್ದೇಶ. ಯಾವುದೇಅಪೇಕ್ಷೆಯಿಲ್ಲದೆ ಈ ಕಾರ್ಯಕ್ರಮಜಾರಿಗೆ ತಂದಿದ್ದು, ಇದರ ಸದುಪಯೋಗ ಪಡೆದುಕೊಳ್ಳಿ ಎಂದರು.ಜಯಕರ್ನಾಟಕ ಜನಪರ ವೇದಿಕೆನಗರ ಕಾರ್ಯದರ್ಶಿ ಲೋಕೇಶ್ ಮಾತನಾಡಿ, ವಯಸ್ಕ ಹಾಗೂ ಹಿರಿಯ ನಾಗರಿಕರು ಈ ವಯಸ್ಕರ ಸಂಡೆ ಸ್ಕೂಲ್‌ನಿಂದಅಕ್ಷರಾಭ್ಯಾಸ ಮಾಡಿ ಯಾವುದೇ ಕಾಗದಪತ್ರದಲ್ಲಿರುವುದನ್ನು ಇತರರ ಸಹಾಯವಿಲ್ಲದೆ ಓದಿ ಅರ್ಥೈಸಿಕೊಂಡು ತಮ್ಮಅಭಿಪ್ರಾಯವನ್ನು ವ್ಯಕ್ತಪಡಿಸುವ ಮಟ್ಟಕ್ಕೆತಲುಪಿದಲ್ಲಿ ಈ ವಿನೂತನ ಕಾರ್ಯಕ್ರಮದಉದ್ದೇಶ ಈಡೇರಿದಂತೆ ಎಂದರು. ಶಿಕ್ಷಕಿಶಾಲಿನಿ ಸೇರಿದಂತೆ ವಯಸ್ಕ ವಿದ್ಯಾರ್ಥಿಗಳಾದ ಯಶೋ ದಮ್ಮ, ಮಂಜುಳಮ್ಮ,ಮಹಾದೇವಮ್ಮ, ಹೊನ್ನಮ್ಮ, ಯಶೋದಮ್ಮ,ಬೇಬಿ ಕರಿಯಮ್ಮ, ನಾಗಮ್ಮ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pavagada: ವಿಷ ಸೇವಿಸಿ ಗಂಡ-ಹೆಂಡತಿ ಆತ್ಮಹತ್ಯೆ
Tumkur: ನೀರಾವರಿ ವಿದ್ಯುತ್ ಬಿಲ್ ಪಾವತಿ ಮಾಡುವಂತೆ ಸಿದ್ದಗಂಗಾ ಮಠಕ್ಕೆ ಪತ್ರ
Drone Prathap: ನೀರಿಗೆ ಸ್ಫೋಟಕ ಎಸೆದ ಪ್ರಕರಣ; ಪ್ರತಾಪ್‌ಗೆ 10 ದಿನ ನ್ಯಾಯಾಂಗ ಬಂಧನ
Huliyar; ಕೆಮ್ಮಿನ ಔಷಧವೆಂದು ಭಾವಿಸಿ ಕೀಟನಾಶಕ ಸೇವಿಸಿದ ರೈತ ಸಾ*ವು
ಕೃಷಿ ಹೊಂಡದಲ್ಲಿ ಅದೇನೋ ಮಾಡಲು ಹೋಗಿ ಅರೆಸ್ಟ್ ಅದ ಬಿಗ್ ಬಾಸ್ ಖ್ಯಾತಿಯ ಡ್ರೋನ್ ಪ್ರತಾಪ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.