ಕನ್ನಡ ಸಂಘಟನೆಗೆ ಸಾಹಿತ್ಯಾಸಕ್ತಿ ಮೂಡಿಸುವ ಗುರಿ
Team Udayavani, Apr 21, 2021, 5:54 PM IST
ಮಧುಗಿರಿ: ಮಧುಗಿರಿಯಲ್ಲಿ ಮತ ಬೇಡುವಾಗನಿಜವಾಗಿ ತವರುಮನೆಯ ವಾತಾವರಣವನ್ನುಇಲ್ಲಿನ ಸದಸ್ಯರು ನೀಡಿದ್ದು, ಮನ ತುಂಬಿಬಂದಿದೆ ಎಂದು ಕಸಾಪ ಜಿಲ್ಲಾಧ್ಯಕ್ಷ ಸ್ಥಾನದಅಭ್ಯರ್ಥಿ ಬಿ.ಸಿ. ಶೈಲಾ ತಿಳಿಸಿದರು.
ಪಟ್ಟಣದಲ್ಲಿ ಮತಯಾಚಿಸಿದ ಬಳಿಕಪ್ರವಾಸಿಮಂದಿರದಲ್ಲಿ ಸುದ್ದಿಗಾರರೊಂದಿಗೆಮಾತನಾಡಿದ ಅವರು, ಇಲ್ಲಿಯವರೆಗೂ ಕನ್ನಡಭಾಷೆ- ಮಹಿಳಾ ಹೋರಾಟ, ರೈತ ಹೋರಾಟದಲ್ಲಿದ್ದು, ದಲಿತ ಹಾಗೂ ಅಲ್ಪಸಂಖ್ಯಾತರ ಪರವಾಗಿ ಯೂ ಅನೇಕ ಹೋರಾಟದಲ್ಲಿ ಭಾಗಿಯಾಗಿದ್ದೇನೆ. ಗಡಿಭಾಗದಲ್ಲಿ ಕನ್ನಡ ಬೆಳೆಸುವಹಾಗೂ ಕನ್ನಡೇತರರಿಗೆ ಕನ್ನಡ ಕಲಿಸುವ ಹಾಗೂಕನ್ನಡ ಸಂಘಟನೆಗಳಿಗೆ ಸಾಹಿತ್ಯಾಸಕ್ತಿಮೂಡಿಸುವುದು ನಮ್ಮ ಉದ್ದೇಶ.
ಜಿಲ್ಲಾದ್ಯಂತಸಾಹಿತ್ಯ ಹಾಗೂ ಕಲಾವಿದರನ್ನು ಗುರುತಿಸುವಕೆಲಸ ಮಾಡಲಿದ್ದೇನೆ. ವಿಕೇಂದ್ರಿಕೃತವಾಗಿ ಸಾಹಿತ್ಯಪರಿಷತ್ತನ್ನು ಕಟ್ಟಿ ಬೆಳೆಸುವ ಮನಸ್ಸಿದ್ದು,ಉದಯೋನ್ಮುಖ ಬರಹಗಾರರಿಗೆ ಮತ್ತು ಕನ್ನಡಸಂಶೋಧನಾ ಗ್ರಂಥಗಳನ್ನು ರಚಿಸುವವರಿಗೆಭಾಷೆ ಮತ್ತು ಸಾಹಿತ್ಯ ಕಮ್ಮಟ ಏರ್ಪಡಿಸಿಪ್ರೋತ್ಸಾಹಿಸಲಾಗುತ್ತದೆ ಎಂದರು.
ಜಿಲ್ಲೆಗೆ ಸಂಬಂಧಿಸಿದ ಕಲೆ, ಸಾಹಿತ್ಯ,ರಂಗಭೂಮಿ, ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ,ಸಿನಿಮಾ ಎಲ್ಲವನ್ನು ಒಗ್ಗೂಡಿಸಿ ದಾನಿಗಳಸಹಕಾರದಿಂದ ಕಲಾ ಗ್ಯಾಲರಿ ಸ್ಥಾಪಿಸುವುದುಮೂಲ ಉದ್ದೇಶ. ಇದರೊಂದಿಗೆಹೋಬಳಿಮಟ್ಟದಲ್ಲಿ ಕಸಾಪ ಕಟ್ಟಲು ಭವನಗಳನ್ನುನಿರ್ಮಿಸಲು ಮುಂದಾಗುತ್ತೇನೆ. ಕನ್ನಡ ಶಾಲೆಗಳದತ್ತು ಸ್ವೀಕಾರ, ಕನ್ನಡ ಅತಿಥಿ ಉಪನ್ಯಾಸಕರಸೇವಾ ಭದ್ರತೆಗಾಗಿ ಅವರೊಂದಿಗೆ ಹೋರಾಟಕ್ಕೆಸಿದ್ಧ ವಾಗಿದ್ದು, ಬಯಲು ಸೀಮೆರಂಗಾಯಣವನ್ನು ತುಮಕೂರಿಗೆ ತರಲುಪ್ರಯತ್ನಿಸುತ್ತೇನೆ ಎಂದರು.ಪ್ರಾಂಶುಪಾಲ ಡಾ.ಡಿ.ಎಸ್.ಮುನೀಂದ್ರಕುಮಾರ್ ಮಾತನಾಡಿ, ಸಾಹಿತ್ಯಹಾಗೂ ಸಂಘಟನೆ ಜೊತೆಯಲ್ಲಿ ಸಾಗಿದರೆ ನಮ್ಮನಾಡು, ನುಡಿಯನ್ನು ಮೂಲ ರೂಪದಲ್ಲೇ ಮತ್ತೆಹೊರತರಲು ಸಾಧ್ಯವಿದೆ.
ಈ ನಿಟ್ಟಿನಲ್ಲಿ ಶೈಲಾದಶಕಗಳಿಂದಲೂ ಹೋರಾಟದಲ್ಲಿದ್ದಾರೆ. ಇವರುಜಿಲ್ಲಾಧ್ಯಕ್ಷರಾದರೆ ಸಾಹಿತ್ಯ ಪರಿಷತ್ತಿಗೆ ಘನತೆಹೆಚ್ಚಾಗಲಿದೆ ಎಂದರು.ತಾಲೂಕು ಸರ್ಕಾರಿ ನೌಕರರ ಸಂಘದ ಮಾಜಿಅಧ್ಯಕ್ಷ ನಾ.ಮಹಲಿಂಗೇಶ್, ತಾಲೂಕು ಕಸಾಪಪ್ರಧಾನ ಕಾರ್ಯದರ್ಶಿ ರಾಮಚಂದ್ರಪ್ಪ, ನಿವೃತ್ತಪ್ರಾಂಶು ಪಾಲ ಟಿ.ಗೋವಿಂದರಾಜು,ಮರುಳಯ್ಯ, ಲೇಖಕಿ ವಿಜಯಾ ಮಾತನಾಡಿದರು. ಸರ್ವಜ್ಞ ವೇದಿಕೆ ಅಧ್ಯಕ್ಷ ವೆಂಕಟರವಣಪ್ಪ,ಕವಯತ್ರಿ ವೀಣಾ, ಮಹಿಳಾ ಘಟಕದಲತಾರಾಜ್, ಕಸಾಪ ಮಾಜಿ ಕಾರ್ಯದರ್ಶಿಅಲ್ಲಾ ಭಕಾಷ್, ಬ್ಯಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.