ಐಟಿಐ ಆನ್‌ಲೈನ್ ಪರೀಕ್ಷೆ ರದ್ದುಗೊಳಿಸಿ
Team Udayavani, Jan 24, 2020, 3:00 PM IST
ಚಿಕ್ಕನಾಯಕನಹಳ್ಳಿ: ಐಟಿಐ ವಿದ್ಯಾರ್ಥಿಗಳಿಗೆ ಯಾವುದೇ ಪೂರ್ವ ಮಾಹಿತಿ ಹಾಗೂ ತರಬೇತಿ ನೀಡದೆ ಏಕಾಏಕಿ ಆನ್ ಲೈನ್ ಪರೀಕ್ಷೆ ನಡೆಸಲು ತೀರ್ಮಾನಿಸಿರು ವುದಕ್ಕೆ ಐಟಿಐ ವಿದ್ಯಾರ್ಥಿಗಳು ಪಟ್ಟಣದಲ್ಲಿ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಗ್ರಾಮೀಣ ಪ್ರದೇಶದವರಾದ ನಾವು ಪ್ರೌಢಶಾಲೆಯಲ್ಲಿ ಅಥವಾ ಐಟಿಐನಲ್ಲಿ ಕಂಪ್ಯೂಟರ್ ಅಭ್ಯಾಸ ಮಾಡಿಲ್ಲ. ಸಾವಿರಾರು ರೂ. ಡೊನೇಷನ್ ನೀಡಿ ಐಟಿಐ ಮಾಡುತ್ತಿದ್ದೇವೆ. ಆನ್‌ಲೈನ್ ಪರೀಕ್ಷೆಗೆಹೆಚ್ಚು ಶುಲ್ಕ ನೀಡಬೇಕು ಎಂಬ ಮಾಹಿತಿ ಇದೆ. ಎಸ್‌ಎಸ್‌ಎಲ್‌ಸಿ ನಂತರ ಐಟಿಐಗೆ ಸೇರ್ಪಡೆಯಾಗಿದ್ದು, ಕಂಪೂಟರ್ ಶಿಕ್ಷಣದ ತರಬೇತಿ ಇಲ್ಲವಾಗಿದೆ. ವಿದ್ಯಾರ್ಥಿಗಳ ಅಭಿಪ್ರಾಯ ಸಂಗ್ರಹಿಸದೇ ಎಲ್ಲೋ ಕೂತು ಇಂತಹ ಪರೀಕ್ಷೆ ನಡೆಸಲು ನಿರ್ಧರಿಸಿರುವುದು ವಿದ್ಯಾರ್ಥಿಗಳ ಭವಿಷ್ಯದ ಮೇಲೆ ಪರಿಣಾಮ ಬೀರುತ್ತದೆ. ಕೂಡಲೇ ಆನ್‌ಲೈನ್ ಪರೀಕ್ಷೆ ರದ್ದುಗೊಳಿಸಬೇಕು ಇಲ್ಲವಾದರೆ ಮುಂದಿನ ದಿನದಲ್ಲಿ ಹೋರಾಟ ತೀವ್ರಗೊಳ್ಳುತ್ತದೆ ಎಂದು ವಿದ್ಯಾರ್ಥಿಗಳು ಎಚ್ಚರಿಸಿದರು.
ಆನ್ ಲೈನ್ ಪರೀಕ್ಷೆ ರದ್ದುಗೊಳಿಸಬೇಕು ಎಂದು ನೂರಾರು ವಿದ್ಯಾರ್ಥಿಗಳು ತಾಲೂಕು ಕಚೇರಿ ಮುಂದೆ ಘೋಷಣೆ ಕೂಗುತ್ತ ತಹಶೀಲ್ದಾರ್ ತೇಜಸ್ವಿನಿಗೆ ಮನವಿ ನೀಡಿದರು. ಪ್ರತಭಟನೆಯಲ್ಲಿ ಹುಳಿಯಾರು ಚಿಕ್ಕನಾಯಕನಹಳ್ಳಿ ಐಟಿಐಕಾಲೇಜಿನ ನೂರಾರು ವಿದ್ಯಾìಗಳು ಭಾಗವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Karnataka: ಹೊಸ ಸಿಎಂ ನೇತೃತ್ವದಲ್ಲಿ ಬೆಳಗಾವಿ ಅಧಿವೇಶನ: ಸುನಿಲ್
Udupi: ಶತಚಂಡಿಕಾಯಾಗ, ಬ್ರಹ್ಮಮಂಡಲ ಸೇವೆ ಆಮಂತ್ರಣ ಪತ್ರಿಕೆ ಬಿಡುಗಡೆ
Children’s Day: ಶಿಕ್ಷಣವನ್ನು ಪ್ರೋತ್ಸಾಹಿಸಿ ಮೋದಿ ಕನಸಿನ ವಿಕಸಿತ ಭಾರತ ನಿರ್ಮಾಣ ಮಾಡೋಣ
Bantwal: ನಾಪತ್ತೆಯಾದವರ ಮೃತ*ದೇಹ ಉಳ್ಳಾಲ ರೈಲು ಹಳಿಯಲ್ಲಿ ಪತ್ತೆ
Dharmasthala; ಗ್ರಾಮಾಭಿವೃದ್ಧಿ ಯೋಜನೆ ಜನರ ನಾಡಿಮಿಡಿತ: ನಿರ್ಮಲಾ ಸೀತಾರಾಮನ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.