ಕೆಂಪೇಗೌಡರ ಮನೆಗೆ ಬಂತು ಬೊಲೆರೋ
Team Udayavani, Jan 30, 2022, 3:33 PM IST
ತುಮಕೂರು: ಕಳೆದ ಶುಕ್ರವಾರದಂದು ತುಮಕೂರಿನ ಮಹೇಂದ್ರ ಶೋರೂಮ್‌ನಲ್ಲಿ ಬೊಲೆರೋ ವಾಹನ ಖರೀದಿಗೆ ಬಂದಿದ್ದ ವೇಳೆ ಅವಮಾನಕ್ಕೆ ಒಳಗಾಗಿದ್ದ ತುಮಕೂರು ಗ್ರಾಮಾಂತರ ಕ್ಷೇತ್ರದರಾಮನಪಾಳ್ಯದ ಯುವ ರೈತ ಕೆಂಪೇಗೌಡರಿಗೆ ಶೋರೂಂನಿಂದ ಶನಿವಾರ ಬೊಲೆರೋ ವಾಹನವನ್ನು ಹಸ್ತಾಂತರಿಸಿದ್ದು, ಕೆಂಪೇಗೌಡರ ಸಂತಸಕ್ಕೆ ಕಾರಣವಾಗಿದೆ.
ವಾಹನ ಖರೀದಿಗೆ ಆಗಮಿಸಿದ್ದ ವೇಳೆ ಶೋರೂಂ ಸೇಲ್ಸ್ ಏಜೆಂಟ್ ಒಬ್ಬ ರೈತ ಕೆಂಪೇಗೌಡ ಹಾಗೂ ಆತನ ಸ್ನೇಹಿತರಿಗೆ ನಿಮಗೆ ಖರೀದಿಸುವ ಯೋಗ್ಯತೆ ಇಲ್ಲ ಎಂದು ಅವಮಾನಿಸಿದ್ದು ಹಾಗೂ ಅರ್ಧ ಗಂಟೆಯಲ್ಲಿ 10 ಲಕ್ಷ ರೂ. ಜಮಾ ಮಾಡಿಕೊಂಡು ಅದೇ ಶೋ ರೋಂಗೆ ಖರೀದಿಗೆ ಬಂದದ್ದು, ಈ ಕ್ಷಣವೇ ತಮಗೆ ವಾಹನ ನೀಡಬೇಕೆಂದು ಪಟ್ಟು ಹಿಡಿದದ್ದು ದೇಶಾದ್ಯಂತ ಸುದ್ದಿಯಾಗಿತ್ತು. ಈಘಟನೆಯಿಂದ ಎಚ್ಚೆತ್ತ ಮಹೇಂದ್ರ ಗ್ರೂಪ್‌ನ ಮುಖ್ಯಸ್ಥ ಆನಂದ್ ಮಹೀಂದ್ರ ಅವರೇ ಘಟನೆ ಬಗ್ಗೆ ವಿಷಾದವ್ಯಕ್ತಪಡಿಸಿ, ತಪ್ಪಿತಸ್ಥ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದರು.
ಶನಿವಾರ ಯುವ ರೈತ ಕೆಂಪೇಗೌಡರ ತುಮಕೂರಿನ ರಿಂಗ್ ರಸ್ತೆಯ ಮಹೇಂದ್ರ ಶೋರೂಂನಿಂದ ಬುಲೇರೋ ಪಿಕಪ್ ವಾಹನ ಹಸ್ತಾಂತರಿಸ ಲಾಗಿದೆ. ಈ ಬಗ್ಗೆಟ್ವೀಟ್ ಮಾಡಿರುವ ಸಂಸ್ಥೆಯ ಮುಖ್ಯಸ್ಥ ಆನಂದ್‌ಮಹೇಂದ್ರ, ಯುವ ರೈತ ಕೆಂಪೇಗೌಡ ತಮ್ಮ ಮಹೀಂದ್ರಕುಟುಂಬಕ್ಕೆ ಸೇರ್ಪಡೆಯಾಗಿದ್ದಾರೆ ಎನ್ನುವ ಮೂಲಕ ಪ್ರಕರಣಕ್ಕೆ ಅಂತ್ಯವಾಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Koratagere: ಗೃಹ ಸಚಿವರ ಸ್ವ ಕ್ಷೇತ್ರದಲ್ಲೇ ಮಲ ಹೊತ್ತ 10 ವರ್ಷದ ಬಾಲಕ!
Kunigal: ಬೈಕ್, ಕ್ಯಾಂಟರ್ ಮುಖಾಮುಖಿ ಢಿಕ್ಕಿ; ಇಬ್ಬರು ಸ್ಥಳದಲ್ಲೇ ಮೃತ್ಯು
Gubbi: ಮೀಟರ್ ಬಡ್ಡಿ ದಂಧೆಕೋರರ ಕಿರುಕುಳಕ್ಕೆ ಬೇಸತ್ತು ಪೌರ ಕಾರ್ಮಿಕ ಆತ್ಮಹತ್ಯೆ
Koratagere: ವೃದ್ದೆ ಮೇಲೆ ಕೆಎಸ್ಆರ್ಟಿಸಿ ಬಸ್ ಹರಿದು ಸಾವು
Hunasur: ವರದಕ್ಷಿಣೆ ಕಿರುಕುಳಕ್ಕೆ ಬಲಿಯಾದ ತಿಪಟೂರಿನ ಮಹಿಳೆ!
MUST WATCH
ಹೊಸ ಸೇರ್ಪಡೆ
Waqf Bill: ಜೆಪಿಸಿ ಅಧ್ಯಕ್ಷರ ಭೇಟಿ ಚುನಾವಣ ನಿಯಮ ಉಲ್ಲಂಘನೆ: ಸಚಿವ ಪ್ರಿಯಾಂಕ್
MUDA: ಆರೋಪಿ ಸ್ಥಾನದಲ್ಲಿರುವ ಸಿಎಂ ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ: ಬಿವೈವಿ
By Election: ಒಬ್ಬ ಯುವಕನ ಕಟ್ಟಿ ಹಾಕಲು ಬೀಡುಬಿಟ್ಟ ಕೈ ನಾಯಕರ ದಂಡು: ಎಚ್.ಡಿ.ಕುಮಾರಸ್ವಾಮಿ
Rahul Gandhi ಗುರಿ ತಪ್ಪಿದ ಕ್ಷಿಪಣಿ, ಸೋನಿಯಾರಿಂದ ತರಬೇತಿ ಅಗತ್ಯ: ಹಿಮಾಂತ
Delhi; ಕಾನೂನು ಅಧಿಕಾರಿ ನಿವಾಸದಲ್ಲಿ 3.79 ಕೋಟಿ ನಗದು ಸಿಬಿಐನಿಂದ ವಶಕ್ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.