ತುಮಕೂರು ಅಥವಾ ನೆಲಮಂಗಲ ಸಮೀಪವೇ ಮತ್ತೊಂದು ಏರ್‌ಪೋರ್ಟ್ ಆಗಲಿ: ವಿ.ಸೋಮಣ್ಣ
ಫ್ಲೋರೈಡ್‌ಯುಕ್ತ ನೀರಿನ ಪರೀಕ್ಷೆಗೆ 15 ದಿನಗಳ ಗಡುವು: ಕೇಂದ್ರ ಸಚಿವ
Team Udayavani, Jan 11, 2025, 7:58 PM IST
ಕೊರಟಗೆರೆ: ತುಮಕೂರು ಅಥವಾ ನೆಲಮಂಗಲ ಸಮೀಪ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಆಗ್ಬೇಕು. ಈ ಬಗ್ಗೆ ಗೃಹ ಸಚಿವ ಡಾ.ಜಿ.ಪರಮೇಶ್ವರ ಜೊತೆ ನಾನು ಈಗಾಗಲೇ ಚರ್ಚಿಸಿದ್ದೀನಿ. ನೀವೇನಾದ್ರು ಬೇರೆ ಕಡೆ ಮಾಡೋಕೆ ಪ್ರಯತ್ನಸಿದ್ರೇ ನಮಗೇ ಎಚ್‌ಎಎಲ್ ನಿಲ್ದಾಣವೇ ಸಾಕು ಅಂತೀವಿ. ರಾಜ್ಯ ಸರಕಾರಕ್ಕೆ ನಾನು ಟ್ರಂಪ್‌ಕಾರ್ಡ್ ಕೊಟ್ಟಿದ್ದೀನಿ ಎಂದು ಕೇಂದ್ರ ರೈಲ್ವೇ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ತಿಳಿಸಿದರು.
ಕೊರಟಗೆರೆ ತಾಲೂಕು ಕೋಳಾಲದ 7 ಗ್ರಾಪಂ ಮತ್ತು ಕಸಬಾ ಹೋಬಳಿಯ 6 ಗ್ರಾಪಂ ವ್ಯಾಪ್ತಿಯ ಸಾರ್ವಜನಿಕರ ಕುಂದು ಕೊರತೆ ಸಭೆ ಹಾಗೂ ಕೇಂದ್ರ ಸರಕಾರದ ಯೋಜನೆಯಡಿ ಬರುವ ಫಲಾನುಭವಿಗಳಿಗೆ ವಿವಿಧ ಇಲಾಖೆಯ ಸವಲತ್ತು ವಿತರಣೆ ಕಾರ್ಯಕ್ರಮ ಶನಿವಾರ ಉದ್ಘಾಟಿಸಿ ಮಾತನಾಡಿ
ಕೇಂದ್ರ ಹಣಕಾಸು ಸಚಿವಾಲಯ ರಾಜ್ಯ ಸರಕಾರಕ್ಕೆ 6,310 ಕೋಟಿ ಹಣ ಬಿಡುಗಡೆ ಮಾಡಿದೆ. ಭದ್ರಾ ಮೇಲ್ದಂಡೆ ನೀರಾವರಿ ಯೋಜನೆಗೆ ನರೇಂದ್ರ ಮೋದಿ ಸರಕಾರ ಅಸ್ತು ಅಂದಿದೆ. ತುಮಕೂರು ಜಿಲ್ಲೆಯಲ್ಲಿ 4 ದಿಕ್ಕಿನಲ್ಲೂ ಅಂತಾರಾಷ್ಟ್ರೀಯ ಮಟ್ಟದ ಹೆದ್ದಾರಿಗಳಿವೆ. 40 ಸಾವಿರ ಎಕರೆ ಪ್ರದೇಶದಲ್ಲಿ ಇಂಡಸ್ಟ್ರಿಯಲ್ ಪ್ರದೇಶ ಇದೆ. ತುಮಕೂರು ನಗರ ರಾಜಧಾನಿಗೆ ಹತ್ತಿರವಾಗಿ ಬೆಳೆಯುತ್ತಿರುವ ಬಗ್ಗೆ ಗೃಹಸಚಿವ ಡಾ.ಜಿ.ಪರಮೇಶ್ವರ ಹತ್ತಿರ ಚರ್ಚೆ ಮಾಡಿದ್ದೀನಿ ಎಂದರು.
ಫೆಬ್ರವರಿಯಲ್ಲಿ ಕಾಮಗಾರಿ ಆರಂಭ:
ನರೇಂದ್ರ ಮೋದಿ ರಾಜ್ಯದ ರೈಲ್ವೆ ಯೋಜನೆಗೆ 5,300ಕೋಟಿ ಅನುದಾನ ಬಿಡುಗಡೆ ಮಾಡಿದ್ದಾರೇ. 2,400 ಕೋಟಿ ವೆಚ್ಚದ ನೆಲಮಂಗಲ ತುಮಕೂರಿನ 45 ಕಿ.ಮೀ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಫೆಬ್ರವರಿಯಿಂದ ಪ್ರಾರಂಭ ಆಗುತ್ತೇ. ತುಮಕೂರು ಜಿಲ್ಲೆಯಲ್ಲಿ 46ಸಾವಿರ ಜನ ವಿಶೇಷ ಚೇತನರು ಇದ್ದಾರೆ. 29 ಸರಕಾರಿ ಇಲಾಖೆಯಲ್ಲಿಯು ಸಹ ಕೇಂದ್ರ ಸರಕಾರದ ಯೋಜನೆಯಿದೆ. ಶಿರಾ, ಮಧುಗಿರಿ, ಕೊರಟಗೆರೆ, ಪಾವಗಡ ಕ್ಷೇತ್ರಕ್ಕೆ ರಾಷ್ಟ್ರೀಯ
ಹೆದ್ದಾರಿ ವಿಸ್ತಾರ ಆಗಲಿದೆ ಎಂದು ಮಾಹಿತಿ ನೀಡಿದರು.
ತುಮಕೂರು ಜಿಲ್ಲೆಯ ಕೊಳವೆಬಾವಿಗಳ ಫ್ಲೋರೈಡ್ ನೀರಿನ ಬಗ್ಗೆ 15 ದಿನಗಳ ಒಳಗೆ ನನಗೇ ಮಾಹಿತಿ ನೀಡಿ. ಕೇಂದ್ರದಿಂದ ನಾನು ಪ್ರತಿ ಗ್ರಾಮಕ್ಕೆ 2 ಶುದ್ದ ಕುಡಿಯುವ ನೀರಿನ ಘಟಕ ತರ್ತೀನಿ. ಕೊಳವೆಬಾವಿಯ ನೀರಿನ ಗುಣಮಟ್ಟದ ಬಗ್ಗೆ ದಯವಿಟ್ಟು ಪರಿಶೀಲನೆ ನಡೆಸಿ. 45ವರ್ಷದ ರಾಜಕೀಯ ಅನುಭವ ಜಿಲ್ಲೆಯ ಅಭಿವೃದ್ದಿಗೆ ಮಾತ್ರ ಮೀಸಲು. 2 ವರ್ಷ ನನಗೇ ಅವಕಾಶ ನೀಡಿ ಅಭಿವೃದ್ಧಿ ರೂಪುರೇಷೆ ಬದಲು ಮಾಡ್ತೀವಿ ಎಂದು ಹೇಳಿದರು.
ಡಿಸಿಎಂ ನೀರಾವರಿ ಯೋಜನೆ ಬಗ್ಗೆ ಗಮನಹರಿಸಲಿ:
ಭದ್ರಾ ಮೇಲ್ದಂಡೆ ಯೋಜನೆಗೆ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಗ್ರೀನ್ ಸಿಗ್ನಲ್ ನೀಡಿದೆ. ಭದ್ರಾ ಯೋಜನೆಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಅನುಮತಿ ಕೊಟ್ರಾ ನೀವೇ ಹೇಳಿ. ಪ್ರಧಾನಿ ನರೇಂದ್ರ ಮೋದಿ ಅಭಿವೃದ್ದಿಯ ವಿಚಾರದಲ್ಲಿ ಯಾವ ರಾಜ್ಯಕ್ಕೂ ತಾರತಮ್ಯ ಮಾಡೋದಿಲ್ಲ. ಕೇಂದ್ರ ಮತ್ತು ರಾಜ್ಯ ಎನ್ನದೇ ರಾಜಕೀಯ ಬದಿಗಿಟ್ಟು ಡಿಸಿಎಂ ಅವರು ನೀರಾವರಿ ಯೋಜನೆಯ ಕಾಮಗಾರಿ ರೂಪುರೇಷೆ ಬಗ್ಗೆ ಗಮನ ಹರಿಸಲಿ ಎಂದು ಕೇಂದ್ರ ಸಚಿವ ವಿ.ಸೋಮಣ್ಣ ಹೇಳಿದರು.
ನರೇಂದ್ರ ಮೋದಿಯ ಪೋಟೋ ಏಕಿಲ್ಲ..?
ಅಧಿಕಾರಿಗಳೇ ಜಲಜೀವನ್ ಮಿಷನ್ ಕೇಂದ್ರ ಸರಕಾರದ ಯೋಜನೆ ಅಲ್ಲವೇ. ನಾನು ಕೇಂದ್ರ ಜಲಶಕ್ತಿ ಸಚಿವ ಎಂಬುದೇ ನಿಮಗೇ ಗೊತ್ತಿಲ್ಲವೇ. ತುಮಕೂರು ಜಿಲ್ಲೆಗೆ 2 ಸಾವಿರ ಕೋಟಿಗೂ ಅಧಿಕ ಅನುದಾನ ಬಂದಿದೆ. ಒಂದೇ ಒಂದು ಗ್ರಾಮದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಒಂದೇ ಒಂದು ಫೋಟೊ ಹಾಕಿಲ್ಲ ಏಕೆ. ಮುಂದಿನ ಸಲ ನಾನು ಮಾತಿನಲ್ಲಿ ಹೇಳೋದಿಲ್ಲ ಪೆನ್, ಪೇಪರ್ ಹಿಡಿತೀನಿ ಕಣ್ರಯ್ಯ ನೆನಪಿರಲಿ. ವಿನಂತಿ ಮಾಡೋದು ನನ್ನ ವಿಕ್‌ನೇಸ್ ಅಂದುಕೊಳ್ಳಬೇಡಿ. ಇಷ್ಟೇ ಈತನ ಯೋಗ್ಯತೆ ಅಂದುಕೊಂಡ್ರೇ ನನ್ನ ಬಳಿ ಇನ್ನೂ ಬೇಕಾದಷ್ಟು ಬಾಂಬುಗಳಿವೆ ಎಂದು ಕೇಂದ್ರ ಸಚಿವ ವಿ.ಸೋಮಣ್ಣ ಎಚ್ಚರಿಕೆ ನೀಡಿದರು.
ನಾನು ಕಾರ್ಯಕ್ರಮ-ಸಭೆ ಮಾಡೋದಿಲ್ಲ..!
ನಾನು ಸಂಸದ ಅನ್ನೋದನ್ನೇ ಅಧಿಕಾರಿಗಳು ಮರೆತು ಬಿಟ್ಟಿದ್ದಾರೇ. ಬಾಲಂಗೋಚಿಗಳ ಮಾತಿನಿಂದ ಅಧಿಕಾರಿವರ್ಗ ಎಡವಬೇಡಿ. ಟ್ರಾನ್ಸ್‌ಫಾರಂ ಬದಲಾವಣೆಗೆ 1 ಲಕ್ಷ ಕೇಳ್ತಿರಂತೆ ಅಂತಾ ಜನ ಹೇಳ್ತಿದ್ದಾರೇ. ನಾನು ಇನ್ನೂ ಮುಂದೆ ತುಮಕೂರು ಜಿಲ್ಲೆಯಲ್ಲಿ ಯಾವುದೇ ಕಾರ್ಯಕ್ರಮ ಅಥವಾ ಸಭೆ ಮಾಡೋದಿಲ್ಲ. ತಹಶೀಲ್ದಾರ್, ತಾಪಂ ಇಒ, ರೇಷ್ಮೆ, ಕೃಷಿ, ತೋಟಗಾರಿಕೆ ಸೇರಿದಂತೆ ಗ್ರಾಪಂ ಕಚೇರಿಯಲ್ಲಿ ಬಂದು ಕುಳಿತುಕೊಳ್ತೀನಿ ನೆನಪಿರಲಿ ಎಂದು ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆಯ ಸಂದೇಶ ನೀಡಿದರು.
300ಕ್ಕೂ ಅಧಿಕ ಜನರಿಗೆ ಸೌಲಭ್ಯ ವಿತರಣೆ
ತುಮಕೂರು ಜಿಲ್ಲಾಡಳಿತ, ಕೊರಟಗೆರೆ ಆಡಳಿತ, ತಾಪಂ, ಕೃಷಿ, ರೇಷ್ಮೆ, ತೋಟಗಾರಿಕೆ ಸೇರಿದಂತೆ ಹತ್ತಾರು ಇಲಾಖೆಗಳಿಂದ ಕೃಷಿವಿಕಾಸ, ತುಂತುರು ನೀರಾವರಿ, ರಾಷ್ಟ್ರೀಯ ಜಾನುವಾರು ಮೀಷನ್, ನರೇಗಾ, ಅಲಿಂಕೋ ಸಾಧನಾದ ವಿಶೇಷ ಚೇತನರು ಸೇರಿ 300ಕ್ಕೂ ಅಧಿಕ ಪಲಾನುಭವಿಗಳಿಗೆ ಕೇಂದ್ರ ಸಚಿವ ವಿ.ಸೋಮಣ್ಣ ಕೇಂದ್ರ ಸರಕಾರದಿಂದ ಬರುವ ವಿವಿಧ ಸೌಲಭ್ಯಗಳನ್ನು ಕೋಳಾಲದಲ್ಲಿ ವಿತರಿಸಿದರು.
ಕಾರ್ಯಕ್ರಮದಲ್ಲಿ ತುಮಕೂರು ನಗರ ಶಾಸಕ ಜ್ಯೋತಿ ಗಣೇಶ್, ಗ್ರಾಮಾಂತರ ಶಾಸಕ ಸುರೇಶಗೌಡ, ಮಾಜಿ ಶಾಸಕ ಪಿ.ಆರ್.ಸುಧಾಕರ ಲಾಲ್, ಬಿಜೆಪಿ ಮುಖಂಡ ಬಿ.ಎಚ್.ಅನಿಲ್‌ಕುಮಾರ್, ಬಿಜೆಪಿ ಮಂಡಲ ಅಧ್ಯಕ್ಷ ದರ್ಶನ್, ತುಮುಲ್ ನಿರ್ದೇಶಕ ಸಿದ್ದಗಂಗಯ್ಯ, ಮಾಜಿ ಜಿಪಂ ಸದಸ್ಯ ಶಿವರಾಮಯ್ಯ, ಮಧುಗಿರಿ ಎಸಿ ಕೊಟ್ಟೂರು ಶಿವಪ್ಪ, ಕೊರಟಗೆರೆ ತಹಶೀಲ್ದಾರ್ ಮಂಜುನಾಥ.ಕೆ, ತಾಪಂ ಇಓ ಅಪೂರ್ವ, ಗ್ರಾಪಂ ಅಧ್ಯಕ್ಷ ನಟರಾಜ್, ಶ್ರೀನಿವಾಸಮೂರ್ತಿ, ಮಾವತ್ತೂರು ಮಂಜುನಾಥ ಸೇರಿದಂತೆ ಇತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BJP: ಪ್ರಿಯಾಂಕ್ ಖರ್ಗೆ ಧಮ್ಕಿಯಿಂದ ಕಲಬುರಗಿಗೆ ಹೋಗದ ವಿಜಯೇಂದ್ರ: ಶಾಸಕ ಯತ್ನಾಳ್
Leopard: ಹಾಡಹಗಲೇ ಕುದುರೆಮುಖ ರಾಷ್ಟ್ರೀಯ ಹೆದ್ದಾರಿಯಲ್ಲಿ ಓಡಾಡಿದ ಚಿರತೆ…
Dandeli: ನಿಯಮ ಉಲ್ಲಂಘಿಸಿದ ದ್ವಿಚಕ್ರ ವಾಹನಗಳಿಗೆ ಬಿಸಿ ಮುಟ್ಟಿಸಿದ ಅಧಿಕಾರಿ
Mangaluru Lit Fest: ಯಾವುದೇ ಉತ್ಸವ ಯಾಂತ್ರಿಕವಾದರೆ ಹೊಸತನ ಮೂಡಲ್ಲ: ಎಸ್.ಎಲ್ ಭೈರಪ್ಪ
Belagavi: ಗಾಂಜಾ ವಿಚಾರಕ್ಕೆ ಒಡಹುಟ್ಟಿದವರ ಗಲಾಟೆ; ಓರ್ವ ಸಾವು, ಮತ್ತೋರ್ವ ಗಂಭೀರ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.