ಬೆಸ್ಕಾಂ-ಗ್ರಾಪಂ ಚೆಲ್ಲಾಟದಿಂದ ಆರೋಗ್ಯಕ್ಕೆ ಕುತ್ತು ; ಆಡಳಿತ ವೈಫಲ್ಯಕ್ಕೆ ಆರೋಗ್ಯ ಆತಂಕ

67 ಲಕ್ಷ ವಿದ್ಯುತ್ ಶುಲ್ಕಕ್ಕೆ 17 ಲಕ್ಷ ಬಡ್ಡಿ.. ಕೊರಟಗೆರೆಯಲ್ಲಿ ಮಾತ್ರ ಬೆಸ್ಕಾಂ ಕಾರ್ಯಚರಣೆ ಏಕೆ..?

Team Udayavani, Dec 18, 2022, 7:19 PM IST

1-sadsadasd

ಕೊರಟಗೆರೆ: 2019-20 ರಲ್ಲಿ 24 ಗ್ರಾಪಂಗಳ 154 ಘಟಕದ ವಿದ್ಯುತ್ ಬಾಕಿ ಶುಲ್ಕ 64 ಸಾವಿರ ಮಾತ್ರ.. 154 ಘಟಕ ನಿರ್ವಹಣೆ ಮಾಡುತ್ತಿದ್ದ ಆಂದ್ರಮೂಲದ ಗುತ್ತಿಗೆದಾರರ 5 ವರ್ಷದ ಅವಧಿಯು 2020 ಕ್ಕೆ ಮುಕ್ತಾಯ.ಬೆಸ್ಕಾಂ ಇಲಾಖೆಗೆ4 ವರ್ಷದಿಂದ ವಿದ್ಯುತ್ ಶುಲ್ಕ ಪಾವತಿಸದೇ ಪ್ರಸ್ತುತ ವಿದ್ಯುತ್ ಶುಲ್ಕ 67 ಲಕ್ಷಕ್ಕೆ ಏರಿದೆ.67 ಲಕ್ಷಕ್ಕೆ ಬಡ್ಡಿಯೇ ಈಗ 17 ಲಕ್ಷ ರೂ. ಬಂದಿದ್ದು ಒಟ್ಟು 84 ಲಕ್ಷ ರೂ. ಬಾಕಿ ಕಟ್ಟಬೇಕಿದೆ. ಬೆಸ್ಕಾಂ ಮತ್ತು ಗ್ರಾಪಂ ಚೆಲ್ಲಾಟಕ್ಕೆ ಕೊರಟಗೆರೆಯಲ್ಲಿ ಈಗ ಶುದ್ದ ನೀರಿಗೆ ಹಾಹಾಕಾರ ಸೃಷ್ಟಿಯಾಗಿದೆ.

ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕಿನ 24ಗ್ರಾಪಂಗಳಲ್ಲಿ 154 ಶುದ್ದ ಕುಡಿಯುವ ನೀರಿನ ಘಟಕಗಳಿವೆ. 154 ಘಟಕಗಳಲ್ಲಿ 20 ಘಟಕ ಗ್ರಾಪಂಗೆ ಹಸ್ತಾಂತರ ಆಗಿವೆ. 77 ಘಟಕಗಳಿಗೆ ಮರು ಟೆಂಡರ್‌ಗೆ ಆಹ್ವಾನಿಸಿ 2 ವರ್ಷ ಕಳೆದಿದೆ. ಇನ್ನೂಳಿದ ಬಹುತೇಕ ನೀರಿನ ಘಟಕ ದುಸ್ಥಿತಿಗೆ ತಲುಪಿವೆ. ಘಟಕಗಳ ನಿರ್ವಹಣೆ ವಿಚಾರದಲ್ಲಿ ಅಧಿಕಾರಿಗಳ ಆಡಳಿತ ವೈಫಲ್ಯ ಕಂಡುಬಂದಿದೆ.

4 ವರ್ಷದಿಂದ ಬಾಕಿ ಉಳಿದಿರುವ 84 ಲಕ್ಷ ರೂ. ವಿದ್ಯುತ್ ಶುಲ್ಕ ಪಾವತಿಸದ ಪರಿಣಾಮ ಈಗ ಬೆಸ್ಕಾಂ ಇಲಾಖೆಯು ವಿದ್ಯುತ್ ಸಂಪರ್ಕ ಕಡಿತ ಮಾಡಿದೆ. 4 ವರ್ಷದಿಂದ 24 ಗ್ರಾಪಂ ಗಳ 154 ಶುದ್ದ ನೀರಿನ ಘಟಕಗಳ ವಸೂಲಾತಿ ಹಣದ ಅಂಕಿಅಂಶ ಎಷ್ಟು.ಜನರಿಂದ ವಸೂಲಿ ಮಾಡಿದ ಲಕ್ಷಾಂತರ ರೂ ಹಣದಲ್ಲಿ ವಿದ್ಯುತ್ ಶುಲ್ಕ ಪಾವತಿಗೆ ತಡಮಾಡಿದ್ದೇಕೆ. 4 ವರ್ಷದಿಂದ ಬೆಸ್ಕಾಂ ಇಲಾಖೆಯು 154 ಘಟಕಗಳ ವಿದ್ಯುತ್ ಶುಲ್ಕ ವಸೂಲಿ ಮಾಡದೇ ಹಾಗೇ ಬಿಡಲು ಕಾರಣವೇನು. ಗ್ರಾಪಂ ಪಿಡಿಓ ನಮಗೇ ಗೊತ್ತೇ ಇಲ್ಲ ಅಂತಾರೇ.. ಬೆಸ್ಕಾಂ ಸಿಬಂದಿ ನಾವು ಪ್ರತಿ ತಿಂಗಳು ಬಿಲ್ ಕೊಟ್ಟಿದ್ದೀವಿ ಅಂತಾರೇ. ಗ್ರಾಪಂ ಮತ್ತು ಬೆಸ್ಕಾಂ ಚೆಲ್ಲಾಟದಿಂದ ಈಗ ಜನರ ಆರೋಗ್ಯಕ್ಕೆ ಆತಂಕ ಎದುರಾಗಿದೆ.

ಬೆಸ್ಕಾಂ ಇಲಾಖೆ,24 ಗ್ರಾಪಂ ಪಿಡಿಓ, ತಾಪಂ ಇಓ, ಗ್ರಾಮೀಣ ಕುಡಿಯುವ ನೀರು ಎಇಇ ಮತ್ತು ಕೊರಟಗೆರೆ ಆಡಳಿತ ವೈಫಲ್ಯದಿಂದ ಕೊರಟಗೆರೆ ಕ್ಷೇತ್ರದ ಜನರಿಗೆ ಶುದ್ದ ನೀರಿನ ಸಮಸ್ಯೆ ಎದುರಾಗಿದೆ. ಪಾವಗಡದಲ್ಲಿ ೪ಕೋಟಿಗೂ ಅಧಿಕ ನೀರಿನ ವಿದ್ಯುತ್‌ಶುಲ್ಕ ಬಾಕಿಇದೆ. ತುಮಕೂರು ಜಿಲ್ಲೆಯಲ್ಲಿಯೇ ಇಲ್ಲದಂತಹ ಬೆಸ್ಕಾಂ ಇಲಾಖೆಯ ವಸೂಲಾತಿ ಕಾರ್ಯಚರಣೆ ಕೊರಟಗೆರೆಯಲ್ಲೇ ಮಾತ್ರ ಏಕೆ ಎಂಬುದಕ್ಕೆ ಶಾಸಕ, ಸಂಸದ, ಸಚಿವರೇ ಕೊರಟಗೆರೆಯ ಜನರಿಗೆ ಉತ್ತರ ನೀಡಬೇಕಿದೆ.

ನೀರಿಗೆ ಕತ್ತರಿ ಹಾಕಿದ ಬೆಸ್ಕಾಂ ಇಲಾಖೆ..
ಎಲೆರಾಂಪುರ, ನೀಲಗೊಂಡನಹಳ್ಳಿ, ಹಂಚಿಹಳ್ಳಿ, ಹುಲೀಕುಂಟೆ ಗ್ರಾಪಂ ವ್ಯಾಪ್ತಿಯ ಬೋಡಬಂಡೇನಹಳ್ಳಿ, ಕೆರೆಯಾಗಲಹಳ್ಳಿ, ಡಿ.ನಾಗೇನಹಳ್ಳಿ, ತಂಗನಹಳ್ಳಿ, ದೊಡ್ಡಪಾಲನಹಳ್ಳಿ, ಬೈಚೇನಹಳ್ಳಿ, ಎಲೆರಾಂಪುರ, ಐ.ಕೆ.ಕಾಲೋನಿ, ಅಳಾಲಸಂದ್ರ, ಎ.ವೆಂಕಟಾಪುರ, ಕಾಮರಾಜನಹಳ್ಳಿ, ಗೌರಗಾನಹಳ್ಳಿ ಗ್ರಾಮದ ನೀರಿನ ಘಟಕದ ವಿದ್ಯುತ್ ಸಂಪರ್ಕ ಕಡಿತವಾದ ಪರಿಣಾಮ3 ಸಾವಿರಕ್ಕೂ ಅಧಿಕ ಕುಟುಂಬಗಳಿಗೆ ನೀರು ಮರೀಚಿಕೆ ಆಗಿದೆ.

ಜನರ ಆರೋಗ್ಯ ಏರುಪೇರು ಸಾಧ್ಯತೆ..

ಪ್ಲೋರೈಡ್‌ಯುಕ್ತ ನೀರಿನ ಸಮಸ್ಯೆ ನಿವಾರಣೆಗೆ ಕೊರಟಗೆರೆ ತಾಲೂಕಿನಲ್ಲಿ 154 ಶುದ್ದ ನೀರಿನ ಘಟಕ ನಿರ್ಮಾಣವಾಗಿದೆ. ಬೆಸ್ಕಾಂ ಮತ್ತು ಗ್ರಾಪಂ ಅಧಿಕಾರಿಗಳ ಚೆಲ್ಲಾಟದಿಂದ 154 ಘಟಕಗಳಿಗೆ ವಿದ್ಯುತ್ ಸಂಪರ್ಕ ಕಡಿತಕ್ಕೆ ಬೆಸ್ಕಾಂ ಇಲಾಖೆ ಮುಂದಾಗಿದೆ. 7 ವರ್ಷದಿಂದ ಶುದ್ದ ಕುಡಿಯುವ ನೀರು ಬಳಕೆ ಮಾಡುತ್ತೀರುವ ೫೦ಸಾವಿರಕ್ಕೂ ಅಧಿಕ ಕುಟುಂಬಗಳಿಗೆ ನೀರಿನ ಸಮಸ್ಯೆ ಎದುರಾಗಲಿದೆ. ಮತ್ತೇ ಪ್ಲೋರೈಡ್‌ಯುಕ್ತ ನೀರಿನ ಸೇವನೆಯಿಂದ ಜನರ ಆರೋಗ್ಯದಲ್ಲಿ ಏರುಪೇರು ಉಂಟಾದರೇ ಜವಾಬ್ದಾರಿ ಯಾರು ಎಂಬುದೇ ಯಕ್ಷಪ್ರಶ್ನೆ..?

67 ಲಕ್ಷ ವಿದ್ಯುತ್ ಶುಲ್ಕಕ್ಕೆ 17 ಲಕ್ಷ ಬಡ್ಡಿ..
2019-20 ನೇ ಸಾಲಿನಲ್ಲಿ 154 ಶುದ್ದ ಕುಡಿಯುವ ನೀರಿನ ಘಟಕಗಳ ವಿದ್ಯುತ್ ಶುಲ್ಕದ ಬಾಕಿ ಕೇವಲ 64,624 ರೂ ಮಾತ್ರ. 2020-21 , 2021-22 ಮತ್ತು 2022-23 ರ ಅಕ್ಟೋಬರ್ ವೇಳೆ 154 ಘಟಕಗಳ ವಿದ್ಯುತ್ ಶುಲ್ಕ67,16,194 ರೂ ದಾಟಿದೆ. ಇದಕ್ಕೆ ಬಡ್ಡಿ 17,31,475 ರೂ ಸೇರಿ ಒಟ್ಟು 84,47,670 ರೂ ಆಗಿದೆ. 4 ವರ್ಷದಿಂದ ವಿದ್ಯುತ್ ಶುಲ್ಕ ಕಟ್ಟಿಸಿಕೊಳ್ಳದೇ ಬೆಸ್ಕಾಂ ಇಲಾಖೆಯ ಮೌನಕ್ಕೆ ಕಾರಣವೇನು. ಘಟಕದಿಂದ ವಸೂಲಿ ಮಾಡಿರುವ ಲಕ್ಷಾಂತರ ಹಣ ಗ್ರಾಪಂ ಯಾರ ಬಳಿ ಶೇಖರಣೆ ಮಾಡಿದೆ ಎಂಬುದು ತನಿಖೆಯಿಂದ ಹೊರ ಬರಬೇಕಿದೆ.

ಸರಕಾರಿ ಕಚೇರಿಯ ವಿದ್ಯುತ್ ಶುಲ್ಕ ಬಾಕಿಇದ್ರೇ ಮುಲಾಜಿಲ್ಲದೇ ವಿದ್ಯುತ್ ಸಂಪರ್ಕ ಕಡಿತ ಮಾಡುತ್ತೇವೆ. ಈಗ ನಾವು ಯಾರ ಸಬೂಬು ಕೇಳೊದಿಲ್ಲ. ನಾವು ಯಾರಿಗೂ ಕಾಯುವ ಪ್ರಶ್ನೆಯು ಇಲ್ಲ. ನಮ್ಮ ಎಚ್ಚರಿಕೆಯ ನೊಟೀಸ್‌ಗೆ ಗ್ರಾಪಂನಿಂದ ಉತ್ತರ ಬಂದಿಲ್ಲ. ನೀರಿನ ಸಮಸ್ಯೆ ಆದರೇ ಘಟಕಗಳ ಮೇಲ್ವಿಚಾರಕರೇ ಜವಾಬ್ದಾರಿ.- ಜಗದೀಶ್. ಇಇ. ಬೆಸ್ಕಾಂ ಇಲಾಖೆ. ಮಧುಗಿರಿ

ನಮ್ಮ ಮನವಿಗೆ ಸ್ಪಂದಿಸದೇ ಕೊರಟಗೆರೆಯಲ್ಲಿ ಮಾತ್ರ ಬೆಸ್ಕಾಂ ಇಲಾಖೆ ಕಾರ್ಯಚರಣೆ ನಡೆಸುತ್ತೀದೆ. ಜಿಲ್ಲಾಧಿಕಾರಿ ಕಚೇರಿಯ ವಿಶೇಷ ತಂಡ ಈಗಾಗಲೇ ಜಿಲ್ಲೆಯಲ್ಲಿ ಘಟಕದ ಮಾಹಿತಿ ಪಡೆಯುತ್ತೀದೆ. ಕುಡಿಯುವ ನೀರಿಗೆ ಸಮಸ್ಯೆ ಆದರೇ ಅದರ ಹೊಣೆ ಯಾರು. ಕೊರಟಗೆರೆ ಸಮಸ್ಯೆಯ ಬಗ್ಗೆ ತುಮಕೂರು ಜಿಪಂ ಸಿಇಓ ಮತ್ತು ಜಿಲ್ಲಾಧಿಕಾರಿ ಗಮನಕ್ಕೆ ತರುತ್ತೇನೆ. –ರವೀಶ್. ಇಇ. ತುಮಕೂರು

ಕೊರಟಗೆರೆಯ ನೀರಿನ ಘಟಕಗಳ ವಿದ್ಯುತ್ ಸಂಪರ್ಕ ಕಡಿತದ ಬಗ್ಗೆ ತಕ್ಷಣ ಪರಿಶೀಲನೆ ನಡೆಸುವಂತೆ ತುಮಕೂರು ಜಿಪಂ ಸಿಇಓಗೆ ಸೂಚಿಸುತ್ತೇನೆ. ಮೇಲ್ವಿಚಾರಣೆ ವಹಿಸಿರುವ ಗ್ರಾಪಂ ನಿಂದ ಬೆಸ್ಕಾಂ ಇಲಾಖೆಗೆ ಪ್ರತಿತಿಂಗಳು ಬೆಸ್ಕಾಂ ಇಲಾಖೆಗೆ ವಿದ್ಯುತ್ ಶುಲ್ಕ ಪಾವತಿಸಬೇಕು. ಕುಡಿಯುವ ನೀರಿನ ವಿಚಾರದಲ್ಲಿ ಅಧಿಕಾರಿವರ್ಗ ಜಾಗೃತಿ ವಹಿಸಬೇಕಿದೆ.- ಅತೀಕ್.ಎಲ್.ಕೆ. ಅಪರ ಮುಖ್ಯ ಕಾರ್ಯದರ್ಶಿ. ಗ್ರಾಮೀಣಾಭಿವೃದ್ದಿ ಇಲಾಖೆ

ವರದಿ : ಸಿದ್ದರಾಜು ಕೆ ಕೊರಟಗೆರೆ

ಟಾಪ್ ನ್ಯೂಸ್

DK SHI NEW

Maharashtra BJP ಗೃಹಲಕ್ಷ್ಮಿ ನಕಲು ಮಾಡಿ ಗೆದ್ದಿದೆ: ಡಿ.ಕೆ.ಶಿವಕುಮಾರ್‌

Kanakapura-laxmi

New Scheme: ಶೀಘ್ರವೇ ಗೃಹಲಕ್ಷ್ಮೀ ಸಂಘ ಸ್ಥಾಪನೆ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌

Ola Scooter; ರಿಪೇರಿಗೆ 90000 ರೂ.ಬಿಲ್‌: ಸ್ಕೂಟರ್‌ ಒಡೆದು ಹಾಕಿದ ಗ್ರಾಹಕ

Ola Scooter; ರಿಪೇರಿಗೆ 90000 ರೂ.ಬಿಲ್‌: ಸ್ಕೂಟರ್‌ ಒಡೆದು ಹಾಕಿದ ಗ್ರಾಹಕ

Accident-logo

Kolluru: ಕಾಂತಾರ ಚಿತ್ರ ತಂಡದ ವಾಹನ ಅಪಘಾತ

1-reee

Chikkamagaluru: ದತ್ತಪೀಠದಲ್ಲಿ ಕುಂಕುಮ ಲೇಪಿಸಿ ಧಾರ್ಮಿಕ ಭಾವನೆಗೆ ಧಕ್ಕೆ: ಖಾದ್ರಿ

ಹವಾಮಾನ ಹಣಕಾಸು ಪ್ಯಾಕೇಜ್‌ ತಿರಸ್ಕರಿಸಿದ ಭಾರತ

ಹವಾಮಾನ ಹಣಕಾಸು ಪ್ಯಾಕೇಜ್‌ ತಿರಸ್ಕರಿಸಿದ ಭಾರತ

Maharashtra: 400ಕ್ಕೂ ಅಧಿಕ ಮುಸ್ಲಿಮರ ಸ್ಪರ್ಧೆ: ಗೆದ್ದದ್ದು 10 ಅಭ್ಯರ್ಥಿಗಳು

Maharashtra: 400ಕ್ಕೂ ಅಧಿಕ ಮುಸ್ಲಿಮರ ಸ್ಪರ್ಧೆ: ಗೆದ್ದದ್ದು 10 ಅಭ್ಯರ್ಥಿಗಳು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi: ಕೋಟಿ ಗೀತಾ ಲೇಖನ ಯಜ್ಞ: 500ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಿಬ್ಬಂದಿಯಿಂದ ದೀಕ್ಷೆ

Udupi: ಕೋಟಿ ಗೀತಾ ಲೇಖನ ಯಜ್ಞ: 500ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಿಬ್ಬಂದಿಯಿಂದ ದೀಕ್ಷೆ

1-parm

Caste ನೋಡಿ ಮತ ಹಾಕಿದರೆ ಸಮಾಜದಲ್ಲಿ ಬದಲಾವಣೆ ಅಸಾಧ್ಯ : ಸಿಎಂ ಸಿದ್ದರಾಮಯ್ಯ

Tumkur: ತುಮಕೂರಲ್ಲಿ ದಲಿತ ಮಹಿಳೆ ಹ*ತ್ಯೆ: 21 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ

Road Mishap: ಚಲಿಸುತ್ತಿದ್ದ ಲಾರಿಗೆ ಕಾರು ಢಿಕ್ಕಿ: ತಂದೆ-ಮಗು ಸ್ಥಳದಲ್ಲೇ ಸಾವು

Road Mishap: ಚಲಿಸುತ್ತಿದ್ದ ಲಾರಿಗೆ ಕಾರು ಢಿಕ್ಕಿ: ತಂದೆ-ಮಗು ಸ್ಥಳದಲ್ಲೇ ಸಾವು

Maharashtra ಸರಕಾರ ವಿರುದ್ಧ ಮಾನನಷ್ಟ ಕೇಸ್‌: ಸಚಿವ ಡಾ| ಜಿ. ಪರಮೇಶ್ವರ್‌

Maharashtra ಸರಕಾರ ವಿರುದ್ಧ ಮಾನನಷ್ಟ ಕೇಸ್‌: ಸಚಿವ ಡಾ| ಜಿ. ಪರಮೇಶ್ವರ್‌

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

DK SHI NEW

Maharashtra BJP ಗೃಹಲಕ್ಷ್ಮಿ ನಕಲು ಮಾಡಿ ಗೆದ್ದಿದೆ: ಡಿ.ಕೆ.ಶಿವಕುಮಾರ್‌

Kanakapura-laxmi

New Scheme: ಶೀಘ್ರವೇ ಗೃಹಲಕ್ಷ್ಮೀ ಸಂಘ ಸ್ಥಾಪನೆ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌

Ola Scooter; ರಿಪೇರಿಗೆ 90000 ರೂ.ಬಿಲ್‌: ಸ್ಕೂಟರ್‌ ಒಡೆದು ಹಾಕಿದ ಗ್ರಾಹಕ

Ola Scooter; ರಿಪೇರಿಗೆ 90000 ರೂ.ಬಿಲ್‌: ಸ್ಕೂಟರ್‌ ಒಡೆದು ಹಾಕಿದ ಗ್ರಾಹಕ

Police

Karkala: ಎಸ್‌ಪಿ ಕಚೇರಿ ಮುತ್ತಿಗೆ ಹೇಳಿಕೆ ಆರೋಪ: ಪ್ರಕರಣ ದಾಖಲು

1-yadu

Hindutva; ಧರ್ಮದ ವಿರುದ್ಧ ಬಂದರೆ ಸುಮ್ಮನಿರೆವು: ಯದುವೀರ ಕೃಷ್ಣದತ್ತ ಒಡೆಯರ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.