ಬಿಜೆಪಿ ರಾಮದೇವರ ವಿರೋಧಿ ಪಕ್ಷ
Team Udayavani, Apr 14, 2019, 4:17 PM IST
ಮಧುಗಿರಿ: ರಾಷ್ಟ್ರದಲ್ಲಿ ಗೋಹತ್ಯೆ ನಿಷೇಧ ಮಾಡಿ ರಾಜ್ಯ ಸರ್ಕಾರಗಳಿಗೆ ಅಧಿಕಾರ ನೀಡಿದ್ದು ಕಾಂಗ್ರೆಸ್. ಆದರೆ, ಬಿಜೆಪಿ ಸರ್ಕಾರವಿರುವ ರಾಜ್ಯದಲ್ಲಿ ನಿಷೇಧವಿಲ್ಲ ಹಾಗೂ 30 ವರ್ಷಗಳಿಂದ ರಾಮನ ಹೆಸರಿನಿಂದ ಹಣ, ಇಟ್ಟಿಗೆ ಸಂಗ್ರಹಿಸಿದ್ದು, ಯಾರಿಗೂ ಲೆಕ್ಕವೂ ನೀಡದೆ, ರಾಮಮಂದಿರವೂ ನಿರ್ಮಾಣ ಮಾಡದೆ ರಾಮನಿಗೆ ಬಿಜೆಪಿ ದ್ರೋಹ ಮಾಡಿದ್ದು, ಜನತೆ ಬಿಜೆಪಿ ತಿರಸ್ಕರಿಸಬೇಕು ಎಂದು ರಾಜ್ಯ ಕಾಂಗ್ರೆಸ್ ಹಿರಿಯ ಉಪಾಧ್ಯಕ್ಷ ಪ್ರೊ.ರಾಧಾಕೃಷ್ಣ ತಿಳಿಸಿದರು.
ಪಟ್ಟಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಜಾಪ್ರಭುತ್ವದ ತಳಹದಿ ಮೇಲೆ ವಾಜಪೇಯಿ, ಆಡ್ವಾಣಿ, ಮುರಳಿ ಮನೋಹರ್ ಜೋಶಿ ಹಾಗೂ ಇತರರು ಕಟ್ಟಿದ ಬಿಜೆಪಿಯನ್ನು ಹಿಟ್ಲರ್ ಮನೋ ಭಾವದ ಮೋದಿ ಹಾಗೂ ಅಮಿತ್ ಶಾ ಕೈವಶ ಮಾಡಿಕೊಂಡಿದ್ದು, ದೇಶದ ಹಿತದೃಷ್ಟಿಯಲ್ಲಿ ಇದು ಮಾರಕವಾಗಿದೆ. ಇವರು ಸಮಾನತೆ, ಜಾತ್ಯತೀತ ತತ್ವವನ್ನು ಕತ್ತು ಹಿಸುಕಿ ಕೊಂದಿ ದ್ದಾರೆ. ಕೇವಲ ಜಾತಿ ಧೃವೀಕರಣ, ಮಹಿಳೆ ಯರ ಮೇಲೆ ದೌರ್ಜನ್ಯ, ಸಂಪತ್ತಿನ ಕ್ರೂಢೀಕರಣ ಸೇರಿದಂತೆ ಪ್ರಜಾಪ್ರಭುತ್ವ ವಿರೋಧಿ ನೀತಿ ಪಾಲಿಸುತ್ತಿದ್ದಾರೆ.
ಇಂದಿನ ಚುವಣೆಯಲ್ಲಿ ಎಲ್ಲಾ ಜನಪ್ರತಿನಿಧಿಗಳು ಮೋದಿಯ ಹೆಸರಲ್ಲಿ ಮತ ಕೇಳುತ್ತಿದ್ದು, ಯಾರಿಗೂ ಸ್ವಂತ ಶಕ್ತಿಯಿಲ್ಲ ಎಂದು ವ್ಯಂಗ್ಯವಾಡಿದರು. ರಾಜ ದಲ್ಲಿ ಅನಂತಕುಮಾರ್ ಪತ್ನಿಗೆ ಟಿಕೆಟ್ ನೀಡಲು ವಂಶ ಪಾರಂಪರ್ಯಕ್ಕೆ ಸಾಧ್ಯವಿಲ್ಲ ಎಂದ ಸಂತೋಷ್, ಯಡಿಯೂರಪ್ಪನ ಮಗನಿಗೆ ಹಾಗೂ ಮಂಡ್ಯದಲ್ಲಿ ಸುಮಲತಾಗೆ ಬೆಂಬಲ ಹೇಗೆ ನೀಡಿದರು ಎಂದು ಪ್ರಶ್ನಿಸಿದರು.
ದೇಶದ್ರೋಹವಲ್ಲವೇ: ಮಾತೆತ್ತಿದರೆ ಮೇಕ್ ಇನ್ ಇಂಡಿಯಾ ಅನ್ನುವ ಮೋದಿ ರಾಷ್ಟ್ರದ ಪ್ರತಿಷ್ಠಿತ ಕಂಪನಿಯಾದ ಎಚ್‌ಎಎಲ್ ಹಾಗೂ ಇಸ್ರೋವನ್ನು ದೂರವಿರಿಸಿ ದಿವಾಳಿ ಯಾದ ರಿಲಿಯನ್ಸ್ ಕಂಪನಿಗೆ ದೇಶದ ಭದ್ರತೆ ಹೊಣೆಗಾರಿಕೆ ನೀಡಿದ್ದು ದೇಶದ್ರೋಹವಲ್ಲವೇ ಎಂದು ಪ್ರಶ್ನಿಸಿದರು.
ಹೇಡಿತನ: ಮೋದಿಯಿಂದ ಇಂದು ದೇಶದ ಶೇ.65 ಸಂಪತ್ತು ಕೇವಲ 2 ಜನರ ಕೈಯಲ್ಲಿದ್ದು, ಆರ್ಥಿಕ ಪರಿಸ್ಥಿತಿ ಆಂತಕದಲ್ಲಿದೆ. ಮೋದಿ ಚುನಾವಣೆಯನ್ನು ಸಮರ್ಥವಾಗಿ ಎದುರಿಸಲಾಗದೆ ಸಿಬಿಐ, ಐಟಿ ಸಂಸ್ಥೆಗಳಿಂದ ವಿರೋಧ ಪಕ್ಷವನ್ನು ಹಣೆಯಲು ಯತ್ನಿಸುತ್ತಿರುವುದು ಹೇಡಿತನ ಎಂದು ಜರಿದರು.
ನಾಡಿನ ಅಮೂಲ್ಯ ಆಸ್ತಿ: ಮೋದಿಯ ಸರ್ವಾಧಿಕಾರ ತಡೆಯುವ ಶಕ್ತಿ ದೇವೇಗೌಡರಿಂದಲೇ ಸಾಧ್ಯ. ಹಾಗಾಗಿ ಮೋದಿ ಗೌಡರನ್ನು ಟಾರ್ಗೆಟ್ ಮಾಡಿದ್ದಾರೆ. ಜಾತ್ಯತೀತ ವ್ಯಕ್ತಿಯಾಗಿ ಆಡಳಿತ ನೀಡಿದ ದೇವೇಗೌಡರು ಇಂದು ನಾಡಿನ ಅಮೂಲ್ಯ ಆಸ್ತಿ. ರಾಜ್ಯ¨ ರೈತರು ಹಾಗೂ ನೀರಾವರಿ ಉಳಿವಿಗಾಗಿ ದೇವೇಗೌಡರನ್ನು ಎಲ್ಲರೂ ಬೆಂಬಲಿಸಬೇಕು ಎಂದು ಮನವಿ ಮಾಡಿದರು.
ಜಿಲ್ಲೆಯ ಸಮಸ್ಯೆ ಪರಿಹಾರ: ಕೌಶಲ್ಯಾ ಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಹಾಗೂ ರಾಜ್ಯ ಕಾಂಗ್ರೆಸ್ ವಕ್ತಾರ ಮುರಳೀಧರ್ ಹಾಲಪ್ಪ ಮಾತನಾಡಿ, ರಾಜ್ಯಕ್ಕೆ ಕೃಷ್ಣಾ, ತುಂಗಾ ನೀರನ್ನು ತಂದ ದೇವೇಗೌಡರಿಗೆ ಗಂಗೆಯನ್ನು ತರುವ ಆದಮ್ಯ ಆತ್ಮವಿಶ್ವಾಸವಿದೆ. ಅಂಥಪ್ರಚಂಡವಾದ ರಾಜಕೀಯ ಮುತ್ಸದ್ಧಿತನ
ಮೈತ್ರಿ ಅಭ್ಯರ್ಥಿಯಾದ ಮಾಜಿ ಪ್ರಧಾನಿ ದೇವೇಗೌಡರಿಗಿದೆ. ಇವರ ಗೆಲುವಿನಿಂದ ಜಿಲ್ಲೆಯ ಶಾಶ್ವತ ಸಮಸ್ಯೆಗಳು ಬಗೆಹರಿಯ ಲಿದ್ದು, ನಾಡಿನ ರೈತರು ಹಾಗೂ ಬಡವರುಸ್ವಾಭಿಮಾನದಿಂದ ಬದುಕುತ್ತಾರೆ. ಬಿಜೆಪಿ
ಅಭ್ಯರ್ಥಿ ಬಸವರಾಜು ಕೊಡುಗೆ ಏನುಎಂದ ಹಾಲಪ್ಪ, ಕೇವಲ ಮೋದಿ ಹೆಸರಲ್ಲಿ ಮತ ಕೇಳುತ್ತಿರುವುದು ಎಷ್ಟು ಸರಿ ಎಂದರು.
ದೇವೇಗೌಡರಿಗೆ ಮತನೀಡಿ: ರಾಜ್ಯ ಕಾಂಗ್ರೆಸ್‌ನ ಕಾನೂನು ಕೋಶದ ಉಪಾಧ್ಯಕ್ಷ ಅಹ್ಮದ್ ಮಾತನಾಡಿ, ಮೋದಿಯ ಬಿಜೆಪಿ ಪ್ರಜಾಪ್ರಭುತ್ವವನ್ನು ಮಣ್ಣು ಮಾಡಿದೆ. ದೇವೇಗೌಡರು ಹುಟ್ಟು ಹೋರಾಟಗಾರರು. ಕೇಂದ್ರ ಬಿಜೆಪಿಯು ಭ್ರಷ್ಟಾಚಾರದ ಹಿತ ಕಾಯುವಂತ ಕಾಯ್ದೆಯನ್ನು ಜಾರಿಗೆ
ತಂದಿದ್ದು, ಖದೀಮರು ನುಣಿಚಿಕೊಳ್ಳಲು ಸಹಕಾರ ನೀಡಿದ್ದಾರೆ. ಜಿಲ್ಲೆ ಹಾಗೂ ನಾಡಿನಲ್ಲಿ ಜಾತ್ಯತೀತ ತತ್ವ ಹಾಗೂ ಅಹಿಂದ ವರ್ಗಗಳ ಹಿತ ಕಾಪಾಡಲು ದೇವೇಗೌಡರ ಗೆಲುವು ಅವಶ್ಯಕ ವಾಗಿದ್ದು, ಎಲ್ಲರೂ ದೇವೇಗೌಡರಿಗೆ ಮತ ನೀಡು ವಂತೆ ಮನವಿ ಮಾಡಿದರು.
ಕಾಂಗ್ರೆಸ್ ಮುಖಂಡ ಜಿಪಂ ಸದಸ್ಯ ಕೆಂಚ ಮಾರಯ್ಯ ಮಾತನಾಡಿ, ದೇವೇಗೌಡರು ರಾಹುಲ್‌ಗಾಂಧಿಯ ಅಭ್ಯರ್ಥಿ. ಇವರ ಗೆಲುವಿಗೆ ಕಾಂಗ್ರೆಸ್ ಹಾಗೂ ಜೆಡಿಎಸ್ ಶ್ರಮಿಸುತ್ತಿದೆ. ಬಿಜೆಪಿಯಿಂದ ಸಾಮಾಜಿಕ ನ್ಯಾಯ ಅಸಾಧ್ಯ. ಹಾಗಾಗಿ ದೇವೇಗೌಡರು ಗೆಲ್ಲುವುದು ನಿಶ್ಚಿತ ಎಂದರು. ನಿವೃತ್ತ ಅಧಿಕಾರಿ ಗೋವಿಂದೇಗೌಡ ಜೊತೆಗಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Koratagere: ಟಾಟಾ ಏಸ್ ಪಲ್ಟಿ; 15 ವಿದ್ಯಾರ್ಥಿಗಳಿಗೆ ಗಂಭೀರ ಗಾಯ
ಮಧುಗಿರಿ: ಕಚೇರಿಯಲ್ಲೇ DYSP ರಾಸಲೀಲೆ!!: ವಿಡಿಯೋ ಸೆರೆ
Minister ಸೋಮಣ್ಣ, ಸಿ.ಎಸ್. ಹೆಸರಲ್ಲಿ ನಕಲಿ ಸಹಿ, ಲೆಟರ್‌ಹೆಡ್: ಬಂಧನ
Koratagere: ರಸ್ತೆಯಲ್ಲಿ ಚರಂಡಿ ನೀರು; ಸಾಂಕ್ರಾಮಿಕ ರೋಗದ ಭೀತಿಯಲ್ಲಿ ಗ್ರಾಮಸ್ಥರು
Kunigal: ಮರಕ್ಕೆ ಕಾರು ಡಿಕ್ಕಿಯಾಗಿ ಪಲ್ಟಿ: ಬೆಸ್ಕಾಂ ನೌಕರರ ಸ್ಥಳದಲ್ಲೇ ಸಾವು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.