ಬತ್ತಿದ್ದ ಬಾವಿಯಲ್ಲಿ ಭೂಕಂಪ ನಂತರ 4 ಅಡಿ ನೀರು ಬಂತು!
Team Udayavani, Apr 6, 2017, 3:45 AM IST
ಹುಳಿಯಾರು: ಸಮೀಪದ ಎಚ್.ಮೇಲನಹಳ್ಳಿ ಗ್ರಾಮದಲ್ಲಿರುವ ಬಾವಿಯಲ್ಲಿ ಇದ್ದಕ್ಕಿದ್ದಂತೆ ನೀರು ಉಕ್ಕಿದ್ದು, ಗ್ರಾಮಸ್ಥರು ಅಚ್ಚರಿಗೊಂಡಿದ್ದಾರೆ. ನೀರು ಉಕ್ಕಲು ಭೂಕಂಪ ಕಾರಣ ಎನ್ನಲಾಗುತ್ತಿದೆ. ಹುಳಿಯಾರು ಹೋಬಳಿಯಾದ್ಯಂತ ಈಚೆಗೆ ಆಗಿದ್ದ ಲಘು ಭೂಕಂಪನದಿಂದ ಪಾಳು ಬಾವಿಯಲ್ಲಿರುವ ಒರತೆಯಲ್ಲಿ ನೀರು ಜಿನುಗಿದೆ ಎಂದು ಗ್ರಾಮಸ್ಥರು ಅಭಿಪ್ರಾಯಪಟ್ಟಿದ್ದಾರೆ.
ಭಾನುವಾರ ಭೂಕಂಪ ಸಂಭವಿಸಿದ್ದು ಸೋಮವಾರದಿಂದ ಇದ್ದಕ್ಕಿದ್ದಂತೆ ಮೇಲನಹಳ್ಳಿ ಬಾವಿಯಲ್ಲಿ ನೀರು ಜಿನುಗಲಾರಂಭಿಸಿದೆ. ನಂತರ ನೀರಿನ ಸೆಲೆ ಹೆಚ್ಚಾಗಿ ಈಗ ಬರೋಬ್ಬರಿ 4 ಅಡಿ ನೀರು ಕಾಣಿಸಿಕೊಂಡಿದೆ. ಇದರಿಂದ ಹರ್ಷಗೊಂಡಿರುವ ಗ್ರಾಮದ ಕನ್ನಡ ಸಂಘದವರು ಪಾಳು ಬಾವಿಯಲ್ಲಿ ಬಿದ್ದಿದ್ದ ಕಸಕಡ್ಡಿಗಳನ್ನು ಸ್ವತ್ಛಗೊಳಿಸಿದ್ದಾರೆ.
ಊರಿನ ಮಜ್ಜನಬಾವಿ ಎಂದು ಕರೆಯಲಾಗುವ ಈ ಬಾವಿ 2 ವರ್ಷಗಳ ಹಿಂದೆಯೇ ಬತ್ತಿಹೋಗಿತ್ತು. ಬಾವಿಯಲ್ಲಿ ನೀರು ಇರುವವರೆಗೂ ಇಡೀ ಗ್ರಾಮಕ್ಕೆ ಆಸರೆಯಾಗಿತ್ತು. ಅಲ್ಲದೆ ಇಲ್ಲಿನ ಆಂಜನೇಯಸ್ವಾಮಿ ಹಾಗೂ ಕಪ್ಪ ಗೆರೆಯಮ್ಮ ದೇವರ ಧಾರ್ಮಿಕ ಕಾರ್ಯಗಳಿಗೆ ಈ ಬಾವಿಯ ನೀರನ್ನೇ ಬಳಸಲಾಗುತ್ತಿತ್ತು. ಹೆಣ್ಣುಮಕ್ಕಳು ಗಂಗಮ್ಮ ಸಂಪ್ರದಾಯಕ್ಕೂ ಇದೇ ಬಾವಿ ಅವಲಂಬಿಸಿದ್ದರು.
ಭೂಕಂಪನದಿಂದ ಭೂಮಿಯಲ್ಲಿರುವ ಕಲ್ಲಿನ ಪದರಗಳು ಚಲಿಸುತ್ತವೆ. ಯಾವುದೋ ಒಂದು ಪದರದಲ್ಲಿ ಶೇಖರಣೆಯಾಗಿದ್ದ ನೀರು ನಿಧಾನವಾಗಿ ಹರಿಯುತ್ತದೆ. ಅದೇ ಮಾರ್ಗದಲ್ಲಿ ಭಾವಿಗಳು ಇನ್ನಿತರ ಜಲಮೂಲಗಳು ಇದ್ದರೆ ಅಲ್ಲಿ ಶೇಖರಣೆಯಾಗುತ್ತದೆ. ಕೆಲವು ಸಲ ಭೂಮಿಯ ಲಘು ಕಂಪನದಿಂದ ಅನುಕೂಲವಾಗುವ ಸಾಧ್ಯತೆ ಇರುತ್ತದೆ ಎಂದು ಜಿಲ್ಲಾ ವಿಜಾnನ ಕೇಂದ್ರದ ಅಧ್ಯಕ್ಷ ರಾಮಕೃಷ್ಣಪ್ಪ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Woqf ವಿರುದ್ದ ಮಠಾಧೀಶರು,ಯತ್ನಾಳ್ ತಂಡದಿಂದ ಮತ್ತೊಂದು ಹಂತದ ಹೋರಾಟ
Belagavi; ಕಿತ್ತೂರು ರಾಣಿ ಚನ್ನಮ್ಮ ಕಿರು ಮೃಗಾಲಯದಲ್ಲಿದ್ದ ಹುಲಿ ಶೌರ್ಯ ಇನ್ನಿಲ್ಲ
Channapatna bypoll; ಗೆಲುವಿಗೆ ಬಿಜೆಪಿ-ಜೆಡಿಎಸ್ ನವರೂ ಸಹಕರಿಸಿದ್ದಾರೆ: ಡಿ.ಕೆ.ಶಿವಕುಮಾರ್
Vijayapura: ಜಿಲ್ಲಾಸ್ಪತ್ರೆಯಲ್ಲಿ ಒಂದು ವರ್ಷದ ಮಗು ಅಪಹರಣ: ಸಿಸಿಟಿವಿಯಲ್ಲಿ ದೃಶ್ಯ
Lakkundi: ಹೊಸದಾಗಿ 5 ಬಾವಿ, 5 ಶಾಸನಗಳು, ಸಾವಿರಕ್ಕೂ ಹೆಚ್ಚು ಶಿಲ್ಪಕಲೆಗಳ ಅನ್ವೇಷಣೆ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.