ಅಮಾನಿಕೆರೆಯಲ್ಲಿ ಪಕ್ಷಿಗಳ ಕಲರವ, ಮಕ್ಕಳ ಸಂತಸ


Team Udayavani, May 9, 2022, 5:14 PM IST

ಅಮಾನಿಕೆರೆಯಲ್ಲಿ ಪಕ್ಷಿಗಳ ಕಲರವ, ಮಕ್ಕಳ ಸಂತಸ

ತುಮಕೂರು: ಕೆರೆ ಅಂಗಳ ತಂಪಾದ ವಾತಾವರಣ ಚಿಲಿಪಿಲಿ ಗುಟ್ಟುತ್ತಿರುವ ವಿವಿಧ ಜಾತಿಯ ಪಕ್ಷಿಗಳ ಕಲರವ ಕೇಳಿ ಅಲ್ಲಿ ನೋಡು ಹಕ್ಕಿ ಎಂದು ಕೂಗುತ್ತಾ ಸಂತಸಪಟ್ಟ ಮಕ್ಕಳು. ಜೊತೆಗೆ ಪಕ್ಷಿಗಳ ಬಗ್ಗೆ ಮಾಹಿತಿ ನೀಡುತ್ತಿರುವ ಪರಿಸರ ತಜ್ಞರು. ಇವಿಷ್ಟು ಕಂಡು ಬಂದಿದ್ದು ನಗರದ ಹೃದಯ ಭಾಗದಲ್ಲಿರುವ ಅಮಾನಿಕೆರೆಯಲ್ಲಿ.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ವತಿಯಿಂದ ಆಯೋಜಿಸಿರುವ ಕನ್ನಡ ಕಲರವ ಮಕ್ಕಳ 10 ದಿನಗಳ ಬೇಸಿಗೆ ಶಿಬಿರದ ಅಂಗವಾಗಿ ಸಂಪನ್ಮೂಲ ವ್ಯಕ್ತಿಗ ಳಾದ ವನ್ಯಜೀವಿ ಜಾಗೃತಿ ನಿಸರ್ಗ ಸಂಸ್ಥೆಯ ಪರಿಸರ ತಜ್ಞರಾದ ಜಿ.ವಿ.ಗುಂಡಪ್ಪ ಹಾಗೂ ಮಲ್ಲಿಕಾರ್ಜುನ ಎಂ., ಇವರ ನೇತೃತ್ವದಲ್ಲಿ ತುಮಕೂರು ಅಮಾನಿಕೆರೆ ವೀಕ್ಷಣೆಯ ಜೊತೆಗೆ ಅಲ್ಲಿಗೆ ಬರುವ ಪಕ್ಷಿಗಳ ಬಗ್ಗೆ ಉಪನ್ಯಾಸ ಏರ್ಪಡಿಸಲಾಗಿತ್ತು.

ಹಲವರು ಭಾಗಿ: ಕಸಾಪ ಅಧ್ಯಕ್ಷರಾದ ಕೆ.ಎಸ್‌.ಸಿದ್ದಲಿಂಗಪ್ಪ ಅವರ ಮಾರ್ಗ ದರ್ಶನದಲ್ಲಿ ಶಿಬಿರದ ಸಂಚಾಲಕರಾದ ಚಿತ್ರಕಲಾವಿದ ಡೇವಿಡ್‌, ಕಸಾಪ ಕಾರ್ಯದರ್ಶಿ ಡಾ.ಸಣ್ಣಹೊನ್ನಯ್ಯ ಕಂಟಲಗೆರೆ, ಮಹಿಳಾ ಪ್ರತಿನಿಧಿ ರಾಣಿ ಚಂದ್ರಶೇಖರ್‌, ಕನ್ನಡ ಸೇನೆಯ ಧನಿ ಯಕುಮಾರ್‌, ಗ್ರಾಮಾಂತರ ಕಸಾಪ ಅಧ್ಯಕ್ಷ ಶಿವಕುಮಾರ್‌, ನಗರಪಾಲಿಕೆ ಸದಸ್ಯೆ ಗಿರಿಜಾ ಧನಿಯಕುಮಾರ್‌, ಸುರಭಿ ಫ‌ಣೀಂದ್ರ, ಊದುಕಡ್ಡಿ ರಾಜಣ್ಣ, ತಹಶೀಲ್ದಾರ್‌ ಕಾಂತರಾಜು, ಬಾಲಾಜಿ ಫ‌ುಡ್‌ವರ್ಡ್‌ ಬೆಂಗಳೂರಿನ ಸಂತೋಷ ಸೇರಿದಂತೆ ಹಲವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಸಮಗ್ರ ಮಾಹಿತಿ: ಸಂಪನ್ಮೂಲ ವ್ಯಕ್ತಿಗಳಾದ ವನ್ಯಜೀವಿ ಜಾಗೃತಿ ನಿಸರ್ಗ ಸಂಸ್ಥೆಯ ಗುಂಡಪ್ಪ ಮಾತನಾಡಿ, ಮಕ್ಕಳಿಗೆ ಅಮಾನಿಕೆರೆಯ ಉಗಮ, ಅದರ ಇತಿಹಾಸ, ನೀರಿನ ಸೆಲೆಗಳು, ಅವನತಿ ಹಾಗೂ ಅಲ್ಲಿಗೆ ಬರುವ ದೇಶಿ ಮತ್ತು ವಿದೇಶಿ ಪಕ್ಷಿಗಳ ಕುರಿತು ಸುಮಾರು ಎರಡು ಗಂಟೆಗಳ ಕಾಲ ಸಮಗ್ರ ಮಾಹಿತಿ ನೀಡಿದರು.

ಅಮಾನಿಕೆರೆಗೆ ಬರುವ ಪಕ್ಷಿಗಳನ್ನು ಹೇಗೆ ಗುರುತಿಸಬೇಕು, ಒಂದು ಪ್ರಬೇಧ ಮತ್ತು ಮತ್ತೂಂದು ಪ್ರಬೇಧದ ನಡುವೆ ಇರುವ ವ್ಯತ್ಯಾಸ ಕುರಿತಂತೆ ಶಿಬಿರದಲ್ಲಿ ಭಾಗವಹಿಸಿದ್ದ 42 ವಿದ್ಯಾರ್ಥಿಗಳಿಗೆ ಸಂಪೂರ್ಣ ಮಾಹಿತಿ ನೀಡಿದರು.

ಉಪಯುಕ್ತ: ಶಿಬಿರದಲ್ಲಿ ತಮ್ಮ ಮಗ ಳೊಂದಿಗೆ ಭಾಗವಹಿಸಿದ್ದ ಪಾಲಿಕೆ ಸದಸ್ಯೆ ಗಿರಿಜಾ ಮಾತನಾಡಿ, ಕಸಾಪ ವತಿಯಿಂದ ಒಳ್ಳೆಯ ಕಾರ್ಯ ಕ್ರಮ ಆಯೋಜಿಸಿದ್ದಾರೆ. ಮಕ್ಕಳ ವಿಕಾಸ ಕ್ಕೆ ಬೇಕಾದ ನೃತ್ಯ, ಜಾನಪದ ಗೀತೆ, ಕನ್ನಡ ಗೀತೆಗಳ ಗಾಯನ, ಚಿತ್ರಕಲೆ, ನಾಟಕಗಳ ಪರಿಚಯವನ್ನು ಸಂಪನ್ಮೂಲ ವ್ಯಕ್ತಿಗಳ ಮೂಲಕ ಮಾಡಿಸುತ್ತಿ ರುವುದು ಉಪಯುಕ್ತವಾಗಿದೆ ಎಂದರು.

ಪರಿಸರ ತಜ್ಞರಾದ ಗುಂಡಪ್ಪ, ಮಲ್ಲಿಕಾರ್ಜುನ್‌ ಅವರು ಮಕ್ಕಳಿಗೆ ಅಮಾನಿಕೆರೆಗೆ ಬರುವ ಪಕ್ಷಿಗಳ ಪರಿಚಯ, ಅವುಗಳ ಗುಣಲಕ್ಷಣ, ಜೀವನ ಕ್ರಮದ ಬಗ್ಗೆ ಉಪಯುಕ್ತ ಮಾಹಿತಿ ನೀಡಿದ್ದಾರೆ. ಹಾಗಾಗಿ ಅವರಿಗೆ ಮತ್ತು ಕಸಾಪ ಅಧ್ಯಕ್ಷರು ಸೇರಿದಂತೆ ಪದಾಧಿಕಾರಿಗಳಿಗೆ ಕೃತಜ್ಞತೆ ಸಲ್ಲಿಸಿದರು.

ಕೆರೆ ಸುತ್ತಮುತ್ತ ಹಣ್ಣಿನ ಗಿಡ ಬೆಳೆಸಿ : ಕನ್ನಡ ಕಲರವ ಬೇಸಿಗೆ ಶಿಬಿರದ ಸಂಚಾಲಕರಲ್ಲಿ ಒಬ್ಬರಾದ ಧನಿಯಕುಮಾರ್‌ ಮಾತನಾಡಿ, ಪರಿಸರ ತಜ್ಞರಾದ ಗುಂಡಪ್ಪ ಅವರು ತಮ್ಮ ಉಪನ್ಯಾಸ ಮೂಲಕ ನಮ್ಮ ಕಣ್ಣು ತೆರೆಸಿದ್ದಾರೆ. ಈಗಾಗಲೇ ನಾವು ಗುಬ್ಬಚ್ಚಿ ಸಂತತಿಯನ್ನು ಕಳೆದುಕೊಂಡಿ ದ್ದೇವೆ. ಉಳಿದ ಪಕ್ಷಿಗಳನ್ನಾದರು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಅರಣ್ಯ ಇಲಾಖೆ ಮತ್ತು ತೋಟಗಾರಿಕಾ ಇಲಾಖೆಯವರು ಕೆರೆಯ ಸುತ್ತಮುತ್ತ ಪಕ್ಷಿಗಳಿಗೆ ಅನುಕೂಲವಾಗುವಂತಹ ಹಣ್ಣಿನ ಗಿಡಗಳನ್ನು ಬೆಳೆಸಬೇಕು ಎಂದು ಒತ್ತಾಯಿಸುತ್ತೇನೆ. ಹಾಗೆಯೇ ಸಾರ್ವಜನಿಕರು ಮನೆಯ ಮೇಲ್ಭಾಗದಲ್ಲಿ ಒಂದು ಟಬ್‌ ಅಥವಾ ಪಾತ್ರೆಯಲ್ಲಿ ನೀರು ಇಟ್ಟು ದಾಹದಿಂದ ಬರುವ ಪಕ್ಷಿಗಳಿಗೆ ನೀರು ಸಿಗುವಂತೆ ಮಾಡಬೇಕೆಂದು ಮನವಿ ಮಾಡುತ್ತೇನೆ. ಕನ್ನಡ ಸಾಹಿತ್ಯ ಪರಿಷತ್‌ ಉತ್ತಮ ಕಾರ್ಯಕ್ರಮ ಮಾಡಿದೆ. ಇದಕ್ಕಾಗಿ ಎಲ್ಲಾ ಪದಾಧಿಕಾರಿಗಳಿಗೂ, ಇದಕ್ಕೆ ಸಹಕಾರ ನೀಡಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು.

ಟಾಪ್ ನ್ಯೂಸ್

HDK2

By Election: ಯೋಗೇಶ್ವರ್‌ ನಿಂದಿಸಿದ್ದ ಡಿ.ಕೆ.ಸುರೇಶ್‌ ಆಡಿಯೋ ಎಚ್‌ಡಿಕೆ ಬಿಡುಗಡೆ

DVS

By Election: ನಾಗೇಂದ್ರ, ಜಮೀರ್‌, ಡಿಕೆಶಿ ಮೇಲೆ ಚುನಾವಣಾ ಆಯೋಗ ಕಣ್ಣಿಡಲಿ: ಡಿವಿಎಸ್‌

Maharashtra: ಸ್ತ್ರೀಯರಿಗೆ ಮಾಸಿಕ 3000, ರೈತರ ಸಾಲ ಮನ್ನಾ: ಎಂವಿಎ

Maharashtra: ಸ್ತ್ರೀಯರಿಗೆ ಮಾಸಿಕ 3000, ರೈತರ ಸಾಲ ಮನ್ನಾ: ಎಂವಿಎ

Jet Airways ಆಸ್ತಿ ಮಾರಾಟಕ್ಕೆ ಸುಪ್ರೀಂ ಕೋರ್ಟ್‌ ಅನುಮತಿ

Jet Airways ಆಸ್ತಿ ಮಾರಾಟಕ್ಕೆ ಸುಪ್ರೀಂ ಕೋರ್ಟ್‌ ಅನುಮತಿ

Bengaluru; ಒಂದೇ ದಿನ ಚಿನ್ನದ ಬೆಲೆ 10 ಗ್ರಾಂಗೆ 1,790 ರೂ. ಇಳಿಕೆ

Bengaluru; ಒಂದೇ ದಿನ ಚಿನ್ನದ ಬೆಲೆ 10 ಗ್ರಾಂಗೆ 1,790 ರೂ. ಇಳಿಕೆ

Delhi Pollution: ಕೃಷಿ ತ್ಯಾಜ್ಯ ಸುಟ್ಟರೆ ರೈತರಿಗೆ ಇನ್ನು ದುಪ್ಪಟ್ಟು ದಂಡ!

Delhi Pollution: ಕೃಷಿ ತ್ಯಾಜ್ಯ ಸುಟ್ಟರೆ ರೈತರಿಗೆ ಇನ್ನು ದುಪ್ಪಟ್ಟು ದಂಡ!

Maharashtra: ಕಾಂಗ್ರೆಸ್‌ ಬಂಡಾಯ ಸ್ಪರ್ಧಿಗಳು 6 ವರ್ಷ ಅಮಾನತು

Maharashtra: ಕಾಂಗ್ರೆಸ್‌ ಬಂಡಾಯ ಸ್ಪರ್ಧಿಗಳು 6 ವರ್ಷ ಅಮಾನತು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

koratagere

Koratagere: ಗೃಹ ಸಚಿವರ ಸ್ವ ಕ್ಷೇತ್ರದಲ್ಲೇ ಮಲ ಹೊತ್ತ 10 ವರ್ಷದ ಬಾಲಕ!

Accident-logo

Kunigal: ಬೈಕ್, ಕ್ಯಾಂಟರ್ ಮುಖಾಮುಖಿ ಢಿಕ್ಕಿ; ಇಬ್ಬರು ಸ್ಥಳದಲ್ಲೇ ಮೃತ್ಯು 

2-gubbi

Gubbi: ಮೀಟರ್ ಬಡ್ಡಿ ದಂಧೆಕೋರರ ಕಿರುಕುಳಕ್ಕೆ ಬೇಸತ್ತು ಪೌರ ಕಾರ್ಮಿಕ ಆತ್ಮಹತ್ಯೆ

4

Koratagere: ವೃದ್ದೆ ಮೇಲೆ ಕೆಎಸ್ಆರ್ಟಿಸಿ ಬಸ್ ಹರಿದು ಸಾವು

Hunasuru-Women

Hunasur: ವರದಕ್ಷಿಣೆ ಕಿರುಕುಳಕ್ಕೆ ಬಲಿಯಾದ ತಿಪಟೂರಿನ ಮಹಿಳೆ!

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

HDK2

By Election: ಯೋಗೇಶ್ವರ್‌ ನಿಂದಿಸಿದ್ದ ಡಿ.ಕೆ.ಸುರೇಶ್‌ ಆಡಿಯೋ ಎಚ್‌ಡಿಕೆ ಬಿಡುಗಡೆ

DVS

By Election: ನಾಗೇಂದ್ರ, ಜಮೀರ್‌, ಡಿಕೆಶಿ ಮೇಲೆ ಚುನಾವಣಾ ಆಯೋಗ ಕಣ್ಣಿಡಲಿ: ಡಿವಿಎಸ್‌

Dinesh-gundurao

Waqf: ಮುಸ್ಲಿಮರ ಗುರಿ ಮಾಡುವುದು ಬಿಟ್ಟರೆ ಬಿಜೆಪಿಗೆ ಬೇರೇನೂ ಇಲ್ಲ: ಸಚಿವ ದಿನೇಶ್‌

Maharashtra: ಸ್ತ್ರೀಯರಿಗೆ ಮಾಸಿಕ 3000, ರೈತರ ಸಾಲ ಮನ್ನಾ: ಎಂವಿಎ

Maharashtra: ಸ್ತ್ರೀಯರಿಗೆ ಮಾಸಿಕ 3000, ರೈತರ ಸಾಲ ಮನ್ನಾ: ಎಂವಿಎ

Jet Airways ಆಸ್ತಿ ಮಾರಾಟಕ್ಕೆ ಸುಪ್ರೀಂ ಕೋರ್ಟ್‌ ಅನುಮತಿ

Jet Airways ಆಸ್ತಿ ಮಾರಾಟಕ್ಕೆ ಸುಪ್ರೀಂ ಕೋರ್ಟ್‌ ಅನುಮತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.