ಜನ ಮೆಚ್ಚಿದ ಸರ್ಕಾರಿ ಹೈಟೆಕ್ ಶಾಲೆ
ಶತಮಾನದ ಅಂಚಿನಲ್ಲಿರುವ ಬಳ್ಳಗೆರೆ ಶಾಲೆಯಲ್ಲಿ ದಿನೇ ದಿನೆ ಹೆಚ್ಚುತ್ತಿದೆ ಮಕ್ಕಳ ದಾಖಲಾತಿ ಸಂಖ್ಯೆ
Team Udayavani, Nov 7, 2020, 4:49 PM IST
ತುಮಕೂರು: ಖಾಸಗಿ ಶಾಲೆಗಳ ಅಬ್ಬರದ ನಡುವೆ ನಗರ, ಪಟ್ಟಣ, ಹಳ್ಳಿಗಳಲ್ಲಿ ಇದ್ದ ನಮ್ಮ ಕನ್ನಡ ಸರ್ಕಾರಿ ಶಾಲೆಗಳು ಮುಚ್ಚಿ ಹೋಗುತ್ತಿರುವ ವೇಳೆ ಶತಮಾನದ ಅಂಚಿನಲ್ಲಿರುವ ಸರ್ಕಾರಿ ಶಾಲೆ ಖಾಸಗಿ ಶಾಲೆಯನ್ನು ಮೀರಿಸುವ ರೀತಿಯಲ್ಲಿದ್ದು ನಿರೀಕ್ಷೆಗೂ ಮೀರಿದಮಕ್ಕಳದಾಖಲಾತಿಆಗುತ್ತಿರುವುದು ಎಲ್ಲರನ್ನು ಬೆರಗು ಗೊಳಿಸಿದೆ.
ತಾಲೂಕಿನ ಬಳ್ಳಗೆರೆ ಸರ್ಕಾರಿ ಹಿರಿಯಪ್ರಾಥಮಿಕ ಶಾಲೆ ದಿನ ದಿಂದ ದಿನಕ್ಕೆ ಅಭಿ ವೃದ್ಧಿ ಪಥದತ್ತ ಸಾಗುತ್ತಿದ್ದು, ಸಾರ್ವ ಜನಿಕರ, ಪೋಷಕರ ಮೆಚ್ಚುಗೆಗೆ ಪಾತ್ರವಾಗಿದೆ.
ಶಿಕ್ಷಕರ ಪರಿಶ್ರಮದಿಂದ ಮಾದರಿ ಶಾಲೆ: ಸ್ವಾತಂತ್ರ್ಯ ಪೂರ್ವದಲ್ಲಿ ಪ್ರಾರಂಭವಾಗಿ ಶತಮಾನದ ಅಂಚಿನಲ್ಲಿರುವ ಈ ಶಾಲೆ ಈಗ ಇಡೀ ತಾಲೂಕಿಗೇ ಮಾದರಿ ಶಾಲೆಯಾಗಿದೆ. ಸರ್ಕಾರಿ ಶಾಲೆಗಳಲ್ಲಿ ಒಂದು ಇದ್ದರೆ ಮತ್ತೂಂದು ಸೌಲಭ್ಯ ಇರುವುದಿಲ್ಲ ಎಂದು ಪೋಷಕರು ಹೈಟೆಕ್ ಖಾಸಗಿ ಶಾಲೆಗಳತ್ತ ಮುಖ ಮಾಡುತ್ತಾರೆ. ಇಂಥ ವೇಳೆಯಲ್ಲಿ ಖಾಸಗಿ ಶಾಲೆಗಳಲ್ಲಿ ಏನೆಲ್ಲ ದೊರೆಯುತ್ತದೆ ಅದನ್ನು ಇಲ್ಲಿಯ ಮುಖ್ಯ ಶಿಕ್ಷಕ ಜಿ.ಶ್ರೀನಿವಾಸಯ್ಯ ಮತ್ತು ಸಹಶಿಕ್ಷಕರು ದಾನಿಗಳ ಸಹಕಾರ ಪಡೆದು ಸರ್ಕಾರಿ ಶಾಲೆಯನ್ನೂ ಮಾದರಿ ಶಾಲೆ ಮಾಡಬಹುದು ಎನ್ನುವುದನ್ನು ತೋರಿಸಿದ್ದಾರೆ.
90 ವರ್ಷಗಳಹಳೆಯ ಶಾಲೆ: ಕಳೆದ ಎರಡು ವರ್ಷಗಳಹಿಂದೆ ಏನೂಆಗಿರದಈ ಸರ್ಕಾರಿ ಶಾಲೆ ಶಿಥಿಲವಾಗಿತ್ತು. ಸುಮಾರು 90ವರ್ಷಗಳ ಹಳೆಯದಾಗಿರುವ ಈ ಶಾಲೆ ಸಾವಿರಾರೂ ಜನರಿಗೆ ಶಿಕ್ಷಣ ನೀಡಿ ಅವರ ಬದುಕಿಗೆ ದಾರಿಯಾಗಿದೆ. ಈ ಶಾಲೆಯಲ್ಲಿ ಶಿಕ್ಷಣ ಕಲಿತ ಅನೇಕರು ಉನ್ನತ ಅಧಿಕಾರಿಗಳಾಗಿ, ಸೇವೆ ಸಲ್ಲಿಸುತ್ತಿದ್ದಾರೆ. ಇಂತಹ ಅನೇಕರಿಗೆ ಜ್ಞಾನ ನೀಡಿರುವ ಈ ಶಾಲೆಯಲ್ಲಿ ಈ ಮೊದಲು ಕೇವಲ 50 ಮಕ್ಕಳು ಇದ್ದರು ಸರ್ಕಾರಿ ಶಾಲೆಗೆ ಮಕ್ಕಳನ್ನು ಸೇರಿಸಲು ಪೋಷಕರು ಹಿಂಜರಿಯುತ್ತಿದ್ದರು.
ಇಂಥ ಸಂದರ್ಭದಲ್ಲಿ ಈ ಸರ್ಕಾರಿ ಹಿರಿಯಪ್ರಾಥಮಿಕ ಶಾಲೆಗೆ ಮುಖ್ಯ ಶಿಕ್ಷಕರಾಗಿ ಜಿ.ಶ್ರೀನಿವಾಸಯ್ಯ ಬರುತ್ತಲೇ ಈ ಶಾಲೆಯ ವಾತಾವರಣವೇಬದಲಾಗಿ ಹೋಗಿತು.ಶಾಲಾಭಿವೃದ್ಧಿ ಸಮಿತಿ ಹಾಗೂ ಇದೇ ಶಾಲೆಯ ಎಲ್ಲಾ ಶಿಕ್ಷಕರ ಸಹಕಾರ ಪಡೆದು ಬಳ್ಳಗೆರೆ ಗ್ರಾಮಸ್ಥರು ಮತ್ತು ಸುತ್ತಮುತ್ತಲ ಗ್ರಾಮಸ್ಥರು ಹಾಗೂ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದ ಹಿರಿಯ ವಿದ್ಯಾರ್ಥಿಗಳ ಸಹಾಯ ಮತ್ತು ಕೆಲವು ದಾನಿಗಳು ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಕಾರ ಪಡೆದು ತಾವು ಶಾಲೆಗಾಗಿ ಹೆಚ್ಚು ಶ್ರಮ ಹಾಕಿ ಇಂದು ಜನರನ್ನು ಬೆರಗುಗೊಳಿಸುವಂತೆ ಇಡೀ ತಾಲೂಕಿಗೆ ಮಾದರಿ ಶಾಲೆಯನ್ನಾಗಿ ಮಾಡಿದ್ದಾರೆ.
ಎಲ್ಲವೂ ಹೈಟೆಕ್: ಈ ಶಾಲೆಯಲ್ಲಿ ಮೊದಲು 50 ಮಕ್ಕಳು ಇದ್ದರು, ಈಗ ಎಲ್‌ಕೆಜಿ ಯಿಂದಹಿಡಿದು 7ನೇ ತರಗತಿವರೆಗೆ 125ಕ್ಕೂ ಹೆಚ್ಚು ಮಕ್ಕಳು ಇಲ್ಲಿ ಶಿಕ್ಷಣ ಕಲಿಯುತ್ತಿದ್ದಾರೆ. ಈ ಶಾಲೆಯಲ್ಲಿ ಕನ್ನಡ ಮಾಧ್ಯಮದ ಜೊತೆಗೆ ಆಂಗ್ಲಮಾಧ್ಯಮದಲ್ಲಿ ಶಿಕ್ಷಣ ನಡೆಯುತ್ತಿದೆ.
ಈ ಶಾಲೆಯಲ್ಲಿ ಖಾಸಗಿ ಶಾಲೆಯಲ್ಲಿಯೂ ಇರದ ರೀತಿಯಲ್ಲಿ ಸ್ಮಾರ್ಟ್ ಕ್ಲಾಸ್ ರೀತಿಯ ರೂಂ, ಆನ್‌ಲೈನ್ ಸ್ಕೂಲ್, ಶುದ್ಧಕುಡಿಯುವ ನೀರಿನ ಸೌಲಭ್ಯ, ಹೈಟೆಕ್ ಶೌಚಾಲಯಗಳು, ಆಟದ ಮೈದಾನಗಳು, ನುರಿತ ಅನುಭವಿ ಶಿಕ್ಷಕರಿಂದ ಬೋಧನೆ, ಕಂಪ್ಯೂಟರ್ ಶಿಕ್ಷಣ, ಯೋಗ ಶಿಕ್ಷಣ, ಸಂಗೀತ ಶಿಕ್ಷಣ, ವಿಜ್ಞಾನ ಪ್ರಯೋಗಾಲಯ, ಭಾಷಾ ಪ್ರಯೋಗಾಲಯ, ಸಮಾಜ ವಿಜ್ಞಾನ ಪ್ರಯೋಗಾಲಯ ಇದೆ. ಆದರೆ ಕೊಠಡಿಗಳ ಕೊರತೆ ಹಿನ್ನೆಲೆ ಗ್ರಂಥಾಲಯಬೇರೆ ಕೊಠಡಿಯಲ್ಲಿಮಾಡಲು ಸಾಧ್ಯವಿಲ್ಲದ ಹಿನ್ನೆಲೆ ಶಾಲಾ ಕೊಠಡಿಯ ರೂಂನಲ್ಲಿಯೇಓದುವಮೂಲೆಮಾಡಿದ್ದಾರೆ. ಇರುವ ಸೌಲಭ್ಯದಲ್ಲಿಯೇ ಖಾಸಗಿ ಶಾಲೆಗಳಲ್ಲಿ ಏನೆಲ್ಲಾ ಸೌಲಭ್ಯಗಳು ದೊರೆಯುತ್ತದೆ ಅದಕ್ಕಿಂತಲೂ ಹೆಚ್ಚಿನ ಸೌಲಭ್ಯವನ್ನು ನೀಡಲು ಇಲ್ಲಿಯ ಶಿಕ್ಷಕರು ಮುಂದಾಗಿದ್ದಾರೆ.
ವಿದ್ಯಾರ್ಥಿಗಳಲ್ಲಿ ಹುರುಪು ತುಂಬಿದ ಶಿಕ್ಷಕರು : ಶತಮಾನದ ಅಂಚಿನಲ್ಲಿರುವ ಪಾರಂಪರಿಕ ಕಟ್ಟಡ ಶಿಥಿಲವಾಗಿದೆ. ಮೂರು ಕಟ್ಟಡಗಳು ಶಿಥಿಲ ಗೊಂಡಿದೆ ಮಕ್ಕಳು ಅದರಲ್ಲಿಯೇ ಪಾಠ ಕೇಳುವ ಪರಿಸ್ಥಿತಿ ಇದೆ. ಈ ಶಾಲೆಯಲ್ಲಿ ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆ, ಶೈಕ್ಷಣಿಕ ಪ್ರವಾಸ, ಜೊತೆಗೆ ಮೆಟ್ರಿಕ್ ಮೇಳ, ಸಂತೆಮೇಳ, ಪರಿಸರ ಜಾಗೃತಿ ಕಾರ್ಯಕ್ರಮ, ಶಾಲಾ ವಾರ್ಷಿಕೋತ್ಸವ, ಸಾವಯವ ಕೃಷಿಯಿಂದ ಬೆಳೆದ ತರಕಾರಿಗಳನ್ನು ಅಕ್ಷರ ದಾಸೋಹಕ್ಕೆ ಬಳಕೆ, ಆರೋಗ್ಯದ ಬಗ್ಗೆ ಅರಿವು ಕಾರ್ಯಕ್ರಮವನ್ನು ಮಾಡಿ ಮಕ್ಕಳಲ್ಲಿ ಹುರುಪು ತುಂಬಿದ್ದಾರೆ ಇಲ್ಲಿಯ ಮುಖ್ಯಶಿಕ್ಷಕರಾದ ಜಿ.ಶ್ರೀನಿವಾಸಯ್ಯ. ಈ ಶಾಲೆಯ ಮುಖ್ಯಶಿಕ್ಷಕ ಜಿ.ಶ್ರೀನಿವಾಸಯ್ಯ ಅವರ ಕಾರ್ಯಸಾಧನೆಯನ್ನು ಮೆಚ್ಚಿ ಇವರಿಗೆ ಶಿಕ್ಷಣ ಇಲಾಖೆಯಿಂದ ಜನಮೆಚ್ಚಿದ ಶಿಕ್ಷಕ ಪ್ರಶಸ್ತಿ ಹಾಗೂ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳನ್ನು ನೀಡಿ ಗೌರವಿಸಿದೆ.
ನಮ್ಮ ಶಾಲೆ ನೂರಕ್ಕೆ ನೂರರಷ್ಟು ಪ್ರಗತಿಯನ್ನು ಸಾಧಿಸಿದೆ. ಶಾಲೆಯಲ್ಲಿಮೂಲಭೂತ ಸೌಕರ್ಯಗಳನ್ನು ಒಳಗೊಂಡಿದೆ. ಆಂಗ್ಲ ಮಾಧ್ಯಮ ನೀಡಿರುವುದರ ಜೊತೆಗೆ ಖಾಸಗಿ ಶಾಲೆಯಲ್ಲಿ ಸಿಗುವ ಸೌಲಭ್ಯ ನಾವು ಕಲ್ಪಿಸಿರುವುದರಿಂದ ನಮ್ಮ ಶಿಕ್ಷಕರು ಮತ್ತು ಎಸ್.ಡಿ.ಎಂ.ಸಿ ಹಾಗೂ ಗ್ರಾಮಸ್ಥರ ಮಕ್ಕಳ ದಾಖಲಾತಿ ಸಂಖ್ಯೆ ಹೆಚ್ಚಿದೆ.ಇದಕ್ಕೆ ಅನುಗುಣವಾಗಿ ನಮಗೀಗ ಶಾಲಾಕೊಠಡಿಗಳು ಸೇರಿದಂತೆ ಇತರೆ ಸೌಲಭ್ಯಗಳ ಕೊರತೆ ಇದೆ ಸರ್ಕಾರ ಶೀಗ್ರ ಅದನ್ನುಕಲ್ಪಿಸಬೇಕು. –ಜಿ.ಶ್ರೀನಿವಾಸಯ್ಯ, ಮುಖ್ಯಶಿಕ್ಷರು.
ನಮ್ಮ ಸರ್ಕಾರಿ ಕನ್ನಡ ಶಾಲೆಗಳಲ್ಲಿ ಈಗ ದಾಖಲಾತಿ ಹೆಚ್ಚುತ್ತಿದೆ, ಜಿಲ್ಲೆಯಲ್ಲಿ ಹಲವುಹಳೆಯ ಶಾಲೆಗಳಕಟ್ಟಡಗಳು ಶಿಥಿಲಗೊಂಡಿವೆ. ಅವುಗಳ ರಿಪೇರಿಗೆ ಹಣ ನೀಡುವಂತೆ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ಕಳೆದ ವರ್ಷ 286 ಶಾಲಾಕಟ್ಟಡಗಳಕೊಠಡಿದುರಸ್ತಿಗೆ 543 ಲಕ್ಷ ಅನುದಾನ ಬಂದಿದೆ. ಈ ವರ್ಷ 403 ಹೊಸ ಶಾಲಾಕೊಠಡಿಗಳನಿರ್ಮಾಣಕ್ಕೆ ಮತ್ತು 700ಕೊಠಡಿಗಳ ದುರಸ್ತಿಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೇವೆ. – ಸಿ.ನಂಜಯ್ಯ, ಉಪನಿರ್ದೇಶಕರು, ಸಾರ್ವಜನಿಕ ಶಿಕ್ಷಣ ಇಲಾಖೆ
-ಚಿ.ನಿ.ಪುರುಷೋತ್ತಮ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
BBK11: ಬಿಗ್ ಬಾಸ್ ಮನೆಯಿಂದ ಹೊರಗಡೆ ಬರಲು ನಿರ್ಧರಿಸಿದ ಚೈತ್ರಾ ಕುಂದಾಪುರ
Keerthy Suresh: ಪೋಷಕರು ನಿಶ್ಚಯಿಸಿದ ಹುಡುಗನ ಜತೆ ನಡೆಯಲಿದೆ ಕೀರ್ತಿ ಸುರೇಶ್ ಮದುವೆ?
ಕಿರುತೆರೆ To ಹಿರಿತೆರೆ.. ಧಾರಾವಾಹಿಯಿಂದ ನೇಮ್ ಪಡೆದು ಸಿನಿಮಾದಲ್ಲಿ ಫೇಮ್ ಆದ ಕಲಾವಿದರು
Davanagere: ಮೊಟ್ಟೆ ವಿತರಣೆಯಲ್ಲಿ ಲೋಪ; ಮುಖ್ಯ ಶಿಕ್ಷಕಿ, ದೈಹಿಕ ಶಿಕ್ಷಣ ಶಿಕ್ಷಕ ಅಮಾನತು
Desi Swara: ಲಕ್ಸಂಬರ್ಗ್ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.