ಸರಗಳ್ಳರ ಬಗ್ಗೆ ಎಚ್ಚರವಾಗಿರಿ: ಮಂಜುನಾಥ್
Team Udayavani, May 5, 2019, 3:21 PM IST
ಕೊರಟಗೆರೆ: ನಾವು ಮಫ್ತಿಯಲ್ಲಿರುವ ಪೊಲೀಸರು ಎಂದು ನಂಬಿಸಿ ಒಡವೆ ತೆಗೆಸಿ ಮೋಸ ಮಾಡುವವರ ಬಗ್ಗೆ ಹಾಗೂ ಹಿಂದಿನಿಂದ ಬೈಕ್‌ಗಳಲ್ಲಿ ಬಂದು ಚಿನ್ನದ ಸರ ಮತ್ತು ಮಾಂಗಲ್ಯ ಸರ ಅಪಹರಣ ಮಾಡುವವರ ಬಗ್ಗೆ ಎಚ್ಚರವಾಗಿರಬೇಕು ಎಂದು ಪಿಎಸ್‌ಐ ಮಂಜುನಾಥ್ ತಿಳಿಸಿದರು.
ಸೂಚನೆ ಪಾಲಿಸಿ:ಪಟ್ಟಣದ ಎಸ್‌ಎಸ್‌ಆರ್ ವೃತ್ತ, ಊರ್ಡಿಗೆರೆ ಸರ್ಕಲ್, ಕೆಎಸ್‌ಆರ್‌ಟಿಸಿ ವೃತ್ತ ತಾಲೂಕಿನ ಹೊಳವನಹಳ್ಳಿ, ಅಕ್ಕಿರಾಂಪುರ, ತೋವಿ ನಕೆರೆ, ಸಿದ್ದರಬೆಟ್ಟ, ಬೈರೇನಹಳ್ಳಿ, ಬಿಡಿ.ಪುರ, ಕ್ಯಾಮೇನಹಳ್ಳಿ ಗ್ರಾಮದಲ್ಲಿ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿ ದರು.ಮಹಿಳೆಯರು ತಮ್ಮ ಆಭರಣ ಕಣ್ಣಿಗೆ ಕುಕ್ಕುವಂತೆ ಪ್ರದರ್ಶಿಸಬಾರದು. ಅಪರಿಚಿತ ವ್ಯಕ್ತಿ ಗಳು ವಿಳಾಸ ಕೇಳಿದಾಗ ದೂರದಲ್ಲಿ ನಿಂತು ಮಾತ ನಾಡಬೇಕು. ಇಲ್ಲವೇ ಗೊತ್ತಿಲ್ಲ ಎಂದು ಕಳುಹಿಸ ಬೇಕು. ಅನುಮಾಸ್ಪದ ವ್ಯಕ್ತಿಗಳು ಮನೆ ಬಳಿ ಸುಳಿದಾಡುತ್ತಿದ್ದರೆ, ಅಪರಿಚಿತ ವಾಹನ ಓಡಾಡುತ್ತಿದ್ದರೆ ತಕ್ಷಣ ಬೀಟ್ ಪೊಲೀಸರಿಗಾಗಲಿ ತಾಲೂಕು ಮಟ್ಟದ ಪೊಲೀಸ್ ಅಧಿಕಾರಿಗಳಿಗಾಗಲಿ ತಿಳಿಸಬೇಕೆಂದರು.
ಮಹಿಳೆಯರು ಬೈಕ್‌ನಲ್ಲಿ ಅನುಮಾನದಿಂದ ಓಡಾಡುವ ವ್ಯಕ್ತಿಗಳ ಬಗ್ಗೆ ಎಚ್ಚರವಹಿಸಬೇಕು, ವಿಳಾಸ ಕೇಳುವ ನೆಪದಲ್ಲಿ ಕೊರಳಲ್ಲಿರುವ ಚಿನ್ನದ ಮಾಂಗಲ್ಯ ಕಸಿದು ಹೋಗುವವರ ಬಗ್ಗೆ ಎಚ್ಚರದಿಂದರಬೇಕು. ಮಹಿಳೆಯರು ಸರಗಳ್ಳತನ ನಡೆ ಯುತ್ತಿದೆ ಎನ್ನುವುದು ಅರಿವಿಗೆ ಬಂದ ತಕ್ಷಣ ಭಯ ಬಿಟ್ಟು ಪ್ರತಿರೋಧ ವ್ಯಕ್ತಪಡಿಸಿ ಒಡವೆ ರಕ್ಷಿಸಿಕೊಳ್ಳಲು ಪ್ರಯತ್ನಿಸಿ. ಮನೆಯನ್ನು ಖಾಲಿ ಬಿಡದೆ ಮನೆಯಲ್ಲಿ ವಾಸ ಮಾಡಲು ಬಂಧುಗಳಿಗೆ ತಿಳಿಸಿ ಎಂದು ಸಲಹೆ ನೀಡಿದರು. ಈ ವೇಳೆ ಎಎಸ್‌ಐ ಮಂಗಳಗೌರಮ್ಮ, ಶಿವರಾಜು, ಪುಟ್ಟಣ್ಣ, ಪೇದೆಗಳಾದ ರಂಗನಾಥ್, ಶಂಕರಪ್ಪ, ರಮೇಶ್ ಮತ್ತಿತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pavagada: ವಿಷ ಸೇವಿಸಿ ಗಂಡ-ಹೆಂಡತಿ ಆತ್ಮಹತ್ಯೆ
Tumkur: ನೀರಾವರಿ ವಿದ್ಯುತ್ ಬಿಲ್ ಪಾವತಿ ಮಾಡುವಂತೆ ಸಿದ್ದಗಂಗಾ ಮಠಕ್ಕೆ ಪತ್ರ
Drone Prathap: ನೀರಿಗೆ ಸ್ಫೋಟಕ ಎಸೆದ ಪ್ರಕರಣ; ಪ್ರತಾಪ್‌ಗೆ 10 ದಿನ ನ್ಯಾಯಾಂಗ ಬಂಧನ
Huliyar; ಕೆಮ್ಮಿನ ಔಷಧವೆಂದು ಭಾವಿಸಿ ಕೀಟನಾಶಕ ಸೇವಿಸಿದ ರೈತ ಸಾ*ವು
ಕೃಷಿ ಹೊಂಡದಲ್ಲಿ ಅದೇನೋ ಮಾಡಲು ಹೋಗಿ ಅರೆಸ್ಟ್ ಅದ ಬಿಗ್ ಬಾಸ್ ಖ್ಯಾತಿಯ ಡ್ರೋನ್ ಪ್ರತಾಪ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Punjab ಪೊಲೀಸರ ಮೇಲೆ ಗ್ರೆನೇಡ್ ದಾಳಿ ನಡೆಸಿದ್ದ ಮೂವರು ಖಲಿಸ್ತಾನಿ ಉ*ಗ್ರರ Encounter
Tollywood: ‘ಗೇಮ್ ಚೇಂಜರ್ʼಗೆ ರಾಮ್‌ಚರಣ್ ರಾಷ್ಟ್ರ ಪ್ರಶಸ್ತಿ ಪಡೆಯುತ್ತಾರೆ – ಸುಕುಮಾರ್
Mudigere: ಹೊರನಾಡು ದೇವರ ದರ್ಶನಕ್ಕೆ ಬರುತ್ತಿದ್ದವರ ವಾಹನ ಪಲ್ಟಿ… ನಾಲ್ವರಿಗೆ ಗಂಭೀರ ಗಾಯ
Trasi: ನಾಪತ್ತೆಯಾಗಿದ್ದ ಬೋಟ್ ರೈಡರ್ ಶವ 36 ಗಂಟೆಗಳ ಬಳಿಕ ಪತ್ತೆ
Shivamogga: ತಡರಾತ್ರಿ ಭೀಕರ ರಸ್ತೆ ಅಪಘಾತ… ಬೈಕ್ ನಲ್ಲಿದ್ದ ಇಬ್ಬರು ಯುವಕರು ಮೃ*ತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.