ಹರಳೂರು ಕೆರೆಗೆ ಗೌರಿಶಂಕರ್ ಬಾಗಿನ
Team Udayavani, Jul 23, 2022, 5:48 PM IST
ತುಮಕೂರು: ಗ್ರಾಮಾಂತರ ವಿಧಾನಸಭಾ ಕ್ಷೇತ್ರ ಗೂಳೂರು ಜಿಲ್ಲಾ ಪಂಚಾಯಿತಿವ್ಯಾಪ್ತಿಗೊಳಪಡುವ ಹರಳೂರು ಕೆರೆ 13 ವರ್ಷದ ನಂತರ ಕೋಡಿ ಬಿದ್ದಿದ್ದು, ಶಾಸಕ ಡಿ.ಸಿ.ಗೌರಿಶಂಕರ್ ಬಾಗಿನ ಅರ್ಪಿಸಿದರು.
ರೈತರಲ್ಲಿ ಮಂದಹಾಸ ಮೂಡಿತ್ತು. ಗೂಳೂರು ಹೋಬಳಿ ಜಿಪಂ ಉಸ್ತುವಾರಿ ಜಿ.ಪಾಲನೇತ್ರಯ್ಯ ನೇತೃತ್ವದಲ್ಲಿ ಶಾಸಕ ಗೌರೀಶಂಕರ್ ಅಧ್ಯಕ್ಷತೆ ಹಾಗೂ ಚನ್ನಬಸವ ಸ್ವಾಮೀಜಿ ಸಾನ್ನಿಧ್ಯದಲ್ಲಿ ಶ್ರೀಗಳಿಗೆ ಪಾದಪೂಜೆ ಮಾಡಿ ಹರಳೂರು ಕೆರೆಗೆ ಗಂಗಾಪೂಜೆ ನೆರವೇರಿಸಲಾಯಿತು. ಗಂಗಾ ಪೂಜೆಯಲ್ಲಿ ನೆರೆದಿದ್ದ 2000 ಕ್ಕೂ ಹೆಚ್ಚು ಹೆಣ್ಣು ಮಕ್ಕಳಿಗೆ ಹಿಂದೂ ಸಂಪ್ರದಾಯದಂತೆ ಶಾಸಕರು ಹಾಗೂ ಪಾಲನೇತ್ರಯ್ಯ ಸಮಕ್ಷಮದಲ್ಲಿ ಅರಿಶಿಣ, ಕುಂಕುಮ, ಸೀರೆ, ಬಳೆ, ಬಾಗಿನ ನೀಡಿದರು.
ಹರಳೂರು ಗ್ರಾಮದಲ್ಲಿ ಹರಳೂರು ಗ್ರಾಪಂ ವ್ಯಾಪ್ತಿಯ ಹಲವು ಗ್ರಾಮಗಳ ಅಭಿವೃದ್ಧಿಕಾರ್ಯಗಳ ಶಂಕುಸ್ಥಾಪನೆ ಮತ್ತು ಉದ್ಘಾಟನೆ ನೆರವೇರಿಸಿದರು. ನೇರಳಾಪುರ ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ಭೇಟಿ ನೀಡಿ, ವಿದ್ಯಾರ್ಥಿಗಳ ಸಮಸ್ಯೆ ಆಲಿಸಿ, ಕ್ರೀಡಾ ಸಾಮಗ್ರಿ ನೀಡುವುದಾಗಿ ಭರವಸೆ ನೀಡಿದರು.
ಗೂಳೂರು ಜಿಪಂ ಉಸ್ತುವಾರಿ ಪಾಲನೇತ್ರಯ್ಯ, ಮಾಜಿ ಎಪಿಎಂಸಿ ಉಪಾಧ್ಯಕ್ಷೆ ಹಾಗೂ ಗ್ರಾಪಂ ಸದಸ್ಯೆ ಎಸ್.ವಿಜಯಕುಮಾರಿ, ಗ್ರಾಪಂ ಸದಸ್ಯರಾದ ಪವಿತ್ರ ಶಿವಪ್ರಸಾದ್, ಮೇಘನಾ ಲೋಕೇಶ್, ಸುರೇಶ್, ಶಾರದಾ, ಹೇಮಂತ್, ಶ್ರೀನಿವಾಸ್,ಜೆಡಿಎಸ್ ಮುಖಂಡರಾದ ತೋಂಟಾರಾಧ್ಯ,ಗಂಗಾಂಭಿಕೆ, ಶಂಕರಮೂರ್ತಿ, ಹರಳೂರುಸುರೇಶ್, ಶಾಂತಮ್ಮ, ಪ್ರಕಾಶ್, ರೇಣುಕಪ್ಪ, ನಾಗರಾಜು, ಮಾಜಿ ಗ್ರಾಪಂ ಸದಸ್ಯ ಕೃಷ್ಣಪ್ಪ, ರಾಜಶೇಖರಯ್ಯ, ಶಿಕ್ಷಕ ಸಿದ್ದಗಂಗಯ್ಯ, ಗ್ರಾಮಸ್ಥರು, ಹಿರಿಯ ಜೆಡಿಎಸ್ ಮುಖಂಡರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಕೋಟಿ ಗೀತಾ ಲೇಖನ ಯಜ್ಞ: 500ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಿಬ್ಬಂದಿಯಿಂದ ದೀಕ್ಷೆ
Caste ನೋಡಿ ಮತ ಹಾಕಿದರೆ ಸಮಾಜದಲ್ಲಿ ಬದಲಾವಣೆ ಅಸಾಧ್ಯ : ಸಿಎಂ ಸಿದ್ದರಾಮಯ್ಯ
Tumkur: ತುಮಕೂರಲ್ಲಿ ದಲಿತ ಮಹಿಳೆ ಹ*ತ್ಯೆ: 21 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ
Road Mishap: ಚಲಿಸುತ್ತಿದ್ದ ಲಾರಿಗೆ ಕಾರು ಢಿಕ್ಕಿ: ತಂದೆ-ಮಗು ಸ್ಥಳದಲ್ಲೇ ಸಾವು
Maharashtra ಸರಕಾರ ವಿರುದ್ಧ ಮಾನನಷ್ಟ ಕೇಸ್: ಸಚಿವ ಡಾ| ಜಿ. ಪರಮೇಶ್ವರ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.