ಕ್ಯಾನ್ಸರ್: ಗರ್ಭಿಣಿ ಹಸುವಿಗೆ ಚಿಕಿತ್ಸೆ
Team Udayavani, Mar 5, 2021, 7:51 PM IST
ತಿಪಟೂರು: ಗುದದ್ವಾರ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಏಳು ತಿಂಗಳ ಗರ್ಭ ಧರಿಸಿದ್ದಎಚ್.ಎಫ್(ಸೀಮೆ) ಹಸುವನ್ನು ವಿಭಿನ್ನ ರೀತಿಯಲ್ಲಿ ಶಸ್ತ್ರ ಚಿಕಿತ್ಸೆ ಮಾಡಿ ಬದುಕುಳಿಸಿದ ಘಟನೆ ತಾಲೂಕಿನ ಬನ್ನೀಹಳ್ಳಿ ಗ್ರಾಮದಲ್ಲಿ ನಡೆದಿದೆ.
ತಾಲೂಕಿನ ಬನ್ನೀಹಳ್ಳಿ ಗ್ರಾಮದ ರೈತ ನಿರಂಜನಮೂರ್ತಿ ಎಂಬುವವರ ಹಸು ಗುದದ್ವಾರ ಮತ್ತು ಯೋನಿದ್ವಾರದ ನಡುವೆ ಬೆಳೆದಿದ್ದ ಗಡ್ಡೆ ಯೋನಿದ್ವಾರದ ಮುಕ್ಕಾಲು ಭಾಗವನ್ನು ಆವರಿಸಿತ್ತು.ಇದರಿಂದ ಹಸುವಿಗೆ ಸಗಣಿಯನ್ನು ಸರಿಯಾಗಿ ಇಡಲಾರದೆ ಪರಿತಪಿಸುತ್ತಿತ್ತು. ಹೀಗೆ ಮುಂದುವರೆದರೆ ಕರು ಹಾಕುವ ಸಂದರ್ಭದಲ್ಲಿ ಯೋನಿಯ ದ್ವಾರ ಕಿರಿದಾದ್ದರಿಂದ ಸಮಸ್ಯೆಯಾಗುತ್ತಿತ್ತು. ಶಸ್ತ್ರಚಿಕಿತ್ಸೆ ನಡೆಸಿದರೂ ಕ್ಯಾನ್ಸರ್ ಮರುಕಳಿಸಬಹುದಾದ ಎಲ್ಲಾ ಸಾಧ್ಯತೆಗಳಿತ್ತು. ಈ ಸಮಯದಲ್ಲಿ ದಸರೀಘಟ್ಟ ಪಶುಚಿಕಿತ್ಸಾಲಯದ ಪಶು ವೈದ್ಯರಾದ ಡಾ. ವೈ.ಚೈತ್ರ, ತಾಲೂಕಿನ ಗಡಿಭಾಗದಲ್ಲಿರುವ ಹಾಸನ ಜಿಲ್ಲೆಯ ಚನ್ನರಾಯ ಪಟ್ಟಣ ತಾಲೂಕಿನ ಸಾತೇನಹಳ್ಳಿ ಪಶುಚಿಕಿತ್ಸಾಲಯದ ಪಶುವೈದ್ಯಾಧಿಕಾರಿ ಡಾ. ಜೆ.ಕೆ.ಪ್ರಮೋದ್, ಅಣತಿ ಪಶು ವೈದ್ಯ ಡಾ.ಎಸ್.ಪಿ. ಮಂಜುನಾಥ್‌ರವರ ತಂಡ ಜಾಪ್ ಟ್ರಾಪ್ ಎನ್ನುವ ವಿಭಿನ್ನ ಶಸ್ತ್ರಚಿಕಿತ್ಸೆಯನ್ನು ಹಸುವಿಗೆ ನಡೆಸಿದರು.
ಗಾಯ ಸಂಪೂರ್ಣವಾಗಿ ಗುಣಮುಖವಾಗಿ ಎರಡು ತಿಂಗಳ ನಂತರ ಸಹಜವಾಗಿಯೇ ಹಸುವು ಕರುವಿಗೆ ಜನ್ಮ ನೀಡಿದೆ. ಈಗ ಹಸು ಮತ್ತು ಕರು ಆರೋಗ್ಯವಾಗಿದ್ದು,ಹಸುವು ದಿನಕ್ಕೆ 20 ಲೀ. ಹಾಲು ನೀಡುತ್ತಿದೆ. ಹಸುವಿಗಿದ್ದ ರೋಗವನ್ನುಗುಣಪಡಿಸಲು ಸಾಧ್ಯವೇ ಇಲ್ಲವೆಂದು ಭಾವಿಸಿದ್ದ ಹಸುವಿನ ಮಾಲೀಕರು ಹಾಗೂ ಗ್ರಾಮದ ಹೈನುಗಾರರು ಮನೆಬಾಗಿಲಲ್ಲೆ ವಿಭಿನ್ನ ಶಸ್ತ್ರಚಿಕಿತ್ಸೆ ನಡೆಸಿ ಹಸುವನ್ನು ಬದುಕುಳಿಸಿದ ಪಶುವೈದ್ಯರಿಗೆ ಧನ್ಯವಾದ ತಿಳಿಸಿದ್ದಾರೆ. ಈ ವೇಳೆ ಮಾತನಾಡಿದ ಪಶುವೈದ್ಯ ಡಾ. ಎಸ್.ಪಿ. ಮಂಜುನಾಥ್, ಹಸುಗಳಲ್ಲಿ ಗುದದ್ವಾರದ ಕ್ಯಾನ್ಸರ್‌ನ ಚಿಕಿತ್ಸೆ ಕ್ಲಿಷ್ಟಕರವಾಗಿದ್ದು,ಶಸ್ತ್ರಚಿಕಿತ್ಸೆಯ ನಂತರ ಕ್ಯಾನ್ಸರ್ ಗಡ್ಡೆಮತ್ತೆ ಬೆಳೆದು ಬರುವುದು ಸಹಜ. ಆದ್ದರಿಂದ ಜಾಪ್ ಟ್ರಾಪ್ ವಿಧಾನದಿಂದಚಿಕಿತ್ಸೆ ನಡೆಸಲಾಗಿದೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shimoga; ಕಾಂಗ್ರೆಸ್-ಮುಸ್ಲಿಮರ ವಿರುದ್ದ ಹೇಳಿಕೆ: ಈಶ್ವರಪ್ಪ ವಿರುದ್ದ ಸುಮೋಟೋ ಪ್ರಕರಣ
Bantwala: ಶಾಲಾ ವಾಹನ ಡಿಕ್ಕಿಯಾಗಿ ಗಂಭೀರ ಗಾಯಗೊಂಡಿದ್ದ ಸ್ಕೂಟರ್ ಸವಾರ ಮೃತ್ಯು
Manipal: ನಿತ್ಯ ಅಪಘಾತ ತಾಣವಾದ ಈಶ್ವರ ನಗರ-ಪರ್ಕಳ ರಸ್ತೆ
Siruguppa: ಬೈಕ್ ಮತ್ತು ಅಪರಿಚಿತ ವಾಹನದ ಮಧ್ಯೆ ಭೀಕರ ಅಪಘಾತ; ಇಬ್ಬರ ಸಾವು
Karkala: ತಿಂಗಳ ಹಿಂದೆ ಮೃತಪಟ್ಟ ಪತಿ, ಮನನೊಂದು ಆತ್ಮಹತ್ಯೆಗೆ ಶರಣಾದ ಅಂಗನವಾಡಿ ಶಿಕ್ಷಕಿ
MUST WATCH
ಹೊಸ ಸೇರ್ಪಡೆ
Priyanka Upendra: ಬ್ಯೂಟಿಫುಲ್ ಲೈಫ್ ನಲ್ಲಿ ಪ್ರಿಯಾಂಕಾ
Shimoga; ಕಾಂಗ್ರೆಸ್-ಮುಸ್ಲಿಮರ ವಿರುದ್ದ ಹೇಳಿಕೆ: ಈಶ್ವರಪ್ಪ ವಿರುದ್ದ ಸುಮೋಟೋ ಪ್ರಕರಣ
Bantwala: ಶಾಲಾ ವಾಹನ ಡಿಕ್ಕಿಯಾಗಿ ಗಂಭೀರ ಗಾಯಗೊಂಡಿದ್ದ ಸ್ಕೂಟರ್ ಸವಾರ ಮೃತ್ಯು
Manipal: ನಿತ್ಯ ಅಪಘಾತ ತಾಣವಾದ ಈಶ್ವರ ನಗರ-ಪರ್ಕಳ ರಸ್ತೆ
Siruguppa: ಬೈಕ್ ಮತ್ತು ಅಪರಿಚಿತ ವಾಹನದ ಮಧ್ಯೆ ಭೀಕರ ಅಪಘಾತ; ಇಬ್ಬರ ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.