ರಾಜಗೋಪುರ ನಿರ್ಮಾಣಕ್ಕೆ ನೆರವು


Team Udayavani, Nov 25, 2019, 4:53 PM IST

tk-tdy-1

ತುಮಕೂರು: ನಗರದ ಅತ್ಯಂತ ಪುರಾತನ ದೇವತೆಯಾಗಿರುವ ಕೋಟೆ ಗ್ರಾಮದೇವತೆಗೆ ಸುಮಾರು 400 ವರ್ಷಗಳ ಇತಿಹಾಸವಿದ್ದು, ತುಮಕೂರು ಗ್ರಾಮ ರಕ್ಷಿಸುತ್ತಿರುವ ಗ್ರಾಮ ದೇವತೆ ದೇವಾಲಯದ ರಾಜಗೋಪುರ ನಿರ್ಮಾಣಕ್ಕೆ ನೆರವು ನೀಡುವುದಾಗಿ ಸಂಸದ ಜಿ.ಎಸ್‌. ಬಸವರಾಜ್‌ ತಿಳಿಸಿದರು.

ನಗರದ ಪುರಾತನ ಕಾಲದ ಎಮ್ಮೆಕೇರಿ, ಪಾಂಡುರಂಗ ನಗರದ ಕೋಟೆ ಗ್ರಾಮದೇವತೆ ದೇವಾಲಯದಲ್ಲಿ ಕಾರ್ತೀಕ ಮಾಸದ ಅಂಗವಾಗಿ ಏರ್ಪಡಿಸಿದ್ದ ವಿಶೇಷ ಪೂಜೆಯಲ್ಲಿ ಮಾತನಾಡಿದರು. ನಮ್ಮನ್ನು ಈ ದೇವತೆ ರಕ್ಷಣೆ ಮಾಡುತ್ತಿದೆ ಎಂಬ ನಂಬಿಕೆ ಜನರಲ್ಲಿ ಇಂದಿಗೂ ಇದೆ. ಗ್ರಾಮದ 18 ಕೋಮುಗಳ ಜನರು ಈ ದೇವತೆ ಮೇಲೆ ನಂಬಿಕೆ ಇಟ್ಟುಕೊಂಡಿದ್ದು, ಜೀರ್ಣೋದ್ಧಾರಗೊಂಡಿರುವ ದೇವಾಲಯದ ರಾಜಗೋಪುರ ಮತ್ತು ವಿಮಾನಗೋಪುರ ನಿರ್ಮಾಣಕ್ಕೆ ನೆರವು ಮಾಡುವುದಾಗಿ ಭರವಸೆ ನೀಡಿದರು.

ಗ್ರಾಮದ ರಕ್ಷಣೆ: ದೇವಸ್ಥಾನದ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಬಾವಿಕಟ್ಟೆ ವಿಶ್ವನಾಥ್‌ ಮಾತನಾಡಿ, ಸುಮಾರು 400 ವರ್ಷಗಳ ಹಿಂದೆ ಕೇವಲ ಒಂದು ನೂರು ಮನೆ ಹೊಂದಿದ್ದ ತುಮಕೂರು ಗ್ರಾಮದಲ್ಲಿ ವಾಸವಾಗಿದ್ದ ಜನರು ಸುತ್ತಮುತ್ತಲ ಕಾಡುಗಳಿಂದ ಸೌಧೆ ಕಡಿದು ಮಾರಾಟ ಮಾಡಿ ಜೀವನ ನಡೆಸುತ್ತಿದ್ದರು. ಗ್ರಾಮಕ್ಕೆ ಕಾಲರಾ ಮತ್ತು ಪ್ಲೇಗ್‌ ಬಂದು ಸಾವು, ನೋವು ಉಂಟಾಗಿತ್ತು. ಈ ವೇಳೆ ಗ್ರಾಮದ ಜನರು ರಕ್ಷಿಸುವಂತೆ ಕೋಟೆ ಗ್ರಾಮದೇವತೆಯನ್ನು ಬೇಡಿ ದೇವಾಲಯದಲ್ಲಿ ರಕ್ಷಣೆ ಪಡೆದರು. ಅಂದಿ ನಿಂದ ಇಂದಿನವರೆಗೆ ತುಮಕೂರು ಗ್ರಾಮವನ್ನು ದೇವತೆ ಕಾಯುತ್ತಿದ್ದಾಳೆ ಎಂಬ ನಂಬಿಕೆ ಇದೆ ಎಂದರು.

ಮಹಾದ್ವಾರ ನಿರ್ಮಿಸುವ ಉದ್ದೇಶ:  ಶಿಥಿಲಗೊಂಡ ದೇವಾಲಯವನ್ನು 2008ರಲ್ಲಿ ಪಟೇಲರು, ಯಜಮಾನರು, ಮಡಿವಾಳರು, ತಳವಾರಿಕೆ ಹಾಗೂ ಎನ್‌.ಆರ್‌. ಕಾಲೋನಿ ಕುಟುಂಬಗಳು, ಭಕ್ತರ ಸಹಕಾರದೊಂದಿಗೆ ಜೀರ್ಣೋದ್ಧಾರಗೊಳಿಸಲಾಗಿದೆ. ಪ್ರಸ್ತುತ ದೇವಾಲಯದ ವಿಮಾನಗೋಪುರ ಮತ್ತು ರಾಜಗೋಪುರ ನಿರ್ಮಾಣ ಪ್ರಗತಿಯಲ್ಲಿದೆ. ಅಲ್ಲದೆ ಎಮ್ಮೆಕೇರಿಗೆ ಪ್ರವೇಶ ಪಡೆಯುವ ಅಶೋಕರಸ್ತೆ ಮತ್ತು ಚಿಕ್ಕಪೇಟೆಯ ವಾಸವಿ ದೇವಾಲಯದ ಎದುರಿನ ರಸ್ತೆ ಆರಂಭದಲ್ಲಿ ಮಹಾದ್ವಾರ ನಿರ್ಮಿಸುವ ಉದ್ದೇಶ ಹೊಂದಲಾಗಿದೆ. ಮುಂದಿನ ಎರಡು ತಿಂಗಳಲ್ಲಿ ಜಾತ್ರೆ ಇದ್ದು, ಭಕ್ತರು ಕೈಲಾದ ಸಹಾಯ ಮಾಡುವ ಮೂಲಕ ಗೋಪುರ ನಿರ್ಮಾಣ ಪೂರ್ಣಗೊಳ್ಳಲು ಸಹಕಾರ ನೀಡುವಂತೆ ಮನವಿ ಮಾಡಿದರು.

ಪಟೇಲ್‌ ವಂಶಸ್ಥರಾದ ವಿಶ್ವನಾಥ್‌, ಶಾನು  ಭೋಗರ ವಂಶಸ್ಥರಾದ ಹರಿದಾಸ್‌, ಮಾಜಿ ನಗರಸಭಾ ಸದಸ್ಯರಾದ ಟಿ.ಬಿ.ಹನುಮಂತಯ್ಯ ಕುಟುಂಬ ಟಿ.ಬಿ.ಮಲ್ಲೇಶ್‌, ಎಂ.ಪಿ.ಕುಮಾರಸ್ವಾಮಿ, ಯಜಮಾನರ ವಂಶಸ್ಥರಾದ ರಾಜಕುಮಾರ್‌, ದೇವಾಲಯ ಅಭಿವೃದ್ಧಿª ಸಮಿತಿ ಸದಸ್ಯರಾದ ಪ್ರಭುರಾಮ್‌ ಸೇs…, ಟಿ.ಬಿ.ಸುರೇಶ  ಬಾಬು, ನಗರಸಭೆ ಮಾಜಿ ಸದಸ್ಯ ಟಿ.ಜಿ.ಬಾಲಕೃಷ್ಣ, ಕರಾಟೆ ಕೃಷ್ಣಪ್ಪ, ಅರ್ಚಕರು ಭಾಗವಹಿಸಿದ್ದರು.

ಟಾಪ್ ನ್ಯೂಸ್

1-aaaaa

Caught On Cam!;ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ: Video

Khattar

2047 ರ ವೇಳೆಗೆ ದೇಶದ 50% ಜನ ನಗರ ಪ್ರದೇಶಗಳಲ್ಲಿ ವಾಸಿಸುತ್ತಾರೆ: ಸಚಿವ ಖಟ್ಟರ್

6

VIDEO: ಅಪ್ಪಿಕೊಳ್ಳಲು ಬಂದ ನಿರ್ದೇಶಕನನ್ನು ತಡೆದು ಕೆನ್ನೆಗೆ ಮುತ್ತು ಕೊಟ್ಟ ನಿತ್ಯಾ ಮೆನನ್

naksal (2)

Chhattisgarh: ಸ್ಫೋ*ಟದಲ್ಲಿ ಮೃ*ತಪಟ್ಟ 8 ಪೊಲೀಸರಲ್ಲಿ 5 ಮಂದಿ ಮಾಜಿ ನಕ್ಸಲೀಯರು

3-naxal

Naxalites ಶರಣಾಗತಿಯಲ್ಲಿ ಟ್ವಿಸ್ಟ್‌; ಚಿಕ್ಕಮಗಳೂರು ಬದಲು ಬೆಂಗಳೂರಿನಲ್ಲಿ ನಕ್ಸಲರ ಶರಣಾಗತಿ

ISRO: ಇಸ್ರೋ ನೂತನ ಅಧ್ಯಕ್ಷರಾಗಿ ವಿ.ನಾರಾಯಣನ್‌ ನೇಮಕ: ಚಿನ್ನದ ಪದಕ ವಿಜೇತ VN  ಪರಿಚಯ…

ISRO: ಇಸ್ರೋ ನೂತನ ಅಧ್ಯಕ್ಷರಾಗಿ ವಿ.ನಾರಾಯಣನ್‌ ನೇಮಕ: ಚಿನ್ನದ ಪದಕ ವಿಜೇತ VN  ಪರಿಚಯ…

Sandalwood: ಸ್ಪಾನ್ಸರ್ಸ್ ಇ‌ದಿದ್ರೆ ನಾನ್ಯಾಕೆ 12 ವರ್ಷ ಕಷ್ಟಪಡಬೇಕಿತ್ತು: ರಚಿತಾ ರಾಮ್‌

Sandalwood: ಸ್ಪಾನ್ಸರ್ಸ್ ಇ‌ದಿದ್ರೆ ನಾನ್ಯಾಕೆ 12 ವರ್ಷ ಕಷ್ಟಪಡಬೇಕಿತ್ತು: ರಚಿತಾ ರಾಮ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Tumakuru-Leopard

Tumakuru: ಬಾಲ ಹಿಡಿದು ಚಿರತೆ ಸೆರೆ ಹಿಡಿದ ಯುವಕ; ಅರಣ್ಯ ಸಿಬ್ಬಂದಿ ಶಾಕ್‌!

ಬೆಳ್ಳಂಬೆಳಗ್ಗೆ ತುಮಕೂರಿನಲ್ಲಿ ಭೀಕರ ಅಪಘಾತ… ಬೈಕ್ ನಲ್ಲಿದ್ದ ಮೂವರು ಸ್ಥಳದಲ್ಲೇ ಮೃತ್ಯು

ಬೆಳ್ಳಂಬೆಳಗ್ಗೆ ತುಮಕೂರಿನಲ್ಲಿ ಭೀಕರ ಅಪಘಾತ… ಬೈಕ್ ನಲ್ಲಿದ್ದ ಮೂವರು ಸ್ಥಳದಲ್ಲೇ ಮೃತ್ಯು

1-korata

Koratagere; ಲಾರಿ- ಕಾರಿನ ನಡುವೆ ಭೀಕರ ಅಪಘಾ*ತ: ಯುವಕರಿಬ್ಬರ ಸಾ*ವು

ಶಾಲಾ ಮಕ್ಕಳನ್ನು ಕರೆದೊಯ್ಯುತ್ತಿದ್ದ ವಾಹನ ಪಲ್ಟಿಯಾದ ಪ್ರಕರಣ: ಇಬ್ಬರು ಶಿಕ್ಷಕರು ಸಸ್ಪೆಂಡ್

ಶಾಲಾ ಮಕ್ಕಳನ್ನು ಕರೆದೊಯ್ಯುತ್ತಿದ್ದ ವಾಹನ ಪಲ್ಟಿಯಾದ ಪ್ರಕರಣ: ಇಬ್ಬರು ಶಿಕ್ಷಕರು ಅಮಾನತು

6

Tumkur: ಮಧುಗಿರಿ ಡಿವೈಎಸ್ಪಿ ವಿರುದ್ಧ ಮತ್ತೊಬ್ಬ ಸಂತ್ರಸ್ತೆಯಿಂದ ವಿಡಿಯೋ ಆರೋಪ

MUST WATCH

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

ಹೊಸ ಸೇರ್ಪಡೆ

1-aaaaa

Caught On Cam!;ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ: Video

Khattar

2047 ರ ವೇಳೆಗೆ ದೇಶದ 50% ಜನ ನಗರ ಪ್ರದೇಶಗಳಲ್ಲಿ ವಾಸಿಸುತ್ತಾರೆ: ಸಚಿವ ಖಟ್ಟರ್

6

VIDEO: ಅಪ್ಪಿಕೊಳ್ಳಲು ಬಂದ ನಿರ್ದೇಶಕನನ್ನು ತಡೆದು ಕೆನ್ನೆಗೆ ಮುತ್ತು ಕೊಟ್ಟ ನಿತ್ಯಾ ಮೆನನ್

4-dandeli

Dandeli: ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ಕಿರುಕುಳ : ಪೋಕ್ಸೋ ಪ್ರಕರಣದಡಿ ಓರ್ವನ ಬಂಧನ

naksal (2)

Chhattisgarh: ಸ್ಫೋ*ಟದಲ್ಲಿ ಮೃ*ತಪಟ್ಟ 8 ಪೊಲೀಸರಲ್ಲಿ 5 ಮಂದಿ ಮಾಜಿ ನಕ್ಸಲೀಯರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.