ಸಿದ್ಧಗಂಗೆಯಲ್ಲಿ ಜಾನುವಾರು ಜಾತ್ರೆ ಸಂಭ್ರಮ
ವಿದೇಶಿ ರಾಸುಗಳ ಭರಾಟೆಯಲ್ಲೂ ದೇಸಿ ಹಳ್ಳಿಕಾರ್ ತಳಿಗೆ ಬೇಡಿಕೆ | 50 ಸಾವಿರದಿಂದ 10 ಲಕ್ಷ ರೂ. ರಾಸು ಆಗಮನ
Team Udayavani, Mar 3, 2021, 6:01 PM IST
ವಿದೇಶಿ ರಾಸುಗಳ ಭರಾಟೆ ಹಾಗೂ ದೇಸಿ ತಳಿಗಳು ಕಡಿಮೆಯಾಗುತ್ತಿರುವ ಬೆನ್ನಲ್ಲೇ ಶ್ರೀಕ್ಷೇತ್ರ ಸಿದ್ಧಗಂಗಾ ಮಠದಲ್ಲಿ ಪ್ರತಿ ವರ್ಷದಂತೆ ಈ ಬಾರಿಯೂ ರಾಸುಗಳ ಪರಿಷೆ ನಡೆಯುತ್ತಿದೆ. ಜಾತ್ರೆಗೂ ಮೊದಲೇ ರಾಜ್ಯ ಹಾಗೂ ಹೊರ ರಾಜ್ಯಗಳಿಂದ ಅಪಾರ ಸಂಖ್ಯೆಯಲ್ಲಿ ರೈತರು ಆಗಮಿಸಿ ರಾಸುಗಳ ಮಾರಾಟ, ಇಷ್ಟಪಡುವ ರಾಸುಗಳ ಮಾರಾಟ, ಖರೀದಿ ಪ್ರಕ್ರಿಯೆಯಲ್ಲಿ ತೊಡಗಿದ್ದಾರೆ. ಸಿದ್ಧಗಂಗಾ ಮಠದಿಂದ ಅಗತ್ಯ ಸೌಕರ್ಯ ಕಲ್ಪಿಸಿದ್ದು ಈ ಬಾರಿ ಕೋವಿಡ್ ನಡುವೆಯೂ ರಾಸುಗಳ ಜಾತ್ರೆ ಭರದಿಂದ ನಡೆಯುತ್ತಿರುವುದು ವಿಶೇಷ.
ತುಮಕೂರು: ದೇಸಿಯ ತಳಿಯ ಹಸು, ಎತ್ತುಗಳು ಕಡಿಮೆಯಾಗುತ್ತಿರುವ ಸಂದರ್ಭದಲ್ಲಿ ಒಂದೇ ಬಾರಿಸಾವಿರಾರು ದೇಸಿಯ ತಳಿಯ ಹಸು, ಎತ್ತುಗಳ ಜಾತ್ರೆ ಶ್ರೀಕ್ಷೇತ್ರ ಸಿದ್ಧಗಂಗಾ ಮಠದಲ್ಲಿ ನಡೆಯುತ್ತಿದ್ದು,ಮಠದ ಸುತ್ತ ಎಲ್ಲಿ ನೋಡಿದರೂ ಹಸು, ಎತ್ತುಗಳನಡುವೆ ರೈತರ ಸಂಭ್ರಮ ಮನೆ ಮಾಡಿದೆ.
ತ್ರಿವಿಧ ದಾಸೋಹ ಕ್ಷೇತ್ರ ಸಿದ್ಧಗಂಗೆಯಲ್ಲಿ ಈಗ ಜಾತ್ರಾ ಸಂಭ್ರಮ ಆರಂಭವಾಗಿದೆ. ಮಹಾಶಿವರಾತ್ರಿಅಂಗವಾಗಿ 10 ದಿನ ನಡೆಯುವ ಶ್ರೀ ಸಿದ್ಧಲಿಂಗೇಶ್ವರಸ್ವಾಮಿ ಜಾತ್ರೆಯಲ್ಲಿ ಎತ್ತುಗಳ ಪರಿಷೆ ವಿಶೇಷ. ರಾಜ್ಯಸೇರಿದಂತೆ ನೆರೆಯ ರಾಜ್ಯಗಳ ರೈತರು ಆಗಮಿಸಿದ್ದಾರೆ.
ನಾಡಿನ ಪ್ರಸಿದ್ಧ ಜಾತ್ರೆ ಎಂದೇ ಹೆಸರಾಗಿರುವ ಶ್ರೀ ಕ್ಷೇತ್ರ ಸಿದ್ಧಗಂಗೆಯಲ್ಲಿ ಕ್ಷೇತ್ರ ನಾಥ ಶ್ರೀ ಸಿದ್ಧಲಿಂಗೇಶ್ವರ ಸ್ವಾಮಿಯವರ ಮಹಾ ಶಿವರಾತ್ರಿ ಜಾತ್ರಾಮಹೋತ್ಸವ ಆರಂಭವಾಗಿದೆ. 1905 ರಲ್ಲಿ ಶ್ರೀ ಕ್ಷೇತ್ರದ ಶ್ರೀ ಉದ್ಧಾನ ಶಿವಯೋಗಿಗಳು ಪ್ರಾರಂಭಮಾಡಿದ್ದು ಅಂದಿನಿಂದಲೇ ಶ್ರೀ ಕ್ಷೇತ್ರದಲ್ಲಿ ದನಗಳ ಜಾತ್ರೆ ನಡೆಯುತ್ತಿದೆ.
ಶ್ರೀ ಕ್ಷೇತ್ರದ ಹಿರಿಯ ಶ್ರೀಗಳಾಗಿದ್ದ ಕರ್ನಾಟಕ ರತ್ನ ಲಿಂ.ಡಾ.ಶ್ರೀ ಶಿವಕುಮಾರಸ್ವಾಮಿಗಳು ತೋರಿದ ಹಾದಿಯಲ್ಲಿಸಿದ್ಧಗಂಗಾ ಮಠಾಧ್ಯಕ್ಷರಾದ ಶ್ರೀಸಿದ್ಧಲಿಂಗ ಮಹಾಸ್ವಾಮಿ ಹಾಗೂಆಡಳಿತ ವರ್ಗ ಜಾತ್ರೆಗೆ ಬರುವರಾಸುಗಳಿಗೆ, ರೈತರಿಗೆ ಯಾವುದೇ ತೊಂದರೆಯಾಗದ ರೀತಿಯಲ್ಲಿವ್ಯವಸ್ಥೆ ಕಲ್ಪಿಸಿದ್ದಾರೆ.
ಸುಡು ಬಿಸಿಲ ಬೇಗೆ ಏರುತ್ತಿರುವಂತೆಯೇ ಜಾನುವಾರುಗಳಿಗೆ ನೆರಳು, ವಿದ್ಯುತ್, ಕುಡಿವ ನೀರು,ಆರೋಗ್ಯ ತಪಾಸಣೆ ಹಾಗೂ ಸಂಜೆವೇಳೆ ಮನರಂಜನೆ, ಕೃಷಿ ಮತ್ತು ಕೈಗಾರಿಕಾ ವಸ್ತು ಪ್ರದರ್ಶನ ಹಾಗೂ ಜಾತ್ರೆಗೆ ಬರುವ ಎಲ್ಲರಿಗೆ ಪ್ರಸಾದ ವ್ಯವಸ್ಥೆಯನ್ನು ಶ್ರೀಮಠ ಕಲ್ಪಿಸಿದೆ. ಬೆಳಗ್ಗೆಯಿಂದ ಸಂಜೆವರೆಗೂ ಮಠದ ಸುತ್ತ ಇರುವ ಈ ಜಾನುವಾರು ಜಾತ್ರೆಯಲ್ಲಿ ಎತ್ತುಗಳನ್ನುಕೊಳ್ಳುವುದು, ಮಾರು ವುದು ಕಂಡುಬರುತ್ತದೆ. 50 ಸಾವಿರದಿಂದ 10 ಲಕ್ಷ ಬೆಲೆಬಾಳುವ ರಾಸುಗಳು ಸೇರಲಿವೆ.ಒಂದೊಂದು ಜೋಡಿ ರಾಸುಕೊಳ್ಳಲು ರೈತರು ಬಹುದೂರದಿಂದ ಬರುತ್ತಾರೆ. ಉತ್ತಮರಾಸುಗಳಿಗೆ ಬಹುಮಾನ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ.
ಜತೆಗೆ ಶ್ರೀ ಸಿದ್ಧಗಂಗಾ ಜಾತ್ರೆ ರೈತರಿಗೆ ಹೆಚ್ಚು ಸುರಕ್ಷತೆಯಿಂದ ಕೂಡಿದೆ. ದೇಸಿಯ ತಳಿಗಳುಕಣ್ಮರೆಯಾಗುತ್ತಿರುವ ಈ ದಿನಗಳಲ್ಲಿ ಕೋವಿಡ್ ಕಾಲದಲ್ಲಿಯೂ ಅಧಿಕ ಸಂಖ್ಯೆಯಲ್ಲಿ ಜಾನುವಾರುಗಳು ಸೇರಿ ಈ ದನಗಳ ಜಾತ್ರೆಗೆ ಮೆರಗು ನೀಡಿವೆ.
ಜಾತ್ರೆಗೆ ಆಂಧ್ರಪ್ರದೇಶ ತ.ನಾಡಿನಿಂದಲೂ ಆಗಮನ :
ಈ ವರ್ಷವೂ ಜಾತ್ರೆಗೆ ರಾಜ್ಯದ ವಿವಿಧ ಭಾಗಗಳಿಂದ ಸಾವಿರಾರು ರಾಸುಗಳು ಬಂದಿವೆ. 8 ಲಕ್ಷ ಮೇಲ್ಪಟ್ಟು ಬೆಲೆ ಬಾಳುವ ರಾಸುಗಳು ಈಗಾಗಲೇ ಬಂದಿವೆ. ಹಳ್ಳಿಕಾರ್ ತಳಿ ಎತ್ತುಗಳನ್ನು ಖರೀದಿಸಲು ರಾಮನಗರ, ಬೆಂಗಳೂರು ಗ್ರಾಮಾಂತರ, ಮಂಡ್ಯ, ಚಿತ್ರದುರ್ಗ, ಕಲಬುರಗಿ, ರಾಯಚೂರು, ಬಳ್ಳಾರಿ,ಗದಗ, ಬಿಜಾಪುರ, ದಾವಣಗೆರೆ ಭಾಗದಿಂದಲೂರೈತರು ಬರುತ್ತಿದ್ದಾರೆ. ನೆರೆಯ ರಾಜ್ಯಗಳಾದಆಂಧ್ರಪ್ರದೇಶ, ತಮಿಳುನಾಡು ಮೊದಲಾದಕಡೆಗಳಿಂದಲೂ ರೈತರು ಎತ್ತಿನ ಜಾತ್ರೆಗೆ ಬರುವುದು ಈ ಹಿಂದಿನಿಂದಲೂ ರೂಢಿಯಲ್ಲಿದೆ. ಮಂಗಳವಾರಹೆಚ್ಚಿನ ಸಂಖ್ಯೆಯಲ್ಲಿ ಜಾನುವಾರು ಸೇರುತ್ತಿವೆ. ರಾಸುಗಳನ್ನು ಕೊಳ್ಳಲು, ಮಾರಲು ಉತ್ತಮ ಅವಕಾಶವಿದೆ.
ಮಠದಲ್ಲಿ ನಿರಂತರ ದಾಸೋಹ :
ಕೋವಿಡ್ ಮಹಾಮಾರಿಯಿಂದ ಜನ ಸಂಕಷ್ಟ ಅನುಭವಿಸಿ ಈಗ ಚೇತರಿಸಿಕೊಳ್ಳುತ್ತಿದ್ದು, ಜಾತ್ರೆ, ಉತ್ಸವಗಳು ಎಂದಿನಂತೆ ಪ್ರಾರಂಭವಾಗುತ್ತಿವೆ. ಸಿದ್ಧಗಂಗಾ ಜಾತ್ರೆಯಲ್ಲಿ ಕೋವಿಡ್ ಸಂದರ್ಭದಲ್ಲಿಯೂರಾಸುಗಳು ಸೇರಲಾರಂಭಿಸಿವೆ ಜಾತ್ರೆಯಲ್ಲಿ ರೈತರಿಗೆ ಅನುಕೂಲವಾಗುವಂತೆ, ಮಠದಿಂದ ಎಲ್ಲಾ ವ್ಯವಸ್ಥೆ ಕಲ್ಪಿಸಲಾಗಿದೆ. ಜತೆಗೆ ಮನರಂಜನೆಗಾಗಿ ಕೃಷಿ ಮತ್ತು ವಿಜ್ಞಾನ ವಸ್ತುಪ್ರದರ್ಶನವೂ ಆರಂಭಗೊಂಡಿದ್ದು, ಶ್ರೀಮಠದಲ್ಲಿ ಎಲ್ಲಾ ಭಕ್ತರಿಗೆ, ರೈತರಿಗೆ ದಾಸೋಹ ನಿರಂತರವಾಗಿ ನಡೆಯುತ್ತಿದೆ.
ಸೀಮೆ ಹಸುಗಳನ್ನು ಸಾಕಲು ಜನ ಮುಂದಾಗಿರುವ ಹಿನ್ನೆಲೆಯಲ್ಲಿ ನಮ್ಮ ನಾಟಿ ಹಸುಗಳು, ಎತ್ತುಗಳ ಸಂಖ್ಯೆಕಡಿಮೆಯಾಗುತ್ತಿದೆ. ನಮ್ಮ ತಂದೆ ಕಾಲದಿಂದಲೂ ಸಿದ್ಧಗಂಗಾಮಠದ ಜಾತ್ರೆಯಲ್ಲಿ ಎತ್ತುಗಳನ್ನು ಕಟ್ಟುತ್ತಿದ್ದು ಪ್ರತಿ ವರ್ಷಬಹುಮಾನ ಬಂದಿದೆ. ನಮ್ಮ ರಾಜ್ಯದಲ್ಲೇ ಎತ್ತುಗಳ ದೊಡ್ಡ ಜಾತ್ರೆ ಆಗಿದ್ದು ಸಿದ್ಧಗಂಗಾ ಶ್ರೀಗಳು ಅಗತ್ಯ ಸೌಕರ್ಯ ಒದಗಿಸಿದ್ದಾರೆ. – ರಾಮಣ್ಣ, ಸಿದ್ದರಾಮಣ್ಣ ಅಗಳಿ
-ಚಿ.ನಿ.ಪುರುಷೋತ್ತಮ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Drone Prathap: ನೀರಿಗೆ ಸ್ಫೋಟಕ ಎಸೆದ ಪ್ರಕರಣ; ಪ್ರತಾಪ್‌ಗೆ 10 ದಿನ ನ್ಯಾಯಾಂಗ ಬಂಧನ
Huliyar; ಕೆಮ್ಮಿನ ಔಷಧವೆಂದು ಭಾವಿಸಿ ಕೀಟನಾಶಕ ಸೇವಿಸಿದ ರೈತ ಸಾ*ವು
ಕೃಷಿ ಹೊಂಡದಲ್ಲಿ ಅದೇನೋ ಮಾಡಲು ಹೋಗಿ ಅರೆಸ್ಟ್ ಅದ ಬಿಗ್ ಬಾಸ್ ಖ್ಯಾತಿಯ ಡ್ರೋನ್ ಪ್ರತಾಪ್
Pavagada: ಟ್ರ್ಯಾಕ್ಟರ್ ಗೆ ಕ್ರೇನ್ ಡಿಕ್ಕಿಯಾಗಿ ಓರ್ವ ಸ್ಥಳದಲ್ಲೇ ಸಾವು
Pavagada: ರಸ್ತೆ ಅಪಘಾತದಲ್ಲಿ ಮಂಡ್ಯ ಮೂಲದ ಬೊಲೆರೋ ಚಾಲಕ ಸ್ಥಳದಲ್ಲೇ ಸಾವು
MUST WATCH
ಹೊಸ ಸೇರ್ಪಡೆ
Chikkamagaluru: ಎಮ್ಮೆ ಹುಡುಕಲು ಹೋದವರ ಮೇಲೆ ಕಾಡಾನೆ ದಾಳಿ; ಮಗ ಪರಾರಿ, ತಂದೆ ಸಾವು
Karkala: ಈ ರಸ್ತೆಯಲ್ಲಿ ಬಸ್ ತಂಗುದಾಣಗಳೇ ಇಲ್ಲ!
UP: ಫಸ್ಟ್ ನೈಟ್ ದಿನ ಬಿಯರ್, ಗಾಂಜಾ ತಂದು ಕೊಡಲು ಬೇಡಿಕೆ ಇಟ್ಟ ಪತ್ನಿ; ಪತಿ ಶಾಕ್.!
Belma: ಕುಸಿತ ಭೀತಿಯಲ್ಲಿರುವ ಮನೆ; ಕಾಂಕ್ರೀಟ್ ತಡೆಗೋಡೆಗೆ ಪಿಡಬ್ಲ್ಯುಡಿ ಪ್ರಸ್ತಾವ
Bidar: ಕಾರಂಜಾ ಸಂತ್ರಸ್ತರ ಸಮಸ್ಯೆ ಅಧ್ಯಯನಕ್ಕೆ ತಾಂತ್ರಿಕ ಸಮಿತಿ ರಚನೆ: ಸಿಎಂ ಸಿದ್ದರಾಮಯ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.