ಮೈತ್ರಿ ಸುಭದ್ರ, ಬೀಳಿಸಿದರೂ ಬೀಳಲ್ಲ; ಪರಂ
ಬಿಜೆಪಿಗರಿಂದ ವಿವಾದ ಸೃಷ್ಟಿ • ರಾಜೀನಾಮೆ ಕುರಿತಂತೆ ರಮೇಶ್ ಜಾರಕಿಹೊಳಿ ಜೊತೆ ಮಾತನಾಡುವೆ
Team Udayavani, Apr 24, 2019, 2:56 PM IST
ತುಮಕೂರು: ರಾಜ್ಯದಲ್ಲಿ ಕಾಂಗ್ರೆಸ್- ಜೆಡಿಎಸ್ ಸಮ್ಮಿಶ್ರ ಸರ್ಕಾರ ಸು ಭದ್ರವಾಗಿದೆ. ವಿರೋಧ ಪಕ್ಷದ ವರು ಸರ್ಕಾರ ಬಿದ್ದು ಹೋಗುತ್ತದೆ ಎಂದು ಹೇಳುತ್ತಿದ್ದಾರೆ. ಕೆಲವರು ಮುಖ್ಯಮಂತ್ರಿಯಾಗುವ ಹಾಗೂ ಮತ್ತೆ ಕೆಲವರು ಸಚಿವರಾಗುವ ಆಸೆ ಇಟ್ಟುಕೊಂಡು ವಿವಾದ ಸೃಷ್ಟಿಸುತ್ತಿದ್ದಾರೆ ಅಷ್ಟೇ. ನಾವು ಬಿದ್ದು ಹೋಗುವುದಿಲ್ಲ, ನೀವು ಬೀಳಿಸಲು ಹೋದರೂ ನಾವು ಬೀಳುವು ದಿಲ್ಲ ಎಂದು ಬಿಜೆಪಿಗೆ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಟಾಂಗ್ ನೀಡಿದರು.
ನಗರದಲ್ಲಿ ಮಂಗಳವಾರ ಸುದ್ದಿಗಾರ ರೊಂದಿಗೆ ಮಾತನಾಡಿದ ವೇಳೆ ಮಾಜಿ ಸಚಿವ ರಮೇಶ್ ಜಾರಕಿಹೊಳಿ ರಾಜಿನಾಮೆ ವಿಚಾರ ಕುರಿತಂತೆ ಕೇಳಿದ ಪ್ರಶ್ನೆಗೆ, ‘ರಮೇಶ್ ಜಾರಕಿಹೊಳಿ ಯಾವ ಉದ್ದೇಶಕ್ಕೆ ರಾಜಿನಾಮೆ ನೀಡುತ್ತಾರೆ ಎನ್ನುವುದು ನನಗೆ ಗೊತ್ತಾಗಿಲ್ಲ. ಅವರನ್ನು ಸಚಿವರನ್ನಾಗಿ ಮಾಡಿ ಉಸ್ತುವಾರಿ ಮಾಡಿದ್ದೆವು. ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರೆಂದರೆ ಅರ್ಧ ಕರ್ನಾ ಟಕದ ಸಚಿವರಿದ್ದಂತೆ. ಅಂತಹ ಸ್ಥಾನದಲ್ಲಿ ಅವರು ಇದ್ದರು’ ಎಂದು ನುಡಿದರು.
ಹಲವು ಕಾರಣಗಳಿಂದ ಅವರನ್ನು ಸಚಿವ ಸ್ಥಾನದಿಂದ ತೆಗೆದು ಹಾಕಲಾಗಿತ್ತು. ಅವರಿಗೆ ಪಕ್ಷದ ಹೈಕಮಾಂಡ್ ಬೇರೆ ಜವಾಬ್ದಾರಿ ಕೊಡ ಬಹು ದು. ಅವರು ಈ ರೀತಿ ನಡೆದು ಕೊಳ್ಳುತ್ತಿದ್ದಾರೆ. ನಾನು ಅವರ ಜೊತೆ ಮಾತನಾ ಡುತ್ತೇನೆಂದು ತಿಳಿಸಿದರು.
ಭಿನ್ನಾಭಿಪ್ರಾಯ ಸಹಜ: ರಮೇಶ್ ಜಾರಕಿಹೊಳಿ ರಾಜೀನಾಮೆ ಕೊಡುವ ವಿಷಯ ಅವರ ವೈಯಕ್ತಿಕ ಕಾರಣವೂ ಇದ್ದರೂ ಇರಬಹುದು. ಸತೀಶ್ ಜಾರಕಿಹೊಳಿ ಮತ್ತು ರಮೇಶ್ ಜಾರಕಿಹೊಳಿ ನಡುವೆ ಭಿನ್ನಾಭಿಪ್ರಾಯ ಇದ್ದೇ ಇದೆ. ಅವರು ಕೆಲವು ಸಂದರ್ಭದಲ್ಲಿ ಒಟ್ಟಿಗೆ ಇರುತ್ತಾರೆ. ಕೆಲವು ಸಂದರ್ಭದಲ್ಲಿ ದೂರವಿರುತ್ತಾರೆ. ಸಹೋದರರ ನಡುವೆ ಭಿನ್ನಾಭಿಪ್ರಾಯ ಇದೆ. ಬಳಿಕ ಒಟ್ಟಾಗುವುದು ಸಹಜ ಎಂದು ಹೇಳಿದರು.
ರಮೇಶ್ ಜಾರಕಿಹೊಳಿ ಸಚಿವ ಸ್ಥಾನದಿಂದ ತೆಗೆದು ಹಾಕಿರುವುದು ಹಾಗೂ ಅಲ್ಲಿನ ರಾಜಕೀಯ ವಿಚಾರವಾಗಿ ಡಿ.ಕೆ.ಶಿವಕುಮಾರ್ ಅವರ ಪಾತ್ರ ಇದರಲ್ಲಿ ಇದ್ದಂತಿಲ್ಲ ಎಂದು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಇದೇ ವೇಳೆ ಪ್ರತಿಕ್ರಿಯಿಸಿದರು.
ಮೈತ್ರಿ ಅಭ್ಯರ್ಥಿ ಡಿಕೆಸ ಗೆಲುವು ಖಚಿತ: ರಂಗನಾಥ್
ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಡಿ.ಕೆ.ಸುರೇಶ್ ಮೂರು ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಗೆಲವು ಸಾಧಿಸಲಿದ್ದಾರೆ ಎಂದು ಶಾಸಕ ಡಾ.ಎಚ್.ಡಿ.ರಂಗನಾಥ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಒಟ್ಟಾಗಿ ಚುನಾವಣೆ ಕಾರ್ಯ: ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಡಿ.ಕೆ.ಸುರೇಶ್ 2 ಬಾರಿ ಸಂಸದರಾಗಿ ಕ್ಷೇತ್ರದಲ್ಲಿ ಸಲ್ಲಿಸಿರುವ ಉತ್ತಮ ಅಭಿವೃದ್ಧಿ ಕೆಲಸ ಹಾಗೂ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರದ ಜನಪ್ರಿಯ ಅಭಿವೃದ್ಧಿ ಕಾರ್ಯಗಳನ್ನು ಜನರು ಮೆಚ್ಚಿ ಈ ಡಿ.ಕೆ.ಸುರೇಶ್ ಅವರನ್ನು ಬೆಂಬಲಿಸಿದ್ದಾರೆ. ಇದಕ್ಕೆ ಪೂರಕವಾಗುವಂತೆ ಮಾಜಿ ಸಚಿವ ಡಿ.ನಾಗರಾಜಯ್ಯ ಮತ್ತು ಕಾಂಗ್ರೆಸ್-ಜೆಡಿಎಸ್‌ನ ಬಹುತೇಕ ಕಾರ್ಯಕರ್ತರು ಒಟ್ಟಾಗಿ ಚುನಾವಣಾ ಕೆಲಸ ಮಾಡಿರುವುದೇ ಸಾಕ್ಷಿ ಎಂದು ತಿಳಿಸಿದರು.
ಅಭಿವೃದ್ಧಿ ಸಾಧನೆ: ಸಂಸದ ಡಿ.ಕೆ.ಸುರೇಶ್ ಅವರು ಸಂಸದರಾಗಿ ಕಳೆದ 5 ವರ್ಷದ ಅಧಿಕಾರದ ಅವಧಿಯಲ್ಲಿ ತಾಲೂಕಿಗೆ ಹಲವು ಮಹತ್ವಕಾಂಕ್ಷೆ ಯೋಜನೆಗಳನ್ನು ಕೇಂದ್ರ-ರಾಜ್ಯ ಸರ್ಕಾರದಿಂದ ಮಂಜೂರು ಮಾಡಿಸಿ ನೂರಾರು ಕೋಟಿ ರೂ. ವೆಚ್ಚದಲ್ಲಿ ಹತ್ತು ಹಲವು ಅಭಿವೃದ್ಧಿ ಕಾರ್ಯ ಮಾಡಿದ್ದಾರೆ. ತಾಲೂಕಿನ ಬಹುತೇಕ ಕಡೆ ಶುದ್ಧ ನೀರಿನ ಘಟಕ ನಿರ್ಮಾಣ, ಮಿನಿ ವಿಧಾನಸೌಧ ಕಟ್ಟಡದ 2ನೇ ಹಂತದ ಕಾಮಗಾರಿಗೆ 7 ಕೋಟಿ ರೂ.,ಅನುದಾನ, 60 ಕೋಟಿ ರೂ., ವೆಚ್ಚದ ಮಾರ್ಕೋನಹಳ್ಳಿ ಎಡ -ಬಲ ನಾಲೆ ಆಧುನೀಕರಣ, 5 ಕೋಟಿ ರೂ., ವೆಚ್ಚದಲ್ಲಿ ಪುರಸಭೆ ನೂತನ ಕಚೇರಿ ಕಟ್ಟಡ, ಪಟ್ಟಣದ ಮಲ್ಲಾಘಟ್ಟ ಬಳಿ ಸ್ಕೈವಾಕ್ ನಿರ್ಮಾಣ, 1.50 ಕೋಟಿ ರೂ., ವೆಚ್ಚದಲ್ಲಿ ಹುತ್ರಿದುರ್ಗ ಬೆಟ್ಟ ಅಭಿವೃದ್ಧಿಗೊಳಿಸಿದ್ದಾರೆ. ಹಾಗೆಯೇ 5 ಕೋಟಿ ರೂ., ವೆಚ್ಚದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಮೂಲಸೌಕರ್ಯಕ್ಕೆ ಅನುದಾನ, 5 ಕೋಟಿ ರೂ., ವೆಚ್ಚದಲ್ಲಿ ಆಧುನಿಕ ಕ್ರೀಡಾಂಗಣ ಅಭಿವೃದ್ಧಿಗೆ ಕ್ರಮ, ಸಂಸದರ ಆದರ್ಶ ಗ್ರಾಮ ಮಡಿಕೆಹಳ್ಳಿ 25 ಕೋಟಿ ರೂ., ವೆಚ್ಚದಲ್ಲಿ ಅಭಿವೃದ್ಧಿ, 4 ಕೋಟಿ ರೂ., ವೆಚ್ಚದಲ್ಲಿ ಪಟ್ಟಣದಲ್ಲಿ ವಿದ್ಯುತ್ ಚಿತಾಗಾರ ಕಾಮಗಾರಿ ನೆರವೇರಿಸಿದ್ದಾರೆ. ಇನ್ನು 3 ಕೋಟಿ ರೂ., ವೆಚ್ಚದಲ್ಲಿ ಪಟ್ಟಣದ ದೊಡ್ಡಕೆರೆ ಸೌಂದರೀಕರಣ, ಎಚ್ವಿಡಿಎಸ್ ಯೋಜನೆಯಡಿ 300 ಕೋಟಿ ರೂ., ವೆಚ್ಚದಲ್ಲಿ ಸಾವಿರಾರು ರೈತರ ಪಂಪ್ ಸೆಟ್‌ಗಳಿಗೆ ಉಚಿತ ವಿದ್ಯುತ್ ಪರಿವರ್ತಕ ವಿತರಣೆ ಸೇರಿ ಹಲವು ಅಭಿವೃದ್ಧಿ ಕಾಮಗಾರಿ ಗಳನ್ನು ಕೈಗೊಂಡಿದ್ದಾರೆಂದು ಹೇಳಿದರು.
ಅಲ್ಲದೇ, ಚುನಾವಣೆ ಸಹಕರಿಸಿದ ಕಾಂಗ್ರೆಸ್ ಹಾಗೂ ಜೆಡಿಎಸ್‌ನ ಎಲ್ಲಾ ಕಾರ್ಯಕರ್ತರಿಗೆ ಮತ್ತು ಕ್ಷೇತ್ರದ ಮತದಾರರಿಗೆ ಅಭಿನಂದನೆ ತಿಳಿಸಿದ್ದಾರೆ.
ಕಳೆದ ಹಲವು ದಿನಗಳಿಂದಲೂ ಸಮ್ಮಿಶ್ರ ಸರ್ಕಾರವನ್ನು ಅಸ್ಥಿರ ಮಾಡುತ್ತೇವೆ ಎಂದು ಬಿಜೆಪಿಯವರು ಹೇಳುತ್ತಾಲೇ ಇದ್ದಾರೆ. ಆದರೆ, ಅದು ಸಾಧ್ಯವಾಗಿಲ್ಲ. ಈಗಲೂ ಅದೇ ರೀತಿ ವಿವಾದ ಸೃಷ್ಟಿಸುತ್ತಿದ್ದಾರೆ. ನಮ್ಮಲ್ಲಿ ರುವ ಶಾಸಕರಿಗೆ ಅಸಮಾಧಾನವಿದ್ದರೆ ಬಿಜೆ ಪಿಯಲ್ಲಿರುವ ಶಾಸಕರಿಗೂ ಅಸಮಾ ಧಾನವಿ ರುತ್ತದೆ. ಮೈತ್ರಿಯಲ್ಲಿ ತೊಂದರೆಯಾ ದರೆ ಅವರಲ್ಲಿಯೂ ತೊಂದರೆ ಉಂಟಾಗು ತ್ತದೆ. ಹೀಗಾಗಿ ಸರ್ಕಾರಕ್ಕೆ ಯಾವುದೇ ತೊಂದರೆ ಯಿಲ್ಲ ಎಂದು ಉಪ ಮುಖ್ಯ ಮಂತ್ರಿ ಡಾ.ಜಿ.ಪರಮೇಶ್ವರ್ ಸ್ಪಷ್ಟಪಡಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಕೋಟಿ ಗೀತಾ ಲೇಖನ ಯಜ್ಞ: 500ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಿಬ್ಬಂದಿಯಿಂದ ದೀಕ್ಷೆ
Caste ನೋಡಿ ಮತ ಹಾಕಿದರೆ ಸಮಾಜದಲ್ಲಿ ಬದಲಾವಣೆ ಅಸಾಧ್ಯ : ಸಿಎಂ ಸಿದ್ದರಾಮಯ್ಯ
Tumkur: ತುಮಕೂರಲ್ಲಿ ದಲಿತ ಮಹಿಳೆ ಹ*ತ್ಯೆ: 21 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ
Road Mishap: ಚಲಿಸುತ್ತಿದ್ದ ಲಾರಿಗೆ ಕಾರು ಢಿಕ್ಕಿ: ತಂದೆ-ಮಗು ಸ್ಥಳದಲ್ಲೇ ಸಾವು
Maharashtra ಸರಕಾರ ವಿರುದ್ಧ ಮಾನನಷ್ಟ ಕೇಸ್: ಸಚಿವ ಡಾ| ಜಿ. ಪರಮೇಶ್ವರ್
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.