ಗಣಿಗಾರಿಕೆ ಪ್ರಾರಂಭಕ್ಕೆ ತೆರೆಮರೆಯ ಕಸರತ್ತು; ಸ್ಥಳೀಯ ರೈತರ ವಿರೋಧ
ರಸ್ತೆ ಗುರುತಿಸಲು ಸ್ಥಳಕ್ಕೆ ಆಗಮಿಸಿದ ಎಸಿ; ಗಣಿಗಾರಿಕೆಯಿಂದ ಎತ್ತಿನಹೊಳೆ ಪೈಪ್‌ಲೈನ್‌ಗೆ ಅಪಾಯ
Team Udayavani, Jul 11, 2023, 9:04 PM IST
ಕೊರಟಗೆರೆ:ಕಲ್ಲುಕ್ವಾರೆ ನಡೆಸಲು 3ವರ್ಷದಿಂದ ಪಟ್ಟುಹಿಡಿದ ಕಾದುಕುಳಿತ ಗಣಿಮಾಲೀಕರು, ಕಲ್ಲು ಗಣಿಗಾರಿಕೆ ನಡೆಸಲು ರಸ್ತೆ ಗುರುತಿಸಲು ಬಂದ ಮಧುಗಿರಿ ಎಸಿ ಅವರಿಗೆ ಗಣಿಗಾರಿಕೆ ಪ್ರಾರಂಭ ಮಾಡದಂತೆ ಒತ್ತಾಯ ಮಾಡಿದ ಸ್ಥಳೀಯ ರೈತಾಪಿವರ್ಗ. ದೇವರಾಯನದುರ್ಗ ಮೀಸಲು ಅರಣ್ಯ ಪ್ರದೇಶ ಮತ್ತು ನಾಮದ ಚಿಲುಮೆ ಪ್ರವಾಸಿ ಕ್ಷೇತ್ರ ಉಳಿವಿಗೆ ಸ್ಥಳೀಯರ ಆಗ್ರಹವಾಗಿದೆ.
ಕೊರಟಗೆರೆ ತಾಲೂಕು ಕೋಳಾಲ ಹೋಬಳಿ ಎಲೆರಾಂಪುರ ಗ್ರಾಪಂ ವ್ಯಾಪ್ತಿಯ ತಂಗನಹಳ್ಳಿ ಸರ್ವೇ ನಂ.32ರಲ್ಲಿ 6ಎಕರೆ ಮತ್ತು ನೀಲಗೊಂಡನಹಳ್ಳಿ ಗ್ರಾಪಂಯ ಮಣ್ಣೂರು ತಿಮ್ಮನಹಳ್ಳಿ ಸರ್ವೆ ನಂ.4ರಲ್ಲಿ 40ಎಕರೆ ಸರಕಾರಿ ಗೋಮಾಳದ ಜಮೀನು ಬೆಂಗಳೂರು ಬಳ್ಳಾರಿ ಮೂಲದ ಖಾಸಗಿ ವ್ಯಕ್ತಿಗೆ 25ವರ್ಷದ ಅವಧಿಗೆ 3ವರ್ಷದ ಹಿಂದೆಯೇ ಗುತ್ತಿಗೆ ನೀಡಲಾಗಿದೆ.
ಮಣ್ಣೋರು ತಿಮ್ಮನಹಳ್ಳಿ ಕರಡಿಗುಟ್ಟೆ ಮತ್ತು ತಂಗನಹಳ್ಳಿಯ ವಡ್ಡರಹಳ್ಳಿ ಕಲ್ಲುಗುಟ್ಟೆಯ ಸರಿಸುಮಾರು 50ಎಕರೇ ಗೋಮಾಳದ ಕಬಳಿಸಲು ಹುನ್ನಾರವೇ ನಡೆದಿದೆ. ಸ್ಥಳೀಯ ರೈತಾಪಿವರ್ಗ, ಪರಿಸರ ಪ್ರೇಮಿಗಳು, ಶ್ರೀಮಠದ ಸ್ವಾಮೀಜಿಗಳು ಸೇರಿದಂತೆ ಜನಪ್ರತಿನಿಧಿಗಳು ಎಷ್ಟೇ ಹೋರಾಟ ನಡೆಸಿದ್ರು ತೆರೆಮರೆಯಲ್ಲಿ ಗಣಿಗಾರಿಕೆ ಪ್ರಾರಂಭಿಸಲು ಸ್ಥಳೀಯ ಕಂದಾಯ ಇಲಾಖೆಯ ಅಧಿಕಾರಿ ವರ್ಗವೇ ಪರೋಕ್ಷವಾಗಿ ಬೆಂಬಲಕ್ಕೆ ನಿಂತಿರುವುದು ರೈತರಲ್ಲಿ ಇನ್ನಷ್ಟು ಸಂಕಷ್ಟವನ್ನು ತಂದೊಡ್ಡಿದೆ.
ಕಂದಾಯ ತನಿಖಾಧಿಕಾರಿ ಅಮಾನತ್ತಿಗೆ ಆಗ್ರಹ
ಕೋಳಾಲ ಕಂದಾಯ ತನಿಖಾಧಿಕಾರಿ ಅರುಣಕುಮಾರ್ ಗಣಿಗಾರಿಕೆ ಮಾಲೀಕರ ಜೊತೆ ಶಾಮಿಲಾಗಿ ರೈತರ ಸಹಿಯುಳ್ಳ ಪತ್ರದ ನಾಟಕ ಆಡಿದ್ದಾರೆ. ಸ್ಥಳೀಯ ರೈತರಿಗೆ ಕನ್ನಡದಲ್ಲೇ ಸಹಿ ಮಾಡಲು ಬರೋದಿಲ್ಲ. ಪತ್ರದಲ್ಲಿನ ೧೫ಸಹಿಗಳು ಇಂಗ್ಲಿಷ್‌ನಲ್ಲಿವೆ. ಗೋಮಾಳದ ಜಮೀನಿನಲ್ಲಿ ಉಳುಮೆ ಮಾಡುತ್ತಿರುವ ರೈತರ ಹೆಸರನ್ನೇ ಮರೆಮಾಚಿದ್ದಾರೆ. ಮಧುಗಿರಿ ಎಸಿ ಕೋಳಾಲ ಕಂದಾಯ ತನಿಖಾಧಿಕಾರಿ ವಿರುದ್ದ ತನಿಖೆ ನಡೆಸಿ ಅಮಾನತಿಗೆ ಸ್ಥಳೀಯರು ಆಗ್ರಹಿಸಿದ್ದಾರೆ.
ಎತ್ತಿನಹೊಳೆ ಪೈಪ್‌ಲೈನ್‌ಗೆ ಅಪಾಯ..
ತಂಗನಹಳ್ಳಿ ಮತ್ತು ಐ.ಕೆ.ಕಾಲೋನಿ ನಡುವೆಯ ಬೆಟ್ಟದಲ್ಲಿ ಎತ್ತಿನಹೊಳೆ ಪೈಪ್‌ಲೈನ್ ನಡೆಯುತ್ತಿದೆ. ಪೈಪ್‌ಲೈನ್‌ನ ಎರಡು ಭಾಗದಲ್ಲಿ ಗಣಿಗಾರಿಕೆ ನಡೆಸಲು ದಾರಿ ಗುರುತಿಸಲು ಮಧುಗಿರಿ ಎಸಿಯೇ ಖುದ್ದು ಆಗಮಿಸಿದ್ದಾರೆ. ಗಣಿಗಾರಿಕೆ ಪ್ರಾರಂಭ ಆದ್ರೇ ಎತ್ತಿನಹೊಳೆ ಯೋಜನೆಯ ಪೈಪ್‌ಲೈನ್, ಎಲೆರಾಂಪುರ ಕೆರೆಯ ಓಪನ್ ಕೇನಾಲ್, ಶ್ರೀಮಠದ ಸಮೀಪದ ಪಂಪುಹೌಸು ಸೇರಿದಂತೆ ೩೦ಕ್ಕೂ ಅಧಿಕ ಕೆರೆಕಟ್ಟೆಗಳಿಗೆ ಅಪಾಯವು ಆಗಲಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ದೇವರಾಯನದುರ್ಗ ಮೀಸಲು ಅರಣ್ಯ ಪ್ರದೇಶದಲ್ಲಿ ಸಾವಿರಾರು ಬಗೆಯ ವನ್ಯಜೀವಿ ಸಂಪನ್ಮೂಲವಿದೆ. ಕಲ್ಪತರು ನಾಡಿನ ಪ್ರವಾಸಿಗರ ಸ್ವರ್ಗಭೂಮಿ ನಾಮದ ಚಿಲುಮೆ. ವಡ್ಡರಹಳ್ಳಿ ಕಲ್ಲುಗುಟ್ಟೆ ಅಕ್ಕಪಕ್ಕ ಹತ್ತಾರು ಪುರಾತನ ದೇವಾಲಯ ಮತ್ತು ಕೆರೆಕಟ್ಟೆಗಳಿವೆ. ಬಳ್ಳಾರಿ ಗಣಿ ಮಾಲೀಕನ ಬೆದರಿಕೆಗೆ ರೈತಾಪಿವರ್ಗ ಹೆದರುವ ಪ್ರಶ್ನೆಯೇ ಇಲ್ಲ.
-ಸರ್ವೇಶ್. ಗ್ರಾಪಂ ಸದಸ್ಯ. ಎಲೆರಾಂಪುರ
2018ರಿಂದ 2023ತನಕ ಗಣಿಗಾರಿಕೆ ವಿರುದ್ದ ರೈತರ ಹೋರಾಟ ನಡೆದಿದೆ. ಕಂದಾಯ ಮತ್ತು ಸರ್ವೆ ಇಲಾಖೆ ಗಣಿಗಾರಿಕೆ ಮಾಲೀಕರ ಪರವಾಗಿ ಕೆಲಸ ಮಾಡ್ತಿದ್ದಾರೆ. ಕೋಳಾಲ ಕಂದಾಯ ತನಿಖಾಧಿಕಾರಿ ಅರುಣ್‌ಕುಮಾರ್ ರೈತರನ್ನು ವಂಚಿಸಿ ನಕಲಿ ಸಹಿ ಮಾಡಿಸಿದ್ದಾರೆ. ಗೃಹ ಸಚಿವರು ಕೊರಟಗೆರೆ ಕ್ಷೇತ್ರದ ರೈತರಿಗೆ ನ್ಯಾಯ ನೀಡಬೇಕಿದೆ.
-ತಿಮ್ಮರಾಜು. ಸ್ಥಳೀಯ ರೈತ. ತಂಗನಹಳ್ಳಿ
ತಂಗನಹಳ್ಳಿ ಸರ್ವೆ ನಂ.32ರಲ್ಲಿ ಗಲ್ಲುಗಣಿಗಾರಿಕೆ ನಡೆಸಲು ದಾರಿಯ ಸ್ಥಳ ಪರಿಶೀಲನೆ ನಡೆದಿದೆ. ಗಣಿಗಾರಿಕೆ ನಡೆಸದಂತೆ ಸ್ಥಳೀಯ ರೈತರು ಮನವಿ ಮಾಡಿದ್ದಾರೆ. ಬೆಟ್ಟದ ಸುತ್ತಲಿನ ಅರಣ್ಯ, ಕೆರೆಕಟ್ಟೆ ಮತ್ತು ಗ್ರಾಮಗಳ ಪರಿಶೀಲನೆ ನಡೆಸಲಾಗಿದೆ. ಗಣಿಗಾರಿಕೆ ಪರ ಮತ್ತು ವಿರೋಧದ ಸಂಪೂರ್ಣ ಮಾಹಿತಿ ಜಿಲ್ಲಾಧಿಕಾರಿಗೆ ನೀಡುತ್ತೇವೆ.
-ರಿಷಿಆನಂದ್. ಎಸಿ. ಮಧುಗಿರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮಧುಗಿರಿ: ಕಚೇರಿಯಲ್ಲೇ DYSP ರಾಸಲೀಲೆ!!: ವಿಡಿಯೋ ಸೆರೆ
Minister ಸೋಮಣ್ಣ, ಸಿ.ಎಸ್. ಹೆಸರಲ್ಲಿ ನಕಲಿ ಸಹಿ, ಲೆಟರ್‌ಹೆಡ್: ಬಂಧನ
Koratagere: ರಸ್ತೆಯಲ್ಲಿ ಚರಂಡಿ ನೀರು; ಸಾಂಕ್ರಾಮಿಕ ರೋಗದ ಭೀತಿಯಲ್ಲಿ ಗ್ರಾಮಸ್ಥರು
Kunigal: ಮರಕ್ಕೆ ಕಾರು ಡಿಕ್ಕಿಯಾಗಿ ಪಲ್ಟಿ: ಬೆಸ್ಕಾಂ ನೌಕರರ ಸ್ಥಳದಲ್ಲೇ ಸಾವು
Kunigal: ನಾಮಫಲಕಕ್ಕೆ ಬಸ್ ಡಿಕ್ಕಿ, ಪಲ್ಟಿ; ಮಂಗಳೂರು ಮೂಲದ ಚಾಲಕ ಸಾವು; 8 ಮಂದಿಗೆ ಗಾಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಗದಗ: ಮಾವು ಬಂಪರ್ ಬೆಳೆ ನಿರೀಕ್ಷೆ- ಬೆಳೆಗಾರರಿಗೆ ಸಂತಸ
Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್
Test Cricket; ರೋಹಿತ್ ಆಯ್ತು, ಈಗ ವಿರಾಟ್..: ಬಿಸಿಸಿಐ ಕಳಿಸಿದ ʼಆʼ ಸಂದೇಶದಲ್ಲಿ ಏನಿದೆ?
Gangolli: ಪಂಚಾಯತ್‌ನೊಳಗೆ ನಮಾಜ್; ಹಿಂದೂ ಹಿತರಕ್ಷಣಾ ಸಮಿತಿ ಪ್ರತಿಭಟನೆ
Anandpur: ಮುಂದುವರೆದ ಕಾಡಾನೆಗಳ ದಾಳಿ… ಇಲಾಖೆ ವಿರುದ್ಧ ರೈತರ ಆಕ್ರೋಶ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.