ಅಮೆರಿಕ ಯುವತಿ ವರಿಸಿದ ಕನ್ನಡಿಗ
Team Udayavani, Dec 23, 2017, 5:29 PM IST
ತುಮಕೂರು/ ಕೊರಟಗೆರೆ: ಹಿಂದೂ ಧರ್ಮ, ಸಂಸ್ಕೃತಿಗೆ ಮಾರು ಹೋಗಿರುವ ಅಮೆರಿಕಾದ ಯುವತಿಯೊಬ್ಬರು ಕನ್ನಡಿಗ ಯುವಕನೊಂದಿಗೆ ಹಿಂದೂ ಧರ್ಮ ಸಂಸ್ಕೃತಿ ರೀತಿಯಲ್ಲಿ ವಿವಾಹವಾಗಿರುವ ಘಟನೆ ನಗರ ಸಮೀಪ ತೋವಿನಕೆರೆಯ ಉಪ್ಪಾರ ಪಾಳ್ಯದ ತೋಟದ ಮನೆಯಲ್ಲಿ ನಡೆದಿದೆ.
ಅಮೆರಿಕಾದಲ್ಲಿ ಪ್ರೇಮಾಂಕುರ: ಅಮೇರಿಕಾದ ನ್ಯೂಜೆರ್ಸಿಯಾದ ಟಾರಾ ಎನ್ನುವ ಯುವತಿ ಬೆಂಗಳೂರಿನ ವೈದ್ಯ ಡಾ. ಅಜಯ್ ಅವರನ್ನು ಪ್ರೀತಿಸುತ್ತಿದ್ದರು. ಡಾ. ಅಜಯ್ ಮೂಲತಹಃ ಬೆಂಗಳೂರಿನವರಾಗಿದ್ದು ಅಮೇರಿಕಾದಲ್ಲಿ ವಿದ್ಯಾಭ್ಯಾಸ ಮಾಡುವಾಗ ಟಾರಾ ಅವರ ಪರಿಚಯವಾಗಿ ಪರಿಚಯ ಸ್ನೇಹಕ್ಕೆ ತಿರುಗಿ ನಂತರ ಒಬ್ಬರಿಗೊಬ್ಬರು ಪ್ರೀತಿಸುತ್ತಿದ್ದರು.
ಈ ಪ್ರೀತಿ ಮದುವೆಯ ಹಂತಕ್ಕೆ ಬಂದು ವಿವಾಹ ವಾಗಲು ಇಬ್ಬರು ನಿರ್ಧ ರಿಸಿದರು. ಭಾರತೀಯ ಧರ್ಮ ಸಂಸ್ಕೃತಿ ಇಲ್ಲಿಯ ಸಂಪ್ರದಾಯ ಪರಂಪರೆ ಹೆಚ್ಚು ಇಷ್ಟ ಪಡುತ್ತಿದ್ದ ಟಾರಾ ಭಾರತೀಯ ಸಂಪ್ರದಾಯದಂತೆಯೇ ಸತಿ ಪತಿಗಳಾಗುವ ಬಯಕೆ ವ್ಯಕ್ತಪಡಿಸಿದಳು.
ತೋಟದ ಮನೆಯಲ್ಲಿ ಮದುವೆ: ಪ್ರಿಯತಮೆ ಟಾರಾಳ ಅಪೇಕ್ಷೆ ಯಂತೆಯೇ ಹಿಂದೂ ಧರ್ಮದ ರೀತಿಯಲ್ಲಿ ವಿವಾಹ ಮಾಡಿಕೊಳ್ಳಲು ತಯಾರಿ ನಡೆಸಿದ ಪ್ರಿಯತಮ ಡಾ. ಅಜಯ್ ಗ್ರಾಮೀಣ ಸೊಗಡಿನ ಪ್ರಕೃತಿಯ ಮಡಿಲಲ್ಲಿ ಪೂರ್ವಿಕರ ಕಾಲದಲ್ಲಿ ನಡೆಯುತ್ತಿದ್ದ ಮದುವೆಯ ಮಾದರಿಯಲ್ಲಿ ಮದುವೆ ಮಾಡಿಕೊಳ್ಳಲು ನಿರ್ಧರಿಸಿ ಅಜಯ್ ತಂದೆಯ ಸ್ನೇಹಿತರಾದ ತೋವಿನಕೆರೆ ಉಪ್ಪಾರಪಾಳ್ಯದ ವಾಸಿಗಳಾದ ಶ್ರೀಕಂಠ ಪ್ರಸಾದ್ ಅವರ ತೋಟದ ಮನೆ ಯಲ್ಲಿ ವಿವಾಹ ಮಾಡಿಕೊಳ್ಳಲು ನಿರ್ಧರಿಸಿ ಮದುವೆಯ ಸಿದ್ಧತೆಗಳು ನಡೆದವು.
ಹಿಂದೂ ಧರ್ಮದ ಸಂಪ್ರ ದಾಯದಂತೆ ವಧು ಟಾರಾ ಸಿರೆ ಉಟ್ಟು ಹೂವಿನ ಹಾರ ಕಾಕಿಕೊಂಡು ಕೈತುಂಬ ಬಳೆ ತೊಟ್ಟುಕೊಂಡು ಥೇಟ್ ಭಾರತೀಯ ನಾರಿಯಂತೆ ಸಿಂಗಾರ ಗೊಂಡಳು. ಮದುವೆಯ ನಿಮಿತ ವಧು ಟಾರಾಳ ಕೈಗಳಿಗೆ ಮೆಹಂದಿ ಹಾಕಲಾಗಿತ್ತು, ವಧು ಟಾರಾ ಅವರಿಂದ ದೇವರ ಪೂಜೆ ಮಾಡಿ ಶಾಸ್ತ್ರೋಕ್ತವಾಗಿ ಮದುವೆಯಲ್ಲಿ ನಡೆಯುವ ಎಲ್ಲಾ ಶಾಸ್ತ್ರಗಳನ್ನು ನೆರವೇರಿಸಲಾಯಿತು.
ಬೆಂಗಳೂರು ಇಂದಿರಾನಗರ ದಿಂದ ಬಂದಿದ್ಧ ಅರ್ಯ ಸಮಾಜದವರು ಅವರ ಸಂಪ್ರದಾಯದಂತೆ ಮದುವೆ ಕಾರ್ಯಗಳನ್ನು ನಡೆಸಿಕೊಟ್ಟರು.
ಸಪ್ತಪದಿ ತುಳಿದು ವಿವಾಹ: ನಂತರ ಗೋ ಪೂಜೆ ಮಾಡಿ ಅಗ್ನಿ ಸಾಕ್ಷಿಯಾಗಿ ವೈದ್ಯ ಡಾ. ಅಜಯ್ ಅವರಿಂದ ತಾಳಿ ಕಟ್ಟಿಸಿಕೊಂಡು ಸಪ್ತಪದಿ ತುಳಿದು ಮದುವೆಯಾಗಿ ಆನಂತರ ಮದುವೆಯ ದಿಬಣ ಮಂಗಳ ವಾದ್ಯಗಳೊಂದಿಗೆ ಎತ್ತಿನ ಗಾಡಿಯಲ್ಲಿ ನಡೆದದ್ದು ಗಮನ ಸೆಳೆಯಿತು.
ನಮ್ಮ ದೇಶದ ಯುವಕ ಯುವತಿ ಯರು ವಿದೇಶಿ ಸಂಸ್ಕೃತಿ ಪರಂಪರೆಗೆ ಮಾರು ಹೋಗುತ್ತಿರುವ ಈ ವೇಳೆಯಲ್ಲಿ ವಿದೇಶಿಯ ಯುವತಿ ಕರ್ನಾಟಕದ ಯುವಕನನ್ನು ಹಿಂದೂ ಧರ್ಮದ ರೀತಿಯಲ್ಲಿ ಮದುವೆ ಯಾಗಿದ್ದು ವಿಶೇಷವಾಗಿದ್ದು ಇವರಿಬ್ಬರ ವಿವಾಹ ನೋಡಲು ಸುತ್ತಮುತ್ತಲ ಜನರು ಸೇರಿದ್ದರು ಎಲ್ಲರ ಸಮ್ಮುಖದಲ್ಲಿ ವಿದೇಶಿ ಯುವತಿ ಭಾರತೀಯ ಅದರಲ್ಲೂ ಕರ್ನಾಟಕದ ಯುವಕನೊಂದಿಗೆ
ಹಿಂದೂ ಸಂಪ್ರದಾಯದ ಪ್ರಕಾರ ಮದುವೆಯಾಗಿದ್ದು ಸ್ಥಳಿಯರಿಗೆ ಸಂತಸ ಮೂಡಿಸಿತು. ಎಲ್ಲರೂ ವಧು ವರರಿಗೆ ಅಕ್ಷತೆ ಹಾಕಿ ನೂರು ಕಾಲ ಈ ಜೋಡಿ ಬಾಳಲಿ ಎಂದು ಶುಭ ಹಾರೈಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Drone Prathap: ನೀರಿಗೆ ಸ್ಫೋಟಕ ಎಸೆದ ಪ್ರಕರಣ; ಪ್ರತಾಪ್‌ಗೆ 10 ದಿನ ನ್ಯಾಯಾಂಗ ಬಂಧನ
Huliyar; ಕೆಮ್ಮಿನ ಔಷಧವೆಂದು ಭಾವಿಸಿ ಕೀಟನಾಶಕ ಸೇವಿಸಿದ ರೈತ ಸಾ*ವು
ಕೃಷಿ ಹೊಂಡದಲ್ಲಿ ಅದೇನೋ ಮಾಡಲು ಹೋಗಿ ಅರೆಸ್ಟ್ ಅದ ಬಿಗ್ ಬಾಸ್ ಖ್ಯಾತಿಯ ಡ್ರೋನ್ ಪ್ರತಾಪ್
Pavagada: ಟ್ರ್ಯಾಕ್ಟರ್ ಗೆ ಕ್ರೇನ್ ಡಿಕ್ಕಿಯಾಗಿ ಓರ್ವ ಸ್ಥಳದಲ್ಲೇ ಸಾವು
Pavagada: ರಸ್ತೆ ಅಪಘಾತದಲ್ಲಿ ಮಂಡ್ಯ ಮೂಲದ ಬೊಲೆರೋ ಚಾಲಕ ಸ್ಥಳದಲ್ಲೇ ಸಾವು
MUST WATCH
ಹೊಸ ಸೇರ್ಪಡೆ
Puttur: ಬಸ್ – ಬೈಕ್ ಅಪಘಾತ; ಸವಾರ ಸಾವು
Parliament; ಸಂಸತ್ ಭವನ ಎದುರು ತಳ್ಳಾಟ; ಇಬ್ಬರು ಸಂಸದರಿಗೆ ಗಾಯ, ರಾಹುಲ್ ವಿರುದ್ದ ಆರೋಪ
BBK11: ಕೊನೆಗೂ ಬಿಗ್ ಬಾಸ್ ಬಿಟ್ಟು ಬಂದಿದ್ದಕ್ಕೆ ಕಾರಣ ಬಹಿರಂಗಪಡಿಸಿದ ಗೋಲ್ಡ್ ಸುರೇಶ್
ಕತ್ತರಿಸಿದ ಮೂಗನ್ನು ಚೀಲದಲ್ಲಿ ಇಟ್ಟು ಆಸ್ಪತ್ರೆಗೆ ಓಡಿ ಬಂದ ಮಹಿಳೆ, ಬೆಚ್ಚಿ ಬಿದ್ದ ವೈದ್ಯರು
Belthangady: ಕುತ್ಲೂರು ನಿವಾಸಿಗಳ ಕೂಗು ಅರಣ್ಯರೋದನ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.