ಜಮೀನು ಖರೀದಿಸಿ 42 ಮಂದಿಗೆ ಉಚಿತ ನಿವೇಶನ
Team Udayavani, Feb 27, 2023, 12:53 PM IST
ಬರಗೂರು: ಶಿರಾ ತಾಲೂಕಿನ ದೊಡ್ಡ ಹುಲಿಕುಂಟೆ ಗ್ರಾಮದಲ್ಲಿ ಸ್ವಂತ ಹಣದಲ್ಲಿ ಒಂದು ಎಕರೆ ಭೂಮಿ ಖರೀದಿ ಮಾಡಿ ಅದನ್ನು 20/30 ನಿವೇಶನವಾಗಿ ಪರಿವರ್ತಿಸಿ ನಿಡಗಟ್ಟೆ, ಚಿಕ್ಕ ಹುಲಿ ಕುಂಟೆ, ದೊಡ್ಡಹುಲಿ ಕುಂಟೆ, ಉಪ್ಪಾರಹಟ್ಟಿ ಗ್ರಾಮಗಳ ಬಡ ಕುಟುಂ ಬದ 42 ಮಂದಿ ಫಲಾನುಭವಿಗಳಿಗೆ ಉಚಿತವಾಗಿ ನಿವೇಶನ ನೀಡುವ ಮೂ ಲಕ ಜನಸೇವೆಗೆ ಮುಂದಾದ ನಿವೃತ್ತ ಬೆಸ್ಕಾಂ ತಾಂತ್ರಿಕ ನಿರ್ದೇಶಕ ಹಾಗೂ ಸಮಾಜಸೇವಕ ಶ್ರೀರಾಮೇಗೌಡರ ಕಾರ್ಯ ಮೆಚ್ಚುವಂಥದ್ದು!
ಗ್ರಾಮದ ರೈತ ಕೋದಂಡರಾಮ ಶ್ರೀರಾಮೇಗೌಡರ ಸೇವೆ ಬಗ್ಗೆ ಮಾತ ನಾಡಿ, ಬಡಕುಟುಂಬಗಳಿಗೆ ನಿವೇಶನ ನೀಡುವುದರ ಜೊತೆಗೆ ಹುಲಿಕುಂಟೆ ಹೋಬಳಿ ಕೇಂದ್ರ ಸ್ಥಾನ ಹುಲಿಕುಂಟೆ ಗ್ರಾಮದಲ್ಲಿರುವ ನಾಡಕಚೇರಿ ಕಟ್ಟಡ ಕಟ್ಟಲು ಸ್ವಂತ ಜಾಗ ಇಲ್ಲ ಎಂಬ ಕಂದಾಯ ಇಲಾಖೆ ಅಧಿಕಾರಿಗಳ ಮನವಿಗೆ ಸ್ಪಂದಿಸಿ ಒಂದು ಎಕರೆ ಭೂಮಿ ಯನ್ನು ಕಟ್ಟಡ ಕಟ್ಟಲು ಹುಲಿಕುಂಟೆ ಶ್ರೀರಾಮೇಗೌಡರು ದಾನವಾಗಿ ನೀಡಿ ಅವರ ವ್ಯಕ್ತಿತ್ವವನ್ನು ಪ್ರತಿಬಿಂಬಿಸಿದ್ದಾರೆ.
ಮಹಿಳೆಯರು ಸ್ವಾವಲಂಬಿಯಾಗ ಬೇಕೆಂಬ ಪರಿಕಲ್ಪನೆಯೊಂದಿಗೆ ದೊಡ್ಡ ಹುಲಿಕುಂಟೆಯ ಹಾಲು ಉತ್ಪಾದಕರ ಸಹಕಾರ ಸಂಘ ರಚನೆಯಾಗಿದ್ದು, ಇದಕ್ಕೂ ಸಹ ಶಾಶ್ವತ ನೆಲೆ ಕಲ್ಪಿಸುವ ಉದ್ದೇಶದಿಂದ 5 ಗುಂಟೆ ಭೂಮಿ ಯನ್ನು ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ದಾನವಾಗಿ ನೀಡಿರುವುದು ಜನಪರ ಕಾಳಜಿಯನ್ನು ಸಾಕ್ಷೀಕರಿ ಸುತ್ತಿದ್ದು, ಶ್ರೀರಾಮೇಗೌಡರ ಜನಸೇವೆ ಶ್ಲಾಘನೀಯ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Drone Prathap: ನೀರಿಗೆ ಸ್ಫೋಟಕ ಎಸೆದ ಪ್ರಕರಣ; ಪ್ರತಾಪ್‌ಗೆ 10 ದಿನ ನ್ಯಾಯಾಂಗ ಬಂಧನ
Huliyar; ಕೆಮ್ಮಿನ ಔಷಧವೆಂದು ಭಾವಿಸಿ ಕೀಟನಾಶಕ ಸೇವಿಸಿದ ರೈತ ಸಾ*ವು
ಕೃಷಿ ಹೊಂಡದಲ್ಲಿ ಅದೇನೋ ಮಾಡಲು ಹೋಗಿ ಅರೆಸ್ಟ್ ಅದ ಬಿಗ್ ಬಾಸ್ ಖ್ಯಾತಿಯ ಡ್ರೋನ್ ಪ್ರತಾಪ್
Pavagada: ಟ್ರ್ಯಾಕ್ಟರ್ ಗೆ ಕ್ರೇನ್ ಡಿಕ್ಕಿಯಾಗಿ ಓರ್ವ ಸ್ಥಳದಲ್ಲೇ ಸಾವು
Pavagada: ರಸ್ತೆ ಅಪಘಾತದಲ್ಲಿ ಮಂಡ್ಯ ಮೂಲದ ಬೊಲೆರೋ ಚಾಲಕ ಸ್ಥಳದಲ್ಲೇ ಸಾವು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.