ಸೋಂಕಿತರ ಸ್ಥಳದಲ್ಲಿ ನವಜಾತ ಶಿಶುಗಳ ಆರೈಕೆ


Team Udayavani, May 18, 2021, 2:54 PM IST

ಸೋಂಕಿತರ ಸ್ಥಳದಲ್ಲಿ ನವಜಾತ ಶಿಶುಗಳ ಆರೈಕೆ

ತುಮಕೂರು: ಎಲ್ಲಾಕಡೆ ಕೊರೊನಾರ್ಭಟಕ್ಕೆ ಜನ ನಲುಗುತ್ತಿದ್ದಾರೆ. ಯಾರಿಗೆ ಸೋಂಕು ಇದೆ, ಇಲ್ಲ ಎಂದು ತಿಳಿಯುವುದೇ ಕಷ್ಟ. ಈ ನಡುವೆ ನೂರಾರು ಸೋಂಕಿತರಿಗೆ ಚಿಕಿತ್ಸೆ ನೀಡುವ ಜಿಲ್ಲಾ ಆಸ್ಪತ್ರೆಯಲ್ಲಿಯೇ ಗರ್ಭಿಣಿಯರಿಗೆ ಮತ್ತು ನವಜಾತ ಶಿಶುಗಳಿಗೆ ಚಿಕಿತ್ಸೆ ನೀಡುತ್ತಿದ್ದು ಈ ಮಕ್ಕಳನ್ನು ನೋಡಿ ಕೊಳ್ಳುವುದು ಜಿಲ್ಲಾ ಆಸ್ಪತ್ರೆ ಸಿಬ್ಬಂದಿಗೆ ಸವಾಲಾಗಿದೆ.

ಸಂತಸದ ವಿಷಯ: ರಾಜ್ಯದಲ್ಲಿಯೇ 2ನೇ ಅತಿ ದೊಡ್ಡ ಜಿಲ್ಲೆ ಆಗಿರುವ ತುಮಕೂರಿನಲ್ಲಿ ಈಗ ಸೋಂಕಿತರ ಸಂಖ್ಯೆ ಹೆಚ್ಚಾಗಿದೆ. ಜಿಲ್ಲೆಯ ಇತರೆ ತಾಲೂಕುಗಳಿಗೆ ಹೋಲಿಕೆ ಮಾಡಿದರೆ ತುಮಕೂರು ಜಿಲ್ಲಾಸ್ಪತ್ರೆಲ್ಲಿಯೇ ಹೆಚ್ಚು ಹೆರಿಗೆಯಾಗುತ್ತಿದೆ. ಕೊರೊನಾ ವೇಳೆ ಸೋಂಕಿತ ಗರ್ಭಿಣಿಯರಿಗೂ ಹೆರಿಗಯಾೆ ಗಿದ್ದು ಸೋಂಕಿನಿಂದ ಬಳಲಿದ್ದಗರ್ಭಿಣಿಯರು ಹೆರಿಗೆ ಮಾಡಿದ ಮೇಲೆ ಮಕ್ಕಳು ಆರೋಗ್ಯವಾಗಿ ಇರುವುದು ಸಂತಸದ ವಿಷಯ.

ನಗರದ ಸೋಂಕಿತರಿಗೆಲ್ಲಾ ಜಿಲ್ಲಾಸ್ಪತ್ರೆ ‌ಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಆದರೆ, ನವಜಾತ ಶಿಶುಗಳ ಆರೈಕೆಕೇಂದ್ರ ಹಾಗೂ ಬಾಣಂತಿಯರಿಗೆ ಸೋಂಕು ತಗುಲದಂತೆ ನೋಡಿಕೊಳ್ಳುವುದು ದೊಡ್ಡ ತಲೆ ನೋವಾಗಿ ಪರಿಣಮಿಸಿದೆ.

ಕೋವಿಡ್  ಸೋಂಕಿತರಿರುವ ಆವರಣದಲ್ಲಿ ನವಜಾತ ಶಿಶುಗಳ ಆರೈಕೆ ಆಸ್ಪತ್ರೆ ಆವರಣದ ಕೂಗಳತೆ ದೂರದಲ್ಲಿಯೇ ಇದೆ. ಇದೇ ಆವರಣದಲ್ಲಿ ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಶಿಶುಗಳನ್ನು ಹಾಗೂ ಬಾಣಂತಿಯರನ್ನು ಆರೈಕೆ ಮಾಡಲು ಪ್ರತ್ಯೇಕವಾಗಿ ಆರೋಗ್ಯ ಸಿಬ್ಬಂದಿ ನಿಯೋಜಿÓಲಾ ‌ ಗಿದೆ ಎನ್ನುತ್ತಾರೆ ಜಿಲ್ಲಾ ಆಸ್ಪತ್ರೆ ಶಸ್ತ್ರ ಚಿಕಿತ್ಸಕ ಡಾ.ಸುರೇಶು ಬಾಬು.

 ಸೋಂಕಿತರಿಂದ ಮಕ್ಕಳಿಗೆ ತೊಂದರೆ ಆಗಿಲ್ಲ: ಸ್ಪಷ್ಟನೆ :

ಜಿಲ್ಲಾಸ್ಪತ್ರೆಯಲ್ಲಿ400 ಹಾಸಿಗೆಗಳಿದ್ದು ಅದರಲ್ಲಿ290 ಹಾಸಿಗೆಕೋವಿಡ್‌ಗೆ ಮೀಸಲಿಡಲಾಗಿದೆ. ಅದರಲ್ಲಿ 250 ಹಾಸಿಗೆಗೆ ಆಕ್ಸಿಜನ್‌ ಸೌಲಭ್ಯವಿದೆ.21 ಐಸಿಯು ಇದೆ.7 ಗರ್ಭಿಣಿಯರಿಗೆ ಚಿಕಿತ್ಸೆ ನೀಡಲು ಐಸಿಯು ಇದೆ. ಆಸ್ಪತ್ರೆಯಲ್ಲಿ ಸೋಂಕಿತರು ಬಂದು ಗುಣಮುಖರಾದ ತಕ್ಷಣ ಮತ್ತೂಬ್ಬರಿಗೆ ಸೌಲಭ್ಯ ಕಲ್ಪಿಸಲಾಗುತ್ತಿದೆ. ಈಗ ಆಸ್ಪತ್ರೆಯಲ್ಲಿ ಆಕ್ಸಿಜನ್‌ಕೊರತೆ ಇಲ್ಲ. ಈವರೆಗೂ ಚಿಕಿತ್ಸೆ ಪಡೆಯುವ ಮಕ್ಕಳಿಗೆ ಸೋಂಕಿತರಿಂದ ಯಾವುದೇ ತೊಂದರೆ ಇಲ್ಲ. ಬೇರೆ ಯೂನಿಟ್‌ನಲ್ಲಿ ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಜಿಲ್ಲಾ ಶಸ್ತ್ರ ಚಿಕಿತ್ಸಕರಾದ ಡಾ.ಸುರೇಶ್‌ ಬಾಬು ತಿಳಿಸಿದರು.

ಜಿಲ್ಲಾಡಳಿತ ಕೂಡಲೇ ಗಮನಹರಿಸಲು ಮನವಿ :

ತುಮಕೂರು ಜಿಲ್ಲಾ ಆಸ್ಪತ್ರೆಯಲ್ಲಿ ನಿತ್ಯ ನೂರಾರು ಮಂದಿ ಸೋಂಕು ಪರೀಕ್ಷೆ ಮಾಡಿಸಿಕೊಳ್ಳಲು ಜಿಲ್ಲಾಸ್ಪತ್ರೆಗೆ ಬರುತ್ತಲೇ ಇದ್ದಾರೆ. ಸಾಲುಗಟ್ಟಿ ನಿಂತು ಗಂಟಲು ದ್ರವ ಪರೀಕ್ಷೆಗೆ ಒಳಗಾಗುತ್ತಿ¨ªಾರೆ. ಸೋಂಕು ಇರುವವರೂ ಬರುತ್ತಿದ್ದಾರೆ. ಇಲ್ಲಿಯೇ ಸಿಬ್ಬಂದಿ ಬಂದು, ಹೋಗಬೇಕು. ಇಡೀ ಆಸ್ಪತ್ರೆಯ ಎಲ್ಲಾಕಡೆ ಸೋಂಕಿತರು ಓಡಾಡುತ್ತಲೇ ಇರುತ್ತಾರೆ. ಇವರಲ್ಲಿ ಯಾರಿಗಾದರೂ ಸಿಬ್ಬಂದಿಗೆ ಸೋಂಕು ತಗಲಿ ಅದು ನವಜಾತ ಶಿಶುಗಳಿಗೆ ಹರಡಿದರೆ ಆ ಮಕ್ಕಳ ಸ್ಥಿತಿ ಏನು. ಮುಂದೆ3ನೇ ಅಲೆ ಮಕ್ಕಳಲ್ಲಿಯೇ ಹೆಚ್ಚುಕಂಡು ಬರುತ್ತದೆ ಎಂದು ತಜ್ಞರು ಹೇಳುತ್ತಿದ್ದಾರೆ. ಈ ಬಗ್ಗೆ ಜಿಲ್ಲಾಡಳಿತ ಗಮನ ಹರಿಸುವುದು ಅಗತ್ಯ

 ಕಳೆದ ಬಾರಿ ಚಿಕಿತ್ಸಾ ಘಟಕಸ್ಥಳಾಂತರ ಮಾಡಲಾಗಿತ್ತು :  ಕಳೆದ ವರ್ಷ ಇಡೀ ಜಿಲ್ಲಾಸ್ಪತ್ರೆಯನ್ನುಕೋವಿಡ್‌ ಕೇಂದ್ರ ಮಾಡಿ ಜಿಲ್ಲಾ ಆಸ್ಪತ್ರೆಯ ಇತರೆ ವಿಭಾಗ ತಾಯಿ ಮತ್ತು ಮಗು ಚಿಕಿತ್ಸಾ ಘಟಕವನ್ನು ಶ್ರೀದೇವಿ ಆಸ್ಪತ್ರೆಗೆ ಸ್ಥಳಾಂತರ ಮಾಡಲಾಗಿತ್ತು. ಆದರೆ, ಈ ಬಾರಿ ಅಂತಹ ಯಾವುದೇ ನಿರ್ಧಾರ ತೆಗೆದುಕೊಳ್ಳದೆ ಜಿಲ್ಲಾಸ್ಪತ್ರೆ ಆವರಣದಲ್ಲಿಯೇ ನವಜಾತ ಶಿಶು, ಬಾಣಂತಿಯರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಈ ವ್ಯವಸ್ಥೆ ಆತಂಕ ಸೃಷ್ಟಿಸಿದೆ.

 ಜಿಲ್ಲಾಡಳಿತದಿಂದ ನೆರವು :

ತುಮಕೂರು ಜಿಲ್ಲಾಸ್ಪತ್ರೆಗೆ ಎಲ್ಲಾಕಡೆಯಿಂದ ಇತರೆ ರೋಗಿಗಳು ಬರುತ್ತಾರೆ. ಅವರಿಗೂ ಚಿಕಿತ್ಸೆ ನೀಡುತ್ತೇವೆ. ಏಪ್ರಿಲ್‌ನಲ್ಲಿ15 ಜನ ಗರ್ಭಿಣಿಯರಿಗೆ ಕೋವಿಡ್‌ಪಾಸಿಟಿವ್‌ ಬಂದಿತ್ತು. ಅದರಲ್ಲಿ8 ಸಿಜೇರಿಯನ್‌,7 ಗರ್ಭಿಣಿಯರಿಗೆ ನಾರ್ಮಲ್‌ ಹೆರಿಗೆ ಆಗಿದೆ. ತಾಯಿ ಮಕ್ಕಳು ಆರೋಗ್ಯವಾಗಿದ್ದಾರೆ, ಈಗ ನಮ್ಮಲ್ಲಿ ಆಕ್ಸಿಜನ್‌ ಕೊರತೆ ಇಲ್ಲ. ಜಿಲ್ಲಾಡಳಿತ ಎಲ್ಲಾ ರೀತಿಯ ನೆರವು ನೀಡಿದೆ ಎಂದು ಜಿಲ್ಲಾ ಆಸ್ಪತ್ರೆ ಸ್ಥಾನಿಕ ವೈದ್ಯಾಧಿಕಾರಿ ಡಾ.ಎಚ್‌.ವೀಣಾ ತಿಳಿಸಿದರು.

 

– ಚಿ.ನಿ.ಪುರುಷೋತ್ತಮ್‌

ಟಾಪ್ ನ್ಯೂಸ್

Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ

Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ

Elephant

Belthangady: ಚಾರ್ಮಾಡಿ: ಪರ್ಲಾಣಿಯಲ್ಲಿ ಕಾಡಾನೆ

K-H-Muniyappa

BPL ಕಾರ್ಡು ರದ್ದಾಗಲ್ಲ: ಮುನಿಯಪ್ಪ

Jhansi hospital: ಹಲವು ಮಕ್ಕಳ ರಕ್ಷಿಸಿದವನ ಅವಳಿ ಮಕ್ಕಳು ಬೆಂಕಿಗಾಹುತಿ

Jhansi hospital: ಹಲವು ಮಕ್ಕಳ ರಕ್ಷಿಸಿದವನ ಅವಳಿ ಮಕ್ಕಳು ಬೆಂಕಿಗಾಹುತಿ

NCB ನಿರಂತರ ಕಾರ್ಯಾಚರಣೆ: ಡ್ರಗ್ಸ್‌ ಜಾಲ ಮುರಿಯಲು ಆಪರೇಷನ್‌ ಸಾಗರ ಮಂಥನ

NCB ನಿರಂತರ ಕಾರ್ಯಾಚರಣೆ: ಡ್ರಗ್ಸ್‌ ಜಾಲ ಮುರಿಯಲು ಆಪರೇಷನ್‌ ಸಾಗರ ಮಂಥನ

1-aaaaaaa

Karkala: ಕಾಂಗ್ರೆಸ್ ನಾಯಕ ಡಿ. ಅರ್.‌ರಾಜು ನಿಧನ

Israel; ಪ್ರಧಾನಿ ನಿವಾಸಕ್ಕೆ ಬಾಂಬ್‌ ದಾಳಿ: 3 ಮಂದಿ ಸೆರೆ

Israel; ಪ್ರಧಾನಿ ನಿವಾಸಕ್ಕೆ ಬಾಂಬ್‌ ದಾಳಿ: 3 ಮಂದಿ ಸೆರೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kunigal: ಹಳ್ಳಕ್ಕೆ ಉರುಳಿ ಬಿದ್ದ ಟ್ರ್ಯಾಕ್ಟರ್… ತಂದೆ ಮಗ ಸಾವು

Kunigal: ಹಳ್ಳಕ್ಕೆ ಉರುಳಿ ಬಿದ್ದ ಟ್ರ್ಯಾಕ್ಟರ್… ತಂದೆ ಮಗ ಸಾವು

4-kunigal

Kunigal: ಕೆಂಪನಹಳ್ಳಿ ಗ್ರಾಮದಲ್ಲಿ ಸರಣಿ ಕಳ್ಳತನ

14-kunigal

Kunigal: ಟೈರ್ ಸ್ಪೋಟಗೊಂಡು ಕಾರು ಪಲ್ಟಿ: ಐಟಿ ಉದ್ಯೋಗಿ ದುರ್ಮರಣ

K. N. Rajanna: “ಸರ್ಕಾರ ತೆಗಿತೀನಿ ಅನ್ನೋದು ಪ್ರಜಾಪ್ರಭುತ್ವಕ್ಕೆ ಅವಮಾನ’

K. N. Rajanna: “ಸರ್ಕಾರ ತೆಗಿತೀನಿ ಅನ್ನೋದು ಪ್ರಜಾಪ್ರಭುತ್ವಕ್ಕೆ ಅವಮಾನ’

koratagere

Koratagere: ಗೃಹ ಸಚಿವರ ಸ್ವ ಕ್ಷೇತ್ರದಲ್ಲೇ ಮಲ ಹೊತ್ತ 10 ವರ್ಷದ ಬಾಲಕ!

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ

Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ

1-chuii

ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಚಿತ್ತೂರು ಪ್ರಭಾಕರ ಆಚಾರ್ಯರಿಗೆ ಗೌರವಾರ್ಪಣೆ

Elephant

Belthangady: ಚಾರ್ಮಾಡಿ: ಪರ್ಲಾಣಿಯಲ್ಲಿ ಕಾಡಾನೆ

K-H-Muniyappa

BPL ಕಾರ್ಡು ರದ್ದಾಗಲ್ಲ: ಮುನಿಯಪ್ಪ

Jhansi hospital: ಹಲವು ಮಕ್ಕಳ ರಕ್ಷಿಸಿದವನ ಅವಳಿ ಮಕ್ಕಳು ಬೆಂಕಿಗಾಹುತಿ

Jhansi hospital: ಹಲವು ಮಕ್ಕಳ ರಕ್ಷಿಸಿದವನ ಅವಳಿ ಮಕ್ಕಳು ಬೆಂಕಿಗಾಹುತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.