ಕಾರಿಗಾಗಿ ಚಾಲಕನ ಕೊಲೆಗೈದ ಕಿರಾತಕನ ಬಂಧನ
Team Udayavani, Feb 7, 2021, 4:29 PM IST
ಕೊರಟಗೆರೆ: ಅಕ್ಕನ ಮದುವೆ ಬಳಿಕ ಅವರನ್ನು ಕಾರಿನಲ್ಲಿ ಕರೆದುಕೊಂಡು ಹೋಗಬೇಕೆಂದುಕೊಂಡ ಸೋದರ ಬಾಡಿಗೆ ಕಾರನ್ನು ಅಪಹರಿಸಲು ಸಂಚು ರೂಪಿಸಿ, ಚಾಲಕನ ಕೊಲೆ ಮಾಡಿ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.
ಅತ್ತಿಬೆಲೆ ನಿವಾಸಿ ವಿರೇಂದ್ರ(24) ಬಂಧಿತ ಆರೋಪಿ. ಫೆ. 16ರಂದು ಅತ್ತಿಬೆಲೆಯಲ್ಲಿ ವಿರೇಂದ್ರನ ಅಕ್ಕನ ಮದುವೆ ಇತ್ತು. ಮದುವೆ ಬಳಿಕ ಅಕ್ಕ ಭಾವನನ್ನು ವಿವಿಧ ದೇಗುಲಗಳಿಗೆ ಕರೆದುಕೊಂಡು ಹೋಗಬೇಕೆಂದು ಕಾರನ್ನು ಬಾಡಿಗೆಗೆ ಪಡೆದು ನಂತರ ಚಾಲಕನನ್ನು ಕೊಲೆ ಮಾಡಿ ಕಾರನ್ನು ಅಪಹರಿಸಬಹುದೆಂದು ಸಂಚು ರೂಪಿಸಿದ್ದ. ಅದರಂತೆ ಪೆ. 2ರಂದು ರಾತ್ರಿ 7.30ರಲ್ಲಿ ಎಲೆಕ್ಟ್ರಾನಿಕ್ ಸಿಟಿಗೆ ಹೋಗಿ ವೀರೇಂದ್ರ ಬಾಡಿಗೆ ಕಾರನಲ್ಲಿ ಚಾಲಕ ನಿಸಾರ್ ಅಹ್ಮದ್ ಜತೆ ತುಮಕೂರು ಕಡೆಗೆ ತೆರಳಿದ್ದ.
ನೆಲಮಂಗಲಕ್ಕೆ ಬರುವಾಗ ಪೊಲೀಸರು, ಇವರ ವಾಹನ ತಪಾಸಣೆ ನಡೆಸಿದ್ದು, ಸಂಚು ವಿಫಲವಾಗಿದೆ. ನಂತರ ಸಂಗಮ್ ಹೋಟೆಲ್‌ನಲ್ಲಿ ಊಟ ಮಾಡಿ ದಾಬಸ್ ಪೇಟೆಗೆ ಬಂದಿದ್ದು, ನಾವು ಮಧುಗಿರಿ ಹೋಗೋಣ ಎಂದು ಚಾಲಕನಿಗೆ ಹೇಳಿದ್ದಾನೆ. ಮಧಗಿರಿ ಮಾರ್ಗದಲ್ಲಿ ಕೊರಟಗೆರೆ ಬಳಿ ತುಂಬಾಡಿಗೆ ಬಂದು, ಅಲ್ಲಿ ಸುಮಾರು ,1ಗಂಟೆ ಸಮಯ ಕಾರನ್ನು ನಿಲ್ಲಿಸಿ ಕಾಲವನ್ನು ಕಳೆದಿದ್ದಾರೆ.
11.30ರಲ್ಲಿ ಇಲ್ಲಿಗೆ ನಮ್ಮ ಮಾವ ಬರುತ್ತಾರೆ ಬಾಡಿಗೆ ಕೊಟ್ಟು ಕಳುಹಿಸುತ್ತೇನೆ ಎಂದು ವೀರೇಂದ್ರ ಹೇಳಿ¨ದ್ದಾನೆ. ಈ ಸಮಯದಲ್ಲಿಯೇ ಈತನ ಮಾತನ್ನು ನಂಬಿ ಕಾರನ್ನು ಮಧುಗಿರಿ ಮಾರ್ಗಕ್ಕೆ ನಿಲ್ಲಿಸಲು ಹೋದ ಚಾಲಕನನ್ನು ಹತ್ಯೆ ಮಾಡಿದ್ದಾನೆ. ಬಳಿಕ ಕಾರನ್ನೂ ತೆಗೆದು ಕೊಂಡು ಹೋಗಲು ಸಾಧ್ಯವಾಗದೆ ಅಲ್ಲಿಂದ ರವೀಂದ್ರ ಪರಾರಿಯಾಗಿದ್ದಾನೆ.
ಇದನ್ನೂ ಓದಿ :ಕೇಂದ್ರದಿಂದ ರೈತರ ಕಡೆಗಣನೆ: ವೀರಣ್ಣ
ಈ ಮಾರ್ಗದಲ್ಲಿ ಹೋಗುತ್ತಿದ್ದವರು ಕಾರನ್ನು ಗಮನಿಸಿದಾಗ ಕೊಲೆ ಬೆಳಕಿಗೆ ಬಂದಿದ್ದು ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ. ಸ್ಥಳೀಯ ಪೊಲೀಸರು ಸ್ಥಳಕ್ಕೆ ಭೇಟಿ ಪರಿಶೀಲಿಸಿದ್ದು, ವರಿಷ್ಠಾಧಿಕಾರಿ ಕೋನವಂಶಿಕೃಷ್ಣ ಅವರು ಹೆಚ್ಚುವರಿ ಪೋಲಿಸ್ ವರಿಷ್ಟಾಧಿಕಾರಿಗಳಾದ ಉದೇಶ್ ಅವರ ನೇತೃತ್ವದಲ್ಲಿ ತನಿಖೆ ನಡೆದಿದ್ದು, ಆರೋಪಿಯನ್ನು ಬಂಧಿಸಲಾಗಿದೆ. ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Politics: ಬೆಳಗಾವಿ ಅಧಿವೇಶನವೇ ಸಿಎಂ ಸಿದ್ದರಾಮಯ್ಯರ ಕೊನೆಯ ಅಧಿವೇಶನ: ವಿಜಯೇಂದ್ರ
Belagavi: ಪೂರ್ಣಾವಧಿ ಅಧಿವೇಶನದಲ್ಲಿ ಸಮಸ್ಯೆಗಳ ಪೂರ್ಣ ಚರ್ಚೆಯಾಗಲಿ: ಡಾ.ಪ್ರಭಾಕರ್ ಕೋರೆ
Hubli: ಗ್ಯಾರಂಟಿ ಯೋಜನೆ ಹಣ ನಿರ್ಹವಣೆಗೆ ಬಿಪಿಎಲ್ ಕಾರ್ಡ್ ರದ್ದು: ವಿಜಯೇಂದ್ರ ಆರೋಪ
KMC: ನವೀಕೃತ ವೈದ್ಯಕೀಯ ಆಂಕೊಲಾಜಿ ಹೊರರೋಗಿ, ಕಿಮೊಥೆರಪಿ ಡೇ ಕೇರ್ ಕೇಂದ್ರ ಉದ್ಘಾಟನೆ
Mudhol: ಕೈಕೊಟ್ಟ ಬೆಳೆ… ಸಾಲಬಾಧೆಗೆ ಹೆದರಿ ನೇಣಿಗೆ ಶರಣಾದ ರೈತ
MUST WATCH
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ
ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು
ಶರಣಾಗತಿಗೆ ಸೂಚಿಸಿದರೂ ಸ್ಪಂದಿಸಿಲ್ಲ, ಗುಂಡಿನ ಚಕಮಕಿಯಲ್ಲಿ ಮೋಸ್ಟ್ ವಾಂಟೆಡ್ ನಕ್ಸಲ್ ಸಾವು
ಹೊಸ ಸೇರ್ಪಡೆ
Politics: ಬೆಳಗಾವಿ ಅಧಿವೇಶನವೇ ಸಿಎಂ ಸಿದ್ದರಾಮಯ್ಯರ ಕೊನೆಯ ಅಧಿವೇಶನ: ವಿಜಯೇಂದ್ರ
Belagavi: ಪೂರ್ಣಾವಧಿ ಅಧಿವೇಶನದಲ್ಲಿ ಸಮಸ್ಯೆಗಳ ಪೂರ್ಣ ಚರ್ಚೆಯಾಗಲಿ: ಡಾ.ಪ್ರಭಾಕರ್ ಕೋರೆ
Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 38 ಬ*ಲಿ
IFFI Goa: ಸಿನಿಮಾ ಸಾಯುವುದಿಲ್ಲ, ಕಲೆಯೂ ಅಷ್ಟೇ,…ಆದರೆ ನಾವು ಉಳಿಸಿಕೊಳ್ಳಬೇಕಷ್ಟೇ !
Sandalwood: ಯಾರೋ ನಾ ಕಾಣೆ, ಚಂದಾಗೌಳೆ ಶಾಣೆ..: ಕಟ್ಲೆ ಹಾಡು ಬಂತು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.