ದೇವೇಗೌಡರ ಸೋಲಿಗೆ ಮೈತ್ರಿಯೇ ಕಾರಣ

ಹೊಂದಾಣಿಕೆ ರಾಜಕಾರಣದಿಂದ ಜೆಡಿಎಸ್‌ ವರಿಷ್ಠರಿಗೆ ಮುನ್ನಡೆಯಾಗಿಲ್ಲ: ಶಾಸಕ ಡಿ ಸಿ ಗೌರಿಶಂಕರ್‌

Team Udayavani, May 27, 2019, 10:54 AM IST

tk-tdy-2..

ತುಮಕೂರಿನ ಜೆಡಿಎಸ್‌ ಜಿಲ್ಲಾ ಕಚೇರಿಯಲ್ಲಿ ಭಾನುವಾರ ನಡೆದ ಆತ್ಮಾವಲೋಕನ ಸಭೆಯಲ್ಲಿ ಶಾಸಕ ಡಿ.ಸಿ ಗೌರಿಶಂಕರ್‌ ಮಾತನಾಡಿದರು.

ತುಮಕೂರು: ಗ್ರಾಮಾಂತರ ಕ್ಷೇತ್ರದಲ್ಲಿ ಜೆಡಿಎಸ್‌ ಹಿನ್ನಡೆಯಾಗಲು ಕೆ.ಎನ್‌.ರಾಜಣ್ಣ, ಮುದ್ದಹನುಮೇಗೌಡ, ಶಿವಣ್ಣ ಅವರೇ ಕಾರಣ. ಎಲ್ಲರೂ ಒಂದಾಗಿ ಗ್ರಾಮಾಂತರದಲ್ಲಿ ಜೆಡಿಎಸ್‌ಗೆ ಹಿನ್ನಡೆಯುಂಟು ಮಾಡಿದ್ದಾರೆ. ಈ ಹೊಂದಾಣಿಕೆ ರಾಜಕಾರಣದಿಂದಾಗಿ ಜೆಡಿಎಸ್‌ ವರಿಷ್ಠರಿಗೆ ನನ್ನ ಕ್ಷೇತ್ರದಲ್ಲಿ ಮುನ್ನಡೆಯನ್ನು ನೀಡಲು ಆಗಲಿಲ್ಲ ಎಂದು ಗ್ರಾಮಾಂತರ ಶಾಸಕ ಡಿ ಸಿ ಗೌರಿಶಂಕರ್‌ ತಿಳಿಸಿದರು.

ನಗರದ ಜಿಲ್ಲಾ ಜೆಡಿಎಸ್‌ ಕಚೇರಿಯಲ್ಲಿ ಭಾನುವಾರ ನಡೆದ ಗ್ರಾಮಾಂತರ ಕ್ಷೇತ್ರದ ಜೆಡಿಎಸ್‌ ಕಾರ್ಯಕರ್ತರ ಆತ್ಮವಾಲೋಕನ ಸಭೆಯಲ್ಲಿ ಮಾತನಾಡಿದ ಅವರು, ದೇವೇಗೌಡ ವಿರುದ್ಧ ಮಾತನಾಡುವ ಕೆ.ಎನ್‌.ರಾಜಣ್ಣ ನಾಲಿಗೆ ಮೇಲೆ ಹಿಡಿತ ಇಟ್ಟುಕೊಳ್ಳಬೇಕು, ದುರಂಹಕಾರದಿಂದ ಮಾತನಾಡಿದವರನ್ನು ಜನರು ಮನೆಗೆ ಕಳುಹಿಸಿದ್ದಾರೆ. ನಮಗೂ ಮಾತನಾಡಲು ಬರುತ್ತದೆ, ನಾವೇನು ಷಂಡರಲ್ಲ, ನಮಗೂ ಗಂಡಸ್ತನ ಇದೆ. ತಾಕತ್‌ ಇದ್ದರೆ ನೇರವಾಗಿ ಯುದ್ಧ ಮಾಡುವಂತೆ ಸವಾಲು ಹಾಕಿದರು.

ರಾಜ್ಯ ಪರ ಧ್ವನಿ ಎತ್ತುವುದು ಯಾರು?: ದೇವೇಗೌಡ, ಮಲ್ಲಿಕಾರ್ಜುನ ಖರ್ಗೆ ಅವರಂತಹ ನಾಯಕರಿಲ್ಲದ ಲೋಕಸಭೆಯಲ್ಲಿ ಈಗ ಗೆದ್ದಿರುವವರು ಏನು ಮಾತನಾಡುತ್ತಾರೆ. ರಾಜ್ಯದ ನೀರಾವರಿಯಾಗಲಿ, ಇನ್ನಾವುದೇ ವಿಚಾರದ ಬಗ್ಗೆಯಾಗಲಿ ರಾಜ್ಯ ಪರ ಹೇಗೆ ಧ್ವನಿ ಎತ್ತಲಿದ್ದಾರೆ ಎನ್ನುವುದನ್ನು ಕಾದು ನೋಡ ಬೇಕಿದೆ. ಗಂಗೆಯ ಶಾಪ ಇದೆ ಎಂದು ಹೇಳಿದ ಬಸವರಾಜು ಜಿಲ್ಲೆಯ ಎಷ್ಟು ಕೆರೆ ತುಂಬಿಸು ತ್ತಾರೋ ನೋಡೋಣ, ನೀರು ತುಂಬಿಸದೇ ಇದ್ದಲ್ಲಿ ಕೊರಳಪಟ್ಟಿಯನ್ನು ಹಿಡಿದು ಕಾರ್ಯಕರ್ತರೇ ಕೇಳಬೇಕು ಎಂದು ಗುಡುಗಿದರು.

ಮೈತ್ರಿ ಇಲ್ಲದೇ ಹೋಗಿದ್ದಲ್ಲಿ ದೇವೇಗೌಡರನ್ನು ಎರಡು ಲಕ್ಷ ಮತಗಳ ಅಂತರದಿಂದ ಗೆಲ್ಲಿಸಿಕೊಳ್ಳುತ್ತಿದ್ದೆವು, ಮೈತ್ರಿ ಮುಖಂಡರ ಮಟ್ಟದಲ್ಲಿ ಆಗಿದೆ, ಆದರೆ, ಕಾರ್ಯಕರ್ತರ ಮಟ್ಟದಲ್ಲಿ ಆಗಲಿಲ್ಲ. ವಿಧಾನಸಭಾ ಚುನಾವಣೆ ಯಂತೆ ತಳ ಮಟ್ಟದ ಕಾರ್ಯ ಕರ್ತರನ್ನು ಭೇಟಿ ಮಾಡಲು ಈ ಚುನಾವಣೆ ಯಲ್ಲಿ ಸಾಧ್ಯವಾಗ ಲಿಲ್ಲ. ಕಾಂಗ್ರೆಸ್‌ನವರನ್ನು ಸಮಾಧಾನ ಪಡಿಸು ವುದಕ್ಕಷ್ಟೇ ಸೀಮಿತ ವಾಯಿತು. ಪೂರ್ವ ಭಾವಿ ತಯಾರಿ ಮಾಡಿ ಕೊಳ್ಳಲು ಆಗಲಿಲ್ಲ. ಸಿಕ್ಕಿರುವ ಸಮಯಾವಕಾಶ ದಲ್ಲಿ ಜೆಡಿಎಸ್‌ ಉತ್ತಮ ಮತಗಳಿಕೆಯನ್ನು ಮಾಡಿದೆ, ಇನ್ನಷ್ಟು ಮತ ಗಳನ್ನು ಸೆಳೆಯುವ ನಿಟ್ಟಿನಲ್ಲಿ ನಾವು ವಿಫ‌ಲರಾಗಿದ್ದೇವೆ ಎಂದರು.

ಚುನಾವಣೆ ಜೆಡಿಎಸ್‌ ಕಾರ್ಯಕರ್ತರಿಗೆ ಪಾಠ: ಲೋಕಸಭಾ ಚುನಾವಣೆ ಗ್ರಾಮಾಂತರ ಕ್ಷೇತ್ರದ ಜೆಡಿಎಸ್‌ ಕಾರ್ಯಕರ್ತರಿಗೆ ಪಾಠವಾಗಬೇಕಿದೆ. ಏಳು ಜಿಲ್ಲಾ ಪಂಚಾಯ್ತಿ, ತಾಲೂಕು ಪಂಚಾಯ್ತಿ, ಎಲ್ಲ ಕಡೆ ಬಿಜೆಪಿ ಸದಸ್ಯರಿದ್ದರೆ ಎಂದು ಬೀಗುತ್ತಿದ್ದವರನ್ನು ಜನ ಮನೆಗೆ ಕಳುಹಿಸಿದ್ದಾರೆ ಎಂದು ಮಾಜಿ ಶಾಸಕ ಸುರೇಶ್‌ ಗೌಡರಿಗೆ ಟಾಂಗ್‌ ನೀಡಿದ ಅವರು, ಮುಂದೆ ಗ್ರಾಪಂ ಚುನಾವಣೆ ಬರಲಿ 35 ಗ್ರಾಪಂಗಳ ಪೈಕಿ 33 ಗ್ರಾಪಂಗಳಲ್ಲಿ ಜೆಡಿಎಸ್‌ ಗೆಲುವು ಸಾಧಿಸಬೇಕಿದೆ. ಲೋಕಸಭಾ ಚುನಾವಣೆಯಲ್ಲಿ ಆಗಿರುವ ತಪ್ಪುಗಳನ್ನು ಸರಿಪಡಿಸಿಕೊಂಡು ಪಕ್ಷವನ್ನು ಸಂಘಟನೆ ಮಾಡೋಣ ಎಂದು ಕಾರ್ಯಕರ್ತರಿಗೆ ಸಲಹೆ ನೀಡಿದರು.

ಹಿಂಜರಿಯುವುದು ಬೇಡ: ಗೌರಿಶಂಕರ್‌ ತುಮಕೂರು ಗ್ರಾಮಾಂತರ ಬಿಟ್ಟು ಹೋಗುತ್ತಾನೆ ಎಂದು ಅಪಪ್ರಚಾರ ಮಾಡ ಲಾಗುತ್ತಿದೆ. ಬಳ್ಳಗೆರೆಯಲ್ಲಿ ಮನೆಕಟ್ಟಿಕೊಂಡು ಶಾಶ್ವತವಾಗಿ ಇಲ್ಲೇ ನೆಲೆಸುತ್ತೇನೆ, ಏನೇ ಆದರೂ ಎದುರಿಸೋಣ, ಎಲ್ಲ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷವನ್ನು ಸಂಘಟನೆ ಮಾಡೋಣ. ಯಾವುದೇ ಕಾರಣಕ್ಕೂ ಕಾರ್ಯಕರ್ತರು ಹಿಂಜರಿಯುವುದು ಬೇಡ ಎಂದು ಕಾರ್ಯಕರ್ತರಿಗೆ ಧೈರ್ಯ ತುಂಬಿದರು.

ಸಂಯಮ ಕಾಪಾಡಿಕೊಳ್ಳಿ: ಜೆಡಿಎಸ್‌ ಸಾಮಾಜಿಕ ಜಾಲತಾಣದ ಹುಡುಗರು ಸಂಯಮ ಕಾಪಾಡಿಕೊಳ್ಳಬೇಕು. ಅಭಿವೃದ್ಧಿ ವಿಚಾರಗಳನ್ನು ಚರ್ಚಿಸಿ, ವೈಯಕ್ತಿಕ ವಿಚಾರಗಳ ಬಗ್ಗೆ ಗಮನ ನೀಡಬೇಡಿ, ಇದರಿಂದ ಪಕ್ಷಕ್ಕೆ ಮುಜುಗರವಾಗಲಿದೆ ಎನ್ನುವುದು ಅರಿತುಕೊಳ್ಳಬೇಕು. ಗ್ರಾಮಾಂತರ ಕ್ಷೇತ್ರದಲ್ಲಿ ಎಲ್ಲ ಘಟಕಗಳನ್ನು ವಿಸರ್ಜಸಿದ್ದು, ಹೊಸ ತಂಡವನ್ನು ಕಟ್ಟಿ ಪಕ್ಷವನ್ನು ಇನ್ನಷ್ಟು ಸಂಘಟಿತವಾಗಿಸುವ ನಿಟ್ಟಿನಲ್ಲಿ ಶ್ರಮಿಸೋಣ ಎಂದು ಸಲಹೆ ನೀಡಿದರು.

ಕಳೆದ ಚುನಾವಣೆಯಲ್ಲಿ ನಾನು ಗೆದ್ದಾಗ ಅಡ್ಜೆಸ್ಟ್‌ಮೆಂಟ್ನಿಂದ ಗೆದ್ದ ಎಂದು ಆರೋಪಿಸಿದರು, ಈಗ ಅವರು ಮಾಡಿದ್ದ ಏನು? ಅಡ್ಜೆಸ್ಟ್‌ಮೆಂಟ್ ಮಾಡಿಕೊಂಡು ಜೆಡಿಎಸ್‌ಗೆ ಹಿನ್ನಡೆ ಮಾಡಲಿಲ್ಲವೇ, ನೀತಿಗೆಟ್ಟ ಹೊಂದಾಣಿಕೆ ಮೂಲಕ, ನನ್ನನ್ನು ತುಳಿಯಲು ಯತ್ನಿಸಿದವರು ಧೈರ್ಯವಿದ್ದರೆ ನೇರವಾಗಿ ಯುದ್ಧಕ್ಕೆ ಬರಲಿ ಎಂದು ಸವಾಲು ಹಾಕಿದರು.

ಸಭೆಯಲ್ಲಿ ತುಮಕೂರು ಗ್ರಾಮಾಂತರ ಕ್ಷೇತ್ರದ ವಿವಿಧ ಘಟಕಗಳ ಮುಖಂಡರು, ಗ್ರಾಪಂ ಸದಸ್ಯರು, ಕಾರ್ಯಕರ್ತರು ಹಿನ್ನಡೆ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಸಭೆಯಲ್ಲಿ ಬೆಳಗುಂಬ ವೆಂಕಟೇಶ್‌, ಉಮೇಶ್‌, ಹಾಲನೂರು ಅನಂತ್‌, ಕೆಂಪರಾಜಯ್ಯ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಟಾಪ್ ನ್ಯೂಸ್

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

KN-Rajaanna

Congress: ಹೈಕಮಾಂಡ್‌ ಒಪ್ಪಿಗೆ ಮೇರೆಗೆ ಶೋಷಿತರ ಸಮಾವೇಶ: ಕೆ.ಎನ್‌.ರಾಜಣ್ಣ

14-madhugiri

Madhugiri: 90 ಲಕ್ಷದ ಬೆಳೆ ವಿಮೆ ಹಣ ಅಕ್ರಮ ತನಿಖೆಗೆ ಆಗ್ರಹ

Tumkur: ಪರಂ, ರಾಜಣ್ಣ  ವರ್ಚಸ್ಸು ಕುಂದಿಸಲು ಸುರೇಶ್‌ಗೌಡ ಟೀಕೆ: ಗೌರಿಶಂಕರ್‌

Tumkur: ಪರಂ, ರಾಜಣ್ಣ  ವರ್ಚಸ್ಸು ಕುಂದಿಸಲು ಸುರೇಶ್‌ಗೌಡ ಟೀಕೆ: ಗೌರಿಶಂಕರ್‌

9

Koratagere: ಗುಡಿಸಲಿಗೆ ಆಕಸ್ಮಿಕ ಬೆಂ*ಕಿ; 4 ಮೇಕೆಗಳು ಸಜೀವ ದಹನ; ಇಬ್ಬರಿಗೆ ಗಾಯ

10

Koratagere: ಅಕ್ರಮವಾಗಿ ಗ್ಯಾಸ್ ಸಿಲಿಂಡರ್ ಫಿ‌ಲ್ಲಿಂಗ್; ಓರ್ವ ಆರೋಪಿ ಬಂಧನ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

accident

Kaup: ಸ್ಕೂಟಿ, ಕಾರಿಗೆ ಬಸ್‌ ಢಿಕ್ಕಿ; ಸವಾರನಿಗೆ ಗಾಯ

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.