ಬಿಜೆಪಿಯವರು ಭಯೋತ್ಪಾದಕರಲ್ಲ, ದೇಶಭಕ್ತರು
Team Udayavani, Jan 12, 2018, 6:10 AM IST
ಶಿರಾ/ಪಾವಗಡ/ಮಧುಗಿರಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಬಿಜೆಪಿ ಕಾರ್ಯಕರ್ತರನ್ನು ಭಯೋತ್ಪಾದಕರು ಎಂದು ಆರೋಪಿಸಿದ್ದಾರೆ. ಆದರೆ, ನಮ್ಮ ಕಾರ್ಯಕರ್ತರು ಭಯೋತ್ಪಾದಕರಲ್ಲ, ದೇಶಭಕ್ತರು, ಸಮಾಜಸೇವಕರು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ವಾಗ್ಧಾಳಿ ನಡೆಸಿದ್ದಾರೆ.
ತುಮಕೂರು ಜಿಲ್ಲೆಯ ಶಿರಾ, ಪಾವಗಡ ಹಾಗೂ ಮಧುಗಿರಿಗಳಲ್ಲಿ ನಡೆದ ಬಿಜೆಪಿ ಪರಿವರ್ತನಾ ಯಾತ್ರೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಬಿಜೆಪಿಯೋರು ಉಗ್ರಗಾಮಿಗಳು ಎಂಬ ಸಿದ್ದರಾಮಯ್ಯ ಹೇಳಿಕೆಗೆ ಕಿಡಿಕಾ ರಿದ ಅವರು, “ಸಿದ್ದರಾಮಯ್ಯ ಒಬ್ಬ ತಲೆತಿರುಕ ಮುಖ್ಯಮಂತ್ರಿ. ಅವರೊಬ್ಬ ಸೊಕ್ಕಿನ, ಗರ್ವದ,ಧಿಮಾಕಿನ ಮುಖ್ಯಮಂತ್ರಿ’ ಎಂದು ಟೀಕಿಸಿದರು. ಅತ್ಯುತ್ತಮ ಆಡಳಿತ ನೀಡುವ ನರೇಂದ್ರ ಮೋದಿಯವರನ್ನು ಟೀಕಿಸುವ ಎತ್ತರಕ್ಕೆ ಸಿದ್ದರಾಮಯ್ಯ ಬೆಳೆದಿಲ್ಲ. ಕೇಂದ್ರ ಸರ್ಕಾರ ಕೊಟ್ಟ ಹಣವನ್ನು ಅಭಿವೃದಿಟಛಿಗೆ ವಿನಿಯೋಗಿಸದೆ ತಮ್ಮ ದರ್ಬಾರ್ ನಡೆಸಲು ಬಳಸಿಕೊಂಡಿದ್ದಾರೆ.
ಕಾಂಗ್ರೆಸ್ ಸರ್ಕಾರ ಕಮೀಷನ್ ಏಜೆಂಟ್‌ನಂತೆ ಕೆಲಸ ಮಾಡುತ್ತಿದೆ. ಬಿಜೆಪಿ ಅಧಿಕಾರಕ್ಕೆ ಬಂದರೆ,24ಗಂಟೆಯೊಳಗೆ ಸಿದ್ದರಾಮಯ್ಯ ಸರ್ಕಾರ ಮಾಡಿರುವ ಎಲ್ಲಾ ಅವ್ಯವಹಾರಗಳ ತನಿಖೆಗೆ ಆದೇಶ ನೀಡುತ್ತೇನೆ. ರಾಜ್ಯದಲ್ಲಿ ಪರಿವರ್ತನೆ
ಕಾಲ ಬಂದಿದೆ ಎಲ್ಲೇ ಹೋದರು ಯಾತ್ರೆಗೆ ಜನಸ್ತೋಮ ಕಂಡು ಬರುತ್ತಿದೆ. ಜನ ಬದಲಾವಣೆ ಬಯಸಿದ್ದಾರೆ ಎಂಬುದು
ಸ್ಪಷ್ಟಗೊಳ್ಳುತ್ತಿದೆ ಎಂದರು.
ರಾಮನ ಭಕ್ತ ಹನುಮನ ನಾಡಿನಲ್ಲಿ ಸಿದ್ದರಾಮಯ್ಯ ರಾವಣ ಸಂತತಿಯಂತಿದ್ದಾರೆ.ಧರ್ಮಸ್ಥಳಕ್ಕೆ ಮಂಜುನಾಥನ ದರ್ಶನಕ್ಕೆ ಸ್ನೇಹಿತರೊಂದಿಗೆ ಮೀನು ತಿಂದು ಹೋಗುತ್ತಾರೆ. ಹೊರ ಭಾಗದಿಂದಲೆ ಧರ್ಮಸ್ಥಳ ಮಂಜುನಾಥ,ಉಡುಪಿಯ ಶ್ರೀಕೃಷ್ಣನ ದರ್ಶನ ಪಡೆಯುತ್ತಾರೆ.ನನ್ನ ಹೆಸರಲ್ಲಿ ರಾಮ ಇದ್ದಾನೆ ಎಂದು ಹೇಳಿಕೊಳ್ಳುವ ಸಿದ್ದರಾಮಯ್ಯ, ಅನೇಕ ಬಾರಿ ಉಡುಪಿಗೆ ಹೋದರೂ, ಕೃಷ್ಣನ ದರ್ಶನಕ್ಕೆ ಯಾಕೆ ಹೋಗಲಿಲ್ಲ ಎಂದು ಪ್ರಶ್ನಿಸಿದರು. ಇವರಿಗೆ ದೈವ ಬಲವೂ ಇಲ್ಲ, ಜನ ಬಲವೂ ಇಲ್ಲ. ಜಾತಿಯ ವಿಷಬೀಜ ಬಿತ್ತಿ ಸಮಾಜ ಒಡೆಯುವ ಕೆಲಸ ಮಾಡುತ್ತಿರುವ ಸಿದ್ದರಾಮಯ್ಯನವರ ಸರ್ಕಾರ ರಾಜ್ಯಕ್ಕೆ ಬೇಕೆ ಎಂದು ಯಡಿಯೂರಪ್ಪ ಪ್ರಶ್ನಿಸಿದರು.
ಸರ್ಕಾರ ದಿವಾಳಿ: ಸಿದ್ದರಾಮಯ್ಯ ನೇತೃತ್ವದ ಸರಕಾರ ದಿವಾಳಿಯಾಗಿದ್ದು, ಬೆಂಗಳೂರಿನ ನಿವೇಶನವೊಂದನ್ನು 975 ಕೋಟಿ ರೂ.ಗಳಿಗೆ ಒತ್ತೆ ಇಟ್ಟು ಹಾಗೂ ಮೈಸೂರು ಮಿನರಲ್ಸ್‌ನಿಂದ 1,400 ಕೋಟಿ ರೂ.ಸಾಲ ಪಡೆದು ಸರಕಾರ ನಡೆಸುತ್ತಿದೆ.ಕೇಂದ್ರ ಸರಕಾರ ನೀಡಿರುವ 35 ಸಾವಿರ ಕ್ವಿಂಟಾಲ್ ಗೋಧಿ ಗೋದಾಮಿನಲ್ಲಿ ಕೊಳೆಯುತ್ತಿದ್ದು,
ರಾಜ್ಯದ ಜನರಿಗೆ ಅದನ್ನು ವಿತರಿಸುತ್ತಿಲ್ಲ. ಸರ್ಕಾರದಲ್ಲಿ ಅಧಿಕಾರಿಗಳು ಸೋಮಾರಿಗಳಾಗಿದ್ದಾರೆ.
ಸರ್ಕಾರವೇ ಅವರನ್ನು ಭ್ರಷ್ಟರನ್ನಾಗಿಸಿದೆ. ವರ್ಗಾವಣೆ ಹೆಸರಲ್ಲಿ ಸರ್ಕಾರ ಲೂಟಿ ಮಾಡುತ್ತಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ನಾಲ್ಕು ವರ್ಷದಲ್ಲಿ ರಾಜ್ಯದಲ್ಲಿ ಅತಿ ಹೆಚ್ಚು ಕೊಲೆ, ಅತ್ಯಾಚಾರ,ಅಪಹರಣ ಪ್ರಕರಣಗಳು ನಡೆದಿವೆ ಎಂದರು.
ಬಿಜೆಪಿ ಸರಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೆ ನೀರಾವರಿಗೆ ಆದ್ಯತೆ ನೀಡಲಾಗುವುದು.1 ಲಕ್ಷ ಕೋಟಿ ರೂ.ವೆಚ್ಚದಲ್ಲಿ ನೀರಾವರಿ ಯೋಜನೆ ಕೈಗೊಂಡು ರಾಜ್ಯದ ಎಲ್ಲಾ ಕೆರೆ,ಗೋಕಟ್ಟೆಗಳನ್ನು ದುರಸ್ತಿಗೊಳಿಸಿ ನೀರು ತುಂಬಿಸಲಾಗುವುದು ಎಂದರು.
ಸಿಎಂಗೆ ಬಿಎಸ್‌ವೈ ಟ್ವೀಟ್ ಟಾಂಗ್
ಜನ ಚಪ್ಪಾಳೆ ತಟ್ಟಿದ್ದು ನೀವು ನಿದ್ರಿಸಿದ್ದನ್ನು ನೋಡಿಯೊ ಅಥವಾ ಸಚಿವರು ನಿಮ್ಮನ್ನು ಎಬ್ಬಿಸಿ ಗಮನ ಸೆಳೆಯಲು ಯತ್ನಿಸಿದ್ದನ್ನು ನೋಡಿಯೊ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ. ನೀವು ಭಾಷಣದಲ್ಲಿಯೇ ರಾಹುಲ್ ಮತ್ತು ಸೋನಿಯಾ ಗಾಂಧಿಯನ್ನು ಕೊಂದಾಗ, ನವೆಂಬರ್ 1ನ್ನು ಕಾರ್ಮಿಕರ ದಿನ ಎಂದಾಗಲೂ ಚಪ್ಪಾಳೆ ತಟ್ಟಿದ್ದಾರೆ. ಇದು ಮರೆತುಹೋಯ್ತಾ? (ನಮ್ಮ ಸರ್ಕಾರದ ಸಾಧನೆಗೆ ಜನ ಚಪ್ಪಾಳೆ ಬಾರಿಸುವುದು ನೋಡಿ ಬಿಜೆಪಿಯವರಿಗೆ ಅಸೂಯೆಯಾಗುತ್ತಿದೆ ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆಗೆ ಟ್ವೀಟ್ ಮೂಲಕ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ನೀಡಿರುವ ಟಾಂಗ್)
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pandavapura: ಮೂರು ಕರುಗಳಿಗೆ ಜನ್ಮ ನೀಡಿದ ಸೀಮೆ ಹಸು
BBMP ಸೇರಿ 11 ಮಸೂದೆ ಮಂಡನೆ? ಡಿ. 9ರ ಬೆಳಗಾವಿ ಅಧಿವೇಶನದಲ್ಲಿ ಮಂಡನೆಗೆ ನಿರ್ಣಯ
Karnataka Govt,.: ಸಂಪುಟ ಹುತ್ತಕ್ಕೆ ಈಗಲೇ ಕೈಹಾಕಲು ಸಿಎಂ ನಿರಾಸಕ್ತಿ?
Karnataka Govt.,: ದಿಲ್ಲಿಯಲ್ಲಿ ಸಂಪುಟ ರಹಸ್ಯ; ಹೈಕಮಾಂಡ್ ಭೇಟಿ ಸಾಧ್ಯತೆ
DA Hike: ಸರಕಾರಿ ನೌಕರರಿಗೆ ಶೇ. 2 ತುಟ್ಟಿ ಭತ್ಯೆ ಹೆಚ್ಚಳ… ಸಿಎಂಗೆ ಅಭಿನಂದನೆ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Tollywood: ಒಂದೇ ದಿನ ವಿವಾಹವಾಗಲಿದ್ದಾರಾ ಅಕ್ಕಿನೇನಿ ಸಹೋದರರು? ನಾಗಾರ್ಜುನ್ ಹೇಳಿದ್ದೇನು?
Video: ಜೈಲಿನಿಂದ ಬಿಡುಗಡೆಯಾದ ಖುಷಿ… ಜೈಲು ಅಧಿಕಾರಿಗಳ ಎದುರೇ ಯುವಕನ ಬ್ರೇಕ್ ಡ್ಯಾನ್ಸ್
Mangaluru: 7 ಕೆರೆ, ಪಾರ್ಕ್ ಅಭಿವೃದ್ಧಿಗೆ ಅಮೃತ 2.0
Stock Market: ಷೇರುಪೇಟೆ ಸಂವೇದಿ ಸೂಚ್ಯಂಕ 1,000 ಅಂಕ ಕುಸಿತ; ಲಾಭಗಳಿಸಿದ ಷೇರು ಯಾವುದು?
Pandavapura: ಮೂರು ಕರುಗಳಿಗೆ ಜನ್ಮ ನೀಡಿದ ಸೀಮೆ ಹಸು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.