ವಿದ್ಯಾರ್ಥಿನಿ ಚೈತ್ರಾಳ ಚಿಕಿತ್ಸೆಗೆ ನೆರವು
Team Udayavani, Jul 21, 2019, 4:09 PM IST
ಚೈತ್ರಾ ಚಿಕಿತ್ಸೆಗೆ ವಿವಿಧ ಶಾಲೆಯ ಶಿಕ್ಷಕರು ಧನಸಹಾಯ ಮಾಡಿರುವ ಪಟ್ಟಿ.
ಚಿಕ್ಕನಾಯಕನಹಳ್ಳಿ: ಎಪ್ಲಾಸ್ಟಿಕ್ ಅನಿಮಿಯಾ ರೋಗಕ್ಕೆ ತುತ್ತಾದ ಹುಳಿಯಾರು ಹೋಬಳಿಯ ಗಾಣಧಾಳು ಗ್ರಾಮದ 3ನೇ ತರಗತಿ ವಿದ್ಯಾರ್ಥಿನಿ ಚೈತ್ರಾಳ ಚಿಕಿತ್ಸೆಗೆ ನೆರವು ನೀಡಲು ಶಿಕ್ಷಕರು ಹಾಗೂ ಸಾರ್ವಜನಿಕರು ಮುಂದಾಗಿದ್ದಾರೆ.
‘ಪ್ಲಾಸ್ಟಿಕ್ ಅನಿಮಿಯಾಕ್ಕೆ ತುತ್ತಾದ ವಿದ್ಯಾರ್ಥಿನಿ’ ತಲೆಬರಹದಡಿ ಜು.20ರಂದು ಉದಯವಾಣಿ ವರದಿ ಪ್ರಕಟಿಸಿತ್ತು. ಈ ಹಿನ್ನೆಲೆ ಯಲ್ಲಿ ಶಾಲೆಯ ಶಿಕ್ಷಕರು, ಸಾರ್ವ ಜನಿಕರು ಹಾಗೂ ಕೆಲ ಯುವಕರು ವಾಟ್ಸ್‌ಆ್ಯಪ್ ಮೂಲಕ ಚಿಕಿತ್ಸೆಗೆ ಧನ ಸಹಾಯ ಮಾಡುವಂತೆ ಮನವಿ ಮಾಡಿ ಕೊಂಡಿದ್ದಾರೆ. ಚೈತ್ರಾ ಓದುತ್ತಿರುವ ಶಾಲೆಯ ಶಿಕ್ಷಕರು ಶನಿವಾರ ಮಾಸಿಕ ಸಮಾ ಲೋಚನೆ ಸಭೆಯಲ್ಲಿ 7013ರೂ. ಸಂಗ್ರಹ ಮಾಡಿದ್ದಾರೆ. ‘ಚಿಕ್ಕ ನಾಯಕನಹಳ್ಳಿ ಅಭಿವೃದ್ಧಿ ಗ್ರೂಪ್’ ವಾಟ್ಸ್ ಆ್ಯಪ್ ಗ್ರೂಪ್ ಸದಸ್ಯರು 18 ಸಾವಿರ ರೂ. ಸಂಗ್ರಹಿಸಿದ್ದಾರೆ.
ಹೆಚ್ಚಿನ ಧನಸಹಾಯಕ್ಕೆ ಮನವಿ: ಚೈತ್ರಾ ಸದ್ಯಕ್ಕೆ ಬೆಂಗಳೂರಿನ ಇಂದಿರಾ ಗಾಂಧಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಚಿಕಿತ್ಸೆಗೆ ಹೆಚ್ಚಿನ ಹಣ ಬೇಕಾಗಿದೆ. ದಾನಿಗಳು ಪ್ರತಿಭಾವಂತ ವಿದ್ಯಾರ್ಥಿನಿಯ ನೆರವಿಗೆ ಬರಬೇಕಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Koratagere: ರಸ್ತೆ ದಾಟುವಾಗ ಅಪಘಾತದಲ್ಲಿ ಕರಡಿ ಸಾವು
ಶಿವಕುಮಾರ ಮಹಾಸ್ವಾಮಿ ಪುಣ್ಯಸ್ಮರಣೆ ದಿನ ರಾಷ್ಟ್ರೀಯ ದಾಸೋಹ ದಿನಾಚರಣೆಯನ್ನಾಗಿಸಲು ಆಗ್ರಹ
Koratagere: ಶ್ರೀ ಶಿವಕುಮಾರ ಸ್ವಾಮಿಗಳ ಸೇವಾ ಮನೋಭಾವ ನಮ್ಮೆಲ್ಲರಿಗೂ ದಾರಿ ದೀಪವಾಗಿದೆ
Tumkur: ಪತ್ರಕರ್ತರಿಗೆ ಉಚಿತ ಆರೋಗ್ಯ ವಿಮೆ ಕೊಡಿ: ಸರಕಾರಕ್ಕೆ ಒತ್ತಾಯ
Tumakuru: ಎಲ್ಲ ಪತ್ರಕರ್ತರಿಗೆ ಆರೋಗ್ಯ ವಿಮೆ, ಗ್ರಾಮೀಣ ಪತ್ರಕರ್ತರಿಗೆ ಬಸ್‌ಪಾಸ್: ಸಿಎಂ