![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
Team Udayavani, Apr 20, 2019, 12:50 PM IST
ಹುಳಿಯಾರು: ಹೋಬಳಿ ದಸೂಡಿ ಗ್ರಾಮದ ಶ್ರೀ ಆಂಜನೇಯಸ್ವಾಮಿಯ ಬ್ರಹ್ಮರಥೋತ್ಸವವು ಭಾರೀ ಜನಸ್ತೋಮದ ನಡುವೆ ಅತ್ಯಂತ ವಿಜೃಂಭಣೆಯಿಂದ ನೆರವೇರಿತು.
ರಥೋತ್ಸವದ ಅಂಗವಾಗಿ ಮುಂಜಾನೆಯಿಂದಲೇ ಸ್ವಾಮಿಯವರ ಧಾರ್ಮಿಕ ಕೈಂಕರ್ಯಗಳು ನಡೆದವು. ಸ್ವಾಮಿಯ ಪೂಜೆಯಿಂದ ಹಿಡಿದು, ಪತ್ತು, ನಗಾರಿ, ಧ್ವಜ, ಸೂರ್ಯಪಾನ, ಚಂದ್ರಪಾನ, ಚಾಮರ, ಮಕರ ತೋರಣ ಹೀಗೆ ಎಲ್ಲಾ ವಿವಿಧ ಕೈಂಕರ್ಯವನ್ನು ಪುರೋಹಿತ ವರ್ಗ ನೆರವೇರಿಸಿದ್ದು, ವಿಶೇಷವಾಗಿತ್ತು. ಆಂಜನೇಯಸ್ವಾಮಿಯವರಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.
ನಂತರ ಗೌಡಗೆರೆಯ ದುರ್ಗಮ್ಮದೇವರು ಹಾಗೂ ಆಂಜನೇಯಸ್ವಾಮಿಯ ಉತ್ಸವ ಮೂರ್ತಿಯನ್ನು ವಿವಿಧ ಹೂಗಳಿಂದ ಅಲಂಕರಿಸಿ ಸಕಲ ವಾದ್ಯಮೇಳದೊಂದಿಗೆ ದೇವಾಲಯವನ್ನು ಪ್ರದಕ್ಷಿಣೆ ಹಾಕಿ ಬಂದ ನಂತರ ಕೆಂಚರಾಯಸ್ವಾಮಿ, ದೂತರಾಯ ಸ್ವಾಮಿ ಹಾಗೂ ನಗಾರಿ ಹೊತ್ತ ಬಸವನೊಂದಿಗೆ ರಥದ ಬಳಿ ಕರೆತರಲಾಯಿತು. ಜೈಕಾರದೊಂದಿಗೆ ಶುಭಲಗ್ನದಲ್ಲಿ ಆಂಜನೇಯ ಸ್ವಾಮಿಯವರನ್ನು ಬ್ರಹ್ಮರಥದ ಮೇಲೆ ಪ್ರತಿಷ್ಠಾಪಿಸಿ ರಥೋತ್ಸವಕ್ಕೆ ಚಾಲನೆ ನೀಡಲಾಯಿತು.
ರಥದ ಮುಂದೆ ನೆಟ್ಟಿದ್ದ ಕದಳಿ ಮರವನ್ನು ತುಂಡರಿಸಿದ ನಂತರ ಫಲಪುಷ್ಪಾದಿಗಳಿಂದ, ರಂಗಿನ ಬಾವುಟ, ತಳಿರು ತೋರಣಗಳಿಂದ ಅಲಂಕೃತಗೊಂಡ ರಥವನ್ನು ಮಂಗಳವಾದ್ಯ, ವೇದ ಘೋಷಗಳ ನಡುವೆ, ಜೈ ಹನುಮಾನ್ ಉದ್ಘೋಷದೊಂದಿಗೆ ಭಕ್ತರು ರಥವನ್ನು ಎಳೆದರು. ಭಕ್ತರು ದೂರದಿಂದಲೇ ಬಾಳೆಹಣ್ಣನ್ನು ರಥದ ಕಲಶಕ್ಕೆ ಎಸೆಯುವ ಮೂಲಕ ತಮ್ಮ ಭಕ್ತಿಯನ್ನು ಸಮರ್ಪಿಸಿದರು. ಮಹಿಳೆಯರು ಸ್ವಾಮಿಗೆ ಹಣ್ಣುಕಾಯಿ ಅರ್ಪಿಸಿದರು. ಮೂವತ್ತು ಅಡಿಗೂ ಎತ್ತರದ ರಥೋತ್ಸವವನ್ನು ವೀಕ್ಷಿಸಲು ಅಪಾರ ಭಕ್ತರು ಆಗಮಿಸಿದ್ದರು.
ರಥೋತ್ಸವದ ನಂತರ ಬ್ರಾಹ್ಮಣರಿಗೆ ಸಂತರ್ಪಣೆ ನಡೆಯಿತಲ್ಲದೆ, ದೇವಾಲಯ ಸಮಿತಿ, ಆರ್ಯವೈಶ್ಯ ಜನಾಂಗದವರಿಂದ, ಯುವಕ ಸಂಘದವರಿಂದ ಭಕ್ತಾಗಳಿಗೆ ಪಾನಕ, ಫಲಾಹಾರ ಸೇವೆ ನಡೆಯಿತು. ರಥಕ್ಕೆ ಹಾಗೂ ಶ್ರೀ ಸ್ವಾಮಿಯವರಿಗೆ ಹಾಕಿದ ಹಾರಗಳನ್ನು ಹರಾಜಿನಲ್ಲಿ ಸಹಸ್ರಾರು ರೂ.ಗಳಿಗೆ ಕೊಳ್ಳುವುದರ ಮೂಲಕ ಭಕ್ತಿಭಾವ ಸಮರ್ಪಿಸಿದರು.
ಆರ್ಯವೈಶ್ಯ ಮಹಿಳಾ ಮಂಡಳಿ, ಶ್ರೀ ಮಾರುತಿ ಭಜನಾಮಂಡಳಿ ಹಾಗೂ ಎಮ್ಮೆಕರಕೆಹಟ್ಟಿ ”ಶ್ರೀರಾಮ ಭಜನಾ ಮಂಡಳಿ”ಯವರಿಂದ ಅಖಂಡ ಭಜನೆ ಹಾಗೂ ಕೆಳಗಲ ಗೊಲ್ಲರಹಟ್ಟಿ ಯಾದವ ತಂಡಗಳ ವಿಶೇಷ ಕೋಲಾಟ ಭಕ್ತರ ಗಮನ ಸೆಳೆಯಿತು. ಊರಿನ ತುಂಬೆಲ್ಲಾ ಕೇಸರಿ ಬಣ್ಣದ ಮಾರುತಿ ಧ್ವಜ ರಾರಾಜಿಸುತ್ತಿತ್ತು. ಶ್ರೀಸೇನೆಯ ಸ್ವಯಂಸೇವಕರು ಶಿಸ್ತಿನಿಂದ ಸಕಲ ಕಾರ್ಯಗಳಲ್ಲೂ ತೊಡಗಿಕೊಂಡು ನಿರ್ವಹಿಸಿದರು. ಬೇಸಿಗೆ ಬಿಸಿಲಿನ ಝಳವನ್ನು ಲೆಕ್ಕಿ ಸದೆ ದಬ್ಬಗುಂಟೆ, ರಂಗನಕೆರೆ, ಹೊಯ್ಸಳಕಟ್ಟೆ, ಕಲ್ಲೇನ ಹಳ್ಳಿ, ಮರೆನಡು, ಹುಳಿಯಾರು, ಬೆಳ್ಳಾರ ಸೇರಿದಂತೆ ದಸೂಡಿ ಸುತ್ತಮುತ್ತಲ ಹತ್ತಾರೂ ಹಳ್ಳಿಗಳ ಜನರು ಆಗಮಿಸಿ ಸ್ವಾಮಿಯ ದರ್ಶನ ಪಡೆದರು.
Congress: ಹೈಕಮಾಂಡ್ ಒಪ್ಪಿಗೆ ಮೇರೆಗೆ ಶೋಷಿತರ ಸಮಾವೇಶ: ಕೆ.ಎನ್.ರಾಜಣ್ಣ
Madhugiri: 90 ಲಕ್ಷದ ಬೆಳೆ ವಿಮೆ ಹಣ ಅಕ್ರಮ ತನಿಖೆಗೆ ಆಗ್ರಹ
Tumkur: ಪರಂ, ರಾಜಣ್ಣ ವರ್ಚಸ್ಸು ಕುಂದಿಸಲು ಸುರೇಶ್‌ಗೌಡ ಟೀಕೆ: ಗೌರಿಶಂಕರ್
Koratagere: ಗುಡಿಸಲಿಗೆ ಆಕಸ್ಮಿಕ ಬೆಂ*ಕಿ; 4 ಮೇಕೆಗಳು ಸಜೀವ ದಹನ; ಇಬ್ಬರಿಗೆ ಗಾಯ
Koratagere: ಅಕ್ರಮವಾಗಿ ಗ್ಯಾಸ್ ಸಿಲಿಂಡರ್ ಫಿಲ್ಲಿಂಗ್; ಓರ್ವ ಆರೋಪಿ ಬಂಧನ
Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್
ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
You seem to have an Ad Blocker on.
To continue reading, please turn it off or whitelist Udayavani.