ಯುವಜನತೆ ದೇಶಾಭಿಮಾನ ಬೆಳೆಸಿಕೊಳ್ಳಲಿ
Team Udayavani, Mar 23, 2021, 3:59 PM IST
ತುಮಕೂರು: ಯುವ ಜನತೆ ದೇಶಭಕ್ತಿ, ದೇಶಾಭಿಮಾನ ಬೆಳೆಸಿಕೊಂಡು ನಮ್ಮ ದೇಶದ ಸ್ವಾತಂತ್ರ್ಯವನ್ನು ಗೌರವದಿಂದ ಕಂಡು ನಾಡು ನುಡಿಸಂಸ್ಕೃತಿ ಪರಂಪರೆಯನ್ನು ಬೆಳೆಸಬೇಕು ಎಂದು ಚಿಕ್‌ಮಸ್ಕಲ್ ಮಠದ ಶ್ರೀ ಬಸವರಾಜಯ್ಯ ಸ್ವಾಮೀಜಿ ಹೇಳಿದರು.
ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಎನ್‌ಎಸ್‌ಎಸ್ ಘಟಕದಿಂದ ಮಹಾತ್ಮ ಗಾಂಧೀಜಿ ತಂಗಿದ್ದ ಸರ್ಕಾರಿ ಜ್ಯೂನಿಯರ್ ಕಾಲೇಜಿನ ಆವರಣದಲ್ಲಿ ಇರುವ ಗಾಂಧಿ ಸ್ಮಾರಕದ ಮುಂದೆ ಏರ್ಪಡಿಸಿದ್ದ -75ನೇ ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆ ಸ್ವಾತಂತ್ರ್ಯದ ಅಮೃತ ಮಹೋತ್ಸವ ಕಾರ್ಯಕ್ರಮವನ್ನುಉದ್ಘಾಟಿಸಿ ಮಾತನಾಡಿದ ಅವರು, ಇಂದಿನ ದಿನಗಳಲ್ಲಿವಿದ್ಯಾರ್ಥಿಗಳು ಮಾರಕ ಚಟುವಟಿಕೆ ಗಳಿಗೆ ಬಲಿಯಾಗಿ ನಮ್ಮ ಇತಿಹಾಸ ಅಧ್ಯಯನ ಮಾಡದಿರುವುದು ಮತ್ತು ಅವರ ತ್ಯಾಗ ಮತ್ತು ಬಲಿದಾನಗಳ ಅರಿವು ಇಲ್ಲದಿರುವುದಕ್ಕೆ ವಿಷಾದಿಸಿದರು.
ಸ್ವಾತಂತ್ರ್ಯ ದ ಹಾದಿ ಸುಲಭವಾಗಿರಲಿಲ್ಲ: ಲಾಲ್ ಲಜಪತರಾಯ್, ಬಾಲ ಗಂಗಾಧರ್ ತಿಲಕ್ ಮತ್ತು ಬಿಪಿನ್ ಚಂದ್ರಪಾಲ್ ಅವರು ಸ್ವದೇಶಿ ವಸ್ತುಗಳನ್ನು ಉತ್ಪಾದಿಸಿ ಅವುಗಳನ್ನೆ ಉಪಯೋಗಿಸಬೇಕೆಂದು ಹೇಳುತ್ತಾ ಸ್ವದೇಶಿ ಚಳವಳಿಗೆ ಕಹಳೆ ಊದಿದ್ದರು.
1905ರಲ್ಲಿ ಅವರು ನೀಡಿದ ಈ ಕರೆ ಸ್ವಾವಲಂಬಿಯ ಸಂದೇಶವಾಗಿತ್ತು. ರಾಷ್ಟ್ರಾದ್ಯಂತ ಓಡಾಡಿ ಬಂಗಾಳವಿಭಜನೆ ವಿರೋಧಿಸಿದರು. ಈ ಸಮಯದಲ್ಲಿ ಇವರನ್ನು ಜೈಲಿಗೆ ಕಳುಹಿಸಲಾಯಿತು. ಸ್ವಾತಂತ್ರ್ಯ ದ ಹಾದಿ ಅಷ್ಟು ಸುಲಭವಾಗಿರಲಿಲ್ಲ. ಇಂದಿನ ಜನತೆ ಈ ಸ್ವಾತಂತ್ರ್ಯ ವನ್ನು ಗೌರವದಿಂದ ಕಂಡು ನಾಡು ನುಡಿಗೆ ಮೌಲ್ಯವನ್ನು ನೀಡಬೇಕೆಂದು ಹೇಳಿದರು.
ಪ್ರಾತಃಸ್ಮರಣೀಯರನ್ನು ನೆನಪಿಸಿಕೊಳ್ಳಿ: ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೊ.ಕೆ.
ಎಸ್.ಜಗದೀಶ್ ಮಾತನಾಡಿ, ಇಂದಿನ ಯುವಜನತೆ ಸ್ವ ತಂತ್ರ್ಯ ನಂತರದಲ್ಲಿ ಹುಟ್ಟಿದವರು. ಅವರಿಗೆ ಸ್ವಾತಂತ್ರ್ಯ ಚಳವಳಿಯ ತ್ಯಾಗ ಬಲಿದಾನಗಳ ಬಗ್ಗೆ ಅರಿವು ಅಗತ್ಯವಾಗಿದೆ. ಸ್ವಾತಂತ್ರ್ಯ ದಿನಾಚರಣೆ ಈ ಸಂದರ್ಭದಲ್ಲಿ ಈ ಎಲ್ಲ ಪ್ರಾತಃಸ್ಮರಣೀಯರನ್ನುಗೌರವದಿಂದ ನೆನಪಿಸಿಕೊಳ್ಳಬೇಕಾದದ್ದು ಪ್ರತಿಯೊಬ್ಬ ಭಾರತೀಯ ಪ್ರಜೆಯ ಕರ್ತವ್ಯ ಎಂದು ತಿಳಿಸಿದರು.
ಇತಿಹಾಸ ಸಹ ಪ್ರಾಧ್ಯಾಪಕ ಪ್ರೊ. ರವೀಂದ್ರ ಶರ್ಮ ಭಾರತದ ಸ್ವಾತಂತ್ರ್ಯ ಸಂಗ್ರಾಮ ವಿಷಯವಾಗಿ ವಿಶೇಷ= ಉಪನ್ಯಾಸ ನೀಡಿ, ಭಾರತದ ಸ್ವಾತಂತ್ರ್ಯ ಕ್ಕೆ ಹಲವು ಮಂದಿ ಜೀವ ತೆತ್ತತಿದ್ದಾರೆ. ಹಲವರ ಬಲಿದಾನ ತ್ಯಾಗ, ಶ್ರಮದ ಫಲವಾಗಿ ಭಾರತ ಸ್ವಾತಂತ್ರ್ಯ ಪಡೆದಿದೆ. ಎಂದರು.
ಕಾಲೇಜಿನ ಪ್ರಾಂಶುಪಾಲೆ ಡಾ.ಟಿ.ಆರ್. ಲೀಲಾವತಿ, ಉಪ ಪ್ರಾಂಶುಪಾಲರಾದ ನೂರ್‌ಫಾತಿಮಾ, ಎನ್‌ಎಸ್‌ಎಸ್ ಕಾರ್ಯಕ್ರಮ ಅಧಿಕಾರಿಡಾ.ಬಿ.ಆರ್. ರೇಣುಕಾ ಪ್ರಸಾದ್, ಎನ್.ಎಂ.ಮಮತಾ, ಸಹಾಯಕ ಪ್ರಾಧ್ಯಾಪಕರಾದ ಲೀಲಾವತಿ, ಸಿ. ನಂದಿನಿ ಇದ್ದರು
ಸ್ವಾತಂತ್ರ್ಯ ಸಿಕ್ಕಿದ್ದಲ್ಲ, ಹೋರಾಟದಿಂದ ಪಡೆದದ್ದು :
ಭಾರತದ ಸ್ವಾತಂತ್ರ್ಯ ಸಿಕ್ಕಿದಲ್ಲ. ಅದು ಹೋರಾಟದಿಂದ ಪಡೆದದ್ದು ಎಂದು ವಿವರಿಸಿದರು. ಭಾರತದ ಸ್ವಾತಂತ್ರ್ಯ ಸಂಗ್ರಾಮ ಮಹಾತ್ಮಾಗಾಂಧೀಜಿ ನೇತೃತ್ವದಲ್ಲಿ ಸತ್ಯಾಗ್ರಹದ ನೆಲೆಯಲ್ಲಿ ರೂಪುಗೊಂಡಿತು. ಅನೇಕ ದೇಶಾಭಿಮಾನಿಗಳಬಲಿದಾನದ ಹೋರಾಟ ಸ್ವಾತಂತ್ರ್ಯ ವನ್ನು ಪಡೆಯುವಲ್ಲಿ ಸಫಲವಾಯಿತು ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೊ. ಕೆ.ಎಸ್.ಜಗದೀಶ್ ತಿಳಿಸಿದರು.
ನಮ್ಮ ದೇಶವನ್ನು ಬ್ರಿಟೀಷರ ಸಂಕೋಲೆಯಿಂದ ಬಿಡಿಸಿಕೊಳ್ಳಲು ಅನೇಕ ಸ್ವಾತಂತ್ರ್ಯ ಹೋರಾಟಗಾರರು ತಮ್ಮ ಜೀವವನ್ನೇ ತ್ಯಾಗ ಮಾಡಿದ್ದಾರೆ. ಅವರ ತ್ಯಾಗ ಬಲಿದಾನ ದಿಂದ ನಮಗೆ ಸ್ವಾತಂತ್ರ್ಯ ಸಿಕ್ಕಿದೆ. ವಿದ್ಯಾರ್ಥಿಗಳುದೇಶಾಭಿಮಾನ ಬೆಳೆಸಿಕೊಳ್ಳಬೇಕು. ದೇಶಸೇವೆಗೆ ಪ್ರತಿಯೊಬ್ಬರೂ ತಮ್ಮನ್ನು ತಾವು ತೊಡಗಿಸಿಕೊಳ್ಳಲು ಮುಂದಾಗಬೇಕು. -ಡಾ.ಟಿ.ಆರ್.ಲೀಲಾವತಿ, ಪ್ರಾಂಶುಪಾಲೆ, ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pavagada: ವಿಷ ಸೇವಿಸಿ ಗಂಡ-ಹೆಂಡತಿ ಆತ್ಮಹತ್ಯೆ
Tumkur: ನೀರಾವರಿ ವಿದ್ಯುತ್ ಬಿಲ್ ಪಾವತಿ ಮಾಡುವಂತೆ ಸಿದ್ದಗಂಗಾ ಮಠಕ್ಕೆ ಪತ್ರ
Drone Prathap: ನೀರಿಗೆ ಸ್ಫೋಟಕ ಎಸೆದ ಪ್ರಕರಣ; ಪ್ರತಾಪ್‌ಗೆ 10 ದಿನ ನ್ಯಾಯಾಂಗ ಬಂಧನ
Huliyar; ಕೆಮ್ಮಿನ ಔಷಧವೆಂದು ಭಾವಿಸಿ ಕೀಟನಾಶಕ ಸೇವಿಸಿದ ರೈತ ಸಾ*ವು
ಕೃಷಿ ಹೊಂಡದಲ್ಲಿ ಅದೇನೋ ಮಾಡಲು ಹೋಗಿ ಅರೆಸ್ಟ್ ಅದ ಬಿಗ್ ಬಾಸ್ ಖ್ಯಾತಿಯ ಡ್ರೋನ್ ಪ್ರತಾಪ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Vijay Hazare Trophy;ಕೃಷ್ಣನ್ ಶ್ರೀಜಿತ್ ಅಮೋಘ ಶತಕ:ಬಲಿಷ್ಠ ಮುಂಬೈ ಎದುರು ಕರ್ನಾಟಕ ಜಯಭೇರಿ
ಕತಾರ್:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್ ಶಹನ ಜತೆ ಸಂವಾದ
ಬಹ್ರೈನ್ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್ ಅಬ್ಬರ-ಕ್ರಿಕೆಟ್ ಪ್ರೇಮಿಗಳ ಮೆಚ್ಚುಗೆ
ಮುಂಬೈ ದೋಣಿ ದುರಂತ: ನಾಪತ್ತೆಯಾಗಿದ್ದ ಬಾಲಕನ ಶವ ಪತ್ತೆ, ಮೃತರ ಸಂಖ್ಯೆ 15ಕ್ಕೆ ಏರಿಕೆ
Christmas 2024: ಶಾಂತಿದೂತನ ಜನನದ ಸಂಭ್ರಮದಲ್ಲಿ ಜಗತ್ತು- ವಿವಿಧ ಚರ್ಚ್‌ಗಳಲ್ಲಿ ಬಲಿಪೂಜೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.