ರೋಟರಿಯಿಂದ ಚೆಕ್ ಡ್ಯಾಂ ಲೋಕಾರ್ಪಣೆ
Team Udayavani, Dec 20, 2021, 1:35 PM IST
ಪಾವಗಡ: ಬರದ ನಾಡು ಪಾವಗಡ ತಾಲೂಕನ್ನು ಮಲೆನಾಡಿನಂತೆ ಸಸ್ಯ ಶ್ಯಾಮಲವಾಗಿ ಕಾಣಬೇಕೆನ್ನುವುದೇ ರೋಟರಿ ಸಂಸ್ಥೆ ಆಶಯ ಎಂದು ರೋಟರಿ ಡಿಸ್ಟಿಕ್ ಗವರ್ನರ್ ರೊ. ಫಜಲ್ ಮಹಮದ್ ತಿಳಿಸಿದರು.
ತಾಲೂಕು ಕೃಷ್ಣಗಿರಿ ಪಕ್ಕದಲ್ಲಿರುವ ಜೂಲಯ್ಯನ ಹಟ್ಟಿ ಗ್ರಾಮದ ಬಳಿ 2, ಕೊತ್ತೂರಿನ ಬಳಿ 1 ಚೆಕ್ ಡ್ಯಾಂಗಳನ್ನು ರೋಟರಿ ಸಂಸ್ಥೆವತಿಯಿಂದ ನಿರ್ಮಿಸಿದ್ದು, ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ತಾಲೂಕಿನಲ್ಲಿಮಳೆ ಬರುವುದು ತುಂಬಾ ಕಡಿಮೆ. ಬರುವಮಳೆಯ ನೀರನ್ನು ಶೇಖರಿಸಲು ಆಗದೇ ಅಂತರ್ಜಲಮಟ್ಟ ಕುಸಿದು ಪಲವತ್ತತೆಯಿಂದಕೂಡಿದ ಕೃಷಿಭೂಮಿ ಬರಡು ನೆಲವಾಗುತ್ತಿದೆ.ನೀರು ಹರಿಯುವ ಜಾಗದಲ್ಲಿ ಚೆಕ್ ಡ್ಯಾಂ ನಿರ್ಮಿಸಿದರೆ ನೀರಿನ ಸೆಲೆ ಹೆಚ್ಚಾಗಿ ಅಂತರ್ಜಲಹೆಚ್ಚುತ್ತದೆ. ಆದ್ದರಿಂದ ರೋಟರಿ ವತಿಯಿಂದಇಲ್ಲಿಯವರೆಗೂ 8 ಚೆಕ್ ಡ್ಯಾಂ ನಿರ್ಮಿಸಿದ್ದು, ಮುಂದಿನ ವರ್ಷ ಇನ್ನು 4 ಚೆಕ್ ಡ್ಯಾಂ ನಿರ್ಮಿಸಿ ಕೊಡಲಿದ್ದೆವೆ ಎಂದು ತಿಳಿಸಿದರು.
ಸೇವಾ ಕಾರ್ಯ ಮಾಡುತ್ತಿದೆ: ರೋಟರಿ ಸ್ಪೆಷಲ್ ಪ್ರಾಜಕ್ಟ್ ಡೈರಕ್ಟರ್ ರೋ. ಸುರೇಶ್ ಅಂಬಲಿ ಮಾತನಾಡಿ, ರೋಟರಿಯು ಸಮಾಜದ ಎಲ್ಲ ತರದ ಜನರಗೂ ಅನುಕೂಲವಾಗುವಂತಹ ಅನೇಕ ಸೇವಾ ಕಾರ್ಯ ಮಾಡುತ್ತಿದೆ. ಇಲ್ಲಿ ನಿರ್ಮಾಣವಾಗಿರುವಚೆಕ್ ಡ್ಯಾಂನಿಂದ ಸಾವಿರಾರು ರೈತರಕೊಳವೆಬಾವಿಗಳಲ್ಲಿ ನೀರಿನ ಹರಿವು ಹೆಚ್ಚಾಗಿ ಉತ್ತಮ ಬೆಳೆ ಬೆಳೆಯಲು ಸಾಧ್ಯವಾಗುತ್ತದೆ ಎಂದರು.
ಸದಾಶಿವ ನಗರದ ರೋಟರಿಅಧ್ಯಕ್ಷ ನರ್ಮದಾ ನಾರಾಯಣ, ವಸಂತ್‌ಚಂದ್ರ, ಕೇಶವ್, ಶ್ರೀನಿವಾಸ್, ಶಶಿಕಾಂತ್, ಮಹಮ್ಮದ್ ಇಮ್ರಾನ್, ಜಿ. ಶ್ರೀಧರ ಗುಪ್ತ,ಮಾಜಿ ಅಧ್ಯಕ್ಷ ಪ್ರಭಾಕರ್, ವಿಶ್ವನಾಥ್,ಕಮಲ್‌ಬಾಬು, ಲೋಕೇಶ್, ಪುರುಷೋತ್ತಮ ರೆಡ್ಡಿ, ಕಸಾಪ ತಾಲೂಕು ಅಧ್ಯಕ್ಷಕಟ್ಟಾ ನರಸಿಂಹಮೂರ್ತಿ, ಗುತ್ತಿಗೆದಾರವೆಂಕಟಾಚಲಪತಿ, ಜಯರಾಮಯ್ಯ ಮತ್ತಿತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Koratagere: ಟಾಟಾ ಏಸ್ ಪಲ್ಟಿ; 15 ವಿದ್ಯಾರ್ಥಿಗಳಿಗೆ ಗಂಭೀರ ಗಾಯ
ಮಧುಗಿರಿ: ಕಚೇರಿಯಲ್ಲೇ DYSP ರಾಸಲೀಲೆ!!: ವಿಡಿಯೋ ಸೆರೆ
Minister ಸೋಮಣ್ಣ, ಸಿ.ಎಸ್. ಹೆಸರಲ್ಲಿ ನಕಲಿ ಸಹಿ, ಲೆಟರ್‌ಹೆಡ್: ಬಂಧನ
Koratagere: ರಸ್ತೆಯಲ್ಲಿ ಚರಂಡಿ ನೀರು; ಸಾಂಕ್ರಾಮಿಕ ರೋಗದ ಭೀತಿಯಲ್ಲಿ ಗ್ರಾಮಸ್ಥರು
Kunigal: ಮರಕ್ಕೆ ಕಾರು ಡಿಕ್ಕಿಯಾಗಿ ಪಲ್ಟಿ: ಬೆಸ್ಕಾಂ ನೌಕರರ ಸ್ಥಳದಲ್ಲೇ ಸಾವು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.