ವಿದ್ಯಾರ್ಥಿಗಳಿಗೆ ಮದ್ಯ ಕುಡಿಸಿದ ಶಿಕ್ಷಕರ ಅಮಾನತು
Team Udayavani, Dec 14, 2017, 11:35 AM IST
ಕೊರಟಗೆರೆ: ಶೈಕ್ಷಣಿಕ ಪ್ರವಾಸಕ್ಕೆ ತೆರಳಿದ್ದ ವೇಳೆ ವಿದ್ಯಾರ್ಥಿಗಳಿಗೆ ಕುಡಿಯುವ ನೀರಿನ ಬದಲಾಗಿ ಮದ್ಯ ಬೆರೆಸಿದ ನೀರು ಕುಡಿಸಿದ ಮುಖ್ಯ ಶಿಕ್ಷಕ ಸೇರಿದಂತೆ ಮೂವರು ಶಿಕ್ಷಕರನ್ನು ಮಧುಗಿರಿ ಡಿಡಿಪಿಐ ಶಿವಶಂಕರರೆಡ್ಡಿ ಬುಧವಾರ ಅಮಾನತು ಮಾಡಿದ್ದಾರೆ.
ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕಿನ ಬೋಮ್ಮಲದೇವಿಪುರ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಡಿ.6ರ ಬುಧವಾರದಂದು ಶೈಕ್ಷಣಿಕ ಪ್ರವಾಸಕ್ಕೆ ತೆರಳಿದ್ದರು. ಪ್ರೌಢಶಾಲೆಯ 8,9 ಮತ್ತು 10ನೇ ತರಗತಿಯ ಒಟ್ಟು 63 ವಿದ್ಯಾರ್ಥಿಗಳೊಂದಿಗೆ 6 ಮಂದಿ ಶಿಕ್ಷಕರು, 2 ಮಂದಿ ಡಿ ಗ್ರೂಪ್ ನೌಕರರು ಮತ್ತು ಇಬ್ಬರು ಅಡುಗೆ ಸಿಬ್ಬಂದಿ 3 ದಿನಗಳ ಕಾಲ ಶೈಕ್ಷಣಿಕ ಪ್ರವಾಸಕ್ಕೆ ಹೋಗಿದ್ದರು. ಡಿ.6ರ ರಾತ್ರಿ 9ಗಂಟೆಗೆ ಹೊರಟು ಡಿ.7ರ ಗುರುವಾರ ಮುಂಜಾನೆ ಜೋಗ್‌ಫಾಲ್ಸ್, ಮುಡೇìಶ್ವರ, ಕೊಲ್ಲೂರು ಮೂಲಕ ಸಂಜೆ ಉಡುಪಿಗೆ ತೆರಳಿ, ಅಲ್ಲಿ ತಂಗಿದ್ದರು. ಡಿ.8ರ ಮುಂಜಾನೆ ಉಡುಪಿ ಕೃಷ್ಣನ ದರ್ಶನ ಪಡೆದ ವಿದ್ಯಾರ್ಥಿಗಳು, ಮಣಿಪಾಲ್ ಮ್ಯೂಸಿಯಂ, ಮಲ್ಪೆ ಬೀಚ್, ಕಟೀಲು ನೋಡಿಕೊಂಡು, ಧರ್ಮಸ್ಥಳಕ್ಕೆ ತೆರಳಿದ್ದರು. ಡಿ.9ರಂದು ಮಂಜುನಾಥ ಸ್ವಾಮಿಯ ದರ್ಶನ ಪಡೆದು, ಬೇಲೂರು ಮೂಲಕ ವಾಪಸ್ ಬರುವ ಸಮಯದಲ್ಲಿ ರಾತ್ರಿ 9ಗಂಟೆ ವೇಳೆಗೆ ಭೋಜನಕ್ಕೆ ಇಳಿದಿದ್ದರು. ಈ ವೇಳೆ ವಿದ್ಯಾರ್ಥಿಗಳು ಮನರಂಜನೆಗಾಗಿ ಡ್ಯಾನ್ಸ್ ಮಾಡಿದರು. ದಣಿದ ವಿದ್ಯಾರ್ಥಿಗಳು ನೀರು ಕೇಳಿದಾಗ ಮುಖ್ಯ ಶಿಕ್ಷಕ ಮತ್ತು ಸಹ ಶಿಕ್ಷಕರು ಕುಡಿಯುವ ನೀರಿಗೆ ಮದ್ಯ ಬೆರೆಸಿ ನೀಡಿದ್ದರು. ಈ ನೀರು ಕುಡಿದ 18ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹೊಟ್ಟೆನೋವು, ಹೊಟ್ಟೆ ಉರಿ, ವಾಂತಿಯಿಂದ ಸ್ಥಳದಲ್ಲಿಯೇ ಅಸ್ವಸ್ಥರಾದರು.
ಪ್ರವಾಸ ಮುಗಿಸಿ ಮನೆಗೆ ಬಂದ ಮಕ್ಕಳು ಅಸ್ವಸ್ಥರಾಗಿದ್ದನ್ನು ಕಂಡು ಪೋಷಕರು ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಪ್ರಕರಣ ಬಯಲಿಗೆ ಬಂದಿದೆ. ಬಳಿಕ, ಮುಖ್ಯ ಶಿಕ್ಷಕ ಸಚ್ಚಿದಾನಂದ ಮೂರ್ತಿ, ಸಹ ಶಿಕ್ಷಕರಾದ ಷೇಕ್ ಮುಜಾಮೀಲ್, ಧನಸಿಂಗ್ ರಾಥೋಡ್‌ರನ್ನು ಅಮಾನತು ಮಾಡಿ ಡಿಡಿಪಿಐ ಶಿವಶಂಕರರೆಡ್ಡಿ ಆದೇಶ ಹೊರಡಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bengaluru: ಪೊಲೀಸರ ಬೇಟೆ; 26 ಕೋಟಿ ರೂ. ಮಾದಕ ವಸ್ತು ವಶ
Life Partner ಹೇಗಿರಬೇಕು: ನಟಿ ರಶ್ಮಿಕಾ ಮಂದಣ್ಣ ಮನದ ಮಾತು
Karavali Utsava: ಡಿ.21-ಜ.19: ಮಂಗಳೂರಿನಲ್ಲಿ ಕರಾವಳಿ ಉತ್ಸವ; ದ.ಕ ಜಿಲ್ಲಾಧಿಕಾರಿ ಮಾಹಿತಿ
Brisbane Test; ರೋಚಕ.. ಭಾರತ ಗೆಲ್ಲಲು 54 ಓವರ್‌ಗಳಲ್ಲಿ 275 ರನ್ ಅಗತ್ಯ
Shirva: ಏಷ್ಯನ್ ಜೂನಿಯರ್ ವೇಟ್‌ಲಿಫ್ಟಿಂಗ್ ತೀರ್ಪುಗಾರರಾಗಿ ಶಿರ್ವದ ಕೃಷ್ಣರಾಜ್.ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.