ಸಿಎಎ, ಎನ್‌ಆರ್‌ಸಿ, ಎನ್‌ಪಿಆರ್‌ ಅಸಂವಿಧಾನಿಕ


Team Udayavani, Feb 24, 2020, 3:00 AM IST

caa-nrc

ತುಮಕೂರು: ಕೇಂದ್ರ ಸರ್ಕಾರ ಪೌರತ್ವ ತಿದ್ದುಪಡಿ ಕಾನೂನು, ರಾಷ್ಟ್ರೀಯ ಪೌರತ್ವ ನೋಂದಣಿ ಮತ್ತು ಎನ್‌.ಪಿ.ಆರ್‌ ನಂತಹ ಮಹತ್ವ ಮಸೂದೆಗಳನ್ನು ವ್ಯವಹಾರಗಳ ಸಲಹಾ ಸಮಿತಿ ಮುಂದೆ ಚರ್ಚೆಗಿಡದೆ ನೇರವಾಗಿ ಸಂಸತ್‌ ಅಧಿವೇಶನದಲ್ಲಿ ಮಂಡಿಸಿ ಜಾರಿಗೊಳಿಸಿರುವುದು ಅಸಾಂವಿಧಾನಿಕ ಎಂದು ಸಿಪಿಎಂ ಪಕ್ಷದ ಪಾಲಿಟ್‌ ಬ್ಯೂರೋ ಸದಸ್ಯ ಎಂ.ಎ.ಬೇಬಿ ಆರೋಪಿಸಿದರು. ನಗರದ ಜನಚಳವಳಿ ಕೇಂದ್ರದಲ್ಲಿ ಭಾನುವಾರ ಭಾರತ ಕಮ್ಯೂನಿಸ್ಟ್‌ ಪಕ್ಷದ ವತಿಯಿಂದ ಸಿಎಎ, ಎನ್‌ಆರ್‌ಸಿ ಎನ್‌ಪಿಆರ್‌ಗೆ ಸಂಬಂಧಿಸಿ ಹಮ್ಮಿಕೊಂಡಿದ್ದ ಸಂವಾದದಲ್ಲಿ ಮಾತನಾಡಿದರು.

ಧರ್ಮಾಧಾರಿತ ನೋಂದಣಿ: ದೇಶದ ರಾಜಕೀಯ ಮತ್ತು ಸಂಸದೀಯ ಇತಿಹಾಸದಲ್ಲಿ ಇದೇ ಮೊದಲಿಗೆ ಧರ್ಮಾಧಾರಿತ ಪೌರತ್ವ ನೋಂದಣಿ ಮಾಡಲು ಕೇಂದ್ರ ಸರ್ಕಾರ ಹೊರಟಿದೆ. ಈಗ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಆಫ್ಘಾನಿಸ್ತಾನ ಮೂರು ದೇಶಗಳನ್ನು ಪೌರತ್ವ ನೀಡುವುದರಿಂದ ಹೊರಗಿಟ್ಟಿದೆ. ಮುಂದಿನ ದಿನಗಳಲ್ಲಿ ಬೇರೆ ರಾಷ್ಟ್ರಗಳು ಎನ್‌ಆರ್‌ಸಿಯಿಂದ ಹೊರಗಿಡುವ ಪ್ರಯತ್ನಗಳು ನಡೆಯುವ ಸಾಧ್ಯತೆ ಅಲ್ಲಗೆಳೆಯುವಂತಿಲ್ಲ ಎಂದರು.

ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್‌ ಶಾ ಧರ್ಮಾಧಾರಿತ ಕಾನೂನು ಜಾರಿಗೆ ತರುವ ಮೂಲಕ ಅವರ ನಿಜವಾದ ಬಣ್ಣ ಬಯಲಾಗಿದೆ. ಸಂವಿಧಾನಕ್ಕೆ ಪರ್ಯಾಯವಾಗಿ ದೇಶದಲ್ಲಿ ಅಧಿಕಾರ ಕೇಂದ್ರವೊಂದಿದೆ. ಅದು ಆರ್‌ಎಸ್‌ಎಸ್‌ ಮೂಲಸ್ಥಾನ ನಾಗಪುರ. ಅಲ್ಲಿ ಸಿದ್ಧಗೊಳ್ಳುವ ನಿಯಮಗಳು ಕಾನೂನುಗಳಾಗುತ್ತಿವೆ. ಭಾರತೀಯ ಜನತಾ ಪಕ್ಷ ಆರ್‌ಎಸ್‌ಎಸ್‌ನ ರಾಜಕೀಯ ಅಸ್ತ್ರವಾಗಿದೆ ಎಂದು ಟೀಕಿಸಿದರು.

ಅಘೋಷಿತ ತುರ್ತುಪರಿಸ್ಥಿತಿ: ಆರ್‌ಎಸ್‌ಎಸ್‌ ಮತ್ತು ಬಿಜೆಪಿ ಜನರು ಭೀತರಾಗುವ ವಾತಾವರಣ ಸೃಷ್ಟಿಸುತ್ತಿವೆ. ತನ್ನ ಸಿದ್ಧಾಂತ ಒಪ್ಪದವರನ್ನು ಗುಂಡಿಕ್ಕಿ ಕೊಲ್ಲಲಾಗುತ್ತಿದೆ. ಗೌರಿ ಲಂಕೇಶ್‌, ಎಂ.ಎಂ. ಕಲುರ್ಗಿ ಹತ್ಯೆಯಾಗಿದೆ. ದೇಶದಲ್ಲಿ ಅಘೋಷಿತ ತುರ್ತುಪರಿಸ್ಥಿತಿ ಇದೆ. ಇದರ ವಿರುದ್ಧ ಜಾತ್ಯತೀತ ಶಕ್ತಿಗಳು ಹೋರಾಡಬೇಕು ಎಂದರು.

ಸಿಎಎ, ಎನ್‌ಆರ್‌ಸಿ ಮತ್ತು ಎನ್‌ಪಿಎ ವಿರುದ್ಧ ವಿದ್ಯಾರ್ಥಿಗಳು, ಯುವಜನರು, ರೈತರು ಮತ್ತು ಮಹಿಳಾ ಸಂಘಟನೆಗಳು ಪ್ರಜಾಸತ್ತಾತ್ಮಕ ರೀತಿಯಲ್ಲಿ ಪ್ರಬಲ ಹೋರಾಟ ಮಾಡಬೇಕು. ಮನೆಮನೆಗೂ ಹೋಗಿ ಜನರಿಗೆ ಈ ಕಾನೂನುಗಳ ಅಪಾಯದ ಕುರಿತು ಮನವರಿಕೆ ಮಾಡಬೇಕು. ದೇಶದಲ್ಲಿ ಕೇರಳ ಸೇರಿ 13 ರಾಜ್ಯಗಳು ಸಿಎಎ, ಎನ್‌ಆರ್‌ಸಿ ಮತ್ತು ಎನ್‌ಪಿಆರ್‌ ಜಾರಿಗೊಳಿಸುವುದಿಲ್ಲ ಎಂದು ಹೇಳಿವೆ. ಇದು ಬಿಜೆಪಿಯ ಶಕ್ತಿ ಕುಂದಿಸುವಂತೆ ಮಾಡಿದೆ ಎಂದರು.

ಕೇಂದ್ರ ಸರ್ಕಾರ ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ಎನ್‌ಆರ್‌ಸಿ ಪ್ರಕಾರ ಮಹಾತ್ಮ ಗಾಂಧೀಗೂ ಪೌರತ್ವ ನೀಡಲು ಬರುವುದಿಲ್ಲ. ಗಾಂಧೀ ರಾಮ-ರಹೀಮ್‌ ಇಬ್ಬರೂ ಒಂದೇ ಎಂದರು. ಈಗಿನ ಪರಿಸ್ಥಿತಿ ರಾಮನನ್ನು ಆಯ್ಕೆ ಮಾಡಿಕೊಳ್ಳಬೇಕು. ಇಲ್ಲದಿದ್ದರೆ ರಹೀಮನನ್ನು ಆಯ್ಕೆ ಮಾಡಿಕೊಳ್ಳಬೇಕು. ಅಂತಹ ಪರಿಸ್ಥಿತಿ ನಿರ್ಮಾಣ ಮಾಡಲಾಗಿದೆ. ರಾಮನಿಗೆ ಪೌರತ್ವ ನೀಡಿದರೆ, ರಹೀಮನಿಗೆ ಪೌರತ್ವ ಇಲ್ಲ. ಹೀಗಾಗಿ ಕೇಂದ್ರದ ಕಾಯ್ದೆಗಳ ವಿರುದ್ಧ ಜನರು ಅಸಹಕಾರ ತೋರಬೇಕು ಎಂದು ವಿವರಿಸಿದರು.

ಕಮ್ಯೂನಿಸ್ಟರು ಎಲ್ಲ ಧರ್ಮಗಳನ್ನ ಸಮಾನವಾಗಿ ಗೌರವಿಸುತ್ತಾರೆ. ಜನರ ನಂಬಿಕೆ ಗೌರವಿಸುತ್ತಾರೆ. ಎಲ್ಲರೂ ಸಮಾನತೆಯಿಂದ ಇರಬೇಕು ಎಂದು ಬಯಸುತ್ತಾರೆ. ಆದರೆ ತಾರತಮ್ಯ ಸಹಿಸುವುದಿಲ್ಲ. ಗಾಂಧೀ, ಬುದ್ಧ ಇದೇ ಹಾದಿಯಲ್ಲಿ ನಡೆದವರು. ಸಂವಿಧಾನವೂ ಜಾತಿ, ಧರ್ಮದ ಹೆಸರಿನಲ್ಲಿ ತಾರತಮ್ಯ ಮಾಡುವುದನ್ನು ವಿರೋಧಿಸುತ್ತದೆ. ಈ ಹಿನ್ನೆಲೆಯಲ್ಲಿ ಜನಪರ ಹೋರಾಟಗಳಲ್ಲಿ ಎಲ್ಲ ಜನವಿಭಾಗವು ಪಾಲ್ಗೊಳ್ಳಬೇಕು. ಜನ ವಿರೋಧಿ ನೀತಿಗಳನ್ನು ವಿರೋಧಿಸಬೇಕು ಎಂದು ಕರೆ ನೀಡಿದರು.

ವಿಶ್ರಾಂತ ಪ್ರಾಂಶುಪಾಲ ಜಿ.ಎಂ.ಶ್ರೀನಿವಾಸಯ್ಯ, ಸಿಪಿಎಂ ರಾಜ್ಯ ಕಾರ್ಯದರ್ಶಿ ಯು. ಬಸವರಾಜು, ರಾಜ್ಯ ಮುಖಂಡ ಕೆ.ಎನ್‌.ಉಮೇಶ್‌, ಮುಖಂಡರಾದ ಸೈಯದ್‌ ಮುಜೀಬ, ಎನ್‌.ಕೆ.ಸುಬ್ರಹ್ಮಣ್ಯ ಉಪಸ್ಥಿತರಿದ್ದರು.

ಸಂವಿಧಾನಕ್ಕೆ ವಿರುದ್ಧ: ಹಿಂದೆ ಯಾವುದೇ ಕಾನೂನುಗಳು ರೂಪುಗೊಳ್ಳುವ ಮೊದಲು ಸಾರ್ವಜನಿಕವಾಗಿ ಚರ್ಚೆಗೆ ಒಳಪಡುತ್ತಿದ್ದವು. ಹಲವು ಸಭೆ, ಸಂಸತ್‌ನಲ್ಲಿ ಗಂಭೀರವಾದ ಚರ್ಚೆ ನಡೆದು ಅದರ ಸಾಧಕಬಾಧಕ ಗುರುತಿಸಿ ಆನಂತರ ಕಾಯ್ದೆಗಳು ಜಾರಿಯಾಗುತ್ತಿದ್ದವು. ಆದರೆ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಒಂದೇ ಒಂದು ಮಸೂದೆ ಬಗ್ಗೆ ಚರ್ಚೆಗಳು ನಡೆದಿಲ್ಲ. ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್‌ ಶಾ ನೇರವಾಗಿ ಲೋಕಸಭೆ ಮತ್ತು ರಾಜ್ಯಸಭೆಗಳಲ್ಲಿ ಮಸೂದೆ ಮಂಡಿಸಿ ಚರ್ಚಿಸಲು ಅವಕಾಶ ನೀಡದೆ ಕಾಯ್ದೆ ಜಾರಿಗೆ ತರಲಾಗಿದೆ. ಇದು ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿದೆ ಎಂದು ಎಂ.ಎ.ಬೇಬಿ ದೂರಿದರು.

ಆರ್‌ಎಸ್‌ಎಸ್‌ ಹೇಳಿದಂತೆ ಬಿಜೆಪಿ ಕೇಳುತ್ತಿದೆ. ನಾಗಪುರದಲ್ಲಿ ಸಿದ್ಧವಾಗುವ ನಿಯಮ ಜನರ ಮೇಲೆ ಹೇರುವ ಕೆಲಸ ನಡೆಯುತ್ತಿದೆ. ಫ್ಯಾಸಿಸ್ಟ್‌ ಶಕ್ತಿಗಳು ದೇಶ ಹಾಳುಗೆಡವುತ್ತಿವೆ. ಜರ್ಮನಿಯ ಹಿಟ್ಲರ್‌ ಮಾಡಿದಂತೆ ಭಾರತದಲ್ಲಿ ಮೋದಿ, ಅಮಿತ್‌ ಶಾ ಮತ್ತು ಯಡಿಯೂರಪ್ಪ ಬಂಧನ ಕೇಂದ್ರ ಕಟ್ಟಲು ಹೊರಟಿದ್ದಾರೆ. ಇದರ ವಿರುದ್ಧ ಎಲ್ಲರೂ ಸಂಘಟಿತರಾಗಿ ಹೋರಾಡಬೇಕು.
-ಎಂ.ಎ.ಬೇಬಿ, ಸಿಪಿಎಂ ಪಕ್ಷದ ಪಾಲಿಟ್‌ ಬ್ಯೂರೋ ಸದಸ್ಯ

ಟಾಪ್ ನ್ಯೂಸ್

1-qwewqeqw

Pro Kabaddi;ಬೆಂಗಳೂರು ಬುಲ್ಸ್‌  ಜಯಭೇರಿ: ತಮಿಳ್‌ ತಲೈವಾಸ್‌ಗೆ 32-36 ಅಂಕಗಳ ಸೋಲು

1-ewewqe

Udupi;ಅಪಾರ್ಟ್ ಮೆಂಟ್ ನಲ್ಲಿ ಪಾರ್ಟಿ ವೇಳೆ ಸಿಲಿಂಡ‌ರ್ ಸ್ಫೋ*ಟ: ಅಪಾರ ಹಾನಿ

Bommai

By Poll: ಕ್ಷೇತ್ರದಲ್ಲಿ 5ಲಕ್ಷಕ್ಕೂ ಹೆಚ್ಚು ಮನೆಗಳ ಕಟ್ಟಿಸಿರುವೆ, ದಾಖಲೆ ನೋಡಲಿ: ಬೊಮ್ಮಾಯಿ

CM-Shiggavi

By Election: ಬೊಮ್ಮಾಯಿ 4 ಬಾರಿ ಗೆದ್ರೂ ಕ್ಷೇತ್ರದ ಬಡವರಿಗೆ ಒಂದೂ ಮನೆ ಕಟ್ಟಿಸಿಲ್ಲ: ಸಿಎಂ

Hasanmbe

Hassan: ಹಾಸನಾಂಬೆ ದೇವಿಗೆ ಈ ಬಾರಿ ದಾಖಲೆ ಪ್ರಮಾಣದಲ್ಲಿ ಹರಿದು ಬಂದ ಆದಾಯ!

1-gopal

Maharashtra polls: ಗೋಪಾಲ್ ಶೆಟ್ಟಿ ನಾಮಪತ್ರ ಹಿಂಪಡೆಯುವಲ್ಲಿ ಯಶಸ್ವಿಯಾದ ಬಿಜೆಪಿ

5

Chocolate ಕೇವಲ ಸಸ್ಯಾಹಾರವೇ? ಸಸ್ಯಾಹಾರಿಗಳೇ ಗಮನಿಸಿ…


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Accident-logo

Kunigal: ಬೈಕ್, ಕ್ಯಾಂಟರ್ ಮುಖಾಮುಖಿ ಢಿಕ್ಕಿ; ಇಬ್ಬರು ಸ್ಥಳದಲ್ಲೇ ಮೃತ್ಯು 

2-gubbi

Gubbi: ಮೀಟರ್ ಬಡ್ಡಿ ದಂಧೆಕೋರರ ಕಿರುಕುಳಕ್ಕೆ ಬೇಸತ್ತು ಪೌರ ಕಾರ್ಮಿಕ ಆತ್ಮಹತ್ಯೆ

4

Koratagere: ವೃದ್ದೆ ಮೇಲೆ ಕೆಎಸ್ಆರ್ಟಿಸಿ ಬಸ್ ಹರಿದು ಸಾವು

Hunasuru-Women

Hunasur: ವರದಕ್ಷಿಣೆ ಕಿರುಕುಳಕ್ಕೆ ಬಲಿಯಾದ ತಿಪಟೂರಿನ ಮಹಿಳೆ!

2

Kunigal: ಅಪ್ರಾಪ್ತೆಯ ಅಪಹರಣ, ಲೈಂಗಿಕ ದೌರ್ಜನ್ಯ; ಗುಜರಾತ್ ನಲ್ಲಿ ಬಂಧನ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

1-qwewqeqw

Pro Kabaddi;ಬೆಂಗಳೂರು ಬುಲ್ಸ್‌  ಜಯಭೇರಿ: ತಮಿಳ್‌ ತಲೈವಾಸ್‌ಗೆ 32-36 ಅಂಕಗಳ ಸೋಲು

1-ewewqe

Udupi;ಅಪಾರ್ಟ್ ಮೆಂಟ್ ನಲ್ಲಿ ಪಾರ್ಟಿ ವೇಳೆ ಸಿಲಿಂಡ‌ರ್ ಸ್ಫೋ*ಟ: ಅಪಾರ ಹಾನಿ

9

Kasaragod: ಪಟಾಕಿ ದುರಂತ ಪ್ರಕರಣ; ಸಾವಿನ ಸಂಖ್ಯೆ 4ಕ್ಕೆ ಏರಿಕೆ

Bommai

By Poll: ಕ್ಷೇತ್ರದಲ್ಲಿ 5ಲಕ್ಷಕ್ಕೂ ಹೆಚ್ಚು ಮನೆಗಳ ಕಟ್ಟಿಸಿರುವೆ, ದಾಖಲೆ ನೋಡಲಿ: ಬೊಮ್ಮಾಯಿ

death

Manipal: ಸಾಲದಿಂದ ಬೇಸತ್ತು ಮಹಿಳೆ ಆತ್ಮಹ*ತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.